Gênesis 47
Kannada Bible (GL_KANNADA) vs ARC
ARC Almeida Revista e Corrigida 2009
1 ಯೋಸೇಫನು ಬಂದು ಫರೋಹನಿಗೆ-- ನನ್ನ ತಂದೆಯೂ ನನ್ನ ಸಹೋದರರೂ ತಮ್ಮ ಕುರಿ ದನಗಳನ್ನು ತಮಗಿದ್ದ ಎಲ್ಲವುಗಳನ್ನು ತೆಗೆದುಕೊಂಡು ಕಾನಾನ್‌ದೇಶದಿಂದ ಬಂದಿದ್ದಾರೆ. ಇಗೋ, ಅವರು ಗೋಷೆನ್ ಸೀಮೆಯಲ್ಲಿ ಇದ್ದಾರೆ ಅಂದನು.
1 Então, veio José, e anunciou a Faraó, e disse: Meu pai, e os meus irmãos, e as suas ovelhas, e as suas vacas, com tudo o que têm, chegaram da terra de Canaã, e eis que estão na terra de Gósen.
2 ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು.
2 E tomou uma parte de seus irmãos, a saber, cinco varões, e os pôs diante de Faraó.
3 ಫರೋಹನು ಯೋಸೇಫನ ಸಹೋದರರಿಗೆ--ನಿಮ್ಮ ಕೆಲಸವೇನು ಎಂದು ಕೇಳಿದಾಗ ಅವರು ಫರೋಹನಿಗೆ--ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಕುರಿಕಾಯುವವರಾಗಿದ್ದೇವೆ ಅಂದರು.
3 Então, disse Faraó a seus irmãos: Qual é o vosso negócio? E eles disseram a Faraó: Teus servos são pastores de ovelhas, tanto nós como nossos pais.
4 ಅವರು ಫರೋಹನಿಗೆ--ಈ ದೇಶದಲ್ಲಿ ಪ್ರವಾಸ ಮಾಡುವದಕ್ಕಾಗಿ ಬಂದಿದ್ದೇವೆ; ಯಾಕಂದರೆ ಕಾನಾನ್ ದೇಶದಲ್ಲಿ ಕ್ಷಾಮವು ಕಠಿಣವಾಗಿರುವದರಿಂದ ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವದರಿಂದ ನಿನ್ನ ದಾಸರು ಗೋಷೆನ್ ಸೀಮೆಯಲ್ಲಿ ವಾಸಮಾಡುವವರಾಗುವಂತೆ ನಿನ್ನನ್ನು ಕೇಳಿಕೊಳ್ಳುತ್ತೇವೆ ಅಂದರು.
4 Disseram mais a Faraó: Viemos para peregrinar nesta terra; porque não há pasto para as ovelhas de teus servos, porquanto a fome é grave na terra de Canaã; agora, pois, rogamos-te que teus servos habitem na terra de Gósen.
5 ಅದಕ್ಕೆ ಫರೋಹನು ಯೋಸೇಫನಿಗೆ--ನಿನ್ನ ತಂದೆಯೂ ನಿನ್ನ ಸಹೋದ ರರೂ ನಿನ್ನ ಬಳಿಗೆ ಬಂದಿದ್ದಾರೆ.
5 Então, falou Faraó a José, dizendo: Teu pai e teus irmãos vieram a ti.
6 ಐಗುಪ್ತದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದದ್ದರಲ್ಲಿ ನಿನ್ನ ತಂದೆಯೂ ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಸೀಮೆಯಲ್ಲಿ ಅವರು ವಾಸವಾ ಗಿರಲಿ. ಅವರಲ್ಲಿ ಚಟುವಟಿಕೆಯುಳ್ಳವರು ಇದ್ದಾರೆಂದು ನಿನಗೆ ತಿಳಿದರೆ ಅವರನ್ನು ನಮಗಿರುವ ಮಂದೆಗಳ ಮೇಲೆ ವಿಚಾರಕರನ್ನಾಗಿ ಇರಿಸು ಅಂದನು.
6 A terra do Egito está diante da tua face; no melhor da terra faze habitar teu pai e teus irmãos; habitem na terra de Gósen; e, se sabes que entre eles há homens valentes, os porás por maiorais do gado, sobre o que eu tenho.
7 ಯೋಸೇಫನು ತನ್ನ ತಂದೆಯಾದ ಯಾಕೋಬ ನನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವ ದಿಸಿದನು.
