Jó 30

Kannada Bible (GL_KANNADA) vs BKJ

Sair da comparação
1 ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು
1 Mas agora, aqueles que são mais jovens do que eu estão rindo de mim, cujos pais eu teria recusado deixar com os cães de meu rebanho.
2 ಹೌದು, ಅವರ ಕೈಗಳ ಶಕ್ತಿಯ ಲಾಭ ನನಗೆ ಯಾಕೆ? ಅವರಲ್ಲಿ ಮುದಿಪ್ರಾಯವು ನಾಶವಾಯಿತು.
2 Sim, para onde poderia a força de suas mãos me acrescentar, em quem a idade avançada havia perecido?
3 ಕೊರತೆ ಯಿಂದಲೂ ಬರದಿಂದಲೂ ಒಂಟಿಗರಾಗಿ ಪೂರ್ವ ದಲ್ಲಿ ಹಾಳೂ ಬೈಲೂ ಆದ ಅರಣ್ಯಕ್ಕೆ ಓಡುತ್ತಾರೆ;
3 Por necessidade e fome eles estiveram solitários; fugindo para dentro do deserto em tempos passados, assolado e devastado.
4 ಪೊದೆಯ ಹತ್ತಿರ ಉಪ್ಪಿನಸೊಪ್ಪು ಕೀಳುವವರಿಗೆ ಜಾಲಿಯ ಬೇರುಗಳೇ ಅವರ ರೊಟ್ಟಿ.
4 Eles cortavam malvas dos arbustos, e raízes de zimbro para lhes alimentar.
5 ಜನರಿಂದ ಅವರನ್ನು ಹೊರಗೆ ಹಾಕುತ್ತಾರೆ; (ಕಳ್ಳರ ಹಿಂಡಿನಂತೆ ಅವರ ಹಿಂದೆ ಕೂಗುತ್ತಾರೆ).
5 Eles eram expulsos do meio dos homens (e gritavam atrás deles como atrás de um ladrão),
6 ಭಯಂಕರವಾದ ತಗ್ಗು ಗಳ ಸಂದುಗಳಲ್ಲಿಯೂ ಭೂಮಿಯ ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸವಾಗಿರಬೇಕು.
6 para habitarem nos penhascos dos vales, nas cavernas da terra e nas rochas.
7 ಪೊದೆಗಳ ನಡುವೆ ಕೂಗುತ್ತಾರೆ; ತುರಿಚಿಗಳ ಕೆಳಗೆ ಕೂಡುತ್ತಾರೆ.
7 Entre os arbustos eles zurravam; debaixo das urtigas eles se ajuntavam.
8 ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು.
8 Eles eram filhos de tolos, sim, filhos de homens da base; eram mais vis do que a terra.
9 ಆದರೆ ಈಗ ನಾನು ಅವರ ಹಾಸ್ಯದ ರಾಗವೂ ಹೌದು, ಅವರಿಗೆ ಗಾದೆಯೂ ಆದೆನು.
9 E agora eu sou a sua canção, sim, eu sou o seu motivo de riso.
10 ನನ್ನನ್ನು ಅಸಹ್ಯಿಸುತ್ತಾರೆ; ನನಗೆ ದೂರ ವಾಗಿ ಓಡಿಹೋಗುತ್ತಾರೆ; ನನ್ನ ಮುಖದ ಮುಂದೆ ಉಗುಳಲು ಹಿಂದೆಗೆಯುವದಿಲ್ಲ.
10 Eles me abominam, fogem para longe de mim, e não se poupam em cuspir na minha face.
11 ಆತನು ತನ್ನ ಹಗ್ಗವನ್ನು ಸಡಲಿಸಿ ನನ್ನನ್ನು ಶ್ರಮೆ ಪಡಿಸುತ್ತಾನೆ; ನನ್ನ ಮುಖದ ಮುಂದೆ ಕಡಿವಾಣಕಿತ್ತು ಬಿಡುತ್ತಾರೆ;
11 Porque ele soltou meu cordão, e me afligiu, eles também soltaram o freio diante de mim.
12 ಬಲಗಡೆಯಲ್ಲಿ ಯುವಕರು ಏಳುತ್ತಾರೆ; ಅವರು ನನ್ನ ಕಾಲುಗಳನ್ನು ದೂಡುತ್ತಾರೆ; ನಾಶಕರ ವಾದ ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಾರೆ.
