Gênesis 32
Kannada Bible (GL_KANNADA) vs NVT
NVT Nova Versão Transformadora
1 ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ ದೇವದೂತರು ಅವನೆ ದುರಿಗೆ ಬಂದರು.
1 Quando Jacó seguiu viagem, anjos de Deus vieram encontrar-se com ele.
2 ಯಾಕೋಬನು ಅವರನ್ನು ನೋಡಿದಾಗ--ಇದು ದೇವರ ಸೈನ್ಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.
2 Ao vê-los, Jacó exclamou: “Este é o acampamento de Deus!”. Por isso, chamou o lugar de Maanaim.
3 ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.
3 Então Jacó enviou adiante dele mensageiros a seu irmão Esaú, que vivia na região de Seir, na terra de Edom.
4 ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು;
4 Disse-lhes: “Deem a seguinte mensagem ao meu senhor Esaú: ‘Assim diz seu servo Jacó: Até o momento, estava morando com nosso tio Labão
5 ನನಗೆ ಎತ್ತು ಕತ್ತೆ ಕುರಿಗಳು ದಾಸದಾಸಿಯರು ಇದ್ದಾರೆ; ನಾವು ನಿನ್ನ ದೃಷ್ಟಿಯಲ್ಲಿ ಕೃಪೆಹೊಂದುವ ಹಾಗೆ ನನ್ನ ಯಜಮಾನ ನಿಗೆ ತಿಳಿಸುವದಕ್ಕೆ ಕಳುಹಿಸಿದ್ದೇನೆ ಎಂದು ಹೇಳಿರಿ ಅಂದನು.
5 e, agora, tenho bois, jumentos, rebanhos de ovelhas e cabras, além de muitos servos e servas. Enviei estes mensageiros para informar meu senhor da minha chegada, na esperança de que me receba amistosamente”.
6 ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು.
6 Depois de transmitirem a mensagem, voltaram a Jacó e lhe disseram: “Estivemos com seu irmão Esaú, e ele está vindo ao seu encontro com um bando de quatrocentos homens!”.
7 ಆಗ ಯಾಕೋಬನು ಬಹಳವಾಗಿ ಭಯಪಟ್ಟು ಕುಂದಿ ಹೋಗಿ ತನ್ನ ಸಂಗಡ ಇದ್ದ ಜನರನ್ನೂ ಕುರಿಗಳನ್ನೂ ದನಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು.
7 Quando ouviu a notícia, Jacó ficou apavorado. Dividiu em dois grupos sua família e seus servos, e também os rebanhos, os bois e os camelos,
8 ಏಸಾವನು ಒಂದು ಗುಂಪಿನ ಮೇಲೆ ಬಿದ್ದು ಅದನ್ನು ಹೊಡೆದರೆ ಉಳಿದ ಗುಂಪು ತಪ್ಪಿಸಿಕೊಂಡು ಹೋದೀತೆಂದು ಅಂದು ಕೊಂಡನು.
8 pois pensou: “Se Esaú encontrar um dos grupos e atacá-lo, talvez o outro consiga escapar”.
9 ಇದಲ್ಲದೆ ಯಾಕೋಬನು ಹೇಳಿದ್ದೇ ನಂದರೆ--ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ನಿನ್ನ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು, ಆಗ ನಿನಗೆ ಒಳ್ಳೇದನ್ನು ಮಾಡುವೆನು ಎಂದು ನನಗೆ ಹೇಳಿದ ಕರ್ತನೇ,
9 Então Jacó orou: “Ó Deus de meu avô, Abraão, e Deus de meu pai, Isaque; ó S enhor , tu me disseste: ‘Volte para sua terra natal, para seus parentes’. E prometeste: ‘Tratarei bem de você’.
10 ನೀನು ನಿನ್ನ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಯಾಕಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಗುಂಪುಗಳುಳ್ಳವನಾದೆನು.
10 Não sou digno de toda a bondade e fidelidade que tens mostrado a mim, teu servo. Quando saí de casa e atravessei o rio Jordão, não possuía nada além de um cajado. Agora, minha família e meus servos formam duas caravanas!
11 ಈಗ ನನ್ನ ಸಹೋದರನಾದ ಏಸಾವನ ಕೈಯಿಂದ ನನ್ನನ್ನು ತಪ್ಪಿಸು. ಅವನು ಬಂದು ನನ್ನನ್ನು ಮಕ್ಕಳ ಸಂಗಡ ತಾಯಿಯನ್ನು ಕೊಲ್ಲುವನೇನೋ ಎಂದು ನಾನು ಅವನಿಗೆ ಭಯಪಡುತ್ತೇನೆ.
