Jó 28
Kannada Bible (GL_KANNADA) vs ARC
ARC Almeida Revista e Corrigida 2009
1 ಬೆಳ್ಳಿಗೆ ಗಣಿಯೂ ಬಂಗಾರಕ್ಕೆ ಚೊಕ್ಕ ಮಾಡುವ ಸ್ಥಳವೂ ಉಂಟಲ್ಲಾ?
1 Na verdade, há veios de onde se extrai a prata, e, para o ouro, lugar em que o derretem.
2 ಕಬ್ಬಿಣ ವನ್ನು ಭೂಮಿಯಿಂದ ತೆಗೆಯುತ್ತಾರೆ; ಕಲ್ಲನ್ನು ಕರಗಿಸಿ ತಾಮ್ರವನ್ನು ತೆಗೆಯುತ್ತಾರೆ.
2 O ferro tira-se da terra, e da pedra se funde o metal.
3 ಕತ್ತಲೆಗೆ ಮೇರೆ ಇಡು ತ್ತಾರೆ. ಅಂಧಕಾರದಲ್ಲಿಯೂ ಮರಣದ ನೆರಳಿನ ಲ್ಲಿಯೂ ಇರುವ ಕಲ್ಲುಗಳನ್ನು ಕಟ್ಟಕಡೇ ವರೆಗೂ ಅವರು ಶೋಧಿಸುತ್ತಾರೆ.
3 O homem pôs fim às trevas e até à extremidade ele esquadrinha, procurando as pedras na escuridão e na sombra da morte.
4 ನಿವಾಸದಿಂದ ಪ್ರವಾಹವು ಹೊರ ಚಿಮ್ಮುತ್ತದೆ. ನೀರುಗಳು ಕಾಲಿಗೆ ತಪ್ಪಿಸಿಕೊಂಡು ಒಣಗಿಹೋಗಿ ಮನುಷ್ಯರಿಗೆ ದೂರವಾಗಿವೆ.
4 Trasborda o ribeiro até ao que junto dele habita, de maneira que se não pode passar a pé; então, intervém o homem, e as águas se vão.
5 ಭೂಮಿ ಯಿಂದ ರೊಟ್ಟಿಯು ಬರುತ್ತದೆ; ಆದರೆ ಅದರ ಕೆಳಗಿ ನದು ಬೆಂಕಿ ಬಿದ್ದಂತೆ ಹಾಳಾಗಿರುವದು.
5 A terra, de onde procede o pão, embaixo é revolvida como por fogo.
6 ಅದರ ಕಲ್ಲುಗಳು ನೀಲಮಣಿಗಳ ಸ್ಥಳವಾಗಿವೆ; ಬಂಗಾರದ ಧೂಳು ಅದಕ್ಕೆ ಉಂಟು.
6 As suas pedras são o lugar da safira e têm pós de ouro.
7 ಆ ಹಾದಿಯನ್ನು ಪಕ್ಷಿ ತಿಳಿಯಲಿಲ್ಲ; ಹದ್ದಿನ ಕಣ್ಣು ಅದನ್ನು ದೃಷ್ಟಿಸಲಿಲ್ಲ;
7 Essa vereda, a ignora a ave de rapina, e não a viram os olhos da gralha.
8 ಸಿಂಹದ ಮರಿಗಳು ಅದರಲ್ಲಿ ನಡೆಯಲಿಲ್ಲ. ಉಗ್ರ ವಾದ ಸಿಂಹವು ಅದನ್ನು ದಾಟಲಿಲ್ಲ.
8 Nunca a pisaram filhos de animais altivos, nem o feroz leão passou por ela.
9 ಅವನು ಬಂಡೆಯ ಮೇಲೆ ಕೈ ಹಾಕುತ್ತಾನೆ; ಪರ್ವತಗಳನ್ನು ಬುಡದಿಂದ ಮಗುಚುತ್ತಾನೆ.
9 Ele estende a sua mão contra o rochedo, e revolve os montes desde as suas raízes.
10 ಬಂಡೆಗಳಲ್ಲಿ ಮಾರ್ಗ ಗಳನ್ನು ಕೊರೆದುಬಿಡುತ್ತಾನೆ; ಅವನ ಕಣ್ಣು ಅಮೂಲ್ಯ ವಾದದ್ದನ್ನೆಲ್ಲಾ ನೋಡುತ್ತದೆ.
10 Dos rochedos faz sair rios, e o seu olho descobre todas as coisas preciosas.
11 ಅವನು ಪ್ರವಾಹ ಗಳನ್ನು ದಡ ವಿಾರದಂತೆ ಕಟ್ಟಿ ಮರೆಯಾದದ್ದನ್ನು ಬೆಳಕಿಗೆ ತರುತ್ತಾನೆ.
11 Os rios tapa, e nem uma gota sai deles, e tira para a luz o que estava escondido.
12 ಆದರೆ ಜ್ಞಾನವು ಎಲ್ಲಿ ದೊರಕುವದು? ಗ್ರಹಿಕೆ ಇರುವ ಸ್ಥಳ ಎಲ್ಲಿ?
12 Mas onde se achará a sabedoria? E onde está o lugar da inteligência?
13 ಮನುಷ್ಯನು ಅದರ ಬೆಲೆಯನ್ನು ತಿಳಿದುಕೊಳ್ಳುವದಿಲ್ಲ; ಜೀವಿತರ ಭೂಮಿಯಲ್ಲಿ ಅದು ದೊರಕುವದಿಲ್ಲ.