12 À minha mão direita levanta-se a juventude; eles empurram meus pés para longe, e levantam contra mim os caminhos de sua destruição.
13 ನನ್ನ ದಾರಿಯನ್ನೂ ಕೆಡಿಸುತ್ತಾರೆ; ನನ್ನ ನಷ್ಟಕ್ಕಾಗಿ ಸಹಾಯಮಾಡುತ್ತಾರೆ; ಅವರಿಗೆ ಸಹಾಯ ಕನಿಲ್ಲ.
13 Eles deterioram o meu caminho; promovem a minha calamidade; eles não têm ajudador.
14 ಅವರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬಂದರು; ನಾಶದೊಂದಿಗೆ ಹೊರಳಿ ನನ್ನ ಮೇಲೆ ಅವರು ಬರುತ್ತಾರೆ.
14 Eles vieram sobre mim como uma grande destruição de águas; na assolação eles rolaram sobre mim.
15 ದಿಗಿಲುಗಳು ನನ್ನ ಮೇಲೆ ಬಂದವೆ; ಅವು ಗಾಳಿಯ ಹಾಗೆ ನನ್ನ ಪ್ರಾಣ ವನ್ನು ಹಿಂದಟ್ಟುತ್ತವೆ; ಮೇಘದ ಹಾಗೆ ನನ್ನ ಕ್ಷೇಮವು ದಾಟಿ ಹೋಗುತ್ತದೆ.
15 Terrores vêm sobre mim; eles perseguem minha alma como o vento; e minha prosperidade passou como uma nuvem.
16 ಆದರೆ ಈಗ ನನ್ನ ಪ್ರಾಣವು ನನ್ನಲ್ಲಿ ಹೊಯ್ಯಲ್ಪಡುವದು; ದೀನತ್ವದ ದಿವಸಗಳು ನನ್ನನ್ನು ಹಿಡಿದವೆ.
16 E agora minha alma se derrama sobre mim; os dias de aflição se apoderaram de mim.
17 ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ತಿವಿಯಲ್ಪಡುತ್ತವೆ; ನನ್ನ ನರಗಳು ವಿಶ್ರಾಂತಿ ತೆಗೆದು ಕೊಳ್ಳುವದಿಲ್ಲ.
17 Meus ossos são perfurados dentro de mim no período da noite, e meus tendões não têm descanso.
18 ನನ್ನ ರೋಗದ ಮಹಾ ಶಕ್ತಿಯಿಂದ ನನ್ನ ವಸ್ತ್ರವು ಬದಲಾಗುತ್ತದೆ; ಅದು ನನ್ನ ಅಂಗಿಯ ಹಾಗೆ ನನ್ನನ್ನು ಬಂಧಿಸುತ್ತದೆ.
18 Pela grande força da minha enfermidade minhas vestes mudaram; elas grudam em mim como a gola da minha túnica.
19 ಆತನು ನನ್ನನ್ನು ಕೆಸರಿನಲ್ಲಿ ದೊಬ್ಬಿದ್ದಾನೆ; ದೂಳಿಗೂ ಬೂದಿಗೂ ಸಮಾನನಾದೆನು.
19 Ele me lançou na lama, e eu me tornei como pó e cinzas.
20 ನಿನಗೆ ಮೊರೆಯಿಡುತ್ತೇನೆ, ಆದರೆ ನೀನು ಉತ್ತರ ಕೊಡುವದಿಲ್ಲ; ನಿಂತುಕೊಳ್ಳುತ್ತೇನೆ, ಆದರೆ ನೀನು ನನ್ನನ್ನು ಲಕ್ಷಿಸುವದಿಲ್ಲ.
20 Eu clamo a ti, e tu não me ouves; levanto-me, e tu não me consideras.
21 ನೀನು ನನಗೆ ಕ್ರೂರವಾದಿ; ನಿನ್ನ ಕೈಯ ಶಕ್ತಿಯಿಂದ, ನನ್ನನ್ನು ಎದುರಿಸುತ್ತೀ.
