Ezequiel 39

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ಆದದರಿಂದ, ಮನುಷ್ಯಪುತ್ರನೇ, ನೀನು, ಗೋಗನಿಗೆ ವಿರುದ್ಧವಾಗಿ ಪ್ರವಾದಿಸಿ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು --ಇಗೋ, ಮೇಷಕ್‌ ಮತ್ತು ತೂಬಲಿಗೆ ಮುಖ್ಯ ಪ್ರಭುವಾದ ಓ ಗೋಗನೇ, ನಾನು ನಿನಗೆ ವಿರೋಧ ವಾಗಿದ್ದೇನೆ;
1 — Filho do homem, profetize contra Gogue e diga: Assim diz o Senhor Deus: “Eis que estou contra você, Gogue, príncipe de Rôs, de Meseque e Tubal.
2 ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ, ನಿನ್ನನ್ನು ಆರನೆಯ ಭಾಗವನ್ನಾಗಿ ಮಾಡಿಬಿಡುವೆನು; ಉತ್ತರದ ಭಾಗಗಳಿಂದ ಬರುವಂತೆ ಮಾಡುವೆನು ಮತ್ತು ನಿನ್ನನ್ನು ಇಸ್ರಾಯೇಲ್ಯರ ಪರ್ವತಗಳ ಮೇಲೆ ತರುವೆನು;
2 Eu o farei mudar de direção e o conduzirei. Farei com que você venha dos lados do Norte e o trarei aos montes de Israel.
3 ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲನ್ನು ಹೊಡೆಯುವೆನು ನಿನ್ನ ಬಲಗೈಯಲ್ಲಿರುವ ಬಾಣಗಳು ಉದುರಿ ಬೀಳುವಂತೆ ಮಾಡುವೆನು.
3 Então tirarei o arco da sua mão esquerda e farei cair as flechas que estão em sua mão direita.
4 ನೀನೂ ನಿನ್ನ ಎಲ್ಲಾ ದಳಗಳೂ ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ; ಎಲ್ಲಾ ತರಹದ ಮಾಂಸ ತಿನ್ನುವ ಪಕ್ಷಿಗಳಿಗೂ ಬಯಲಿನ ಮೃಗಗಳಿಗೂ ತಿನ್ನುವಂತೆ ನಾನು ನಿನ್ನನ್ನು ಕೊಡುವೆನು.
4 Nos montes de Israel, você cairá — você, todas as suas tropas e os povos que estão com você. Eu o entregarei a todo tipo de ave de rapina e aos animais selvagens, para que o devorem.
5 ನೀನು ತೆರೆದ ಬಯಲಿನ ಮೇಲೆ ಬೀಳುವಿ; ನಾನೇ ಇದನ್ನು ಹೇಳಿರುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ.
5 Você cairá em campo aberto, porque eu falei, diz o Senhor Deus.
6 ನಾನು ಮಾಗೋಗ್‌ ಮತ್ತು ಅವ ರೊಂದಿಗೆ ದ್ವೀಪಗಳಲ್ಲಿ ನಿರ್ಲಕ್ಷ್ಯವಾಗಿ ವಾಸಿಸುವವರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅವರು ನಾನೇ ಕರ್ತನೆಂದು ತಿಳಿಯುವರು.
6 Porei fogo em Magogue e nos que vivem em segurança nas terras do mar. Então eles saberão que eu sou o Senhor .
7 ಹೀಗೆ ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಪಡಿಸುತ್ತೇನೆ; ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದ ಹಾಗೆ ನಾನು ಮಾಡುತ್ತೇನೆ. ಅನ್ಯಜನರು ಇಸ್ರಾಯೇಲ್ಯರಲ್ಲಿ ಒಬ್ಬ ಪರಿಶುದ್ಧನಾದ ಕರ್ತನು ನಾನೇ ಎಂದು ತಿಳಿಯುವರು.
7 Farei conhecido o meu santo nome no meio do meu povo de Israel e nunca mais deixarei que o meu santo nome seja profanado. Então as nações saberão que eu sou o Senhor , o Santo em Israel.”
8 ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ;
8 — Eis que vem e se cumprirá, diz o Senhor Deus; este é o dia de que tenho falado.