7 E trouxe José a Jacó, seu pai, e o pôs diante de Faraó; e Jacó abençoou a Faraó.
8 ಫರೋಹನು ಯಾಕೋಬನಿಗೆ--ನಿನಗೆ ಎಷ್ಟು ವರುಷಗಳು ಅಂದಾಗ
8 E Faraó disse a Jacó: Quantos são os dias dos anos de tua vida?
9 ಯಾಕೋಬನು ಫರೋಹನಿಗೆ--ನನ್ನ ಪ್ರವಾಸದ ದಿನಗಳು ನೂರ ಮೂವತ್ತು ವರುಷಗಳು. ನನ್ನ ಜೀವನದ ದಿನಗಳು ಸ್ವಲ್ಪವಾಗಿಯೂ ದುಃಖಕರವಾಗಿಯೂ ಇದ್ದವು. ನನ್ನ ತಂದೆಗಳು ತಾವು ಪ್ರವಾಸಿಗಳಾಗಿದ್ದ ಜೀವನದ ವರುಷಗಳ ದಿನಗಳಿಗೆ ನಾನು ಮುಟ್ಟಲಿಲ್ಲ ಅಂದನು.
9 E Jacó disse a Faraó: Os dias dos anos das minhas peregrinações são cento e trinta anos; poucos e maus foram os dias dos anos da minha vida e não chegaram aos dias dos anos da vida de meus pais, nos dias das suas peregrinações.
10 ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.
10 E Jacó abençoou a Faraó e saiu de diante da face de Faraó.
11 ಯೋಸೇಫನು ತನ್ನ ತಂದೆಗೂ ತನ್ನ ಸಹೋದರ ರಿಗೂ ನಿವಾಸವನ್ನು ಕೊಟ್ಟು ಫರೋಹನ ಅಪ್ಪಣೆಯ ಪ್ರಕಾರ ಐಗುಪ್ತದೇಶದ ಉತ್ತಮವಾದದ್ದರಲ್ಲಿ ರಮ್ಸೇಸ್ ಸೀಮೆಯಲ್ಲಿ ಸ್ವಾಸ್ಥ್ಯವನ್ನು ಕೊಟ್ಟನು.
11 E José fez habitar a seu pai e seus irmãos e deu-lhes possessão na terra do Egito, no melhor da terra, na terra de Ramessés, como Faraó ordenara.
12 ಯೋಸೇಫನು ತನ್ನ ತಂದೆಯನ್ನೂ ತನ್ನ ಸಹೋ ದರರನ್ನೂ ತನ್ನ ತಂದೆಯ ಮನೆಯವರೆಲ್ಲರನ್ನೂ ಕುಟುಂಬಗಳ ಪ್ರಕಾರ ಆಹಾರಕ್ಕೆ ಕೊಟ್ಟು ಅವರನ್ನು ಸಂರಕ್ಷಣೆ ಮಾಡಿದನು.
12 E José sustentou de pão a seu pai, e a seus irmãos, e a toda a casa de seu pai, segundo as suas famílias.
13 ಆದರೆ ಬರವು ಅತಿ ಘೋರವಾಗಿದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಐಗುಪ್ತದೇಶವೂ ಕಾನಾನ್‌ದೇಶವೂ ಕ್ಷಾಮದಿಂದ ಕ್ಷೀಣವಾದವು.
13 E não havia pão em toda a terra, porque a fome era mui grave; de maneira que a terra do Egito e a terra de Canaã desfaleciam por causa da fome.
14 ಆಗ ಯೋಸೇಫನು ಐಗುಪ್ತದೇಶದಲ್ಲಿಯೂ ಕಾನಾನ್‌ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ ಅದನ್ನು ಫರೋಹನ ಮನೆಗೆ ತಂದನು.
14 Então, José recolheu todo o dinheiro que se achou na terra do Egito e na terra de Canaã, pelo trigo que compravam; e José trouxe o dinheiro à casa de Faraó.
15 ಐಗುಪ್ತ ದೇಶದಲ್ಲಿಯೂ ಕಾನಾನ್‌ದೇಶದಲ್ಲಿಯೂ ಹಣವು ಮುಗಿದಾಗ ಐಗುಪ್ತ್ಯರೆಲ್ಲರೂ ಯೋಸೇಫನ ಬಳಿಗೆ ಬಂದು--ನಮಗೆ ರೊಟ್ಟಿಯನ್ನು ಕೊಡು, ನಾವು ನಿನ್ನ ಮುಂದೆ ಯಾಕೆ ಸಾಯಬೇಕು? ಯಾಕಂದರೆ ಹಣವೆಲ್ಲಾ ತೀರಿತು ಅಂದರು.
15 Acabando-se, pois, o dinheiro na terra do Egito e na terra de Canaã, vieram todos os egípcios a José, dizendo: Dá-nos pão; por que morreremos em tua presença? Porquanto o dinheiro nos falta.
