Jeremias 17

Kannada Bible (GL_KANNADA) vs ACF

Sair da comparação
ACF Almeida Corrigida Fiel
1 ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ ವಜ್ರದ ಮೊನೆಯಿಂದಲೂ ಬರೆಯಲ್ಪಟ್ಟಿದೆ; ಅದು ಅವರ ಹೃದಯದ ಹಲಿಗೆಯ ಮೇಲೆಯೂ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲ್ಪಟ್ಟಿದೆ.
1 O pecado de Judá está escrito com um ponteiro de ferro, com ponta de diamante, gravado na tábua do seu coração e nas pontas dos vossos altares.
2 ಅವರ ಮಕ್ಕಳು ಅವರ ಬಲಿಪೀಠಗ ಳನ್ನೂ ಹಸುರಾದ ಗಿಡಗಳಲ್ಲಿಯೂ ಎತ್ತರವಾದ ಗುಡ್ಡಗಳ ಮೇಲೆಯೂ ಇರುವ ಅವರ ತೋಪುಗಳನ್ನೂ ಜ್ಞಾಪಕಮಾಡಿಕೊಳ್ಳುತ್ತಾರಲ್ಲಾ.
2 Como também seus filhos se lembram dos seus altares, e dos seus bosques, junto às árvores frondosas, sobre os altos outeiros,
3 ಹೊಲದಲ್ಲಿರುವ ನನ್ನ ಪರ್ವತವೇ, ನಿನ್ನ ಬದುಕನ್ನೂ ಎಲ್ಲಾ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ಪಾಪಕ್ಕಾಗಿರುವ ನಿನ್ನ ಉನ್ನತ ಸ್ಥಳಗಳನ್ನೂ ನಾನು ಕೊಳ್ಳೆಗೆ ಒಪ್ಪಿಸುವೆನು.
3 Ó meu monte, no campo, a tua riqueza e todos os teus tesouros, darei por presa, como também os teus altos, por causa do pecado, em todos os teus termos.
4 ಆಗ ನಾನು ನಿನಗೆ ಕೊಟ್ಟ ಸ್ವಾಸ್ತ್ಯವನ್ನು ನಿನ್ನಷ್ಟಕ್ಕೆ ನೀನೇ ಬಿಟ್ಟು ಬಿಡುವಿ; ನಿನಗೆ ತಿಳಿಯದ ದೇಶದಲ್ಲಿ ನಿನ್ನ ಶತ್ರುಗಳನ್ನು ನೀನು ಸೇವಿಸುವಂತೆ ಮಾಡುವೆನು, ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ, ಅದು ನಿತ್ಯವೂ ಜ್ವಲಿಸುತ್ತಿರುವದು.
4 Assim por ti mesmo te privarás da tua herança que te dei, e far-te-ei servir os teus inimigos, na terra que não conheces; porque o fogo que acendeste na minha ira arderá para sempre.
5 ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯನಲ್ಲಿ ನಂಬಿಕೆ ಇಟ್ಟು ಅವನನ್ನು ತನ್ನ ಬಾಹುವನ್ನಾಗಿ ಮಾಡಿ ಕೊಂಡು ಕರ್ತನ ಕಡೆಯಿಂದ ಯಾವನ ಹೃದಯವು ತೊಲಗುವದೋ ಅವನು ಶಾಪಗ್ರಸ್ತನು.
5 Assim diz o Senhor: Maldito o homem que confia no homem, e faz da carne o seu braço, e aparta o seu coração do Senhor!
6 ಅವನು ಅಡವಿಯಲ್ಲಿರುವ ಕುರುಚಲ ಗಿಡದ ಹಾಗಿರುವನು; ಒಳ್ಳೇದು ಬರುವಾಗ ನೋಡದೆ ಇರುವನು; ನಿವಾಸಿ ಗಳಿಲ್ಲದ ಚೌಳುನೆಲವಾಗಿರುವ ಅರಣ್ಯದ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು.
6 Porque será como a tamargueira no deserto, e não verá quando vem o bem; antes morará nos lugares secos do deserto, na terra salgada e inabitável.
7 ಯಾವನು ಕರ್ತನಲ್ಲಿ ಭರವಸವಿಟ್ಟಿರುವನೋ ಯಾವನಿಗೆ ಕರ್ತನು ನಿರೀಕ್ಷೆ ಯಾಗಿದ್ದಾನೋ ಆ ಮನುಷ್ಯನು ಧನ್ಯನು.
