Ezequiel 40

Kannada Bible (GL_KANNADA) vs ACF

Sair da comparação
ACF Almeida Corrigida Fiel
1 ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೇ ದಿನದಲ್ಲಿ ಪಟ್ಟಣವು ಒಡೆದು ಹಾಕಲ್ಪಟ್ಟ ಮೇಲೆ, ಹದಿನಾಲ್ಕನೇ ವರುಷದ ಅದೇ ದಿನದಲ್ಲಿ, ಕರ್ತನ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು.
1 No ano vinte e cinco do nosso cativeiro, no princípio do ano, no décimo dia do mês, catorze anos depois que a cidade foi conquistada, naquele mesmo dia veio sobre mim a mão do SENHOR, e me levou para lá.
2 ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್‌ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
2 Em visões de Deus me levou à terra de Israel, e me pôs sobre um monte muito alto, sobre o qual havia como que um edifício de cidade para o lado sul.
3 ನನ್ನನ್ನು ಅಲ್ಲಿಗೆ ತಂದಾಗ ಇಗೋ, ಅಲ್ಲಿ ಹಿತ್ತಾಳೆಯಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲು ಅಳತೆಯ ಕೋಲು ಇತ್ತು. ಅವನು ಬಾಗಿಲಲ್ಲೇ ನಿಂತಿ ದ್ದನು.
3 E, havendo-me levado ali, eis que um homem cuja aparência era como a do bronze, tendo um cordel de linho na sua mão e uma cana de medir, e estava em pé na porta.
4 ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.
4 E disse-me o homem: Filho do homem, vê com os teus olhos, e ouve com os teus ouvidos, e põe no teu coração tudo quanto eu te fizer ver; porque para to mostrar foste tu aqui trazido; anuncia, pois, à casa de Israel tudo quanto vires.
5 ನೋಡು, ಮನೆಯ ಹೊರಗೆ ಸುತ್ತಮುತ್ತಲೂ ಇರುವ ಗೋಡೆ; ಆ ಮನುಷ್ಯನ ಕೈಯಲ್ಲಿ ಒಂದು ಹಿಡಿ ಉದ್ಧವಾದಂಥ ಆರುಮೊಳ ಉದ್ದ ಅಳತೆ ಕೋಲು ಇತ್ತು; ಹಾಗೆಯೇ ಅವನು ಆ ಕಟ್ಟಡದ ಅಗಲವನ್ನು ಅಳತೆ ಮಾಡಿದಾಗ ಅದರ ಎತ್ತರ ಅಗಲ ಒಂದೇ ಕೋಲಾಗಿತ್ತು.
5 E havia um muro fora da casa, em seu redor, e na mão do homem uma cana de medir, de seis côvados, cada um dos quais tinha um côvado e um palmo; e ele mediu a largura do edifício, uma cana, e a altura, uma cana.
6 ಆಮೇಲೆ ಅವನು ಮೂಡಣಕ್ಕೆ ಅಭಿಮುಖವಾಗಿರುವ ಬಾಗಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲಿನ ಅಗಲವಾಗಿತ್ತು, ಮತ್ತು ಒಂದೇ ಕೋಲು ಅಗಲವಾದ ಹೊಸ್ತಿಲಿನ ಬಾಗಲೂ ಅಲ್ಲಿ ಇತ್ತು.
6 Então veio à porta que olhava para o caminho do oriente, e subiu pelos seus degraus; mediu o umbral da porta, uma cana de largo, e o outro umbral, uma cana de largo.
7 ಪ್ರತಿಯೊಂದು ಚಿಕ್ಕ ಕೋಣೆಯು ಒಂದು ಕೋಲು ಉದ್ದವಾಗಿ ಒಂದು ಕೋಲು ಅಗಲವಾಗಿ ಇತ್ತು; ಕೊಠಡಿಗಳ ನಡುವೆ ಐದು ಮೊಳ ಒಳಬಾಗಲಿನ ಪಡಸಾಲೆಯ ಬಳಿಯಲ್ಲಿ ರುವ ಬಾಗಲಿನ ಹೊಸ್ತಿಲು ಒಂದು ಕೋಲಿನ ಅಳತೆ ಯಷ್ಟಿತ್ತು.
