Jó 13

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು.
1 Eis que tudo isso viram os meus olhos, e os meus ouvidos o ouviram e entenderam.
2 ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
2 Como vós o sabeis, também eu o sei; não vos sou inferior.
3 ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
3 Mas falarei ao Todo-Poderoso e quero defender-me perante Deus.
4 ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.
4 Vós, porém, besuntais a verdade com mentiras e vós todos sois médicos que não valem nada.
5 ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು! ಅದು ನಿಮಗೆ ಜ್ಞಾನವಾಗಿರತಕ್ಕದ್ದು.
5 Tomara vos calásseis de todo, que isso seria a vossa sabedoria!
6 ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
6 Ouvi agora a minha defesa e atentai para os argumentos dos meus lábios.
7 ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ?
7 Porventura, falareis perversidade em favor de Deus e a seu favor falareis mentiras?
8 ಆತನ ಮುಖ ದಾಕ್ಷಿಣ್ಯವನ್ನು ನೀವು ಅಂಗೀಕರಿಸುವಿರೋ? ದೇವರಿಗೋಸ್ಕರ ತರ್ಕ ಮಾಡುವಿರೋ?
8 Sereis parciais por ele? Contendereis a favor de Deus?
9 ಆತನು ನಿಮ್ಮನ್ನು ಶೋಧಿಸುವದು ಒಳ್ಳೇದೋ? ಅಥವಾ ಒಬ್ಬ ಮನುಷ್ಯನು ಇನ್ನೊಬ್ಬನನ್ನು ಗೇಲಿಮಾಡುವ ಪ್ರಕಾರ ನೀವೂ ಆತನನ್ನು ಗೇಲಿಮಾಡುವಿರೋ?
9 Ser-vos-ia bom, se ele vos esquadrinhasse? Ou zombareis dele, como se zomba de um homem qualquer?
10 ನೀವು ಅಂತರಂಗದಲ್ಲಿ ಮುಖ ದಾಕ್ಷಿಣ್ಯಗಳನ್ನು ಅಂಗೀಕರಿ ಸಿದರೆ ಆತನು ನಿಮ್ಮನ್ನು ಖಂಡಿತವಾಗಿಯೂ ದೂಷಿ ಸುವನು.
10 Acerbamente vos repreenderá, se em oculto fordes parciais.
11 ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
11 Porventura, não vos amedrontará a sua dignidade, e não cairá sobre vós o seu terror?
12 ನಿಮ್ಮ ಜ್ಞಾಪಕಗಳು ಬೂದಿಯಂತಿವೆ; ನಿಮ್ಮ ಶರೀರಗಳು ಮಣ್ಣಿನ ಶರೀರಗಳಾಗಿವೆ.
12 As vossas máximas são como provérbios de cinza, os vossos baluartes, baluartes de barro.
13 ಮೌನ ವಾಗಿರ್ರಿ; ನಾನು ಮಾತನಾಡುವದಕ್ಕೆ ನನ್ನನ್ನು ಬಿಡಿರಿ, ನನ್ನ ಮೇಲೆ ಏನಾದರೂ ಬರಲಿ.
13 Calai-vos perante mim, e falarei eu, e venha sobre mim o que vier.
14 ನಾನು ನನ್ನ ಮಾಂಸವನ್ನು ನನ್ನ ಹಲ್ಲುಗಳಿಂದ ಯಾಕೆ ಹಿಡಿಯ ಬೇಕು? ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಯಾಕೆ ಹಾಕಬೇಕು?
14 Tomarei a minha carne nos meus dentes e porei a vida na minha mão.
15 ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು, ಆದರೆ ನನ್ನ ಮಾರ್ಗ ಗಳನ್ನು ಉಳಿಸಿಕೊಳ್ಳುವೆನು.
15 Eis que me matará, já não tenho esperança; contudo, defenderei o meu procedimento.
16 ಆತನು ನನಗೆ ರಕ್ಷಣೆ ಯಾಗುವನು; ಆತನ ಮುಂದೆ ಭ್ರಷ್ಟನು ಬರುವದಿಲ್ಲ.
16 Também isto será a minha salvação, o fato de o ímpio não vir perante ele.
17 ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ; ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
17 Atentai para as minhas razões e dai ouvidos à minha exposição.
18 ಇಗೋ, ನ್ಯಾಯ ವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯಿಸಲ್ಪಡುವದಾಗಿ ನನಗೆ ತಿಳಿದದೆ.
18 Tenho já bem-encaminhada minha causa e estou certo de que serei justificado.
19 ನನ್ನ ಸಂಗಡ ವಾದಿಸುವವನು ಯಾರು? ಈಗ ನಾನು ನನ್ನ ನಾಲಿಗೆಯನ್ನು ತಡೆದದ್ದೆಯಾದರೆ ನಾನು ಸಾಯುವೆನು.
19 Quem há que possa contender comigo? Neste caso, eu me calaria e renderia o espírito.
20 ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ.
20 Concede-me somente duas coisas; então, me não esconderei do teu rosto:
21 ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ.
21 alivia a tua mão de sobre mim, e não me espante o teu terror.
22 ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು.
22 Interpela-me, e te responderei ou deixa-me falar e tu me responderás.
23 ನನ್ನ ಅಕ್ರಮಗಳೂ ಪಾಪಗಳೂ ಎಷ್ಟಿವೆ? ನನ್ನ ಅಪರಾಧವನ್ನೂ ಪಾಪವನ್ನೂ ನನಗೆ ತಿಳಿಯಪಡಿಸು.
23 Quantas culpas e pecados tenho eu? Notifica-me a minha transgressão e o meu pecado.
24 ಯಾಕೆ ನಿನ್ನ ಮುಖವನ್ನು ಮರೆಮಾಡುತ್ತೀ; ನನ್ನನ್ನು ನಿನ್ನ ಶತ್ರು ಎಂದು ಯಾಕೆ ಎಣಿಸುತ್ತೀ?
24 Por que escondes o rosto e me tens por teu inimigo?
25 ಬಡಿಯಲ್ಪಟ್ಟ ಎಲೆಯನ್ನು ನಲಿಗಿಸುವಿಯೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿಯೋ?
25 Queres aterrorizar uma folha arrebatada pelo vento? E perseguirás a palha seca?
26 ನನಗೆ ವಿರೋಧವಾಗಿ ಕಹಿಯಾದ ವುಗಳನ್ನು ಬರೆದುಕೊಂಡಿದ್ದೀ; ನನ್ನ ಯೌವನದ ಅಕ್ರಮಗಳನ್ನು ನನಗೆ ಬಾಧ್ಯವಾಗಿ ಕೊಡುತ್ತೀ.
26 Pois decretas contra mim coisas amargas e me atribuis as culpas da minha mocidade.
27 ನನ್ನ ಪಾದಗಳನ್ನು ಕೊಳದಲ್ಲಿಟ್ಟು ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡಿಕೊಳ್ಳುತ್ತೀ; ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕುತ್ತೀ.
27 Também pões os meus pés no tronco, observas todos os meus caminhos e traças limites à planta dos meus pés,
28 ಅವನು ಕೊಳೆತ ವಸ್ತುವಿನ ಹಾಗೆ, ಹುಳು ತಿಂದ ಬಟ್ಟೆಯ ಹಾಗೆ ಇಲ್ಲದಾಗುವನು.
28 apesar de eu ser como uma coisa podre que se consome e como a roupa que é comida da traça.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Jó 13, comparar traduções ou montar um estudo — tudo direto pelo WhatsApp.