Gálatas 1
Kannada Bible (GL_KANNADA) vs BKJ
BKJ BKJ
1 ಮನುಷ್ಯರ ಕಡೆಯಿಂದಾಗಲಿ ಮನುಷ್ಯನ ಮುಖಾಂತರದಿಂದಾಗಲಿ ಅಪೊಸ್ತಲ ನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವ ರಿಂದಲೂ ಅಪೊಸ್ತಲನಾದ ಪೌಲನೆಂಬ ನಾನೂ
1 Paulo, apóstolo (não de homens, nem por algum homem, mas por Jesus Cristo, e por Deus o Pai, que o ressuscitou dentre os mortos);
2 ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ ಗಲಾತ್ಯದಲ್ಲಿರುವ ಸಭೆಗಳಿಗೆ--
2 e todos os irmãos que estão comigo, às igrejas da Galácia:
3 ತಂದೆಯಾದ ದೇವ ರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
3 Graça seja a vós e paz da parte de Deus o Pai, e de nosso Senhor Jesus Cristo,
4 ಈತನು ನಮ್ಮನ್ನು ಕೆಟ್ಟದ್ದಾಗಿರುವ ಈಗಿನ ಪ್ರಪಂಚದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆ ಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗೋಸ್ಕರ ತನ್ನನ್ನು ತಾನೇ ಒಪ್ಪಿಸಿದನು.
4 o qual se deu por nossos pecados, para que pudesse nos livrar do presente mundo maligno, conforme a vontade de Deus e nosso Pai:
5 ಆತನಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯಾಗಲಿ. ಆಮೆನ್.
5 A quem seja a glória para sempre e sempre. Amém.
6 ಕ್ರಿಸ್ತನ ಕೃಪೆಯಲ್ಲಿ ನಿಮ್ಮನ್ನು ಕರೆದಾತನಿಂದ ನೀವು ಇಷ್ಟು ಬೇಗನೆ ಬೇರೆ ಸುವಾರ್ತೆಗೆ ತಿರುಗಿಕೊಂಡಿರೆಂದು ನಾನು ಆಶ್ಚರ್ಯಪಡುತ್ತೇನೆ.
6 Admiro-me de que tão breve vos desviastes daquele que vos chamou para a graça de Cristo para um outro evangelho,
7 ಅದು ಸುವಾರ್ತೆಯೇ ಅಲ್ಲ, ಆದರೆ ಕೆಲವರು ನಿಮ್ಮನ್ನು ಕಳವಳಪಡಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವದಕ್ಕೆ ಪ್ರಯತ್ನಿಸುತ್ತಾರೆ.
7 o qual não é um outro; entretanto, há alguns que vos perturbam, e querem perverter o evangelho de Cristo.
8 ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೆ ಸುವಾರ್ತೆಯನ್ನು ನಾವೇ ಆಗಲಿ ಪರಲೋಕದಿಂದ ಬಂದ ದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ.
8 Porém, ainda que alguém, nós ou um anjo do céu, vos pregasse algum outro evangelho além do que vos pregamos, que seja ele amaldiçoado.
9 ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿ ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.
9 Como já vo-lo dissemos, digo-vos agora novamente, se algum homem pregar-vos algum outro evangelho além do que recebestes, que ele seja amaldiçoado.
10 ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯ ರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.
10 Pois, persuado eu agora a homens ou a Deus? Ou procuro agradar a homens? Se estivesse ainda agradando aos homens, não deveria ser servo de Cristo.
11 ಸಹೋದರರೇ, ನಾನು ಸಾರಿದ ಸುವಾರ್ತೆ ಯಂತೂ ಮನುಷ್ಯನಿಂದ ಬಂದದ್ದಲ್ಲವೆಂದು ನಿಮಗೆ ದೃಢವಾಗಿ ಹೇಳುತ್ತೇನೆ.
11 Mas asseguro-vos, irmãos, que o evangelho que foi pregado por mim, não é segundo o homem.
12 ನಾನು ಅದನ್ನು ಮನುಷ್ಯ ನಿಂದ ಹೊಂದಲಿಲ್ಲ. ಇಲ್ಲವೆ ನನಗೆ ಯಾರೂ ಉಪದೇಶಿಸಲಿಲ್ಲ. ಆದರೆ ಯೇಸು ಕ್ರಿಸ್ತನಿಂದಲೇ ಅದು ನನಗೆ ಪ್ರಕಟವಾಯಿತು.
12 Porque eu nem o recebi de homem, nem mo ensinaram, porém mediante a revelação de Jesus Cristo.
13 ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದಾಗಿತ್ತೆಂದು ನೀವು ಕೇಳಿದ್ದೀರಷ್ಟೆ; ನಾನು ದೇವರ ಸಭೆಯನ್ನು ಮಿತಿವಿಾರಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.