7 Bendito o homem que confia no Senhor, e cuja confiança é o Senhor.
8 ಅವನು ನೀರಿನ ಬಳಿಯಲ್ಲಿ ನೆಡಲ್ಪಟ್ಟು ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು; ಧಗೆಯು ಬರುವಾಗ ಅದು ಬಾಡಿಹೋಗದೆ ಅದರ ಎಲೆ ಹಸುರಾಗಿರುವದು; ಕ್ಷಾಮದ ವರುಷದಲ್ಲಿ ಅದಕ್ಕೆ ಚಿಂತೆ ಇರುವದಿಲ್ಲ ಇಲ್ಲವೆ ಫಲಫಲಿಸುವದನ್ನು ನಿಲ್ಲಿಸುವದಿಲ್ಲ.
8 Porque será como a árvore plantada junto às águas, que estende as suas raízes para o ribeiro, e não receia quando vem o calor, mas a sua folha fica verde; e no ano de sequidão não se afadiga, nem deixa de dar fruto.
9 ಹೃದಯವು ಎಲ್ಲಾದಕ್ಕಿಂತ ವಂಚನೆಯುಳ್ಳದ್ದಾ ಗಿಯೂ ಮಹಾದುಷ್ಟತನದ್ದೂ ಆಗಿದೆ, ಅದನ್ನು ತಿಳಿಯುವವನಾರು?
9 Enganoso é o coração, mais do que todas as coisas, e perverso; quem o conhecerá?
10 ಕರ್ತನಾದ ನಾನೇ ಹೃದಯ ವನ್ನು ಪರೀಕ್ಷಿಸುತ್ತೇನೆ; ಅಂತರಿಂದ್ರಿಯಗಳನ್ನು ಶೋಧಿ ಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ (ಪ್ರತಿಫಲ) ಕೊಡುತ್ತೇನೆ.
10 Eu, o Senhor, esquadrinho o coração e provo os rins; e isto para dar a cada um segundo os seus caminhos e segundo o fruto das suas ações.
11 ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿ ಕೊಳ್ಳುವ ಹಾಗೆ ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಇದ್ದಾನೆ; ಅವನು ತನ್ನ ಮದ್ಯ ಪ್ರಾಯದಲ್ಲಿ ಅದನ್ನು ಬಿಡುವನು; ತನ್ನ ಅಂತ್ಯದಲ್ಲಿ ಅವನು ಮೂರ್ಖನಾಗಿರುವನು.
11 Como a perdiz, que choca ovos que não pôs, assim é aquele que ajunta riquezas, mas não retamente; no meio de seus dias as deixará, e no seu fim será um insensato.
12 ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾ ಸನವು ನಮ್ಮ ಪರಿಶುದ್ಧ ಸ್ಥಳವಾಗಿದೆ.
12 Um trono de glória, posto bem alto desde o princípio, é o lugar do nosso santuário.
13 ಇಸ್ರಾಯೇಲಿನ ನಿರೀಕ್ಷೆಯಾದ ಓ ಕರ್ತನೇ, ನಿನ್ನನ್ನು ತೊರೆದು ಬಿಟ್ಟವರೆಲ್ಲರು ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಕರ್ತನಿಂದ ತೊಲಗಿ ಹೋದವರು ದೂಳಿನಲ್ಲಿ ಬರೆಯಲ್ಪಡುವರು.
13 Ó Senhor, esperança de Israel, todos aqueles que te deixam serão envergonhados; os que se apartam de mim serão escritos sobre a terra; porque abandonam o Senhor, a fonte das águas vivas.
14 ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ಆಗ ಸ್ವಸ್ಥನಾಗು ವೆನು; ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನ್ನ ಸ್ತೋತ್ರವು.
14 Cura-me, Senhor, e sararei; salva-me, e serei salvo; porque tu és o meu louvor.
15 ಇಗೋ, ಅವರು ನನಗೆ-- ಕರ್ತನ ವಾಕ್ಯವು ಎಲ್ಲಿ? ಅದು ಈಗ ಬರಲಿ ಅನ್ನುತ್ತಾರೆ.
15 Eis que eles me dizem: Onde está a palavra do Senhor? Venha agora.
16 ಆದರೆ ನಾನು ನಿನ್ನನ್ನು ಹಿಂಬಾಲಿಸುವ ಪಾಲಕ ನಾಗಲು ಹಿಂಜರಿಯಲಿಲ್ಲ; ದುರ್ದಿನವನ್ನು ಅಪೇಕ್ಷಿಸ ಲಿಲ್ಲವೆಂದು ನೀನು ಬಲ್ಲೆ; ನನ್ನ ತುಟಿಗಳಿಂದ ಹೊರ ಟದ್ದು ನಿನ್ನ ಸನ್ನಿಧಿಯಲ್ಲಿ ಸರಿಯಾಗಿತ್ತು.
