João 21
Kannada Bible (GL_KANNADA) vs ARA
ARA Almeida Revista e Atualizada 1993
1 ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--
1 Depois disto, tornou Jesus a manifestar-se aos discípulos junto do mar de Tiberíades; e foi assim que ele se manifestou:
2 ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಮಕ್ಕಳೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಒಟ್ಟಾಗಿ ಕೂಡಿದ್ದರು.
2 estavam juntos Simão Pedro, Tomé, chamado Dídimo, Natanael, que era de Caná da Galileia, os filhos de Zebedeu e mais dois dos seus discípulos.
3 ಆಗ ಸೀಮೋನ ಪೇತ್ರನು ಅವರಿಗೆ--ನಾನು ವಿಾನು ಹಿಡಿಯುವದಕ್ಕೆ ಹೋಗುತ್ತೇನೆ ಅನ್ನಲು ಅವರು ಅವನಿಗೆ--ನಾವು ಸಹ ನಿನ್ನ ಸಂಗಡ ಬರುತ್ತೇವೆ ಅಂದರು. ಅವರು ಹೊರಟುಹೋಗಿ ಕೂಡಲೆ ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿಯಲ್ಲಿ ಏನೂ ಹಿಡಿಯಲಿಲ್ಲ.
3 Disse-lhes Simão Pedro: Vou pescar. Disseram-lhe os outros: Também nós vamos contigo. Saíram, e entraram no barco, e, naquela noite, nada apanharam.
4 ಬೆಳಗಾದಾಗ ಯೇಸು ದಡದಲ್ಲಿ ನಿಂತಿದ್ದನು. ಆದರೆ ಆತನು ಯೇಸು ಎಂದು ಶಿಷ್ಯರು ತಿಳಿಯಲಿಲ್ಲ.
4 Mas, ao clarear da madrugada, estava Jesus na praia; todavia, os discípulos não reconheceram que era ele.
5 ಆಗ ಯೇಸು ಅವರಿಗೆ--ಮಕ್ಕಳಿರಾ, ನಿಮಗೆ ಊಟಕ್ಕೆ ಏನಾದರೂ ಇದೆಯೋ ಅನ್ನಲು ಅವರು ಆತನಿಗೆ--ಇಲ್ಲವೆಂದು ಉತ್ತರ ಕೊಟ್ಟರು.
5 Perguntou-lhes Jesus: Filhos, tendes aí alguma coisa de comer? Responderam-lhe: Não.
6 ಆತನು ಅವರಿಗೆ--ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ಸಿಕ್ಕುವದು ಅಂದನು. ಅವರು ಬೀಸಿದಾಗ ವಿಾನುಗಳ ರಾಶಿಯ ದೆಸೆಯಿಂದ ಅದನ್ನು ಎಳೆಯಲಾರದೆ ಇದ್ದರು.
6 Então, lhes disse: Lançai a rede à direita do barco e achareis. Assim fizeram e já não podiam puxar a rede, tão grande era a quantidade de peixes.
7 ಆದದರಿಂದ ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ--ಆತನು ಕರ್ತನು ಅಂದನು. ಆತನು ಕರ್ತನೆಂದು ಸೀಮೋನ ಪೇತ್ರನು ಕೇಳಿ ತನ್ನ ಬೆಸ್ತರ ಅಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ದುಮುಕಿ ದನು (ಯಾಕಂದರೆ ಅವನು ಬೆತ್ತಲೆಯಾಗಿದ್ದನು).
7 Aquele discípulo a quem Jesus amava disse a Pedro: É o Senhor! Simão Pedro, ouvindo que era o Senhor, cingiu-se com sua veste, porque se havia despido, e lançou-se ao mar;
8 ಉಳಿದ ಶಿಷ್ಯರು ವಿಾನುಗಳಿದ್ದ ಬಲೆಯನ್ನು ಎಳೆಯುತ್ತಾ ಒಂದು ಚಿಕ್ಕ ದೋಣಿಯಲ್ಲಿ ಬಂದರು; (ಯಾಕಂದರೆ ಅವರು ದಡದಿಂದ ದೂರವಿರಲಿಲ್ಲ; ಆದರೆ ಅದು ಇನ್ನೂರು ಮೊಳ ದಷ್ಟಿತ್ತು).
8 mas os outros discípulos vieram no barquinho puxando a rede com os peixes; porque não estavam distantes da terra senão quase duzentos côvados.
9 ಅವರು ದಡಕ್ಕೆ ಬಂದ ಕೂಡಲೆ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ವಿಾನುಗಳನ್ನೂ ರೊಟ್ಟಿಯನ್ನೂ ಕಂಡರು.
9 Ao saltarem em terra, viram ali umas brasas e, em cima, peixes; e havia também pão.
10 ಯೇಸು ಅವರಿಗೆ--ನೀವು ಈಗ ಹಿಡಿದ ವಿಾನುಗಳಲ್ಲಿ ಕೆಲ ವನ್ನು ತನ್ನಿರಿ ಅಂದನು.
10 Disse-lhes Jesus: Trazei alguns dos peixes que acabastes de apanhar.
11 ಸೀಮೋನ ಪೇತ್ರನು ಹೋಗಿ ನೂರೈವತ್ತು ಮೂರು ದೊಡ್ಡ ವಿಾನುಗಳಿಂದ ತುಂಬಿದ ಬಲೆಯನ್ನು ದಡಕ್ಕೆ ಎಳೆದನು. ಅಷ್ಟು ವಿಾನು ಗಳಿದ್ದರೂ ಬಲೆಯು ಹರಿದಿರಲಿಲ್ಲ.
