João 16

Kannada Bible (GL_KANNADA) vs ARIB

Sair da comparação
ARIB Almeida Revisada Imprensa Bíblica
1 ನೀವು ಅಭ್ಯಂತರಪಡಬಾರದೆಂದು ಈ ಮಾತುಗಳನ್ನು ನಾನು ನಿಮಗೆ ಹೇಳಿದ್ದೇನೆ.
1 Tenho-vos dito estas coisas para que não vos escandalizeis.
2 ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ.
2 Expulsar-vos-ão das sinagogas; ainda mais, vem a hora em que qualquer que vos matar julgará prestar um serviço a Deus.
3 ಅವರು ತಂದೆಯನ್ನಾಗಲಿ ಇಲ್ಲವೆ ನನ್ನನ್ನಾ ಗಲಿ ತಿಳಿಯದಿರುವ ಕಾರಣ ಇವೆಲ್ಲವುಗಳನ್ನು ನಿಮಗೆ ಮಾಡುವರು.
3 E isto vos farão, porque não conheceram ao Pai nem a mim.
4 ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ.
4 Mas tenho-vos dito estas coisas, a fim de que, quando chegar aquela hora, vos lembreis de que eu vo-las tinha dito. Não vo-las disse desde o princípio, porque estava convosco.
5 ಆದರೆ ಈಗ ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತೇನೆ; ನಿಮ್ಮಲ್ಲಿ ಒಬ್ಬನಾದರೂ--ನೀನು ಎಲ್ಲಿಗೆ ಹೋಗುತ್ತೀ ಎಂದು ನನ್ನನ್ನು ಕೇಳುವದಿಲ್ಲ.
5 Agora, porém, vou para aquele que me enviou; e nenhum de vós me pergunta: Para onde vais?
6 ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯದಲ್ಲಿ ದುಃಖವು ತುಂಬಿಯದೆ.
6 Antes, porque vos disse isto, o vosso coração se encheu de tristeza.
7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಯಾಕಂದರೆ ನಾನು ಹೋಗದಿದ್ದರೆ ಆದರಿಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸುವೆನು.
7 Todavia, digo-vos a verdade, convém-vos que eu vá; pois se eu não for, o Ajudador não virá a vós; mas, se eu for, vo-lo enviarei.
8 ಆತನು ಬಂದಾಗ ಪಾಪ ನೀತಿ ನ್ಯಾಯ ತೀರ್ವಿಕೆಯ ವಿಷಯಗಳಲ್ಲಿಯೂ
8 E quando ele vier, convencerá o mundo do pecado, da justiça e do juízo:
9 ಅವರು ನನ್ನನ್ನು ನಂಬದೆ ಇರುವದರಿಂದ ಪಾಪದ ವಿಷಯವಾಗಿಯೂ
9 do pecado, porque não crêem em mim;
10 ನಾನು ನನ್ನ ತಂದೆಯ ಬಳಿಗೆ ಹೋಗುವದರಿಂದ ನೀವು ನನ್ನನ್ನು ಎಂದಿಗೂ ನೋಡದ ಕಾರಣ ನೀತಿಯ ವಿಷಯವಾಗಿಯೂ
10 da justiça, porque vou para meu Pai, e não me vereis mais,
11 ಇಹಲೋಕಾಧಿಪತಿಯು ನ್ಯಾಯತೀರ್ಪನ್ನು ಹೊಂದಿರುವದರಿಂದ ನ್ಯಾಯ ತೀರ್ವಿಕೆಯ ವಿಷಯವಾಗಿಯೂ ಲೋಕವನ್ನು ಗದರಿಸುವನು.
11 e do juízo, porque o príncipe deste mundo já está julgado.
12 ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಇವೆ; ಆದರೆ ನೀವು ಈಗ ಅವುಗಳನ್ನು ಹೊರಲಾರಿರಿ;
12 Ainda tenho muito que vos dizer; mas vós não o podeis suportar agora.
13 ಆದರೆ ಆತನು ಅಂದರೆ ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ಎಲ್ಲಾ ಸತ್ಯಕ್ಕೆ ನಡಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ತಾನು ಕೇಳಿದವುಗಳನ್ನೇ ಮಾತನಾಡುತ್ತಾನೆ; ಮುಂದೆ ಬರುವದಕ್ಕಿರುವ ವಿಷಯಗಳನ್ನು ಆತನು ನಿಮಗೆ ತೋರಿಸುವನು.