7 E cada câmara tinha uma cana de comprido, e uma cana de largo, e o espaço entre os aposentos era de cinco côvados; e o umbral da porta, ao pé do vestíbulo da porta, por dentro, era de uma cana.
8 ಅವನು ಒಳಬಾಗಲಿನ ದ್ವಾರಾಂಗಣವನ್ನು ಒಂದು ಕೋಲೆಂದು ಅಳೆದನು.
8 Também mediu o vestíbulo da porta, por dentro, uma cana.
9 ಆಮೇಲೆ ಬಾಗಲಿನ ದ್ವಾರಾಂಗಣವನ್ನು ಎಂಟು ಮೊಳವೆಂದೂ ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು; ದ್ವಾರಾಂಗಣದ ಬಾಗಲು ಒಳಗಡೆ ಇತ್ತು.
9 Então mediu o vestíbulo da porta, que tinha oito côvados, e os seus pilares, dois côvados, e este vestíbulo da porta, estava por dentro.
10 ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
10 As câmaras da porta para o lado do oriente eram três de um lado e três do outro; a mesma medida era a dos três; também os pilares de um lado e do outro tinham a mesma medida.
11 ಅವನು ಬಾಗಲಿನ ಪ್ರವೇಶದ ಅಗಲವು ಹತ್ತು ಮೊಳವೆಂದೂ ಬಾಗಲಿನ ಉದ್ದವು ಹದಿಮೂರು ಮೊಳವೆಂದೂ ಅಳೆದನು.
11 Mediu mais a largura da entrada da porta, que era de dez côvados; e o comprimento da porta, treze côvados.
12 ಆ ಚಿಕ್ಕ ಕೊಠಡಿಗಳ ಮುಂದೆ ಇದ್ದ ಜಾಗವು ಸಹ ಆ ಕಡೆ ಈ ಕಡೆ ಒಂದೊಂದು ಮೊಳವಾಗಿತ್ತು; ಈ ಚಿಕ್ಕ ಕೊಠಡಿಗಳು ಆ ಕಡೆಗೂ ಈ ಕಡೆಗೂ ಆರಾರು ಮೊಳಗಳಾಗಿದ್ದವು.
12 E o espaço em frente das câmaras era de um côvado, e de um côvado o espaço do outro lado; e cada câmara tinha seis côvados de um lado e seis côvados do outro.
13 ಆಗ ಅವನು ಬಾಗಲನ್ನು ಒಂದು ಕೊಠಡಿಯ ಮಾಳಿಗೆಯಿಂದ ಇನ್ನೊಂದು ಕೊಠಡಿಯ ಮಾಳಿಗೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಇಪ್ಪತ್ತೈದು ಮೊಳಗಳಾಗಿತ್ತು.
13 Então mediu a porta desde o telhado de uma câmara até ao telhado da outra, vinte e cinco côvados de largo, porta contra porta.
14 ಕಂಬಗಳನ್ನು ಸಹ ಅರವತ್ತು ಮೊಳಗಳ ಹಾಗೆ ಮಾಡಿದನು; ಅದು ಬಾಗಲಿನ ಸುತ್ತಮುತ್ತಲಿರುವ (ಅಂಗಳದ) ಕಂಬದ ವರೆಗೂ ಇತ್ತು.
14 Fez também os pilares, de sessenta côvados, cada pilar, do átrio, em redor da porta.
15 ಪ್ರವೇಶದ ಬಾಗಲಿನ ಮುಂದುಗಡೆ ಯಿಂದ ಒಳ ಬಾಗಲಿನ ದ್ವಾರದ ಅಂಗಳದ ವರೆಗೂ ಐವತ್ತು ಮೊಳವಿತ್ತು.
15 E, desde a face da porta da entrada até à face do vestíbulo da porta interior, havia cinqüenta côvados.
16 ಚಿಕ್ಕ ಕೊಠಡಿಗಳಲ್ಲಿಯೂ ಬಾಗಲಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು; ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು; ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿದ್ದವು.
16 Havia também janelas estreitas nas câmaras, e nos seus pilares, dentro da porta ao redor, e da mesma sorte nos vestíbulos; e as janelas estavam ao redor, na parte de dentro, e nos pilares havia palmeiras.
