Gênesis 35
Kannada Bible (GL_KANNADA) vs VC
VC Versão Católica
1 ದೇವರು ಯಾಕೋಬನಿಗೆ--ಎದ್ದು ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು; ನೀನು ನಿನ್ನ ಸಹೋದರನಾದ ಏಸಾವನೆದುರಿನಿಂದ ಓಡಿ ಹೋಗುತ್ತಿದ್ದಾಗ ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟು ಅಂದನು.
1 Deus disse a Jacó: "Vamos, sobe a Betel e fica ali, e levanta um altar nesse lugar ao Deus que se manifestou a ti, quando fugias diante de teu irmão Esaú."
2 ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ--ನಿಮ್ಮ ಮಧ್ಯದಲ್ಲಿರುವ ಅನ್ಯದೇವ ರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ; ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ;
2 Jacó disse à sua família e à sua gente: "Tirai do meio de vós os deuses estrangeiros, purificai-vos e mudai vossos vestidos.
3 ನಾವು ಎದ್ದು ಬೇತೇಲಿಗೆ ಹೋಗೋಣ; ಶ್ರಮೆಯ ದಿನದಲ್ಲಿ ನನ್ನನ್ನು ಆಲೈಸಿ ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಯಜ್ಞವೇದಿಯನ್ನು ಕಟ್ಟುವೆನು ಅಂದನು.
3 Vamos subir a Betel, onde levantarei um altar ao Deus que me ouviu no dia de minha aflição, e que esteve comigo durante minha viagem."
4 ಆಗ ಅವರು ತಮ್ಮ ಕೈಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವು ಗಳನ್ನೂ ತೆಗೆದು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮಿಗೆ ಸವಿಾಪವಾಗಿದ್ದ ಏಲಾಮರದ ಕೆಳಗೆ ಹೂಣಿಟ್ಟನು.
4 Entregaram a Jacó todos os deuses estrangeiros que tinham, assim como os brincos que traziam nas orelhas, e Jacó enterrou-os debaixo de um terebinto, perto de Siquém.
5 ತರುವಾಯ ಅವರು ಪ್ರಯಾಣ ವಾಗಿ ಹೊರಟರು. ಆಗ ದೇವರ ಭಯವು ಸುತ್ತಲಿರುವ ಪಟ್ಟಣಗಳವರ ಮೇಲೆ ಇದ್ದದರಿಂದ ಅವರು ಯಾಕೋ ಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.
5 Partindo eles dali, Deus semeou o pânico nas cidades circunvizinhas, de sorte que não perseguiram os filhos de Jacó.
6 ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್.
6 Chegou, portanto, Jacó com toda a sua gente à Luz, na terra de Canaã, hoje Betel.
7 ಅಲ್ಲಿ ಅವನು ಯಜ್ಞ ವೇದಿಯನ್ನು ಕಟ್ಟಿ ತಾನು ತನ್ನ ಸಹೋದರನ ಬಳಿ ಯಿಂದ ಓಡಿಹೋದಾಗ ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
7 Levantou aí um altar e deu a esse lugar o nome de El-Betel, porque foi aí que Deus lhe aparecera, quando fugia diante de seu irmão.
8 ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಸತ್ತಳು. ಬೇತೇಲಿನ ಕೆಳಗಿದ್ದ ಅಲ್ಲೋನ್ ಮರದ ಬುಡದಲ್ಲಿ ಆಕೆಯನ್ನು ಹೂಣಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಾಯಿತು.
8 Foi então que morreu Débora, ama de Rebeca. E foi ali sepultada, ao pé de Betel, debaixo de um carvalho, ao qual se chamou carvalho dos Prantos.
9 ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು.
9 Quando Jacó voltou de Padã-Arã, Deus apareceu-lhe novamente e o abençoou.
10 ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.
10 "Teu nome, disse-lhe ele, é Jacó. Tu não te chamarás mais assim, mas Israel." E chamou-o Israel.
11 ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
11 Deus disse-lhe: "Eu sou o Deus todo-poderoso. Sê fecundo e multiplica-te. De ti nascerão um povo e uma assembléia de povos; e de teus rins sairão reis.
12 ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.
12 A terra que dei a Abraão e a Isaac, eu ta darei e à tua posteridade."
13 ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು.
13 Depois, Deus retirou-se de junto dele.
14 ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.
14 No mesmo lugar onde Deus lhe falou, Jacó erigiu uma estela sobre a qual fez uma libação, e derramou óleo.
15 ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು.
15 E deu o nome de Betel ao lugar onde Deus lhe tinha falado.
16 ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು.
16 E partiram de Betel. Quando estavam a pouca distância de Efrata, Raquel deu à luz, e o seu parto foi penoso.
17 ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.
17 Durante as dores do parto, a parteira disse-lhe: "Não temas, porque ainda terás este filho."
18 (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
18 E, estando prestes a render a alma - porque estava já agonizante - ela chamou o filho Benoni; o seu pai, porém, chamou-o Benjamim.
19 ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್.
19 Raquel expirou e foi sepultada no caminho de Efrata, hoje Belém.
20 ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
20 Jacó erigiu uma estela sobre seu túmulo; é a estela do túmulo de Raquel, que ainda hoje existe.
21 ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು.
21 Israel partiu e plantou sua tenda além de Migdal-Eder.
22 ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
22 Foi durante sua estada nessa região que Rubem foi dormir com Bala, concubina de seu pai, e Israel soube.
23 ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.
23 Os filhos de Jacó foram em número de doze. Filhos de Lia: Rubem, primogênito de Jacó, Simeão, Levi, Judá, Issacar e Zabulon.
24 ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು.
24 Filhos de Raquel: José e Benjamim.
25 ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು.
25 Filhos de Bala, escrava de Raquel: Dã e Neftali.
26 ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು.
26 Filhos de Zelfa, escrava de Lia: Gad e Aser. Tais são os filhos nascidos a Jacó em Padã-Arã.
27 ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಯಾದ ಇಸಾಕನ ಬಳಿಗೆ ಅಬ್ರಹಾಮನೂ ಇಸಾಕನೂ ಪ್ರವಾಸವಾಗಿದ್ದ ಹೆಬ್ರೋನ್ ಎಂಬ ಅರ್ಬದ ಪಟ್ಟಣಕ್ಕೆ ಬಂದನು.
27 Jacó foi para junto de seu pai Isaac em Mambré, em Quiriat-Arbé, hoje Hebron, onde tinham habitado Abraão e Isaac.
28 ಆಗ ಇಸಾಕನ ದಿನಗಳು ನೂರ ಎಂಭತ್ತು ವರುಷಗಳಾಗಿದ್ದವು.
28 E todos os dias da vida de Isaac foram cento e oitenta anos.
29 ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.
29 E morreu. A morte reuniu-o aos seus, velho e saciado de dias. Esaú e Jacó, seus filhos, sepultaram-no.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Gênesis 35, comparar traduções ou montar um estudo — tudo direto pelo WhatsApp.