Jó 33

Kannada Bible (GL_KANNADA) vs NVI

Sair da comparação
NVI Nova Versão Internacional
1 ಆದದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು; ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ.
1 "Mas agora, Jó, escute as minhas palavras; preste atenção a tudo o que vou dizer.
2 ಇಗೋ, ಈಗ ನನ್ನ ಬಾಯನ್ನು ತೆರೆದಿದ್ದೇನೆ. ನನ್ನ ನಾಲಿಗೆ ನನ್ನ ಬಾಯಲ್ಲಿ ಮಾತನಾಡುತ್ತದೆ.
2 Estou prestes a abrir a boca; minhas palavras estão na ponta da língua.
3 ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
3 Minhas palavras procedem de um coração íntegro; meus lábios falam com sinceridade o que eu sei.
4 ದೇವರ ಆತ್ಮನು ನನ್ನನ್ನು ಉಂಟುಮಾಡಿದನು; ಸರ್ವಶಕ್ತನ ಶ್ವಾಸವು ನನಗೆ ಜೀವವನ್ನು ಕೊಟ್ಟಿತು.
4 O Espírito de Deus me fez; o sopro do Todo-poderoso me dá vida.
5 ನೀನು ನನಗೆ ಉತ್ತರ ಕೊಡುವದಕ್ಕೆ ಸಾಧ್ಯವಾದರೆ ನಿನ್ನ ಮಾತುಗಳನ್ನು ಸಿದ್ಧಮಾಡಿಕೊಂಡು ನನ್ನ ಮುಂದೆ ನಿಂತುಕೋ.
5 Responda-me, então, se puder; prepare-se para enfrentar-me.
6 ಇಗೋ, ನಾನು ದೇವರ ಮುಂದೆ ನಿನ್ನ ಹಾಗೆಯೇ ಇದ್ದೇನೆ; ಮಣ್ಣಿನಿಂದ ನಾನು ಸಹ ರೂಪಿಸಲ್ಪಟ್ಟಿದ್ದೇನೆ.
6 Sou igual a você diante de Deus; eu também fui feito do barro.
7 ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು; ಇಲ್ಲವೆ ನನ್ನ ಕೈ ನಿನ್ನ ಮೇಲೆ ಭಾರವಾಗದು.
7 Por isso não lhe devo inspirar temor, e a minha mão não há de ser pesada sobre você.
8 ನಿಶ್ಚಯವಾಗಿ ನೀನು ನನ್ನ ಕಿವಿಗಳಲ್ಲಿ ಹೇಳಿದ್ದೀ ಮತ್ತು ನಾನು ನಿನ್ನ ಮಾತುಗಳ ಶಬ್ದವನ್ನು ಕೇಳಿದ್ದೇನೆ.
8 "Mas você disse ao meu alcance, eu ouvi bem as palavras:
9 ಏನಂದರೆ--ನಾನು ದ್ರೋಹವಿಲ್ಲದವನಾಗಿ ಶುದ್ಧ ನಾಗಿದ್ದೇನೆ; ನಾನು ಯಥಾರ್ಥನಾಗಿದ್ದೇನೆ; ಇಲ್ಲವೆ ನನ್ನಲ್ಲಿ ಅಪರಾಧವಿಲ್ಲ.
9 ‘Estou limpo e sem pecado; estou puro e sem culpa.
10 ಇಗೋ, ಆತನು ನನಗೆ ವಿರೋಧವಾಗಿ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ; ಆತನು ತನಗೆ ಶತ್ರುವೆಂದು ನನ್ನನ್ನು ಎಣಿಸುತ್ತಾನೆ.
10 Contudo, Deus procurou em mim motivos para inimizade; ele me considera seu inimigo.
11 ಆತನು ನನ್ನ ಕಾಲುಗಳನ್ನು ಕೊಳಕ್ಕೆ ಸೇರಿಸಿದ್ದಾನೆ; ನನ್ನ ಹಾದಿಗಳನ್ನೆಲ್ಲಾ ಗುರುತಿಸುತ್ತಾನೆ.
11 Ele acorrenta os meus pés; vigia de perto todos os meus caminhos. ’
12 ಇಗೋ, ಈ ವಿಷಯವಾಗಿ ನೀನು ನೀತಿವಂತನಲ್ಲ; ನಾನು ನಿನಗೆ ಉತ್ತರ ಕೊಡುತ್ತೇನೆ; ಏನಂದರೆ ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನೆ.
12 "Mas eu lhe digo que você não está certo, porquanto Deus é maior do que o homem.