13 Quando vier, porém, aquele, o Espírito da verdade, ele vos guiará a toda a verdade; porque não falará por si mesmo, mas dirá o que tiver ouvido, e vos anunciará as coisas vindouras.
14 ಆತನು ನನ್ನನ್ನು ಮಹಿಮೆಪಡಿ ಸುವನು; ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು.
14 Ele me glorificará, porque receberá do que é meu, e vo-lo anunciará.
15 ತಂದೆಗೆ ಇರುವವು ಗಳೆಲ್ಲವು ನನ್ನವೇ; ಆದದರಿಂದಲೇ ಆತನು ನನ್ನದರೊ ಳಗಿಂದ ತೆಗೆದುಕೊಂಡು ನಿಮಗೆ ತಿಳಿಯಪಡಿಸುವನು ಎಂದು ನಾನು ಹೇಳಿದೆನು.
15 Tudo quanto o Pai tem é meu; por isso eu vos disse que ele, recebendo do que é meu, vo-lo anunciará.
16 ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅಂದನು.
16 Um pouco, e já não me vereis; e outra vez um pouco, e ver-me-eis.
17 ಆಗ ಆತನ ಶಿಷ್ಯರಲ್ಲಿ ಕೆಲವರು--ಈತನು ನಮಗೆ ಹೇಳುವದೇನು? ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ನೋಡುವಿರಿ; ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಅನ್ನುತ್ತಾನಲಾ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡ
17 Então alguns dos seus discípulos perguntaram uns para os outros: Que é isto que nos diz? Um pouco, e não me vereis; e outra vez um pouco, e ver-me-eis; e: Porquanto vou para o Pai?
18 ಆದದರಿಂದ ಅವರು--ಈತನು ಹೇಳುವ ಈ ಮಾತೇನು? ಸ್ವಲ್ಪಕಾಲ ಎಂದು ಹೇಳುತ್ತಾನಲ್ಲಾ? ಈತನು ಹೇಳುವದನ್ನು ನಾವು ಅರಿಯೆವು ಅಂದರು.
18 Diziam pois: Que quer dizer isto: Um pouco? Não compreendemos o que ele está dizendo.
19 ಯೇಸು ತನ್ನನ್ನು ಪ್ರಶ್ನಿಸುವದಕ್ಕೆ ಅಪೇಕ್ಷಿಸುತ್ತಿ ದ್ದಾರೆಂದು ತಿಳಿದು ಅವರಿಗೆ--ಸ್ವಲ್ಪ ಕಾಲವಾದ ಮೇಲೆ ನೀವು ನನ್ನನ್ನು ನೋಡುವದಿಲ್ಲ; ತಿರಿಗಿ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ನಿಮಗೆ ಹೇಳಿದ್ದಕ್ಕೆ ನಿಮ್ಮ ನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರೋ?
19 Percebeu Jesus que o queriam interrogar, e disse-lhes: Indagais entre vós acerca disto que disse: Um pouco, e não me vereis; e outra vez um pouco, e ver-me-eis?
20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು.
20 Em verdade, em verdade, vos digo que vós chorareis e vos lamentareis, mas o mundo se alegrará; vós estareis tristes, porém a vossa tristeza se converterá em alegria.
21 ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ.
21 A mulher, quando está para dar à luz, sente tristeza porque é chegada a sua hora; mas, depois de ter dado à luz a criança, já não se lembra da aflição, pelo gozo de haver um homem nascido ao mundo.
22 ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.
22 Assim também vós agora, na verdade, tendes tristeza; mas eu vos tornarei a ver, e alegrar-se-á o vosso coração, e a vossa alegria ninguém vo-la tirará.
23 ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.
23 Naquele dia nada me perguntareis. Em verdade, em verdade vos digo que tudo quanto pedirdes ao Pai, ele vo-lo concederá em meu nome.
