Joel 1

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಪೆತೂವೇಲನ ಮಗನಾದ ಯೋವೇಲನಿಗೆ ಬಂದ ಕರ್ತನ ವಾಕ್ಯವು.
1 Palavra do Senhor que foi dirigida a Joel, filho de Petuel.
2 ವೃದ್ಧರೇ, ಕೇಳಿರಿ! ದೇಶನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ; ಇದು ನಿಮ್ಮ ದಿವಸಗಳಲ್ಲಾದರೂ ನಿಮ್ಮ ತಂದೆಗಳ ದಿವಸಗಳಲ್ಲಾದರೂ ಉಂಟಾಯಿತೋ?
2 Ouvi isto, vós, velhos, e escutai, todos os habitantes da terra: Aconteceu isto em vossos dias? Ou nos dias de vossos pais?
3 ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ನಿಮ್ಮ ಮಕ್ಕಳು ತಮ್ಮ ಮಕ್ಕಳಿಗೂ ಅವರ ಮಕ್ಕಳು ಮತ್ತೊಂದು ತಲಾಂತರಕ್ಕೂ ತಿಳಿಸಲಿ.
3 Narrai isto a vossos filhos, e vossos filhos o façam a seus filhos, e os filhos destes, à outra geração.
4 ಹುಳವು ಉಳಿಸಿದ್ದನ್ನು ಮಿಡತೆ ತಿಂದುಬಿಟ್ಟಿದೆ; ಮಿಡತೆ ಉಳಿಸಿದ್ದನ್ನು ಒಳಗೆ ನಾಶ ಮಾಡುವ ಹುಳವು ತಿಂದುಬಿಟ್ಟಿದೆ; ಅದು ಉಳಿಸಿದ್ದನ್ನು ಕಂಬಳಿ ಹುಳವು ತಿಂದುಬಿಟ್ಟಿದೆ.
4 O que deixou o gafanhoto cortador, comeu-o o gafanhoto migrador; o que deixou o migrador, comeu-o o gafanhoto devorador; o que deixou o devorador, comeu-o o gafanhoto destruidor.
5 ಅಮಲೇರಿದವರೇ, ನೀವು ಎಚ್ಚತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾ ರಸದ ನಿಮಿತ್ತ ಗೋಳಾಡಿರಿ; ಅದು ನಿಮ್ಮ ಬಾಯಿ ಯೊಳಗಿಂದ ತೆಗೆಯಲ್ಪಟ್ಟಿದೆ.
5 Ébrios, despertai-vos e chorai; uivai, todos os que bebeis vinho, por causa do mosto, porque está ele tirado da vossa boca.
6 ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು; ಅದು ಬಲವಾದದ್ದೂ ಲೆಕ್ಕವಿಲ್ಲದ್ದೂ; ಅದರ ಹಲ್ಲುಗಳು ಸಿಂಹದ ಹಲ್ಲುಗಳು, ದೊಡ್ಡ ಸಿಂಹದ ದವಡೆ ಹಲ್ಲುಗಳು ಅದಕ್ಕೆ ಉಂಟು.
6 Porque veio um povo contra a minha terra, poderoso e inumerável; os seus dentes são dentes de leão, e ele tem os queixais de uma leoa.
7 ಅದು ನನ್ನ ದ್ರಾಕ್ಷೇ ಬಳ್ಳಿಯನ್ನು ಹಾಳುಮಾಡಿ ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ; ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ; ಅದರ ಕೊಂಬೆ ಗಳು ಬಿಳುಪಾದವು.
7 Fez de minha vide uma assolação, destroçou a minha figueira, tirou-lhe a casca, que lançou por terra; os seus sarmentos se fizeram brancos.
8 ಯೌವನದ ಗಂಡನಿಗೋಸ್ಕರ ಗೋಣೀತಟ್ಟು ಧರಿಸಿದ ಕನ್ಯೆಯ ಹಾಗೆ ಪ್ರಲಾಪಿಸು.
8 Lamenta com a virgem que, pelo marido da sua mocidade, está cingida de pano de saco.
9 ಆಹಾರ ದರ್ಪಣೆಯೂ ಪಾನಾರ್ಪಣೆಯೂ ಕರ್ತನ ಆಲಯದೊಳಗಿಂದ ತೆಗೆಯಲ್ಪಟ್ಟಿವೆ; ಕರ್ತನ ಸೇವಕ ರಾದ ಯಾಜಕರು ಗೋಳಾಡುತ್ತಾರೆ.
9 Cortada está da Casa do Senhor a oferta de manjares e a libação; os sacerdotes, ministros do Senhor , estão enlutados.
10 ಹೊಲವು ಹಾಳಾಗಿದೆ; ಭೂಮಿಯು ಗೋಳಾಡುತ್ತದೆ; ಧಾನ್ಯವು ಹಾಳಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ಬಾಡಿಹೋಗಿದೆ.