13 ನೀನು ಆತನ ಸಂಗಡ ಯಾಕೆ ವಾದಿಸಿದಿ? ಆತನು ನಿನ್ನ ಯಾವ ವಿಷಯದಲ್ಲಿಯೂ ಉತ್ತರ ಕೊಡುವದಿಲ್ಲ.
13 Por que você se queixa a ele de que não responde às palavras dos homens?
14 ಒಂದು ಸಾರಿ ಹೌದು, ಎರಡು ಸಾರಿ ದೇವರು ಮಾತನಾಡುತ್ತಾನೆ; ಆದರೂ ಮನುಷ್ಯನು ಅದನ್ನು ಗ್ರಹಿಸಿಕೊಳ್ಳುವದಿಲ್ಲ.
14 Pois a verdade é que Deus fala, ora de um modo, ora de outro, mesmo que o homem não o perceba.
15 ಸ್ವಪ್ನದಲ್ಲಿ ರಾತ್ರಿಯ ದರ್ಶನ ದಲ್ಲಿ; ಗಾಢ ನಿದ್ರೆಯು ಮನುಷ್ಯರ ಮೇಲೆ ಬೀಳುವಾಗ ಮಂಚದ ಮೇಲಿನ ತೂಕಡಿಕೆಗಳಲ್ಲಿ
15 Em sonho ou em visão durante a noite, quando o sono profundo cai sobre os homens e eles dormem em suas camas,
16 ಆತನು ಮನುಷ್ಯರ ಕಿವಿಗಳನ್ನು ತೆರೆದು ಶಿಕ್ಷಣದ ಮಾತು ಗಳನ್ನು ಅವರಿಗೆ ಮುದ್ರೆಹಾಕುತ್ತಾನೆ.
16 ele pode falar aos ouvidos deles e aterrorizá-los com advertências
17 ಮನುಷ್ಯ ನನ್ನು ಅವನ ಉದ್ದೇಶದಿಂದ ತೊಲಗಿಸುವದಕ್ಕೂ ಮನುಷ್ಯನ ಗರ್ವವನ್ನು ಅಡಗಿಸುವದಕ್ಕೂ ಹಾಗೆ ಮಾಡುತ್ತಾನೆ.
17 para previnir o homem das suas más ações e livrá-lo do orgulho,
18 ಅವನ ಪ್ರಾಣವನ್ನು ಕುಣಿಯಿಂದ ಲೂ ಅವನ ಜೀವವನ್ನು ಕತ್ತಿಯಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾನೆ.
18 para preservar da cova a sua alma, e a sua vida da espada.
19 ಅವನು ತನ್ನ ಹಾಸಿಗೆಯಲ್ಲಿ ನೋವಿನಿಂದ ಶಿಕ್ಷಿಸ ಲ್ಪಡುತ್ತಾನೆ; ಅವನ ಎಲುಬುಗಳಿಗೆಲ್ಲಾ ಕಠಿಣವಾದ ನೋವು ಉಂಟು.
19 Ou o homem pode ser castigado no leito de dor, com os seus ossos em constante agonia,
20 ಅವನ ಜೀವಕ್ಕೆ ರೊಟ್ಟಿಯೂ ಅವನ ಪ್ರಾಣಕ್ಕೆ ಸವಿ ಊಟವೂ ಅಸಹ್ಯವಾಗಿವೆ.
20 levando-o a achar a comida repulsiva e a detestar na alma sua refeição preferida.
21 ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ.
21 Já não se vê sua carne, e seus ossos, que não se viam, agora aparecem.
22 ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ.
22 Sua alma aproxima-se da cova, e sua vida, dos mensageiros da morte.
23 ಸಹಸ್ರ ಜನರಲ್ಲಿ ಒಬ್ಬನಾದ ಮಧ್ಯಸ್ಥ ನಾಗಿರುವ ದೂತನು ಮನುಷ್ಯನಿಗೆ ಅವನ ಯಥಾರ್ಥ ತೆಯನ್ನು ತಿಳಿಸುವದಕ್ಕೆ ಅವನ ಬಳಿಯಲ್ಲಿದ್ದರೆ,
23 "Havendo, porém, um anjo ao seu lado, como mediador dentre mil, que diga ao homem o que é certo a seu respeito,
24 ಆಗ ಆತನು ಅವನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯು ವದರಿಂದ ಅವನನ್ನು ಬಿಡಿಸುತ್ತಾನೆ; ನಾನು ವಿಮೋ ಚನೆಯ ಕ್ರಯವನ್ನು ಕಂಡುಕೊಂಡೆನು.