11 Simão Pedro entrou no barco e arrastou a rede para a terra, cheia de cento e cinquenta e três grandes peixes; e, não obstante serem tantos, a rede não se rompeu.
12 ಯೇಸು ಅವ ರಿಗೆ--ಬಂದು ಊಟಮಾಡಿರಿ ಅಂದನು; ಆತನು ಕರ್ತನೆಂದು ತಿಳಿದಿದ್ದರಿಂದ--ನೀನು ಯಾರು ಎಂದು ಆತನನ್ನು ಕೇಳಲು ಶಿಷ್ಯರಲ್ಲಿ ಯಾರಿಗೂ ಧೈರ್ಯ ವಿರಲಿಲ್ಲ.
12 Disse-lhes Jesus: Vinde, comei. Nenhum dos discípulos ousava perguntar-lhe: Quem és tu? Porque sabiam que era o Senhor.
13 ಆಗ ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಕೊಟ್ಟನು; ಹಾಗೆಯೇ ವಿಾನನ್ನೂ ಕೊಟ್ಟನು.
13 Veio Jesus, tomou o pão, e lhes deu, e, de igual modo, o peixe.
14 ಯೇಸು ಸತ್ತವರೊಳಗಿಂದ ಎದ್ದ ಮೇಲೆ ತನ್ನ ಶಿಷ್ಯರಿಗೆ ತನ್ನನ್ನು ತೋರಿಸಿಕೊಂಡದ್ದು ಇದು ಮೂರನೆಯ ಸಾರಿ.
14 E já era esta a terceira vez que Jesus se manifestava aos discípulos, depois de ressuscitado dentre os mortos.
15 ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ--ಯೋನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತ ನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇ ನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ
15 Depois de terem comido, perguntou Jesus a Simão Pedro: Simão, filho de João, amas-me mais do que estes outros? Ele respondeu: Sim, Senhor, tu sabes que te amo. Ele lhe disse: Apascenta os meus cordeiros.
16 ಆತನು ತಿರಿಗಿ ಎರಡನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ--ನನ್ನ ಕುರಿಗಳನ್ನು ಮೇಯಿಸು ಎಂದು
16 Tornou a perguntar-lhe pela segunda vez: Simão, filho de João, tu me amas? Ele lhe respondeu: Sim, Senhor, tu sabes que te amo. Disse-lhe Jesus: Pastoreia as minhas ovelhas.
17 ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
17 Pela terceira vez Jesus lhe perguntou: Simão, filho de João, tu me amas? Pedro entristeceu-se por ele lhe ter dito, pela terceira vez: Tu me amas? E respondeu-lhe: Senhor, tu sabes todas as coisas, tu sabes que eu te amo. Jesus lhe disse: Apascenta as minhas ovelhas.
18 ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ--ನೀನು ಯೌವನಸ್ಥನಾಗಿದ್ದಾಗ ನೀನೇ ನಿನ್ನ ನಡುಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾ ಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂ
18 Em verdade, em verdade te digo que, quando eras mais moço, tu te cingias a ti mesmo e andavas por onde querias; quando, porém, fores velho, estenderás as mãos, e outro te cingirá e te levará para onde não queres.
19 ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
19 Disse isto para significar com que gênero de morte Pedro havia de glorificar a Deus. Depois de assim falar, acrescentou-lhe: Segue-me.
20 ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ
20 Então, Pedro, voltando-se, viu que também o ia seguindo o discípulo a quem Jesus amava, o qual na ceia se reclinara sobre o peito de Jesus e perguntara: Senhor, quem é o traidor?
21 ಯೇಸುವಿಗೆ--ಕರ್ತನೇ, ಈ ಮನುಷ್ಯನ ವಿಷಯವೇನು ಅಂದನು.
21 Vendo-o, pois, Pedro perguntou a Jesus: E quanto a este?
22 ಯೇಸು ಅವನಿಗೆ--ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾ ಲಿಸು ಅಂದನು.
22 Respondeu-lhe Jesus: Se eu quero que ele permaneça até que eu venha, que te importa? Quanto a ti, segue-me.
23 ಆಗ ಆ ಶಿಷ್ಯನು ಸಾಯುವದಿ ಲ್ಲವೆಂಬ ಮಾತು ಸಹೋದರರಲ್ಲಿ ಹರಡಿತು. ಆದರೂ--ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ಆದರೆ--ನಾನು ಬರುವ ತನಕ ಅವನು ಇರುವದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಹೇಳಿದನು.
23 Então, se tornou corrente entre os irmãos o dito de que aquele discípulo não morreria. Ora, Jesus não dissera que tal discípulo não morreria, mas: Se eu quero que ele permaneça até que eu venha, que te importa?
24 ಇವುಗಳ ವಿಷಯವಾಗಿ ಸಾಕ್ಷಿ ಹೇಳಿ ಇವುಗಳನ್ನು ಬರೆದ ಶಿಷ್ಯನು ಇವನೇ; ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.
24 Este é o discípulo que dá testemunho a respeito destas coisas e que as escreveu; e sabemos que o seu testemunho é verdadeiro.
25 ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್.
25 Há, porém, ainda muitas outras coisas que Jesus fez. Se todas elas fossem relatadas uma por uma, creio eu que nem no mundo inteiro caberiam os livros que seriam escritos.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar João 21, comparar traduções ou montar um estudo — tudo direto pelo WhatsApp.