10 O campo está assolado, e a terra, de luto, porque o cereal está destruído, a vide se secou, as olivas se murcharam.
11 ಓ ಒಕ್ಕಲಿಗರೇ, ನಾಚಿಕೆಪಡಿರಿ; ಗೋಧಿ, ಜವೆ ಗೋಧಿಗಳ ನಿಮಿತ್ತ ದ್ರಾಕ್ಷೇ ತೋಟದವರೇ, ಗೋಳಾ ಡಿರಿ; ಹೊಲದ ಪೈರು ನಾಶವಾಯಿತು.
11 Envergonhai-vos, lavradores, uivai, vinhateiros, sobre o trigo e sobre a cevada, porque pereceu a messe do campo.
12 ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.
12 A vide se secou, a figueira se murchou, a romeira também, e a palmeira e a macieira; todas as árvores do campo se secaram, e já não há alegria entre os filhos dos homens.
13 ಯಾಜಕರೇ, ನಿಮ್ಮ ನಡುಕಟ್ಟಿಕೊಂಡು ಗೋಳಾ ಡಿರಿ; ಬಲಿಪೀಠದ ಸೇವಕರೇ, ಗೋಳಾಡಿರಿ; ನನ್ನ ದೇವರ ಸೇವಕರೇ, ಬಂದು ಗೋಣೀತಟ್ಟಿನಲ್ಲಿ ರಾತ್ರಿ ಯೆಲ್ಲಾ ಮಲಗಿರಿ, ಯಾಕಂದರೆ ಆಹಾರದರ್ಪಣೆಯೂ ಪಾನ ದರ್ಪಣೆಯೂ ನಿಮ್ಮ ದೇವರ ಆಲಯದಿಂದ ಹಿಂತೆಗೆಯಲ್ಪಟ್ಟಿವೆ.
13 Cingi-vos de pano de saco e lamentai, sacerdotes; uivai, ministros do altar; vinde, ministros de meu Deus; passai a noite vestidos de panos de saco; porque da casa de vosso Deus foi cortada a oferta de manjares e a libação.
14 ಉಪವಾಸವನ್ನು ಪರಿಶುದ್ಧ ಮಾಡಿರಿ; ಪವಿತ್ರ ಸಂಘವನ್ನು ಕರೆಯಿರಿ; ಹಿರಿಯ ರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ದೇವರಾದ ಕರ್ತನ ಆಲಯದಲ್ಲಿ ಕೂಡಿಸಿ ಕರ್ತನಿಗೆ ಮೊರೆಯಿ ಡಿರಿ.
14 Promulgai um santo jejum, convocai uma assembleia solene, congregai os anciãos, todos os moradores desta terra, para a Casa do Senhor , vosso Deus, e clamai ao Senhor .
15 ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
15 Ah! Que dia! Porque o Dia do Senhor está perto e vem como assolação do Todo-Poderoso.
16 ನಮ್ಮ ಕಣ್ಣುಗಳ ಮುಂದೆ ಆಹಾರವೂ ನಮ್ಮ ದೇವರ ಆಲಯದಿಂದ ಸಂತೋ ಷವೂ ಉಲ್ಲಾಸವೂ ತೆಗೆಯಲ್ಪಟ್ಟಿವೆಯಲ್ಲವೋ?
16 Acaso, não está destruído o mantimento diante dos vossos olhos? E, da casa do nosso Deus, a alegria e o regozijo?
17 ಬೀಜವು ಅವರ ಹೆಂಟೆಗಳ ಕೆಳಗೆ ಕೆಟ್ಟುಹೋಗಿದೆ; ಉಗ್ರಾಣಗಳು ನಾಶವಾಗಿವೆ; ಕಣಜಗಳು ಕೆಡವಲ್ಪ ಟ್ಟಿವೆ; ಧಾನ್ಯವು ಒಣಗಿದೆ.
17 A semente mirrou debaixo dos seus torrões, os celeiros foram assolados, os armazéns, derribados, porque se perdeu o cereal.
18 ಪಶುಗಳು ಎಷ್ಟೋ ಮುಲುಗುತ್ತವೆ; ದನದ ಹಿಂಡುಗಳು ಕಳವಳಗೊಂಡಿವೆ; ಅವಕ್ಕೆ ಮೇವು ಇಲ್ಲ; ಕುರಿಮಂದೆಗಳು ಸಹ ನಾಶ ವಾಗುತ್ತವೆ.
18 Como geme o gado! As manadas de bois estão sobremodo inquietas, porque não têm pasto; também os rebanhos de ovelhas estão perecendo.
19 ಓ ಕರ್ತನೇ, ನಿನಗೆ ನಾನು ಮೊರೆಯಿಡುತ್ತೇನೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ನುಂಗಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿದೆ.
19 A ti, ó Senhor , clamo, porque o fogo consumiu os pastos do deserto, e a chama abrasou todas as árvores do campo.
20 ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ.
20 Também todos os animais do campo bramam suspirantes por ti; porque os rios se secaram, e o fogo devorou os pastos do deserto.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Joel 1, comparar traduções ou montar um estudo — tudo direto pelo WhatsApp.