24 para ser-lhe favorável e dizer: ‘Poupa-o de descer à cova; encontrei resgate para ele’,
25 ಆಗ ಅವನ ಶರೀರವು ಮಗುವಿನ ಶರೀರಕ್ಕಿಂತ ಮೃದುವಾಗಿರು ವದು; ಅವನು ತನ್ನ ಯೌವನ ದಿವಸಗಳಿಗೆ ತಿರುಗಿ ಕೊಳ್ಳುವನು.
25 então sua carne se renova voltando a ser como de criança; ele se rejuvenece.
26 ಅವನು ದೇವರಿಗೆ ಬಿನ್ನಹ ಮಾಡು ವನು; ಆತನು ಅವನಿಗೆ ಕೃಪಾಳುವಾಗಿರುವನು. ಅವನು ಆತನ ಮುಖವನ್ನು ಸಂತೋಷದಿಂದ ನೋಡುವನು; ಆತನು ಮನುಷ್ಯನಿಗೆ ತನ್ನ ನೀತಿಯನ್ನು ಅನುಗ್ರಹಿ ಸುವನು.
26 Ele ora a Deus e recebe o seu favor; vê o rosto de Deus e dá gritos de alegria, e Deus lhe restitui a condição de justo.
27 ಆತನು ಮನುಷ್ಯರನ್ನು ನೋಡಿ--ಯಾವನಾದರೂ--ನಾನು ಪಾಪಮಾಡಿ; ನ್ಯಾಯವನ್ನು ವಕ್ರಮಾಡಿದ್ದೇನೆ, ಆದರೆ ನನಗೆ ಅದರಿಂದ ಲಾಭವಾಗಲಿಲ್ಲ ಎಂದು ಹೇಳಿದರೆ;
27 Depois ele vem aos homens e diz: ‘Pequei e torci o que era certo, mas ele não me deu o que eu merecia.
28 ಆತನು ಅವನ ಪ್ರಾಣವು ಕುಣಿಗೆ ಹೋಗದಂತೆ ಕಾಪಾಡುವನು. ಅವನ ಪ್ರಾಣವು ಬೆಳಕನ್ನು ನೋಡುವದು.
28 Ele resgatou a minha alma, impedindo-a de descer à cova, e viverei para desfrutar a luz’.
29 ಇಗೋ, ಇವೆಲ್ಲವುಗಳನ್ನು ಅನೇಕ ಸಾರಿ ಮನು ಷ್ಯನಿಗೆ ಮಾಡುತ್ತಾನೆ.
29 "Deus faz dessas coisas ao homem, duas ou três vezes,
30 ಅವನ ಪ್ರಾಣವನ್ನು ಕುಣಿಯಿಂದ ಹಿಂತಿರುಗಿ ತಂದು ಜೀವದ ಬೆಳಕಿನಿಂದ ಅವನನ್ನು ಬೆಳಗುವ ಹಾಗೆ ಮಾಡುವನು.
30 para recuperar sua alma da cova, a fim de que refulja sobre ele a luz da vida.
31 ಓ ಯೋಬನೇ, ಚೆನ್ನಾಗಿ ಗುರುತಿಸು; ನನ್ನ ಮಾತಿಗೆ ಕಿವಿಗೊಡು. ಮೌನವಾಗಿರು, ನಾನು ಮಾತನಾಡು ತ್ತೇನೆ.
31 "Preste atenção, Jó, e escute-me; fique em silêncio, e falarei.
32 ನಿನಗೆ ಹೇಳುವದಕ್ಕೆ ಏನಾದರೂ ಇದ್ದರೆ ನನಗೆ ಉತ್ತರ ಕೊಡು; ಮಾತನಾಡು, ನಿನ್ನನ್ನು ನೀತಿವಂತನೆಂದು ನಿರ್ಣಯಿಸುವದಕ್ಕೆ ಇಚ್ಚಿಸುತ್ತೇನೆ.
32 Se você tem algo para dizer, responda-me; fale logo, pois quero que você seja absolvido.
33 ಇಲ್ಲದಿದ್ದರೆ ನಾನು ಹೇಳುವದನ್ನು ಕೇಳು. ಮೌನ ವಾಗಿರು, ನಾನು ನಿನಗೆ ಜ್ಞಾನವನ್ನು ಕಲಿಸುತ್ತೇನೆ.
33 Se não tem nada a dizer, ouça-me, fique em silêncio, e eu lhe ensinarei a sabedoria".

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jó 33, comparar traduções ou montar um estudo — tudo direto pelo WhatsApp.