21 Tornaste-te cruel para mim; com tua mão forte tu te opões contra mim.
22 ನನ್ನನ್ನು ಗಾಳಿಗೆ ಎತ್ತುತ್ತೀ; ಅದನ್ನು ಹತ್ತಿಹೋಗುವ ಹಾಗೆ ಮಾಡಿ, ನನ್ನನ್ನು ಪೂರ್ಣವಾಗಿ ಕ್ಷೀಣಮಾಡುತ್ತೀ.
22 Tu me elevas ao vento, fazes-me cavalgar sobre ele, e dissolves o meu bem.
23 ಮರಣಕ್ಕೂ ಎಲ್ಲಾ ಜೀವಿಗಳ ನೇಮಕವಾದ ಮನೆಗೂ ನನ್ನನ್ನು ತಿರುಗಿಸುವಿ ಎಂದು ತಿಳಿದಿದ್ದೇನೆ.
23 Porque eu sei que me levarás à morte, e à casa determinada a todos os viventes.
24 ಆದರೆ ಆತನ ನಾಶದಲ್ಲಿ ಅವರು ಮೊರೆಯಿಟ್ಟರೆ, ಸಮಾಧಿಗೆ ಆತನು ಕೈ ಚಾಚುವದಿಲ್ಲ.
24 Porém ele não estenderá sua mão ao túmulo, ainda que eles clamem na sua destruição.
25 ಕಷ್ಟದಲ್ಲಿ ಇದ್ದವನಿಗೋಸ್ಕರ ನಾನು ಅತ್ತೆನಲ್ಲವೋ? ದರಿದ್ರನಿ ಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೋ?
25 Não chorei por aquele que estava atribulado; não se afligiu a minha alma pelo pobre?
26 ನಾನು ಒಳ್ಳೇದನ್ನು ನಿರೀಕ್ಷಿಸಲು ಕೇಡುಬಂತು; ಬೆಳಕನ್ನು ಎದುರು ನೋಡಲು, ಅಂಧಕಾರ ಬಂತು.
26 Quando eu procurei pelo bem, o mal veio sobre mim; e quando eu esperei pela luz, vieram trevas.
27 ನನ್ನ ಕರುಳುಗಳು ಸುಮ್ಮನಿರದೆ ಬೇಯುತ್ತವೆ. ಸಂಕಟಗಳ ದಿವಸಗಳು ನನಗೆ ಮುಂಗೊಂಡವು.
27 As minhas entranhas ferveram, e não descansaram; os dias da aflição me impediram.
28 ಬಿಸಿಲು ಇಲ್ಲದೆ ದುಃಖಿಸುವವನಾಗಿ ನಾನು ಹೋದೆನು; ನಾನು ಸಭೆಯಲ್ಲಿ ಎದ್ದು ಕೂಗಿದೆನು.
28 Saí pranteando sem o sol; levantei-me e clamei na congregação.
29 ಘಟಸರ್ಪಗಳಿಗೆ ಸಹೋದರನಾದೆನು; ಗೂಬೆ ಗಳಿಗೆ ನಾನು ಜೊತೆಯವನಾದೆನು.
29 Eu sou um irmão para dragões, e companhia para corujas.
30 ನನ್ನ ಮೇಲಿನ ಚರ್ಮವು ಕಪ್ಪಗಾಯಿತು; ನನ್ನ ಎಲುಬುಗಳು ಉಷ್ಣ ದಿಂದ ಬೆಂದಿವೆ.
30 Minha pele está preta sobre mim, e meus ossos estão queimados pelo calor.
31 ನನ್ನ ಕಿನ್ನರಿ ಗೋಳಾಟವೂ ನನ್ನ ಕೊಳಲು ಅಳುವವರ ಶಬ್ಧವೂ ಆಯಿತು.
31 A minha harpa também se tornou em pranto, e o meu órgão na voz dos que choram.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jó 30, comparar traduções ou montar um estudo — tudo direto pelo WhatsApp.