Gênesis 14
Kannada Bible (GL_KANNADA) vs VC
VC Versão Católica
1 ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಜನಾಂಗಗಳ ಅರಸನಾದ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನಂದರೆ,
1 No tempo de Anrafel, rei de Senaar, de Arioc, rei de Elasar, de Codorlaomor, rei de Elão e de Tadal, rei de Goim,
2 ಇವರು ಸೊದೋಮಿನ ಅರಸನಾದ ಬೆರಗನೂ ಗೊಮೋರದ ಅರಸನಾದ ಬಿರ್ಶಗನೂ ಅದ್ಮಾಹದ ಅರಸನಾದ ಶಿನಾಬನಿಗೂ ಚೆಬೋಯಾಮಿನ ಅರಸನಾದ ಶಮೇಬರನಿಗೂ ಬೇಲ ಎಂಬ ಚೋಗರದ ಅರಸನಿಗೂ ವಿರೋಧವಾಗಿ ಯುದ್ದಮಾಡಿದರು.
2 aconteceu que estes reis fizeram guerra a Bara, rei de Sodoma, a Bersa, rei de Gomorra, a Senaab, rei de Adama, a Semeber, rei de Seboim e ao rei de Bala, isto é, Segor.
3 ಇವರೆಲ್ಲರು ಉಪ್ಪಿನ ಸಮುದ್ರ ವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿ ಬಂದರು.
3 Todos estes se juntaram no vale de Sidim, que é o mar Salgado.
4 ಅವರು ಹನ್ನೆರಡು ವರುಷ ಕೆದೊರ್ಲ ಗೋಮರನಿಗೆ ಸೇವೆಮಾಡಿ ಹದಿಮೂರನೆಯ ವರುಷ ದಲ್ಲಿ ತಿರಿಗಿ ಬಿದ್ದರು.
4 Durante doze anos eles tinham servido a Codorlaomor, mas no décimo terceiro ano tinham se revoltado.
5 ಹದಿನಾಲ್ಕನೆಯ ವರುಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ
5 No décimo quarto ano, Codorlaomor pôs-se em marcha com os reis que se tinham aliado a ele, e desbarataram os refaim em Astarot-Carnaim, e igualmente os zusim em Ham, os emim na planície de Cariataim
6 ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.
6 e os horreus, em sua montanha de Seir até El-Farã, cerca do deserto.
7 ಅವರು ಹಿಂತಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು ಅಮಾಲೆಕ್ಯರ ಎಲ್ಲಾ ಬೈಲನ್ನು ಹಚಚೋನ್‌ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಸಂಹರಿಸಿದರು.
7 Voltando, chegaram à fonte do julgamento, em Cadés, e devastaram a terra dos amalecitas, assim como os amorreus que habitavam em Asason-Tamar.
8 ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಾಮಿನ ಅರಸನೂ ಚೋಗ ರೆಂಬ ಬೇಲದ ಅರಸನೂ ಹೊರಟು
8 O rei de Sodoma, o rei de Gomorra, o rei de Adama, o rei de Seboim, o rei de Bala, isto é, Segor, saíram e puseram-se em ordem de batalha no vale de Sidim,
9 ಏಲಾಮಿನ ಅರಸನಾದ ಕೆದೊರ್ಲಗೋಮರನಿಗೂ ಜನಾಂಗಗಳ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸನಾದ ಅಮ್ರಾಫೆಲನಿಗೂ ಎಲ್ಲಸಾರಿನ ಅರಸನಾದ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಐದು ಮಂದಿ ಅರಸರು ನಾಲ್ವರು ಅರಸರಿಗೆ ವಿರೋಧವಾಗಿದ್ದರು.
9 contra Codorlaomor, o rei de Elão, Tadal, rei de Goim, Anrafel, rei de Senaar, e Arioc, rei de Elasar, quatro reis contra cinco.
10 ಸಿದ್ದೀಮ್ ತಗ್ಗು ಜೇಡಿನ ಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗುವಾಗ ಅಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು.
10 Ora, havia no vale de Sidim numerosos poços de betume. E os reis de Sodoma e de Gomorra, fugindo, caíram nesses poços, enquanto o resto fugiu para a montanha.
11 ಆಗ ಅವರು ಸೊದೋಮ್ ಗೊಮೋರಗಳ ಎಲ್ಲಾ ಸಂಪತ್ತನ್ನೂ ಅವರ ಎಲ್ಲಾ ಆಹಾರ ಪದಾರ್ಥ ವನ್ನೂ ತೆಗೆದುಕೊಂಡು ಹೋದರು.
11 Os vencedores levaram todos os bens de Sodoma e Gomorra, e todos os seus víveres, e partiram.
12 ಸೊದೋ ಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗನಾದ ಲೋಟನನ್ನೂ ಅವನ ಸಂಪತ್ತನ್ನೂ ತೆಗೆದುಕೊಂಡು ಹೋದರು.
12 Levaram também Lot, filho do irmão do Abrão, que morava em Sodoma, com todos os seus bens.
13 ತಪ್ಪಿಸಿಕೊಂಡವನೊಬ್ಬನು ಹೋಗಿ ಇಬ್ರಿಯ ನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಇವನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದು ಅಮೋರಿಯನಾದ ಮಮ್ರೆಯ ಮೈದಾನದಲ್ಲಿ ವಾಸ ವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.
13 Mas alguém que conseguiu fugir veio dar parte do sucedido a Abrão, o hebreu, que vivia nos carvalhos de Mambré, o amorreu, irmão de Escol e irmão de Aner, aliados de Abrão.