13 O homem não lhe conhece o valor; não se acha na terra dos viventes.
14 ಅಗಾಧವು--ಅದು ನನ್ನಲ್ಲಿ ಇಲ್ಲ ಅನ್ನುತ್ತದೆ; ಸಮುದ್ರವು--ನನ್ನ ಬಳಿಯಲ್ಲಿ ಇಲ್ಲ ಅನ್ನು ತ್ತದೆ.
14 O abismo diz: Não está em mim; e o mar diz: Ela não está comigo.
15 ಅಪರಂಜಿಯನ್ನು ಅದಕ್ಕೆ ಬದಲಾಗಿ ಕೊಡು ವದಿಲ್ಲ; ಅದರ ಕ್ರಯಕ್ಕಾಗಿ ಬೆಳ್ಳಿಯನ್ನು ತೂಗುವ ದಿಲ್ಲ.
15 Não se dará por ela ouro fino, nem se pesará prata em câmbio dela.
16 ಅದನ್ನು ಓಫೀರಿನ ಬಂಗಾರಕ್ಕೂ ಅಮೂಲ್ಯ ವಾದ ಗೋಮೇಧಿಕಕ್ಕೂ ನೀಲಕ್ಕೂ ಬೆಲೆ ಕಟ್ಟುವ ದಿಲ್ಲ.
16 Nem se pode comprar por ouro fino de Ofir, nem pelo precioso ônix, nem pela safira.
17 ಬಂಗಾರವೂ ಸ್ಫಟಿಕವೂ ಅದಕ್ಕೆ ಸಮನಾಗಿರು ವದಿಲ್ಲ; ಅಪರಂಜಿಯ ಆಭರಣಗಳು ಅದಕ್ಕೆ ಸಮವಲ್ಲ;
17 Com ela se não pode comparar o ouro ou o cristal; nem se trocará por joia de ouro fino.
18 ಹವಳವನ್ನೂ ಮುತ್ತುಗಳನ್ನೂ ನೆನಪು ಮಾಡುವದಿಲ್ಲ; ಜ್ಞಾನದ ಸಂಪತ್ತು ಮಾಣಿಕ್ಯಗಳಿಗಿಂತ ಮೇಲಾದದ್ದು.
18 Ela faz esquecer o coral e as pérolas; porque a aquisição da sabedoria é melhor que a dos rubis.
19 ಕೂಷಿನ ಪುಷ್ಯರಾಗ ಅದಕ್ಕೆ ಈಡಾಗಿರುವದಿಲ್ಲ; ಶುದ್ಧ ಬಂಗಾರಕ್ಕೆ ಅದನ್ನು ತೂಗಿಸುವದಿಲ್ಲ.
19 Não se lhe igualará o topázio da Etiópia, nem se pode comprar por ouro puro.
20 ಆದರೆ ಜ್ಞಾನವು ಎಲ್ಲಿಂದ ಬರುವದು? ಗ್ರಹಿಕೆಯ ಸ್ಥಳವು ಎಲ್ಲಿ?
20 De onde, pois, vem a sabedoria, e onde está o lugar da inteligência?
21 ಎಲ್ಲಾ ಜೀವಿಗಳ ಕಣ್ಣು ಗಳಿಗೆ ಅದು ಮರೆಯಾಗಿದೆ; ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
21 Porque está encoberta aos olhos de todo vivente e oculta às aves do céu.
22 ನಾಶಸ್ಥಾನವೂ ಮರಣವೂ --ಅದರ ಸುದ್ದಿಯನ್ನು ನಮ್ಮ ಕಿವಿಗಳಿಂದ ಕೇಳಿದ್ದೇವೆ ಅನ್ನುತ್ತವೆ.
22 A perdição e a morte dizem: Ouvimos com os nossos ouvidos a sua fama.
23 ದೇವರು ಅದರ ಮಾರ್ಗವನ್ನು ಗ್ರಹಿಸಿ ಕೊಂಡಿದ್ದಾನೆ; ಆತನೇ ಅದರ ಸ್ಥಳವನ್ನು ತಿಳಿದಿದ್ದಾನೆ.
23 Deus entende o seu caminho, e ele sabe o seu lugar.
24 ಗಾಳಿಗೂ ತೂಕವನ್ನು ನೇಮಿಸಿ ಆತನು ಭೂಮಿಯ ಕಟ್ಟಕಡೆಗೂ ದೃಷ್ಟಿಸಿ ಆಕಾಶದ ಕೆಳಗೆ ನೋಡುತ್ತಾನೆ.
24 Porque ele vê as extremidades da terra; e vê tudo o que há debaixo dos céus.
25 ನೀರನ್ನು ಅಳತೆಯಿಂದ ಪರಿಮಾಣ ನೋಡಿದ್ದಾನೆ.
25 Quando deu peso ao vento e tomou a medida das águas;
26 ಆತನು ಮಳೆಗೆ ಕಟ್ಟಳೆಯನ್ನೂ ಗುಡುಗಿನ ಮಿಂಚಿಗೆ ಮಾರ್ಗವನ್ನೂ ಮಾಡಿದಾಗ
26 quando prescreveu uma lei para a chuva e caminho para o relâmpago dos trovões,
27 ಆಗಲೇ ಅದನ್ನು ನೋಡಿ ಪ್ರಕಟಿಸಿದನು; ಆತನು ಅದನ್ನು ಸಿದ್ಧಮಾಡಿ ಹೌದು, ಪರಿಶೋಧಿಸಿದನು.
27 então, a viu e a manifestou; estabeleceu-a e também a esquadrinhou.
28 ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
28 Mas disse ao homem: Eis que o temor do Senhor é a sabedoria, e apartar-se do mal é a inteligência.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Jó 28, comparar traduções ou montar um estudo — tudo direto pelo WhatsApp.