9 ಆ ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಹೋಗಿ, ಆಯುಧಗಳಾದ ಗುರಾಣಿ ಗಳನ್ನು ಖೇಡ್ಯಗಳನ್ನೂ ಬಿಲ್ಲುಗಳನ್ನೂ ಬಾಣಗಳನ್ನೂ ಕೈದೊಣ್ಣೆಗಳನ್ನೂ ಭಲ್ಲೆಗಳನ್ನೂ ಬೆಂಕಿಹಚ್ಚಿ ಸುಡುವರು; ಅವರು ಅವುಗಳನ್ನು ಏಳು ವರ್ಷಗಳು ಬೆಂಕಿಯಿಂದ ಸುಡುವರು.
9 Os moradores das cidades de Israel sairão e farão fogo com as armas, queimando as couraças e os escudos, os arcos e as flechas, os porretes e as lanças; farão fogo com tudo isso durante sete anos.
10 ಅದಕ್ಕಾಗಿ ಅವರು ಬಯಲಿನಿಂದ ಮರ ಗಳನ್ನಾಗಲಿ ತೆಗೆದುಕೊಳ್ಳುವುದಿಲ್ಲ, ಅಥವಾ ಅರಣ್ಯ ದಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವದೂ ಇಲ್ಲ; ಅವರು ಆಯುಧಗಳನ್ನು ಬೆಂಕಿಯಿಂದಲೇ ಸುಡುವರು; ಅವರು ಸೂರೆಯಾದವುಗಳನ್ನು ಸೂರೆಮಾಡುವರು ಮತ್ತು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆ ಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
10 Não terão de trazer lenha do campo, nem a cortarão dos bosques, mas com as armas acenderão fogo. Saquearão aqueles que os saquearam e despojarão aqueles que os despojaram, diz o Senhor Deus.
11 ಆ ದಿನದಲ್ಲಿ ಆಗುವದೇನಂದರೆ -- ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ; ಯಾವದಂದರೆ ಸಮುದ್ರದ ಪೂರ್ವದಲ್ಲಿ ರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ; ಆಗ ಅದು ಹಾದುಹೋಗುವವರನ್ನು ನಿಲ್ಲಿಸುವದು; ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನೂ ಸಮಾಧಿ ಮಾಡುವರು; ಆ ಕಣಿವೆಯನ್ನು ಹಮೋನ ಗೋಗ್‌ ಎಂದು ಕರೆಯುವರು.
11 — Naquele dia, darei a Gogue um lugar de sepultura em Israel, o vale dos Viajantes, a leste do mar, que fará parar os que passarem por esse lugar. Gogue e todo o seu exército serão sepultados ali, e aquele lugar será chamado de Hamom-Gogue.
12 ಇಸ್ರಾಯೇಲನ ಮನೆತನ ದವರು ದೇಶವನ್ನು ಶುದ್ಧಮಾಡುವ ಹಾಗೆ ಅವರನ್ನು ಏಳು ತಿಂಗಳುಗಳ ವರೆಗೂ ಸಮಾಧಿಮಾಡುವರು.
12 A casa de Israel levará sete meses para sepultá-los, a fim de limpar a terra.
13 ಹೌದು ದೇಶದ ಎಲ್ಲಾ ಜನರು ಅವರನ್ನು ಹೂಣಿಡುವರು; ನಾನು ಮಹಿಮೆಯನ್ನು ಹೊಂದುವ ದಿನದಲ್ಲಿ ಅದರ ಪ್ರಖ್ಯಾತಿ ಅವರಿಗಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.
13 Sim, todo o povo da terra os sepultará. E o dia em que eu for glorificado será para eles um dia memorável, diz o Senhor Deus.
14 ದೇಶವನ್ನು ಶುದ್ಧೀಕರಿಸುವ ಹಾಗೆ ಅದರ ಮೇಲೆ ಮಿಕ್ಕವರನ್ನು ಹಾದುಹೋಗುವವರ ಸಹಾಯದಿಂದ ಹೂಣಿಡುವ ದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನೇಮಿಸುವರು ಮತ್ತು ಇವರು ಏಳು ತಿಂಗಳುಗಳಾದ ಮೇಲೆ ಹುಡುಕುವರು.
14 Serão separados homens que, sem cessar, percorrerão a terra para sepultar os que tenham ficado nela, para a limpar; depois de sete meses, iniciarão a busca.
15 ಪ್ರಯಾಣಿ ಕರು ಆ ದೇಶದಲ್ಲಿ ಹಾದುಹೋದ ಮೇಲೆ ಹೂಣಿಡು ವರು. ಹಮೋನ ಗೋಗನ ಕಣಿವೆಯಲ್ಲಿ ಹೂಣಿ ಡುವ ತನಕ ಆ ದೇಶದಲ್ಲಿ ಹಾದುಹೋಗುವವರು ಯಾವದಾದರೊಂದು ಮನುಷ್ಯನ ಎಲುಬನ್ನು ನೋಡಿ ದಾಗ ಅದಕ್ಕೆ ಗುರುತು ಹಾಕುವರು.