16 Porém eu não me apressei em ser o pastor seguindo-te; nem tampouco desejei o dia da aflição, tu o sabes; o que saiu dos meus lábios está diante de tua face.
17 ನೀನು ನನಗೆ ಭಯಾಸ್ಪದವಾಗಬೇಡ; ಕೆಟ್ಟ ದಿನದಲ್ಲಿ ನೀನೇ ನನ್ನ ನಿರೀಕ್ಷೆಯು.
17 Não me sejas por espanto; meu refúgio és tu no dia do mal.
18 ನನ್ನನ್ನು ಹಿಂಸಿಸುವವರು ನಾಚಿಕೆ ಪಡಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲುಪಡಲಿ; ಆದರೆ ನಾನು ದಿಗಿಲುಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡು, ಎರಡರಷ್ಟು ಅವರನ್ನು ನಾಶಪಡಿಸು.
18 Envergonhem-se os que me perseguem, e não me envergonhe eu; assombrem-se eles, e não me assombre eu; traze sobre eles o dia do mal, e destrói-os com dobrada destruição.
19 ಕರ್ತನು ನನಗೆ ಹೀಗೆ ಹೇಳಿದನು--ಹೋಗಿ ಜನರ ಮಕ್ಕಳ ಬಾಗಿಲಲ್ಲಿಯೂ ಯೆಹೂದದ ಅರಸರು ಪ್ರವೇಶಿಸುವಲ್ಲಿಯೂ ಹೊರಡುವಲ್ಲಿಯೂ ಯೆರೂಸ ಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು
19 Assim me disse o Senhor: Vai, e põe-te à porta dos filhos do povo, pela qual entram os reis de Judá, e pela qual saem; como também em todas as portas de Jerusalém.
20 ಅವರಿಗೆ ಹೀಗೆ ಹೇಳು. ಏನಂದರೆ--ಯೆಹೂದದ, ಅರಸರೇ, ಸಮಸ್ತ ಯೆಹೂದವೇ, ಈ ಬಾಗಿಲುಗಳಲ್ಲಿ ಪ್ರವೇಶಿಸುವ ಯೆರೂಸಲೇಮಿನ ಎಲ್ಲಾ ನಿವಾಸಿಗಳೇ, ಕರ್ತನ ವಾಕ್ಯವನ್ನು ಕೇಳಿರಿ.
20 E dize-lhes: Ouvi a palavra do Senhor, vós, reis de Judá e todo o Judá, e todos os moradores de Jerusalém que entrais por estas portas.
21 ಕರ್ತನು ಹೀಗೆ ಹೇಳುತ್ತಾನೆ--ನಿಮಗೆ ನೀವೇ ಎಚ್ಚರಿಕೆಯಾಗಿರ್ರಿ; ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತಕ್ಕೊಂಡು ಬರಬೇಡಿರಿ.
21 Assim diz o Senhor: Guardai as vossas almas, e não tragais cargas no dia de sábado, nem as introduzais pelas portas de Jerusalém;
22 ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ನಿಮ್ಮ ಮನೆಗಳೊಳಗಿಂದ ತಕ್ಕೊಂಡು ಹೋಗಬೇಡಿರಿ; ಯಾವ ಕೆಲಸವನ್ನೂ ಮಾಡಬೇಡಿರಿ; ನಾನು ನಿಮ್ಮ ತಂದೆಗಳಿಗೆ ಆಜ್ಞಾಪಿಸಿದ ಪ್ರಕಾರವೇ ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕು ಎಂಬದು.
22 Nem tireis cargas de vossas casas no dia de sábado, nem façais obra alguma; antes santificai o dia de sábado, como eu ordenei a vossos pais.
23 ಆದರೆ ಅವರು ವಿಧೇಯರಾಗಲಿಲ್ಲ; ಕಿವಿಗೊಟ್ಟು ಕೇಳಲಿಲ್ಲ; ವಿಧೇಯರಾಗದ ಹಾಗೆಯೂ ಉಪದೇಶ ಹೊಂದದ ಹಾಗೆಯೂ ತಮ್ಮ ಕುತ್ತಿಗೆಯನ್ನು ಬೊಗ್ಗಿಸದ ಹಾಗೆಯೂ ಮಾಡಿಕೊಂಡರು.