16 ಆಗ ಯೋಸೇಫ ನು--ನಿಮ್ಮ ದನಗಳನ್ನು ತಕ್ಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ ನಿಮ್ಮ ದನಗಳಿಗೆ ಬದಲಾಗಿ (ಧಾನ್ಯವನ್ನು) ಕೊಡುತ್ತೇನೆ ಅಂದನು.
16 E José disse: Dai o vosso gado, e eu vo-lo darei por vosso gado, se falta o dinheiro.
17 ಆಗ ಅವರು ತಮ್ಮ ಪಶುಗಳನ್ನು ಯೋಸೇಫನ ಬಳಿಗೆ ತಂದರು. ಯೋಸೇಫನು ಅವರ ಕುದುರೆ ಮಂದೆ ದನ ಕತ್ತೆ ಇವುಗಳ ಬದಲಾಗಿ ರೊಟ್ಟಿಯನ್ನು ಕೊಟ್ಟು. ಆ ವರುಷವೆಲ್ಲಾ ಅವರನ್ನು ಪೋಷಿಸಿದನು.
17 Então, trouxeram o seu gado a José; e José deu-lhes pão em troca de cavalos, e das ovelhas, e das vacas, e dos jumentos; e os sustentou de pão aquele ano por todo o seu gado.
18 ಆ ವರುಷವಾದ ಮೇಲೆ ಎರಡನೆಯ ವರುಷದಲ್ಲಿ ಅವರು ಅವನ ಬಳಿಗೆ ಬಂದು ಅವನಿಗೆ--ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವದರಿಂದ ನಮ್ಮ ಶರೀರಗಳೂ ಭೂಮಿಗಳೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬದನ್ನು ನಮ್ಮ ಒಡೆಯನಿಗೆ ಮರೆಮಾಡುವದಿಲ್ಲ.
18 E, acabado aquele ano, vieram a ele no segundo ano e disseram-lhe: Não ocultaremos ao meu senhor que o dinheiro é acabado, e meu senhor possui os animais; nenhuma outra coisa nos ficou diante da face de meu senhor, senão o nosso corpo e a nossa terra.
19 ನಾವೂ ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವದು ಯಾಕೆ? ನಮ್ಮನ್ನೂ ನಮ್ಮ ಭೂಮಿಯನ್ನೂ ರೊಟ್ಟಿಗೆ ಕೊಂಡುಕೋ. ಆಗ ನಮ್ಮ ಭೂಮಿಯು ಫರೋಹನ ವಶವಾಗಿ ನಾವು ಅವನಿಗೆ ಗುಲಾಮರಾಗಿರುವೆವು. ನಮಗೆ ಬೀಜವನ್ನು ಕೊಡು; ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವದು ಅಂದರು.
19 Por que morreremos diante dos teus olhos, tanto nós como a nossa terra? Compra-nos a nós e à nossa terra por pão, e nós e a nossa terra seremos servos de Faraó; dá semente para que vivamos e não morramos, e a terra não se desole.
20 ಆಗ ಯೋಸೇಫನು ಐಗುಪ್ತದೇಶ ವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಹೇಗಂದರೆ, ಬರವು ಅವರಿಗೆ ಕಠಿಣವಾಗಿದ್ದರಿಂದ ಐಗುಪ್ತ್ಯರು ತಮ್ಮತಮ್ಮ ಹೊಲಗಳನ್ನು ಮಾರಿಬಿಟ್ಟರು
20 Assim, José comprou toda a terra do Egito para Faraó, porque os egípcios venderam cada um o seu campo, porquanto a fome era extrema sobre eles; e a terra ficou sendo de Faraó.
21 ಹೀಗೆ ಭೂಮಿಯು ಫರೋಹನದಾಯಿತು. ಅವನು ಜನರನ್ನು ಐಗುಪ್ತದ ಒಂದು ಮೇರೆಯಿಂದ ಇನ್ನೊಂದು ಮೇರೆಯ ವರೆಗೆ ಇದ್ದ ಪಟ್ಟಣಗಳಲ್ಲಿ ಸೇರಿಸಿದನು.
21 E, quanto ao povo, fê-lo passar às cidades, desde uma extremidade da terra do Egito até à outra extremidade.
22 ವೈದಿಕರ ಭೂಮಿಯನ್ನು ಮಾತ್ರ ಅವನು ಕೊಂಡು ಕೊಳ್ಳಲಿಲ್ಲ. ಯಾಕಂದರೆ ಫರೋಹನು ವೈದಿಕರಿಗೆ ಭಾಗಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು ಅವರು ಊಟಮಾಡುತ್ತಿದ್ದರು; ಆದ ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ.
22 Somente a terra dos sacerdotes não a comprou, porquanto os sacerdotes tinham porção de Faraó e eles comiam a sua porção que Faraó lhes tinha dado; por isso, não venderam a sua terra.