17 ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ತಂದನು; ಇಗೋ, ಕೊಠಡಿಗಳೂ ಕಲ್ಲು ಹಾಸಿದ ನೆಲವೂ ಅಂಗಳದ ಸುತ್ತಲೂ ಮಾಡಲ್ಪಟ್ಟಿದ್ದವು; ಕಲ್ಲು ಹಾಸಿದ ನೆಲದ ಬದಿಯಲ್ಲಿ ಮೂವತ್ತು ಕೊಠಡಿ ಗಳಿದ್ದವು.
17 E ele me levou ao átrio exterior, e eis que havia nele câmaras, e um pavimento que estava feito no átrio em redor; trinta câmaras havia naquele pavimento.
18 ಬಾಗಲುಗಳ ಪಾರ್ಶ್ವದಲ್ಲಿ ಬಾಗಲುಗಳ ಉದ್ದಕ್ಕೆ ಸರಿಯಾಗಿ ಇದ್ದ ಆ ಕಲ್ಲು ಹಾಸಿದನೆಲವು ಕೆಳಗಿನ ನೆಲಗಟ್ಟಾಗಿತ್ತು.
18 E o pavimento do lado das portas era proporcional ao comprimento das portas; o pavimento estava mais baixo.
19 ಆಗ ಅವನು ಕೆಳಗಿನ ಬಾಗಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯ ವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ನೂರು ಮೊಳವೆಂದು ಅಳೆದನು.
19 E mediu a largura desde a dianteira da porta inferior até a dianteira do átrio interior, por fora, cem côvados, do lado do oriente e do norte.
20 ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರ ಗಿನ ಬಾಗಲಿನ ಉದ್ದವನ್ನೂ ಅಗಲವನ್ನೂ ಅಳೆದನು.
20 E, quanto à porta que olhava para o caminho do norte, no átrio exterior, ele mediu o seu comprimento e a sua largura.
21 ಅದರ ಚಿಕ್ಕ ಕೊಠಡಿಗಳು ಈ ಕಡೆಗೂ ಆ ಕಡೆಗೂ ಮೂರು ಮೂರು ಇದ್ದವು; ಅದರ ಕಂಬಗಳು ಕೈಸಾಲೆ ಗಳು ಮೊದಲನೇ ಭಾಗಲಿನ ಅಳತೆಯ ಹಾಗಿದ್ದವು; ಅದರ ಉದ್ದ ಐವತ್ತು ಮೊಳ ಅಗಲ ಇಪ್ಪತ್ತೈದು ಮೊಳ.
21 E as suas câmaras eram três de um lado, e três do outro, e os seus pilares e os seus arcos eram da medida da primeira porta: cinqüenta côvados era o seu comprimento, e a largura vinte e cinco côvados.
22 ಅದರ ಕಿಟಕಿಗಳೂ ಕೈಸಾಲೆಗಳೂ ಖರ್ಜೂ ರದ ಗಿಡಗಳೂ ಮೂಡಣ ಕಡೆಯ ಬಾಗಲಿನ ಕಡೆಗೆ ಅಭಿಮುಖವಾಗಿದ್ದವು; ಅವರು ಏಳು ಮೆಟ್ಟಲುಗಳನ್ನು ಏರಿದಾಗ, ಅದರ ಕೈಸಾಲೆಗಳು ಅದರ ಮುಂದಿದ್ದವು.
22 E as suas janelas, e os seus arcos, e as suas palmeiras, eram da medida da porta que olhava para o caminho do oriente; e subia-se para ela por sete degraus, e os seus arcos estavam diante dela.
23 ಒಳಗಿನ ಅಂಗಳದ ಬಾಗಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಲಿಗೆ ಎದುರಾಗಿತ್ತು; ಅವನು ಬಾಗಲಿನಿಂದ ಬಾಗಲಿಗೆ ನೂರು ಮೊಳವೆಂದು ಅಳೆ ದನು.
23 E a porta do átrio interior estava defronte da porta do norte bem como da do oriente; e mediu de porta a porta cem côvados.