11 Por favor, salva-me de meu irmão, Esaú. Estou com medo de que ele venha atacar tanto a mim quanto a minhas mulheres e meus filhos.
12 ನಾನು --ನಿನಗೆ ಖಂಡಿತ ವಾಗಿ ಒಳ್ಳೆಯದನ್ನು ಮಾಡುವೆನು, ನಿನ್ನ ಸಂತತಿಯನ್ನು ಎಣಿಸುವದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು ಎಂದು ಹೇಳಿದಿಯಲ್ಲಾ ಎಂದು ಬೇಡಿಕೊಂಡನು.
12 Mas tu prometeste: ‘Certamente tratarei bem de você e multiplicarei seus descendentes até que se tornem tão numerosos quanto a areia à beira do mar, que não se pode contar’”.
13 ಯಾಕೋಬನು ಅದೇ ರಾತ್ರಿಯಲ್ಲಿ ಅಲ್ಲಿ ಇಳುಕೊಂಡನು; ತಾನು ತಕ್ಕೊಂಡು ಬಂದವುಗಳಲ್ಲಿ ತನ್ನ ಸಹೋದರನಾದ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು.
13 Jacó passou a noite ali. Depois, escolheu entre seus bens os seguintes presentes para seu irmão, Esaú:
14 ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು;
14 duzentas cabras, vinte bodes, duzentas ovelhas, vinte carneiros,
15 ಹಾಲು ಕೊಡುವ ಮೂವತ್ತು ಒಂಟೆಗಳು ಅವುಗಳ ಮರಿಗಳು, ನಾಲ್ವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಕತ್ತೆ ಮರಿಗಳು;
15 trinta fêmeas de camelo com seus filhotes, quarenta vacas, dez touros, vinte jumentas e dez jumentos.
16 ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನು ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ ಅವರಿಗೆ--ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳಬಿಡಿರಿ ಅಂದನು.
16 Dividiu esses animais em rebanhos, entregou cada rebanho a um servo e lhes disse: “Vão à minha frente com os animais, mas mantenham certa distância entre os rebanhos”.
17 ಅವನು ಮೊದಲನೆಯವನಿಗೆ--ನನ್ನ ಸಹೋದರನಾದ ಏಸಾವನು ನಿನ್ನೆದುರಿಗೆ ಬಂದು-- ನೀನು ಯಾರವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವವುಗಳು ಯಾರವು ಎಂದು ಕೇಳಿದರೆ
17 Aos homens encarregados do primeiro grupo, deu as seguintes instruções: “Quando meu irmão, Esaú, se encontrar com vocês, ele perguntará: ‘De quem são servos? Para onde vão? Quem é o dono destes animais?’.
18 ನೀನು ಅವನಿಗೆ--ಅವು ನಿನ್ನ ದಾಸನಾದ ಯಾಕೋಬನವುಗಳೇ; ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲ್ಪಟ್ಟ ಕಾಣಿಕೆ; ಇಗೋ, ಅವನೂ ನಮ್ಮ ಹಿಂದೆ ಇದ್ದಾನೆ ಎಂದು ಅವನಿಗೆ ಹೇಳಬೇಕೆಂದು ಆಜ್ಞಾಪಿಸಿದನು.
18 Respondam: ‘Eles pertencem ao seu servo Jacó, mas são um presente para Esaú, o senhor dele. Veja, ele está vindo atrás de nós’”.
19 ಎರಡನೆಯ ವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು.
19 Jacó deu a mesma instrução aos encarregados do segundo e do terceiro grupo e a todos que seguiam os rebanhos: “Digam a mesma coisa a Esaú quando o encontrarem,
20 ಇದಲ್ಲದೆ--ನಿನ್ನ ದಾಸನಾದ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು ಎಂದು ಆಜ್ಞಾಪಿಸಿದನು. ಯಾಕಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ನೋಡುವೆನು; ಅವನು ನನ್ನನ್ನು ಅಂಗೀಕರಿಸುವನೇನೋ ಎಂದು ಅಂದು ಕೊಂಡನು.