23 Mas não escutaram, nem inclinaram os seus ouvidos; antes endureceram a sua cerviz, para não ouvirem, e para não receberem correção.
24 ನೀವು ನನ್ನನ್ನು ಜಾಗ್ರತೆಯಾಗಿ ಕೇಳಿ ಸಬ್ಬತ್ತಿನ ದಿನದಲ್ಲಿ ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತಕ್ಕೊಂಡುಬಾರದೆ ಸಬ್ಬತ್ತಿನ ದಿನದಲ್ಲಿ ಯಾವದೊಂದು ಕೆಲಸಮಾಡದೆ ಪರಿಶುದ್ಧ ಮಾಡಿದರೆ
24 Mas se vós diligentemente me ouvirdes, diz o Senhor, não introduzindo cargas pelas portas desta cidade no dia de sábado, e santificardes o dia de sábado, não fazendo nele obra alguma,
25 ದಾವೀದನ ಸಿಂಹಾಸನದ ಮೇಲೆ ಕೂಡ್ರುವ ಅರಸರು ಮತ್ತು ಪ್ರಧಾನರು ರಥಗಳಲ್ಲಿಯೂ ಕುದುರೆಗಳ ಮೇಲೆಯೂ ಸವಾರಿ ಮಾಡಿಕೊಂಡು ಯೆಹೂದದ ಮನುಷ್ಯರಾಗಿಯೂ ಯೆರೂಸಲೇಮಿನ ನಿವಾಸಿಗಳಾಗಿಯೂ ಇದ್ದು ಅವರೂ ಅವರ ಪ್ರಧಾನರೂ ಈ ಪಟ್ಟಣದ ಬಾಗಿಲುಗಳಲ್ಲಿ ಪ್ರವೇಶಿಸುವರು; ಈ ಪಟ್ಟಣವು ಎಂದೆಂದಿಗೂ ನಿಲ್ಲು ವದು.
25 Então entrarão pelas portas desta cidade reis e príncipes, que se assentem sobre o trono de Davi, andando em carros e em cavalos; e eles e seus príncipes, os homens de Judá, e os moradores de Jerusalém; e esta cidade será habitada para sempre.
26 ಇದಲ್ಲದೆ ಯೆಹೂದದ ಪಟ್ಟಣ ಗಳಿಂದಲೂ ಯೆರೂಸಲೇಮಿನ ಸುತ್ತಲಿನ ಸ್ಥಳಗಳಿಂದಲೂ ಬೆನ್ಯಾ ವಿಾನ್‌ ದೇಶದಿಂದಲೂ ಬೈಲಿನಿಂದಲೂ ಬೆಟ್ಟಗ ಳಿಂದಲೂ ದಕ್ಷಿಣದಿಂದಲೂ ದಹನಬಲಿಗಳನ್ನೂ ಬಲಿ ಗಳನ್ನೂ ಆಹಾರ ಅರ್ಪಣೆಗಳನ್ನೂ ಧೂಪವನ್ನೂ ತರುವರು; ಸ್ತೋತ್ರದರ್ಪಣೆಗಳನ್ನು ಕರ್ತನ ಆಲಯಕ್ಕೆ ತರುವರು.
26 E virão das cidades de Judá, e dos arredores de Jerusalém, e da terra de Benjamim, e das planícies, e das montanhas, e do sul, trazendo holocaustos, e sacrifícios, e ofertas de alimentos, e incenso, trazendo também sacrifícios de louvores à casa do Senhor.
27 ಆದರೆ ನೀವು ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕೆಂದೂ ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಬಾರದೆಂದೂ ಹೇಳಿದ ನನ್ನ ಮಾತನ್ನು ಕೇಳದೆ ಹೋದರೆ, ಅದರ ಬಾಗಿಲುಗಳಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಆರಿ ಹೋಗದೆ ಯೆರೂಸಲೇಮಿನ ಅರಮನೆಗಳನ್ನು ದಹಿಸಿಬಿಡುವದು.
27 Mas, se não me ouvirdes, para santificardes o dia de sábado, e para não trazerdes carga alguma, quando entrardes pelas portas de Jerusalém no dia de sábado, então acenderei fogo nas suas portas, o qual consumirá os palácios de Jerusalém, e não se apagará.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jeremias 17, comparar traduções ou montar um estudo — tudo direto pelo WhatsApp.