24 ಆಮೇಲೆ ಅವನು ನನ್ನನ್ನು ದಕ್ಷಿಣದ ಕಡೆಗೆ ತಂದನು; ಇಗೋ, ದಕ್ಷಿಣದ ಕಡೆಗೆ ಬಾಗಲು ಇತ್ತು, ಅವನು ಅದರ ಕಂಬಗಳನ್ನು ಕೈಸಾಲೆಗಳನ್ನು ಈ ಅಳತೆಯ ಪ್ರಕಾರವೇ ಅಳೆದನು.
24 Então ele me levou ao caminho do sul, e eis que havia ali uma porta que olhava para o caminho do sul, e mediu os seus pilares e os seus arcos conforme estas medidas.
25 ಅದರಲ್ಲಿಯೂ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ;
25 E havia também janelas em redor dos seus arcos, como as outras janelas; cinqüenta côvados era o comprimento, e a largura vinte e cinco côvados.
26 ಅದಕ್ಕೆ ಏರುವ ಹಾಗೆ ಏಳು ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರವಿತ್ತು.
26 E de sete degraus eram as suas subidas, e os seus arcos estavam diante delas; e tinha palmeiras, uma de um lado e outra do outro, nos seus pilares.
27 ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು.
27 Também havia uma porta no átrio interior para o caminho do sul; e mediu de porta a porta, para o caminho do sul, cem côvados.
28 ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಲನ್ನು ಅಳೆದನು;
28 Então me levou ao átrio interior pela porta do sul; e mediu a porta do sul, conforme estas medidas.
29 ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ;
29 E as suas câmaras, e os seus pilares, e os seus arcos eram conforme estas medidas; e tinham também janelas ao redor dos seus arcos; o comprimento era de cinqüenta côvados, e a largura de vinte e cinco côvados.
30 ಸುತ್ತಲಿ ರುವ ಕಮಾನುಗಳು ಇಪ್ಪತ್ತೈದು ಮೊಳ ಉದ್ದವಾಗಿ ಐದು ಮೊಳ ಅಗಲವಾಗಿಯೂ ಇದ್ದವು.
30 E havia arcos em redor; o comprimento era de vinte e cinco côvados, e a largura de cinco côvados.
31 ಅದರ ಕಮಾ ನುಗಳು ಹೊರಗಿನ ಅಂಗಳದ ಕಡೆಗಿದ್ದವು; ಅದರ ಕಂಬಗಳಲ್ಲಿ ಖರ್ಜೂರದ ಮರಗಳಿದ್ದವು. ಅದಕ್ಕೆ ಏರುವದಕ್ಕೆ ಎಂಟು ಮೆಟ್ಟಲುಗಳು ಇದ್ದವು.
31 E os seus arcos estavam na direção do átrio exterior, e havia palmeiras nos seus pilares; e de oito degraus eram as suas subidas.
32 ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಬಾಗಲನ್ನು ಅಳೆದನು.
32 Depois me levou ao átrio interior, para o caminho do oriente, e mediu a porta conforme estas medidas;
33 ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ.
33 E também as suas câmaras, e os seus pilares, e os seus arcos, conforme estas medidas; e havia também janelas em redor dos seus arcos; o comprimento de cinqüenta côvados, e a largura de vinte e cinco côvados.
34 ಅದರ ಕಮಾನುಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಖರ್ಜೂರದ ಮರಗಳು ಆ ಕಡೆ ಈ ಕಡೆ ಅಲ್ಲಿನ ಕಂಬಗಳ ಮೇಲೆ ಇದ್ದವು; ಮೇಲೆ ಹೋಗುವದಕ್ಕೆ ಅದಕ್ಕೆ ಎಂಟು ಮೆಟ್ಟಲುಗಳು ಇದ್ದವು.
34 E os seus arcos estavam no átrio de fora; também havia palmeiras nos seus pilares de um e de outro lado; e eram as suas subidas de oito degraus.
35 ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
35 Então me levou à porta do norte, e mediu conforme estas medidas;
36 ಅಲ್ಲಿನ ಚಿಕ್ಕ ಕೋಣೆಗಳು, ಕಂಬಗಳು ಕಮಾನುಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಐವತ್ತು ಮೊಳ, ಅಗಲವು ಇಪ್ಪತ್ತೈದು ಮೊಳ;
36 As suas câmaras, os seus pilares, e os seus arcos; também tinha janelas em redor; o comprimento era de cinqüenta côvados, e a largura de vinte e cinco côvados.