13 Porque ouvistes minhas conversas anteriormente sobre quando eu vivia no judaísmo, como excessivamente eu perseguia a igreja de Deus, e a assolava.
14 ಇದಲ್ಲದೆ ನಾನು ನನ್ನ ಪಿತೃಗಳಿಂದ ಬಂದ ಸಂಪ್ರದಾಯಗಳಲ್ಲಿ ಬಹು ಅಭಿಮಾನವುಳ್ಳವನಾಗಿ ನನ್ನ ಸ್ವಂತ ಜನಾಂಗದವ ರೊಳಗೆ ಸಮಪ್ರಾಯದವರಾದ ಅನೇಕರಿಗಿಂತ ಯೆಹೂದ್ಯ ಮತದಲ್ಲಿ ಹೆಚ್ಚು ಆಸಕ್ತನಾಗಿದ್ದೆನು
14 Superava na religião judaica a muitos dos meus companheiros na minha própria nação, sendo mais excessivamente zeloso das tradições de meus pais.
15 ಆದರೆ ನಾನು ತಾಯಿಯ ಗರ್ಭದಲ್ಲಿದ್ದಾಗಲೇ ದೇವರು ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ನನ್ನನ್ನು ಕರೆದನು;
15 Mas quando aprouve a Deus, que me separou desde o ventre de minha mãe, e me chamou pela sua graça,
16 ಇದಲ್ಲದೆ ದೇವರು ಅನ್ಯಜನರಲ್ಲಿ ತನ್ನ ಮಗನನ್ನು ನಾನು ಸಾರುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವದಕ್ಕೆ ಇಚ್ಛೈಸಿದಾಗಲೇ ನಾನು ಮನುಷ್ಯರನ್ನು ವಿಚಾರಿಸದೆ
16 revelar seu Filho em mim, para que eu o pregasse entre os gentios; imediatamente não consultei carne e sangue,
17 ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರಿಗಿ ದಮಸ್ಕಕ್ಕೆ ಬಂದೆನು.
17 nem subi a Jerusalém para os que eram apóstolos antes de mim; mas parti para a Arábia, e outra vez retornei a Damasco.
18 ಮೂರು ವರುಷಗಳಾದ ಮೇಲೆ ಪೇತ್ರನನ್ನು ನೋಡುವದಕ್ಕಾಗಿ ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿವಸ ಇದ್ದೆನು.
18 Então, depois de três anos, subi a Jerusalém para ver Pedro, e permaneci com ele por quinze dias.
19 ಆದರೆ ಕರ್ತನ ಸಹೋದರನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ.
19 Mas dos outros apóstolos não vi nenhum, exceto Tiago, irmão do Senhor.
20 ಈಗ ನಾನು ನಿಮಗೆ ಬರೆಯುವವುಗಳ ವಿಷಯ ದಲ್ಲಿ ಇಗೋ, ದೇವರ ಮುಂದೆ ನಾನು ಸುಳ್ಳಾಡು ವದಿಲ್ಲ.
20 Ora, acerca das coisas que vos escrevo, digo perante Deus que não minto.
21 ಆಮೇಲೆ ಸಿರಿಯ ಮತ್ತು ಕಿಲಿಕ್ಯ ಪ್ರಾಂತ್ಯ ಗಳಿಗೆ ಬಂದೆನು.
21 Depois eu vim para as regiões da Síria e Cilícia.
22 ಆಗ ಕ್ರಿಸ್ತನಲ್ಲಿರುವ ಯೂದಾಯ ಸಭೆಗಳಿಗೆ ನನ್ನ ಗುರುತಿರಲಿಲ್ಲ.
22 Era, porém, desconhecido de vista às igrejas da Judeia, que estavam em Cristo.
23 ಅವರು--ಪೂರ್ವ ದಲ್ಲಿ ನಮ್ಮನ್ನು ಹಿಂಸೆಪಡಿಸಿದ ಇವನು ತಾನು ಹಾಳು ಮಾಡುತ್ತಿದ್ದ ನಂಬಿಕೆಯನ್ನು ಈಗ ಪ್ರಸಿದ್ಧಿಪಡಿಸುತ್ತಾನೆ ಎಂಬದನ್ನು ಮಾತ್ರ ಅವರು ಕೇಳಿದಾಗ
23 Porém, só ouviram dizer que aquele que nos perseguia no passado prega agora a fé que outrora destruía.
24 ನನ್ನ ದೆಸೆಯಿಂದ ದೇವರನ್ನು ಕೊಂಡಾಡಿದರು.
24 E glorificavam a Deus por mim.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Gálatas 1, comparar traduções ou montar um estudo — tudo direto pelo WhatsApp.