24 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಬೇಡಿಕೊಳ್ಳಲಿಲ್ಲ; ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.
24 Até agora nada pedistes em meu nome; pedi, e recebereis, para que o vosso gozo seja completo.
25 ಇವುಗಳನ್ನು ನಾನು ಸಾಮ್ಯಗಳಿಂದ ನಿಮಗೆ ಹೇಳಿದ್ದೇನೆ; ಆದರೆ ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿಸುವ ಸಮಯ ಬರುತ್ತದೆ.
25 Disse-vos estas coisas por figuras; chega, porém, a hora em que vos não falarei mais por figuras, mas abertamente vos falarei acerca do Pai.
26 ಆ ದಿವಸದಲ್ಲಿ ನೀವು ನನ್ನ ಹೆಸರಿನಲ್ಲಿ ಬೇಡಿಕೊಳ್ಳುವಿರಿ; ನಿಮಗೋಸ್ಕರ ತಂದೆ ಯನ್ನು ಕೇಳಿಕೊಳ್ಳುವೆನೆಂದು ನಾನು ನಿಮಗೆ ಹೇಳು ವದಿಲ್ಲ.
26 Naquele dia pedireis em meu nome, e não vos digo que eu rogarei por vós ao Pai;
27 ನೀವು ನನ್ನನ್ನು ಪ್ರೀತಿಸಿ ನಾನು ದೇವರ ಬಳಿಯಿಂದ ಹೊರಟುಬಂದೆನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.
27 pois o Pai mesmo vos ama; visto que vós me amastes e crestes que eu saí de Deus.
28 ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ತಿರಿಗಿ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.
28 Saí do Pai, e vim ao mundo; outra vez deixo o mundo, e vou para o Pai.
29 ಆತನ ಶಿಷ್ಯರು ಆತನಿಗೆ--ಇಗೋ, ಈಗ ನೀನು ಸಾಮ್ಯರೂಪದಲ್ಲಿ ಮಾತನಾಡದೆ ಸ್ಪಷ್ಟವಾಗಿಯೇ ಮಾತನಾಡುತ್ತೀ.
29 Disseram os seus discípulos: Eis que agora falas abertamente, e não por figura alguma.
30 ನೀನು ಎಲ್ಲಾ ವಿಷಯಗಳನ್ನು ತಿಳಿದಾತನೆಂದೂ ಯಾವ ಮನುಷ್ಯನು ನಿನ್ನನ್ನು ಕೇಳು ವದು ಅಗತ್ಯವಿಲ್ಲವೆಂದೂ ಈಗ ನಮಗೆ ನಿಶ್ಚಯ ವಾಯಿತು; ಇದರಿಂದ ನೀನು ದೇವರ ಕಡೆಯಿಂದ ಹೊರಟು ಬಂದಿದ್ದೀ ಎಂದು ನಾವು ನಂಬುತ್ತೇವೆ ಅಂದರು.
30 Agora conhecemos que sabes todas as coisas, e não necessitas de que alguém te interrogue. Por isso cremos que saíste de Deus.
31 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈಗ ನೀವು ನಂಬುತ್ತೀರೋ?
31 Respondeu-lhes Jesus: Credes agora?
32 ಇಗೋ, ಒಬ್ಬೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿ ಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಗಳಿಗೆ ಬರುವದು. ಹೌದು, ಈಗಲೇ ಬಂದಿದೆ. ಆದಾಗ್ಯೂ ನಾನು ಒಂಟಿಗನಲ್ಲ; ತಂದೆಯು ನನ್ನ ಸಂಗಡ ಇದ್ದಾನೆ.
32 Eis que vem a hora, e já é chegada, em que vós sereis dispersos cada um para o seu lado, e me deixareis só; mas não estou só, porque o Pai está comigo.
33 ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ, ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು.
33 Tenho-vos dito estas coisas, para que em mim tenhais paz. No mundo tereis tribulações; mas tende bom ânimo, eu venci o mundo.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar João 16, comparar traduções ou montar um estudo — tudo direto pelo WhatsApp.