37 ಅದರ ಕಂಬಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿದ್ದವು; ಅದರ ಮೇಲೆ ಹೋಗುವ ಹಾಗೆ ಎಂಟು ಮೆಟ್ಟಲುಗಳು ಇದ್ದವು.
37 E os seus pilares estavam no átrio exterior; também havia palmeiras nos seus pilares de um e de outro lado; e eram as suas subidas de oito degraus.
38 ಕೊಠಡಿಗಳೂ ಅವುಗಳ ಪ್ರವೇಶಗಳೂ ಬಾಗಲುಗಳ ಕಂಬಗಳ ಬಳಿಯಲ್ಲಿ, ದಹನ ಬಲಿಯನ್ನು ತೊಳೆ ಯುವಲ್ಲಿ ಇದ್ದವು;
38 E as suas câmaras e as suas entradas estavam junto aos pilares das portas onde lavavam o holocausto.
39 ಬಾಗಲ ದ್ವಾರಾಂಗಣದಲ್ಲಿ ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿ ಯನ್ನೂ ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.
39 E no vestíbulo da porta havia duas mesas de um lado, e duas mesas do outro, para nelas se matar o holocausto e a oferta pelo pecado e pela culpa.
40 ಹೊರಗಡೆಯಲ್ಲಿ ಉತ್ತರದ ಬಾಗಲಿನ ಪ್ರವೇಶಕ್ಕೆ ಏರಿಹೋಗುವಲ್ಲಿ ಎರಡು ಮೇಜುಗಳೂ ಬಾಗಲಿನ ದ್ವಾರಾಂಗಣದ ಕಡೆಯಲ್ಲಿ ಎರಡು ಮೇಜುಗಳೂ ಇದ್ದವು.
40 Também do lado de fora da subida para a entrada da porta do norte havia duas mesas; e do outro lado, que estava no vestíbulo da porta, havia duas mesas.
41 ಬಾಗಲಿನ ಕೊನೆಯಲ್ಲಿ ಈ ಕಡೆ ನಾಲ್ಕು ಮೇಜುಗಳೂ ಆ ಕಡೆ ನಾಲ್ಕು ಮೇಜುಗಳೂ ಈ ರೀತಿ ಎಂಟು ಮೇಜುಗಳಿದ್ದವು; ಇವುಗಳ ಮೇಲೆ ಅವರು ಯಜ್ಞ ಗಳನ್ನು ಅರ್ಪಿಸುತ್ತಿದ್ದರು.
41 Quatro mesas de um lado, e quatro mesas do outro; aos lados da porta oito mesas, sobre as quais imolavam.
42 ದಹನಬಲಿಗಾಗಿ ಇದ್ದ ಆ ನಾಲ್ಕು ಮೇಜುಗಳು ಕೆತ್ತಿದ ಕಲ್ಲುಗಳಿಂದ ಮಾಡಲ್ಪಟ್ಟಿದ್ದವು; ಅವುಗಳ ಉದ್ದ ಅಗಲ ಒಂದುವರೆ ಮೊಳ, ಎತ್ತರ ಒಂದುವರೆ ಮೊಳ, ಇವುಗಳ ಮೇಲೆ ಅವರು ದಹನಬಲಿಯನ್ನೂ ಅರ್ಪಣೆಯನ್ನೂ ವಧಿ ಸುವ ಸಾಮಾನುಗಳನ್ನೂ ಇಟ್ಟರು.
42 E as quatro mesas para o holocausto eram de pedras lavradas; o comprimento era de um côvado e meio, e a largura de um côvado e meio, e a altura de um côvado; e sobre elas se punham os instrumentos com que imolavam o holocausto e o sacrifício.
43 ಒಳಗೆ ಸುತ್ತಲಾಗಿ ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ಮೇಜುಗಳ ಮೇಲೆ ಅರ್ಪಣೆಯ ಮಾಂಸವಿತ್ತು.
43 E os ganchos de um palmo de comprimento, estavam fixos por dentro em redor, e sobre as mesas estava a carne da oferta.