20 e não se esqueçam de acrescentar: ‘Veja, seu servo Jacó está vindo atrás de nós’”. Jacó pensou: “Tentarei apaziguá-lo com os presentes que estou enviando à minha frente. Quando o vir, quem sabe ele me receberá amistosamente”.
21 ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಗುಂಪಿನಲ್ಲಿ ಇಳುಕೊಂಡನು.
21 Assim, os presentes foram enviados à frente, enquanto Jacó passou aquela noite no acampamento.
22 ಅವನು ಆ ರಾತ್ರಿಯಲ್ಲಿ ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಕುಮಾರರನ್ನೂ ತಕ್ಕೊಂಡು ಯಬ್ಬೋಕ್ ಎಂಬ ಸ್ಥಳದಲ್ಲಿ ದಾಟಿದನು.
22 Durante a noite, Jacó se levantou, tomou suas duas mulheres, suas duas servas e seus onze filhos e atravessou com eles o rio Jaboque.
23 ಅವನು ಅವರನ್ನು ಕರಕೊಂಡು ಹೊಳೆ ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು.
23 Depois de levá-los para a outra margem, fez passar todos os seus bens.
24 ಆಗ ಯಾಕೋಬನು ಒಬ್ಬನೇ ಉಳಿದಾಗ ಒಬ್ಬ ಮನುಷ್ಯನು ಉದಯ ವಾಗುವ ವರೆಗೆ ಅವನ ಸಂಗಡ ಹೋರಾಡಿದನು.
24 Com isso, Jacó ficou sozinho no acampamento. Veio então um homem, que lutou com ele até o amanhecer.
25 ಆ ಮನುಷ್ಯನು ಅವನನ್ನು ಜಯಿಸದೆ ಇರುವದನ್ನು ನೋಡಿ ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಆತನ ಸಂಗಡ ಹೋರಾಡುವಲ್ಲಿ ಯಾಕೋಬನ ತೊಡೆಯ ಕೀಲು ತಪ್ಪಿತು.
25 Quando o homem viu que não poderia vencer, tocou a articulação do quadril de Jacó e a deslocou.
26 ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು.
26 O homem disse: “Deixe-me ir, pois está amanhecendo!”. Jacó, porém, respondeu: “Não o deixarei ir enquanto não me abençoar”.
27 ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು.
27 “Qual é seu nome?”, perguntou o homem. “Jacó”, respondeu ele.
28 ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
28 O homem disse: “Seu nome não será mais Jacó. De agora em diante, você se chamará Israel, pois lutou com Deus e com os homens e venceu”.
29 ಯಾಕೋಬನು--ನಿನ್ನ ಹೆಸರನ್ನು ನನಗೆ ತಿಳಿಸು ಎಂದು ಆತನನ್ನು ಕೇಳಿಕೊಂಡಾಗ ಆತನು--ನನ್ನ ಹೆಸರನ್ನು ಯಾಕೆ ಕೇಳುತ್ತೀ ಎಂದು ಹೇಳಿ ಅವನನ್ನು ಅಲ್ಲಿ ಆಶೀರ್ವದಿಸಿದನು.
29 “Por favor, diga-me qual é seu nome”, disse Jacó. “Por que quer saber meu nome?”, replicou o homem. E abençoou Jacó ali.
30 ಆಗ ಯಾಕೋಬನು--ನಾನು ದೇವರನ್ನು ಮುಖಾಮುಖಿ ಯಾಗಿ ನೋಡಿದರೂ ನನ್ನ ಪ್ರಾಣವು ಕಾಪಾಡಲ್ಪಟ್ಟಿತು ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.
30 Jacó chamou aquele lugar de Peniel, pois disse: “Vi Deus face a face e, no entanto, minha vida foi poupada”.
31 ಅವನು ಪೆನೂವೇಲನ್ನು ದಾಟಿ ಹೋದಾಗ ಅವನಿಗೆ ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನಿಮಿತ್ತ ಕುಂಟಿಕೊಂಡು ನಡೆದನು.
31 O sol estava nascendo quando Jacó partiu de Peniel, mancando por causa do quadril deslocado.
32 ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲ್ ಮಕ್ಕಳು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದ ವರೆಗೂ ತಿನ್ನುವದಿಲ್ಲ.
32 (Até hoje, o povo de Israel não come o tendão perto da articulação do quadril, por causa do que aconteceu naquela noite em que o homem feriu o tendão do quadril de Jacó.)
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Gênesis 32, comparar traduções ou montar um estudo — tudo direto pelo WhatsApp.