Ezequiel 17
Kannada Bible (GL_KANNADA) vs ARIB
ARIB Almeida Revisada Imprensa Bíblica
1 ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ--
1 Ainda veio a mim a palavra do Senhor, dizendo:
2 ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನು ಒಗಟಾಗಿ ಹೇಳು.
2 Filho do homem, propõe um enigma, e profere uma alegoria à casa de Israel;
3 ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು.
3 e dize: Assim diz o Senhor Deus: uma grande águia, de grandes asas e de plumagem comprida, cheia de penas de várias cores, veio ao Líbano e tomou o mais alto ramo dum cedro;
4 ಅದರ ಚಿಗುರುಗಳ ಕೊನೆಯನ್ನು ಕಿತ್ತು ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು.
4 arrancou a ponta mais alta dos seus, raminhos, e a levou a uma terra de comércio; e a pôs numa cidade de comerciantes.
5 ಅದು ದೇಶದ ಬೀಜವನ್ನೂ ಸಹ ತೆಗೆದು ಕೊಂಡು ಹೋಗಿ ಫಲವುಳ್ಳ ಹೊಲದಲ್ಲಿ ಇರಿಸಿತು; ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿಸಿತು.
5 Também tomou da semente da terra, e a lançou num solo frutífero; pô-la junto a muitas águas; e plantou-a como salgueiro.
6 ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷೇ ಗಿಡವಾಯಿತು; ಅದರ ಬಳ್ಳಿಗಳು ಅದರ ಕಡೆಗೆ ತಿರುಗಿ ಕೊಂಡವು, ಅದರ ಬೇರುಗಳು ಅದರ ಕೆಳಗಿದ್ದವು; ಹೀಗೆ ಅದು ದ್ರಾಕ್ಷೇ ಗಿಡವಾಯಿತು, ಕೊಂಬೆಗಳು ಒಡೆದು ಬಳ್ಳಿಗಳು ಹಬ್ಬಿದವು.
6 E brotou, e tornou-se numa videira larga, de pouca altura, virando-se para ela os seus ramos, e as suas raízes estavam debaixo dela. Tornou-se numa videira, e produzia sarmentos, e lançava renovos.
7 ದೊಡ್ಡ ರೆಕ್ಕೆಗಳೂ ಬಹಳ ಗರಿಗಳೂ ಇದ್ದ ಇನ್ನೊಂದು ದೊಡ್ಡ ಹದ್ದು ಇತ್ತು; ಆಗ ಇಗೋ, ಆ ದ್ರಾಕ್ಷೇ ಗಿಡವು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ ತನ್ನ ರೆಂಬೆಗಳನ್ನು ಚಾಚಿ ಅದರ ಮೂಲಕ ನೀರನ್ನು ಹಾಯಿಸುತ್ತಿತ್ತು.
7 Houve ainda outra grande águia, de grandes asas, e cheia de penas; e eis que também esta videira lançou para ela as suas raízes, e estendeu para ela os seus ramos desde as auréolas em que estava plantada, para que ela a regasse.
8 ಅದು ಕೊಂಬೆ ಗಳನ್ನು ಬೆಳೆಸಿ ಫಲಫಲಿಸುವ ಹಾಗೆಯೂ ಒಳ್ಳೇ ದ್ರಾಕ್ಷೇಗಿಡ ಆಗುವ ಹಾಗೆಯೂ ಒಳ್ಳೇ ಭೂಮಿಯಲ್ಲಿ ಹೆಚ್ಚು ನೀರಿನ ಬಳಿಯಲ್ಲಿ ಬೆಳೆಸಲ್ಪಟ್ಟಿತು.
8 Numa boa terra, junto a muitas águas, estava ela plantada, para produzir ramos, e para dar fruto, a fim de que fosse videira excelente.
9 ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದು ಸಮೃದ್ಧಿಯಾಗಿ ರುವದೋ? ಆ ಹದ್ದು ಅದರ ಬೇರುಗಳನ್ನು ಕಿತ್ತು ಅದರ ಹಣ್ಣುಗಳನ್ನು ತೆಗೆದುಬಿಟ್ಟರೆ ಅದು ಒಣಗುವದಿಲ್ಲವೇ? ಅದರ ಮೊಳಕೆಯ ಎಲೆಗಳೆಲ್ಲಾ ಒಣಗಿಹೋದಾಗ ಅದನ್ನು ಬೇರು ಸಹಿತ ಕೀಳಬೇಕಾದರೆ ಮಹಾಬಲವಾಗಲೀ ಅಥವಾ ಬಹಳ ಜನರಾಗಲೀ ಇರಬೇಕು.
9 Dize: Assim diz o Senhor Deus: Acaso prosperará ela? Não lhe arrancará a águia as raízes, e não lhe cortará o fruto, para que se seque? para que se sequem todas as folhas de seus renovos? Não será necessário nem braço forte, nem muita gente, para arrancá-la pelas raízes.
10 ಹೌದು, ಇಗೋ, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವದೇ? ಅದಕ್ಕೆ ಮೂಡಣಗಾಳಿ ತಗಲುವಾಗ ಅದು ಸಂಪೂರ್ಣ ವಾಗಿ ಒಣಗುವದಿಲ್ಲವೇ? ಅದು ಮೊಳೆತ ಪಾತಿಗಳ ಲ್ಲಿಯೇ ಒಣಗಿಹೋಗುವದು.
10 Mas, estando plantada, prosperará? Não se secará de todo, quando a tocar o vento oriental? Nas auréolas onde cresceu se secará.
