Jeremias 13

Kannada Bible (GL_KANNADA) vs ACF

Sair da comparação
ACF Almeida Corrigida Fiel
1 1 ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು;
1 Assim me disse o SENHOR: Vai, e compra um cinto de linho e põe-no sobre os teus lombos, mas não o coloques na água.
2 ಆಗ ಕರ್ತನ ಮಾತಿನ ಪ್ರಕಾರ ನಾನು ಆ ದಟ್ಟಿಯನ್ನು ತಕ್ಕೊಂಡು ನನ್ನ ನಡುವಿಗೆ ಕಟ್ಟಿಕೊಂಡೆನು.
2 E comprei o cinto, conforme a palavra do Senhor, e o pus sobre os meus lombos.
3 ಆಗ ಕರ್ತನ ವಾಕ್ಯವು ನನಗೆ ಎರಡನೇ ಸಾರಿ ಉಂಟಾಗಿ ಹೇಳಿದ್ದೆನಂದರೆ--ನೀನು ನಿನ್ನ ನಡುವಿನಲ್ಲಿರುವ
3 Então me veio a palavra do Senhor pela segunda vez, dizendo:
4 ದಟ್ಟಿಯನ್ನು ತಕ್ಕೊಂಡು ಎದ್ದು ಯೂಫ್ರೇಟೀಸ್‌ಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಬಿರುಕಿನಲ್ಲಿ ಅಡಗಿಸು ಎಂದಿತು.
4 Toma o cinto que compraste, e que trazes sobre os teus lombos, e levanta-te; vai ao Eufrates, e esconde-o ali na fenda de uma rocha.
5 ಆಗ ನಾನು ಹೋಗಿ ಕರ್ತನು ನನಗೆ ಆಜ್ಞಾಪಿಸಿದ ಪ್ರಕಾರ ಅದನ್ನು ಯೂಫ್ರೇಟೀಸ್‌ ಬಳಿ ಯಲ್ಲಿ ಅಡಗಿಸಿದೆನು.
5 E fui, e escondi-o junto ao Eufrates, como o Senhor me havia ordenado.
6 ಬಹಳ ದಿವಸಗಳಾದ ಮೇಲೆ ಕರ್ತನು ನನಗೆ--ನೀನು ಎದ್ದು ಯೂಫ್ರೆಟೀ ಸ್‌ಗೆ ಹೋಗಿ ಅಲ್ಲಿ ಅಡಗಿಸಬೇಕೆಂದು ನಾನು ಆಜ್ಞಾಪಿಸಿದ ದಟ್ಟಿಯನ್ನು ಅಲ್ಲಿಂದ ತಕ್ಕೋ ಅಂದನು.
6 Sucedeu, ao final de muitos dias, que me disse o Senhor: Levanta-te, vai ao Eufrates, e toma dali o cinto que te ordenei que o escondesses ali.
7 ಆಗ ನಾನು ಯೂಫ್ರೇಟೀಸಿಗೆ ಹೋಗಿ ಅಗೆದು ಆ ದಟ್ಟಿಯನ್ನು ನಾನು ಅಡಗಿಸಿದ್ದಲ್ಲಿಂದ ತೆಗೆದೆನು; ಇಗೋ, ಆ ದಟ್ಟಿಯು ಯಾವ ಕೆಲಸಕ್ಕಾದರೂ ಬಾರದೆ ಕೆಟ್ಟು ಹೋಗಿತ್ತು.
7 E fui ao Eufrates, e cavei, e tomei o cinto do lugar onde o havia escondido; e eis que o cinto tinha apodrecido, e para nada prestava.
8 ಆಗ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
8 Então veio a mim a palavra do Senhor, dizendo:
9 ಕರ್ತನು ಹೀಗೆ ಹೇಳುತ್ತಾನೆ --ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ ಯೆರೂಸಲೇಮಿನ ದೊಡ್ಡ ಗರ್ವವನ್ನೂ ಕೆಡಿಸುವೆನು.
9 Assim diz o Senhor: Do mesmo modo farei apodrecer a soberba de Judá, e a muita soberba de Jerusalém.
10 ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡಕೊಂಡು ಬೇರೆ ದೇವರುಗಳನ್ನು ಸೇವಿಸುವದಕ್ಕೂ ಅವುಗಳನ್ನು ಆರಾಧಿಸುವದಕ್ಕೂ ಹಿಂಬಾಲಿಸುವ ಈ ಕೆಟ್ಟ ಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
10 Este povo maligno, que recusa ouvir as minhas palavras, que caminha segundo a dureza do seu coração, e anda após deuses alheios, para servi-los, e inclinar-se diante deles, será tal como este cinto, que para nada presta.
11 ಯಾವ ಪ್ರಕಾರ ದಟ್ಟಿಯು ಮನುಷ್ಯನ ನಡುವಿಗೆ ಹತ್ತಿಕೊ ಳ್ಳುವದೋ ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ ಯೆಹೂದದ ಮನೆತನವ ನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು; ಆದರೆ ಅವರು ಕೇಳಲಿಲ್ಲ.