14 ತನ್ನ ಸಹೋದರನು ಸೆರೆ ಯಾಗಿ ಒಯ್ಯಲ್ಪಟ್ಟನೆಂದು ಕೇಳಿ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ ದಾನಿನ ವರೆಗೆ ಹಿಂದಟ್ಟಿ
14 Abrão, tendo ouvido que Lot, seu parente, ficara prisioneiro, escolheu trezentos e dezoito dos seus melhores e mais corajosos servos, nascidos em sua casa, e foi ao alcance dos reis até Dan.
15 ರಾತ್ರಿಯಲ್ಲಿ ಅವರಿಗೆ ವಿರೋಧ ವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ ಅವರನ್ನು ಹೊಡೆದು ದಮಸ್ಕದ ಬಲಗಡೆಯಲ್ಲಿರುವ ಹೋಬಾದ ವರೆಗೆ ಅವರನ್ನು ಸಂಹರಿಸಿ
15 Ali, dividindo a sua tropa para os atacar de noite com seus servos, desbaratou-os e perseguiu-os até Hoba, que se encontra ao norte de Damasco.
16 ಸಂಪತ್ತನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಸಹೋದರನಾದ ಲೋಟನನ್ನೂ ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತಕ್ಕೊಂಡು ಬಂದನು.
16 Abrão recobrou todos os bens saqueados e reconduziu também Lot, seu parente, com os seus bens, assim como as mulheres e os homens.
17 ಅವನು ಕೆದೊರ್ಲಗೋಮರನನ್ನು ಅವನ ಸಂಗಡ ಇದ್ದ ಅರಸರನ್ನು ಸಂಹರಿಸಿ ಹಿಂತಿರುಗಿ ಬಂದ ಮೇಲೆ ಸೊದೋಮಿನ ಅರಸನು ಹೊರಟು ಶಾವೆ ಎಂಬ ಅರಸನ ತಗ್ಗಿನ ವರೆಗೆ ಅಬ್ರಾಮನನ್ನು ಎದುರುಗೊಳ್ಳುವದಕ್ಕಾಗಿ ಬಂದನು.
17 Voltando Abrão da derrota de Codorlaomor e seus reis aliados, o rei de Sodoma saiu-lhe ao encontro no vale de Savé, que és o vale do rei.
18 ಸಾಲೇಮಿನ ಅರಸನಾದ ಮೆಲ್ಕೀಚೆದೇಕನು ರೊಟ್ಟಿಯನ್ನೂ ದ್ರಾಕ್ಷಾ ರಸವನ್ನೂ ತಂದನು. ಇವನು ಮಹೋನ್ನತನಾದ ದೇವರ ಯಾಜಕನು.
18 Melquisedeque, rei de Salém e sacerdote do Deus Altíssimo, mandou trazer pão e vinho,
19 ಇವನು ಅಬ್ರಾಮನನ್ನು ಆಶೀರ್ವದಿಸಿ--ಅಬ್ರಾಮನು ಆಕಾಶವನ್ನು ಭೂಮಿ ಯನ್ನು ಹೊಂದಿರುವ ಮಹೋನ್ನತನಾದ ದೇವರಿಂದ ಆಶೀರ್ವದಿಸಲ್ಪಡಲಿ.
19 e abençoou Abrão, dizendo: "Bendito seja Abrão pelo Deus Altíssimo, que criou o céu e terra!
20 ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
20 Bendito seja o Deus Altíssimo, que entregou os teus inimigos em tuas mãos!" E Abrão deu-lhe o dízimo de tudo.
21 ಸೊದೋಮಿನ ಅರಸನು ಅಬ್ರಾಮನಿಗೆ--ಮನುಷ್ಯರನ್ನು ನನಗೆ ಕೊಡು, ಸಂಪತ್ತನ್ನು ನೀನೇ ತಕ್ಕೋ ಅಂದನು.
21 O rei de Sodoma disse a Abrão: "Devolve-me os homens e guarda os bens."
22 ಅದಕ್ಕೆ ಅಬ್ರಾಮನು ಸೊದೋ ಮಿನ ಅರಸನಿಗೆ--ನನ್ನ ಕೈಯನ್ನು ಆಕಾಶವನ್ನು ಭೂಮಿಯನ್ನು ಹೊಂದಿರುವ ಮಹೋನ್ನತ ದೇವರಾ ಗಿರುವ ಕರ್ತನ ಕಡೆಗೆ ಎತ್ತಿದ್ದೇನೆ;
22 "Levanto a minha mão para o Senhor Deus Altíssimo que criou o céu e a terra, respondeu Abrão,
23 ನಿನ್ನವುಗಳಲ್ಲಿ ನೂಲು ಮೊದಲುಗೊಂಡು ಕೆರದ ಬಾರನ್ನು ಸಹ ನಾನು ತಕ್ಕೊಳ್ಳುವದಿಲ್ಲ. ಯಾಕಂದರೆ--ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ ಎಂದು ನೀನು ಹೇಳಬಾರದು.
23 de tudo o que é teu, não tomarei sequer um fio nem um cordão de sandália, para que não digas: Enriqueci Abrão.
24 ಯೌವನಸ್ಥರು ಊಟಮಾಡಿದ್ದು, ನನ್ನ ಸಂಗಡ ಹೋದ ಆನೇರ ಎಷ್ಕೋಲ ಮಮ್ರೆ ಎಂಬ ಈ ಮನುಷ್ಯರ ಪಾಲು ಮಾತ್ರ ಇರಲಿ; ಇವರು ತಮ್ಮ ಪಾಲನ್ನು ತಕ್ಕೊಳ್ಳಲಿ ಅಂದನು.
24 Nada para mim, exceto somente o que comeram os meus servos e a parte dos homens que vieram comigo, Aner, Escol e Mambré; estes hão de receber a sua parte."
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Gênesis 14, comparar traduções ou montar um estudo — tudo direto pelo WhatsApp.