15 Ao percorrerem a terra, se um deles encontrar um osso humano, porá ao lado um sinal, até que os coveiros o sepultem no vale do Exército de Gogue.
16 ಹೀಗೆ ಅವರು ಶುದ್ಧೀಕರಿಸಿದ ಆ ನಗರದ ಹೆಸರು ಹಮೋನ.
16 Também haverá uma cidade com o nome de Hamoná. Assim, limparão a terra.
17 ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಬಯಲಿನ ಪ್ರತಿಯೊಂದು ಪ್ರಾಣಿ ಗಳಿಗೂ ಮಾತನಾಡಿ--ಒಟ್ಟಾಗಿ ಬನ್ನಿರಿ. ನಾನು ನಿಮ ಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ; ಇದು ಇಸ್ರಾಯೇಲ್‌ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ನೀವು ಮಾಂಸವನ್ನು ತಿಂದು ರಕ್ತವನ್ನು ಕುಡಿಯ ಬಹುದು.
17 — Filho do homem, assim diz o Senhor Deus: Diga às aves de toda espécie e a todos os animais selvagens: “Reúnam-se e venham! Venham de toda parte para o sacrifício que eu estou oferecendo por vocês, um grande sacrifício nos montes de Israel. Vocês comerão carne e beberão sangue.
18 ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ಪ್ರಭುಗಳ ಟಗರು ಕುರಿಮರಿ ಹೋತ ಮತ್ತು ಹೋರಿಗಳ ಬಾಷಾನಿನ ಕೊಬ್ಬಿದ ಪಶು ಇವೆಲ್ಲವುಗಳ ರಕ್ತವನ್ನು ಕುಡಿಯುವಿರಿ.
18 Comerão a carne dos poderosos e beberão o sangue dos príncipes da terra — os carneiros e cordeiros, os bodes e novilhos, todos engordados em Basã.
19 ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವ ವರೆಗೂ ಕೊಬ್ಬನ್ನು ತಿಂದು ಮತ್ತೇರುವ ವರೆಗೂ ರಕ್ತವನ್ನು ಕುಡಿಯಬಹುದು.
19 Vocês comerão gordura até se fartarem e beberão sangue até ficarem embriagados, no sacrifício que oferecerei por vocês.
20 ಹೀಗೆ ನೀವು ನನ್ನ ಮೇಜಿನಲ್ಲಿ ಕುದುರೆಗಳಿಂದಲೂ ರಥಗಳಿಂದಲೂ ಶೂರರಿಂದಲೂ ಯುದ್ಧದ ಎಲ್ಲಾ ಮನುಷ್ಯರಿಂದಲೂ ತುಂಬುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
20 À minha mesa, vocês se fartarão de cavalos e de cavaleiros, de valentes e de todos os homens de guerra”, diz o Senhor Deus.
21 ನಾನು ನನ್ನ ಮಹಿಮೆಯನ್ನು ಅನ್ಯಜನಾಂಗಗಳಲ್ಲಿ ಸ್ಥಾಪಿಸುತ್ತೇನೆ; ಎಲ್ಲಾ ಅನ್ಯಜನಾಂಗಗಳು ನಾನು ನಡೆಸಿದ ನನ್ನ ನ್ಯಾಯತೀರ್ಪನ್ನು ಮತ್ತು ಅವರ ಮೇಲೆ ಇರಿಸಿದ ನನ್ನ ಕೈಯನ್ನು ನೋಡುವವು.
21 — Manifestarei a minha glória entre as nações, e todas as nações verão o meu juízo, que eu tiver executado, e a minha mão, que eu tiver posto sobre elas.
22 ಹೀಗೆ ಇಸ್ರಾಯೇಲನ ಮನೆತನದವರು ಕರ್ತನಾದ ನಾನೇ ಅಂದಿನಿಂದಲೂ ಇನ್ನು ಮುಂದೆಯೂ ಅವರ ದೇವ ರಾಗಿರುವೆನೆಂದು ತಿಳಿಯುವರು.