23 ಆಗ ಯೋಸೇಫನು ಜನರಿಗೆ--ಇಗೋ, ಇಂದು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಗೋ, ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜಬಿತ್ತಿರಿ.
23 Então, disse José ao povo: Eis que hoje vos tenho comprado a vós e a vossa terra para Faraó; eis aí tendes semente para vós, para que semeeis a terra.
24 ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ನಾಲ್ಕು ಪಾಲು ಹೊಲದ ಬೀಜಕ್ಕಾ ಗಿಯೂ ನಿಮ್ಮ ಆಹಾರಕ್ಕಾಗಿಯೂ ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ ಅಂದನು.
24 Há de ser, porém, que das colheitas dareis o quinto a Faraó, e as quatro partes serão vossas, para semente do campo, e para o vosso mantimento, e dos que estão nas vossas casas, e para que comam vossos meninos.
25 ಆಗ ಅವರು--ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ಕೃಪೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು ಅಂದರು.
25 E disseram: A vida nos tens dado; achemos graça aos olhos de meu senhor e seremos servos de Faraó.
26 ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬದನ್ನು ಐಗುಪ್ತದ ಭೂಮಿಗೆ ಇಂದಿನ ವರೆಗೂ ನೇಮಕಮಾಡಿ ಸ್ಥಾಪಿಸಿ ದನು. ವೈದಿಕರ ಭೂಮಿಯು ಮಾತ್ರ ಫರೋಹ ನದಾಗಲಿಲ್ಲ.
26 José, pois, pôs isto por estatuto, até ao dia de hoje, sobre a terra do Egito: que Faraó tirasse o quinto; só a terra dos sacerdotes não ficou sendo de Faraó.
27 ಆದರೆ ಇಸ್ರಾಯೇಲ್ಯರು ಐಗುಪ್ತದೇಶದ ಗೋಷೆನ್ ಸೀಮೆಯಲ್ಲಿ ವಾಸವಾಗಿದ್ದು ಆಸ್ತಿಯನ್ನು ಸಂಪಾದಿಸಿ ಬೆಳೆದು ಬಹಳವಾಗಿ ಹೆಚ್ಚಿದ್ದರು.
27 Assim, habitou Israel na terra do Egito, na terra de Gósen, e nela tomaram possessão, e frutificaram, e multiplicaram-se muito.
28 ಇದಲ್ಲದೆ ಯಾಕೋಬನು ಐಗುಪ್ತದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಾಲ್ವತ್ತೇಳು ವರುಷಗಳು.
28 E Jacó viveu na terra do Egito dezessete anos; de sorte que os dias de Jacó, os anos da sua vida, foram cento e quarenta e sete anos.
29 ಇಸ್ರಾಯೇಲನು ಸಾಯುವ ಸಮಯವು ಸವಿಾಪಿಸಿ ದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ ಅವನಿಗೆ--ಈಗ ನಿನ್ನ ಸಮ್ಮುಖದಲ್ಲಿ ನಾನು ಕೃಪೆ ಹೊಂದಿದ್ದೇಯಾದರೆ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನ್ನ ಕಡೆಗೆ ದಯೆಯನ್ನೂ ಸತ್ಯವನ್ನೂ ತೋರಿಸು. ಹೇಗಂದರೆ ಐಗುಪ್ತದಲ್ಲಿ ನನ್ನನ್ನು ಹೂಣಿಡಬೇಡ.
29 Chegando-se, pois, o tempo da morte de Israel, chamou a José, seu filho, e disse-lhe: Se agora tenho achado graça aos teus olhos, rogo-te que ponhas a tua mão debaixo da minha coxa, e usa comigo de beneficência e verdade; rogo-te que me não enterres no Egito,
30 ನನ್ನ ತಂದೆಗಳ ಸಂಗಡ ನಾನು ಮಲಗಬೇಕು. ಐಗುಪ್ತದಿಂದ ನನ್ನನ್ನು ತಕ್ಕೊಂಡುಹೋಗಿ ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಣಿಡು ಅಂದನು. ಅದಕ್ಕವನು ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ ಅಂದನು.
30 mas que eu jaza com os meus pais; por isso, me levarás do Egito e me sepultarás na sepultura deles. E ele disse: Farei conforme a tua palavra.
31 ಯಾಕೋಬನು--ನನಗೆ ಪ್ರಮಾಣ ಮಾಡು ಅಂದಾಗ ಅವನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿಕೊಂಡನು.
31 E disse ele: Jura-me. E ele jurou-lhe; e Israel inclinou-se sobre a cabeceira da cama.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Gênesis 47, comparar traduções ou montar um estudo — tudo direto pelo WhatsApp.