11 Porque, como o cinto está pegado aos lombos do homem, assim eu liguei a mim toda a casa de Israel, e toda a casa de Judá, diz o Senhor, para me serem por povo, e por nome, e por louvor, e por glória; mas não deram ouvidos.
12 ಆದದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವು; ಆಗ ಅವರು ನಿನಗೆ--ಬುದ್ದಲಿಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ ಎಂದು ನಿನಗೆ ಹೇಳುವರು.
12 Portanto, dize-lhes esta palavra: Assim diz o Senhor Deus de Israel: Todo o odre se encherá de vinho; e dir-te-ão: Porventura não sabemos nós muito bem que todo o odre se encherá de vinho?
13 ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕೂಡ್ರುವ ಅರಸುಗಳನ್ನೂ ಯಾಜಕರನ್ನೂ ಪ್ರವಾದಿ ಗಳನ್ನೂ ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.
13 Mas tu dize-lhes: Assim diz o Senhor: Eis que eu encherei de embriaguez a todos os habitantes desta terra, e aos reis da estirpe de Davi, que estão assentados sobre o seu trono, e aos sacerdotes, e aos profetas, e a todos os habitantes de Jerusalém.
14 ಅವರ ತಂದೆಗಳನ್ನೂ ಮಕ್ಕಳನ್ನೂ ಕೂಡ ಒಬ್ಬನ ಮೇಲೊಬ್ಬನನ್ನು ಅಪ್ಪಳಿಸು ವೆನು. ನಾನು ಅವರನ್ನು ಕನಿಕರಿಸುವದಿಲ್ಲ, ಕರುಣಿಸು ವದಿಲ್ಲ ಅಂತಃಕರುಣೆಪಡುವದಿಲ್ಲ ಅವರನ್ನು ಕೆಡಿಸು ವೆನು ಎಂದು ಕರ್ತನು ಅನ್ನುತ್ತಾನೆ.
14 E fá-los-ei em pedaços atirando uns contra os outros, e juntamente os pais com os filhos, diz o Senhor; não perdoarei, nem pouparei, nem terei deles compaixão, para que não os destrua.
15 ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಕರ್ತನು ಮಾತನಾಡಿದ್ದಾನೆ.
15 Escutai, e inclinai os ouvidos; não vos ensoberbeçais; porque o Senhor falou:
16 ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ.
16 Dai glória ao Senhor vosso Deus, antes que venha a escuridão e antes que tropecem vossos pés nos montes tenebrosos; antes que, esperando vós luz, ele a mude em sombra de morte, e a reduza à escuridão.
17 ಆದರೆ ನೀವು ಅದನ್ನು ಕೇಳದೆ ಹೋದರೆ ನನ್ನ ಪ್ರಾಣವು ನಿಮ್ಮ ಗರ್ವದ ನಿಮಿತ್ತ ಅಂತರಂಗದ ಸ್ಥಳಗಳಲ್ಲಿ ಅಳು ವದು. ನನ್ನ ಆತ್ಮವು ಬಹಳವಾಗಿ ದುಃಖಿಸುವದು; ಕಣ್ಣೀರು ಬಹಳವಾಗಿ ಸುರಿಸುವದು; ಕರ್ತನ ಮಂದೆಯು ಸೆರೆಯಾಗಿ ಒಯ್ಯಲ್ಪಟ್ಟಿದೆ.
17 E, se isto não ouvirdes, a minha alma chorará em lugares ocultos, por causa da vossa soberba; e amargamente chorarão os meus olhos, e se desfarão em lágrimas, porquanto o rebanho do Senhor foi levado cativo.
18 ಅರಸನಿಗೂ ರಾಣಿಗೂ ನೀನು ಹೇಳತಕ್ಕದ್ದೇ ನಂದರೆ--ನೀವು ತಗ್ಗಿಸಿಕೊಂಡು ಕೂತುಕೊಳ್ಳಿರಿ; ನಿಮ್ಮ ದೊರೆತನಗಳು ಅಂದರೆ ನಿಮ್ಮ ಗೌರವದ ಕಿರೀಟವು ಕೆಳಗೆ ಬರುವದು.
18 Dize ao rei e à rainha: Humilhai-vos, e assentai-vos no chão; porque já caiu todo o ornato de vossas cabeças, a coroa da vossa glória.
19 ದಕ್ಷಿಣದ ಪಟ್ಟಣಗಳು ತೆರೆಯುವ ವನಿಲ್ಲದೆ ಮುಚ್ಚಲ್ಪಡುವವು, ಯೆಹೂದವೆಲ್ಲವೂ ಸಂಪೂರ್ಣವಾಗಿ ಸೆರೆಯಾಗಿ ಒಯ್ಯಲ್ಪಡುವದು.
19 As cidades do sul estão fechadas, e ninguém há que as abra; todo o Judá foi levado cativo, sim, inteiramente cativo.
20 ನಿಮ್ಮ ಕಣ್ಣುಗಳನ್ನು ಎತ್ತಿ ಉತ್ತರದಿಂದ ಬರುವವ ರನ್ನು ನೋಡಿರಿ; ನಿನಗೆ ಕೊಡಲ್ಪಟ್ಟ ಹಿಂಡೂ ನನ್ನ ಶೃಂಗಾರದ ಮಂದೆಯೂ ಎಲ್ಲಿ?