22 Desse dia em diante, a casa de Israel saberá que eu sou o Senhor , seu Deus.
23 ಇಸ್ರಾಯೇಲನ ಮನೆತನದವರು ತಮ್ಮ ಅಕ್ರಮಗಳ ನಿಮಿತ್ತವಾಗಿ ಸೆರೆಗೆ ಹೋದರೆಂದು ಅನ್ಯಜನಾಂಗಗಳು ತಿಳಿಯುವವು; ಅವರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದ ನಾನು ಅವರಿಗೆ ನನ್ನ ಮುಖವನ್ನು ಮರೆಮಾಡಿಕೊಂಡು ಅವರನ್ನು ಅವರ ವೈರಿಗಳ ಕೈಗೆ ಒಪ್ಪಿಸಿದೆನು. ಹೀಗೆ ಅವರೆಲ್ಲರೂ ಕತ್ತಿಯಿಂದ ಹತರಾದರು.
23 As nações saberão que a casa de Israel foi levada para o exílio por causa da sua iniquidade, porque foram infiéis a mim. Assim, escondi deles o meu rosto e os entreguei nas mãos dos seus adversários, e todos eles caíram à espada.
24 ಅವರ ಅಶುದ್ಧತ್ವದ ಪ್ರಕಾರವೂ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
24 Eu os tratei de acordo com a sua impureza e as suas transgressões, e escondi deles o meu rosto.
25 ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈಗ ನಾನು ಯಾಕೋಬಿನ ಸೆರೆಯನ್ನು ತಿರಿಗಿ ತರುತ್ತೇನೆ, ಸಂಪೂರ್ಣ ಇಸ್ರಾಯೇಲಿನ ಮನೆತನದ ವರ ಮೇಲೆ ಕರುಣೆಯಿಡುತ್ತೆನೆ; ನನ್ನ ಪರಿಶುದ್ಧ ಹೆಸರಿಗಾಗಿ ಸ್ವಗೌರವುಳ್ಳವನಾಗಿರುವೆನು.
25 — Portanto, assim diz o Senhor Deus: Agora, restaurarei a sorte de Jacó e me compadecerei de toda a casa de Israel; terei zelo pelo meu santo nome.
26 ಅವರು ಹೆದರಿಸುವವರಿಲ್ಲದೆ ಕ್ಷೇಮವಾಗಿ ತಮ್ಮ ದೇಶದಲ್ಲಿ ವಾಸಮಾಡಿದಾಗ ಉಂಟಾದ ತಮ್ಮ ನಾಚಿಕೆಯನ್ನೂ ನನಗೆ ವಿರೋಧವಾಗಿ ಅತಿಕ್ರಮಿಸಿದ ಎಲ್ಲಾ ಅತಿಕ್ರಮ ಗಳನ್ನು ಹೊತ್ತ ತರುವಾಯ,
26 Quando eles habitarem seguros na sua terra, sem haver quem os atemorize, esquecerão a sua vergonha e toda a infidelidade com que se rebelaram contra mim.
27 ನಾನು ಅವರನ್ನು ಜನಗಳೊಳಗಿಂದ ಮತ್ತೆ ತಂದ ಮೇಲೆ ಅವರ ಶತ್ರುಗಳ ದೇಶದೊಳಗಿಂದ ಅವರನ್ನು ಕೂಡಿಸಿ ಅನೇಕ ಜನಾಂಗ ಗಳ ಮುಂದೆ ಅವರಲ್ಲಿ ಪರಿಶುದ್ಧನಾಗುವೆನು;
27 Quando eu tornar a trazê-los do meio dos povos, e os houver ajuntado das terras de seus inimigos, revelarei neles a minha santidade diante de muitas nações.
28 ಆಮೇಲೆ ಅವರನ್ನು ಅನ್ಯಜನಾಂಗಗಳೊಳಗಿಂದ ಸೆರೆಗೈದವನೂ ಇನ್ನು ಮೇಲೆ ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ದೇಶಕ್ಕೆ ಕೂಡಿಸಿದವನು ನಾನೇ ಅವರ ದೇವರಾದ ಕರ್ತನೆಂದು ಅವರು ತಿಳಿಯುವರು.
28 Saberão que eu sou o Senhor , seu Deus, quando virem que eu os enviei para o cativeiro entre as nações, e os tornei a ajuntar para voltarem à sua terra, e que não deixarei que nenhum deles fique no exílio.
29 ಇಲ್ಲವೇ ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವದಿಲ್ಲ; ನಾನು ನನ್ನ ಆತ್ಮವನ್ನು ಇಸ್ರಾ ಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
29 Nunca mais esconderei deles o meu rosto, pois derramarei o meu Espírito sobre a casa de Israel, diz o Senhor Deus.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ezequiel 39, comparar traduções ou montar um estudo — tudo direto pelo WhatsApp.