Jó 16

Kannada Bible (GL_KANNADA) vs ARC

Sair da comparação
ARC Almeida Revista e Corrigida 2009
1 ಯೋಬನು ಉತ್ತರ ಕೊಟ್ಟು ಹೇಳಿದ್ದೇನಂದರೆ--
1 Então, respondeu Jó e disse:
2 ಇವುಗಳ ಹಾಗೆ ಅನೇಕವಾದ ವುಗಳನ್ನು ಕೇಳಿದ್ದೇನೆ. ನೀವೆಲ್ಲರೂ ಕಾಟದ ಆದರಣೆ ಕೊಡುವವರೇ.
2 Tenho ouvido muitas coisas como estas; todos vós sois consoladores molestos.
3 ವ್ಯರ್ಥವಾದ ಮಾತುಗಳಿಗೆ ಅಂತ್ಯ ಉಂಟೋ? ಉತ್ತರ ಕೊಡುವ ಹಾಗೆ ನಿನ್ನನ್ನು ಧೈರ್ಯ ಪಡಿಸುವದು ಯಾವದು?
3 Porventura, não terão fim estas palavras de vento? Ou que te irrita, para assim responderes?
4 ನಿಮ್ಮ ಪ್ರಾಣವು ನನ್ನ ಪ್ರಾಣದ ಸ್ಥಳದಲ್ಲಿ ಇದ್ದರೆ ನಾನು ಸಹ ನಿಮ್ಮ ಹಾಗೆ ಮಾತಾಡಬಹುದು; ಮಾತುಗಳನ್ನು ನಿಮ್ಮ ಮೇಲೆ ಕೂಡಿಸಬಹುದು; ನಿಮಗೆ ವಿರೋಧವಾಗಿ ನನ್ನ ತಲೆ ಅಲ್ಲಾಡಿಸಬಹುದು.
4 Falaria eu também como vós falais, se a vossa alma estivesse em lugar da minha alma? Ou amontoaria palavras contra vós e menearia contra vós a minha cabeça?
5 ನನ್ನ ಬಾಯಿಂದ ನಿಮ್ಮನ್ನು ಬಲ ಪಡಿಸುವೆನು. ನನ್ನ ತುಟಿಗಳ ಆದರಣೆ ನಿಮಗೆ ಉಪ ಶಮನ ಮಾಡುವದು.
5 Antes, vos fortaleceria com a minha boca, e a consolação dos meus lábios abrandaria a vossa dor.
6 ನಾನು ಮಾತನಾಡಿದರೆ ನನ್ನ ನೋವಿಗೆ ಉಪಶಮನವಾಗುವದಿಲ್ಲ; ನಾನು ಬಿಟ್ಟರೆ ನನಗೆ ಏನು ಉಪಶಮನವಾದೀತು?
6 Se eu falar, a minha dor não cessa; e, calando- me, qual é o meu alívio?
7 ಆತನು ಈಗ ನನ್ನನ್ನು ದಣಿಸಿದ್ದಾನೆ; ನನ್ನ ಜೊತೆಯವರನ್ನೆಲ್ಲಾ ನೀನು ಹಾಳುಮಾಡಿದಿ.
7 Na verdade, agora me molestou; tu assolaste toda a minha companhia.
8 ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ.
8 Testemunha disto é que já me fizeste enrugado, e a minha magreza já se levanta contra mim e no meu rosto testifica contra mim.
9 ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
9 Na sua ira, me despedaçou, e ele me perseguiu; rangeu os dentes contra mim; aguça o meu adversário os olhos contra mim.
10 ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ.
10 Abrem a boca contra mim; com desprezo me feriram nos queixos e contra mim se ajuntam todos.
11 ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ.
11 Entrega-me Deus ao perverso e nas mãos dos ímpios me faz cair.
12 ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು;
12 Descansado estava eu, porém ele me quebrantou; e pegou-me pelo pescoço e me despedaçou; também me pôs por seu alvo.
13 ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ.
13 Cercam-me os seus flecheiros; atravessa-me os rins e não me poupa; e o meu fel derrama pela terra.
14 ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ.
14 Quebranta-me com golpe sobre golpe; arremete contra mim como um valente.
15 ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು.
15 Cosi sobre a minha pele o cilício e revolvi a minha cabeça no pó.
16 ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;
16 O meu rosto todo está descorado de chorar, e sobre as minhas pálpebras está a sombra da morte,
17 ಆದರೂ ನನ್ನ ಕೈಗಳಲ್ಲಿ ಬಲಾತ್ಕಾರವಿಲ್ಲ; ನನ್ನ ಪ್ರಾರ್ಥನೆಯು ನಿರ್ಮಲವಾಗಿದೆ.
17 apesar de não haver violência nas minhas mãos e de ser pura a minha oração.
18 ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ; ನನ್ನ ಕೂಗಿಗೆ ಸ್ಥಳ ಇಲ್ಲದೆ ಇರಲಿ.
18 Ah! terra, não cubras o meu sangue; e não haja lugar para o meu clamor!
19 ಈಗ ಇಗೋ, ಆಕಾಶದಲ್ಲಿ ನನ್ನ ಸಾಕ್ಷಿ ಉಂಟು; ನನ್ನ ಸಾಕ್ಷಿಯು ಉನ್ನತದಲ್ಲಿ ಅದೆ.
19 Eis que também, agora, está a minha testemunha no céu, e o meu fiador, nas alturas.
20 ನನ್ನ ಸ್ನೇಹಿತರೇ ನನ್ನನ್ನು ಹಾಸ್ಯಮಾಡುತ್ತಾರೆ; ದೇವರಿಗೆ ನನ್ನ ಕಣ್ಣೀರನ್ನು ಸುರಿಸುತ್ತೇನೆ.
20 Os meus amigos são os que zombam de mim; os meus olhos se desfazem em lágrimas diante de Deus.
21 ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು.
21 Ah! Se alguém pudesse contender com Deus pelo homem, como o filho do homem pelo seu amigo!
22 ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.
22 Porque, decorridos poucos anos, eu seguirei o caminho por onde não tornarei.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jó 16, comparar traduções ou montar um estudo — tudo direto pelo WhatsApp.