20 Levantai os vossos olhos, e vede os que vêm do norte; onde está o rebanho que se te deu, o rebanho da tua glória?
21 ಆತನು ನಿನ್ನನ್ನು ಶಿಕ್ಷಿಸುವಾಗ ಏನು ಹೇಳುವಿ? ನಿನ್ನ ಮೇಲೆ ಅವರು ಮುಖ್ಯ ಪ್ರಭುಗಳೂ ಮುಖ್ಯಸ್ಥರೂ ಆಗಿರುವದಕ್ಕೆ ನೀನೇ ಅವರಿಗೆ ಕಲಿಸಿದಿಯಲ್ಲಾ? ಹೆರುವ ಸ್ತ್ರೀಯ ಪ್ರಕಾರ ನಿನ್ನನ್ನು ದುಃಖಗಳು ಹಿಡಿಯುವವಲ್ಲವೋ?
21 Que dirás, quando ele te castigar porque os ensinaste a serem capitães, e chefe sobre ti? Porventura não te tomarão as dores, como à mulher que está de parto?
22 ಇವು ನನಗೆ ಯಾಕೆ ಸಂಭವಿಸಿದವೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ, ಬಹಳವಾದ ನಿನ್ನ ಅಕ್ರಮದ ನಿಮಿತ್ತ ನಿನ್ನ ಬಟ್ಟೆಗಳು ತೆಗೆಯಲ್ಪಟ್ಟು ನಿನ್ನ ಹಿಮ್ಮಡಿಗಳು ಬೆತ್ತಲೆಯಾದವು.
22 Quando, pois, disseres no teu coração: Por que me sobrevieram estas coisas? Pela multidão das tuas maldades se descobriram as tuas fraldas, e os teus calcanhares sofrem violência.
23 ಕೂಷ್ಯನು ತನ್ನ ಚರ್ಮವನ್ನೂ ಚಿರತೆಯು ತನ್ನ ಮಚ್ಚೆಗಳನ್ನೂ ಮಾರ್ಪಡಿಸುವದಕ್ಕಾಗುವದೋ? ಹಾಗಾದರೆ ಕೆಟ್ಟ ತನದ ಅಭ್ಯಾಸವುಳ್ಳವರಾದ ನೀವು ಸಹ ಒಳ್ಳೆದನ್ನು ಹೇಗೆ ಮಾಡುವದಕ್ಕಾದೀತು.
23 Porventura pode o etíope mudar a sua pele, ou o leopardo as suas manchas? Então podereis vós fazer o bem, sendo ensinados a fazer o mal.
24 ಆದಕಾರಣ ಅಡವಿಯ ಗಾಳಿಯಿಂದ ಹಾರಿ ಹೋಗುವ ಹುಲ್ಲಿನಂತೆ ಅವರನ್ನು ಚದರಿಸುವೆನು.
24 Assim os espalharei como o restolho, que passa com o vento do deserto.
25 ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು ಎಂದು ಕರ್ತನು ಅನ್ನುತ್ತಾನೆ; ನನ್ನನ್ನು ಮರೆತುಬಿಟ್ಟು ಸುಳ್ಳಿನಲ್ಲಿ ಭರವಸವಿಟ್ಟಿದ್ದಿ.
25 Esta será a tua sorte, a porção que te será medida por mim, diz o Senhor; pois te esqueceste de mim, e confiaste em mentiras.
26 ಆದದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ ನಿನ್ನ ಮುಖದ ಮೇಲೆ ಎತ್ತುವೆನು.
26 Assim também eu levantarei as tuas fraldas sobre o teu rosto; e aparecerá a tua ignomínia.
27 ನಿನ್ನ ವ್ಯಭಿಚಾರಗಳನ್ನೂ ಬುಸುಗುಟ್ಟು ವಿಕೆಗಳನ್ನೂ ಸೂಳೆತನದ ದೋಷವನ್ನೂ ಹೊಲಗಳ ಲ್ಲಿರುವ ಗುಡ್ಡಗಳ ಮೇಲೆ ಆಗುವ ನಿನ್ನ ಅಸಹ್ಯಗಳನ್ನೂ ನೋಡಿದ್ದೇನೆ, ಓ ಯೆರೂಸಲೇಮೇ, ನಿನಗೆ ಅಯ್ಯೋ, ನೀನು ಶುದ್ಧವಾಗುವದಿಲ್ಲವೋ? ಒಂದು ಸಾರಿ ಇದು ಯಾವಾಗ ಆದೀತು?
27 Já vi as tuas abominações, e os teus adultérios, e os teus rinchos, e a enormidade da tua prostituição sobre os outeiros no campo; ai de ti, Jerusalém! Até quando ainda não te purificarás?

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jeremias 13, comparar traduções ou montar um estudo — tudo direto pelo WhatsApp.