44 ಒಳಗಿನ ಬಾಗಲಿನ ಹೊರಗೆ ಒಳಗಿನ ಅಂಗಳದಲ್ಲಿ ಹಾಡುವವರ ಕೊಠಡಿಗಳು ಇದ್ದವು; ಒಂದು ಉತ್ತರದ ಬಾಗಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಲಿನ ಕಡೆಗೆ ಉತ್ತರಕ್ಕೆ ಅಭಿಮುಖ ವಾಗಿತ್ತು.
44 E fora da porta interior estavam as câmaras dos cantores, no átrio de dentro, que estava ao lado da porta do norte e olhava para o caminho do sul; uma estava ao lado da porta do oriente, e olhava para o caminho do norte.
45 ಅವನು ನನಗೆ ಹೇಳಿದ್ದೇ ನಂದರೆ--ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು.
45 E ele me disse: Esta câmara que olha para o caminho do sul é para os sacerdotes que têm a guarda da casa.
46 ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಯಜ್ಞವೇದಿಯ ಮೇಲ್ವಿಚಾರಕರಾದ ಯಾಜಕ ರದು. ಚಾದೋಕನ ಕುಮಾರರಾದ ಇವರು ಲೇವಿಯ ಕುಮಾರ ರಲ್ಲಿ ಕರ್ತನ ಸನ್ನಿಧಿಯ ಸೇವಕರಾಗಿದ್ದಾರೆ.
46 Mas a câmara que olha para o caminho do norte é para os sacerdotes que têm a guarda do altar; são estes os filhos de Zadoque, que se chegam ao Senhor, dentre os filhos de Levi, para o servir.
47 ಹೀಗೆ ಅವನು ಅಂಗಳವನ್ನು ಅಳೆದನು, ಅದರ ಉದ್ದ ನೂರು ಮೊಳ, ಅಗಲ ನೂರು ಮೊಳ, ಅದು ಚಚ್ಚೌಕವಾಗಿತ್ತು; ಆ ಯಜ್ಞವೇದಿಯು ಮನೆಯ ಮುಂದೆ ಇತ್ತು.
47 E mediu o átrio; o comprimento de cem côvados e a largura de cem côvados, um quadrado; e o altar estava diante da casa.
48 ಅವನು ನನ್ನನ್ನು ಮನೆಯ ದ್ವಾರಾಂಗಣಕ್ಕೆ ಕರೆದು ಕೊಂಡು ಹೋಗಿ ದ್ವಾರಾಂಗಣದ ಪ್ರತಿಯೊಂದು ಕಂಬವನ್ನು ಅಳೆದನು; ಆ ಕಡೆ ಈ ಕಡೆ ಐದುಮೊಳ ಮತ್ತು ಬಾಗಲಿನ ಅಗಲ ಆ ಕಡೆ ಮೂರುಮೊಳ, ಈ ಕಡೆ ಮೂರುಮೊಳ ಇತ್ತು.
48 Então me levou ao vestíbulo da casa, e mediu a cada pilar do vestíbulo, cinco côvados de um lado, e cinco côvados do outro; e a largura da porta, três côvados de um lado, e três côvados do outro.
49 ದ್ವಾರಾಂಗಣದ ಉದ್ದ ಇಪ್ಪತ್ತು ಮೊಳ ಅಗಲ ಹನ್ನೊಂದು ಮೊಳ ಮತ್ತು ಅವರು ಮೇಲಕ್ಕೆ ಹತ್ತುವ ಮೆಟ್ಟಲುಗಳಿಂದ ನನ್ನನ್ನು ಕರೆತಂದರು. ಪಡಸಾಲೆಯಲ್ಲಿ ಈ ಕಡೆ ಒಂದು, ಆ ಕಡೆ ಒಂದು; ಎರಡು ಸ್ತಂಭಗಳಿದ್ದವು.
49 O comprimento do vestíbulo era de vinte côvados, e a largura de onze côvados, e era por degraus, que se subia a ele; e havia colunas junto aos pilares, uma de um lado e outra do outro.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ezequiel 40, comparar traduções ou montar um estudo — tudo direto pelo WhatsApp.