11 ಇದಲ್ಲದೆ ಕರ್ತನ ವಾಕ್ಯವು ಉಂಟಾಗಿ ನನಗೆ ಹೇಳಿದ್ದೇನಂದರೆ--
11 Então veio a mim a palavra do Senhor, dizendo:
12 ಇದರ ಅಭಿಪ್ರಾಯ ನಿಮಗೆ ತಿಳಿಯುವದಿಲ್ಲವೋ? ಅವರಿಗೆ ಎದುರು ಬೀಳುವ ಮನೆಯವರಿಗೆ ಹೀಗೆ ಹೇಳು--ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸ ನನ್ನೂ ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಬಾಬೆಲಿಗೆ ಒಯ್ದಿದ್ದಾನೆ.
12 Dize, pois, à casa rebelde: Não sabeis o que significam estas coisas? Dize-lhes: Eis que veio o rei de Babilônia a Jerusalém, e tomou o seu rei e os seus príncipes, e os levou consigo para Babilônia;
13 ಅರಸನ ಸಂತಾನ ದವರನ್ನು ಕರೆದುಕೊಂಡು ಅವನ ಸಂಗಡ ಒಡಂಬಡಿಕೆ ಮಾಡಿ ಅವನಿಂದ ಪ್ರಮಾಣಮಾಡಿಸಿ ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.
13 e tomou um da estirpe real, e fez pacto com ele, e o juramentou. E aos poderosos da terra removeu,
14 ಆ ರಾಜ್ಯವು ತಗ್ಗಾಗಿ ಮೇಲೇಳದ ಹಾಗಿದ್ದರೂ ಅವನು ಒಡಂಬಡಿಕೆಯನ್ನು ಕೈಕೊಳ್ಳುವದರಿಂದ ಅದು ನಿಲ್ಲುವದು.
14 para que o reino ficasse humilhado, e não se levantasse, embora, guardando o seu pacto, pudesse subsistir.
15 ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿ ಯಾಗುವನೋ? ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ? ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ?
15 Mas ele se rebelou contra o rei de Babilônia, enviando os seus embaixadores ao Egito, para que se lhe mandassem cavalos e muita gente. Prosperará ou escapará aquele que faz tais coisas? Quebrará o pacto e escapará?
16 ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ.
16 Como eu vivo, diz o Senhor Deus, no lugar em que habita o rei que o fez reinar, cujo juramento desprezou, e cujo pacto quebrou, sim, com ele no meio de Babilônia certamente morrerá.
17 ಇಲ್ಲವೆ ಫರೋಹನೂ ಅವನ ಮಹಾ ಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹಳ ಜನ ರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಕೋಟೆಗಳನ್ನೂ ಕಟ್ಟುವಾಗಲೂ ಅವನಿಗೆ ಯುದ್ಧದಲ್ಲಿ ಸಹಾಯ ಮಾಡುವದಿಲ್ಲ.
17 Não lhe prestará Faraó ajuda em guerra, nem com seu grande exército, nem com sua companhia numerosa, quando se levantarem tranqueiras e se edificarem baluartes, para destruir muitas vidas.
18 ಅವನು ಪ್ರಮಾಣವನ್ನು ತಿರಸ್ಕರಿಸಿ ಕೈಕೊಟ್ಟಾಗ್ಯೂ; ಇಗೋ, ಒಡಂಬಡಿಕೆಯನ್ನು ವಿಾರಿ ಇವುಗಳನ್ನೆಲ್ಲಾ ಮಾಡಿದ್ದ ರಿಂದ ತಪ್ಪಿಸಿಕೊಳ್ಳುವದಿಲ್ಲ.
18 Porquanto desprezou o juramento e quebrou o pacto, porquanto deu a sua mão, e ainda fez todas estas coisas, ele não escapará.
19 ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ ಅವನು ವಿಾರಿದ ಒಡಂಬಡಿಕೆಯನ್ನೂ ನನ್ನ ಜೀವ ದಾಣೆ ನಿಶ್ಚಯವಾಗಿ ಅವನ ತಲೆಯ ಮೇಲೆಯೇ ಮುಯ್ಯಿ ತೀರಿಸುವೆನು.
19 Portanto, assim diz o Senhor Deus: Vivo eu, que o meu juramento que desprezou, e o meu pacto que violou, isso farei recair sobre a sua cabeça.
20 ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ; ಆಗ ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು; ನಾನು ಅವನನ್ನು ಬಾಬೆಲಿಗೆ ಒಯ್ದು ಅವನು ನನಗೆ ವಿರೋಧವಾಗಿ ಮಾಡಿರುವ ಅಪರಾಧದ ವಿಷಯದಲ್ಲಿ ನಾನು ಅವರೊಂದಿಗೆ ವಾದಿಸುವೆನು.
20 E estenderei sobre ele a minha rede, e ficará preso no meu laço; e o levarei a Babilônia, e ali entrarei em juízo com ele por causa da traição que cometeu contra mim.
21 ಅವನ ಸೈನ್ಯಗಳೆಲ್ಲಾ ಚದರಿಸಲ್ಪಟ್ಟು ಓಡಿಹೋಗಿ ಅವನ ಸಂಗಡ ಕತ್ತಿಯಿಂದ ಬೀಳುವರು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಸ ಲ್ಪಡುವರು; ಆಗ ಕರ್ತನಾದ ನಾನೇ ಅದನ್ನು ಹೇಳಿ ದೆನೆಂದು ನಿಮಗೆ ತಿಳಿಯುವದು.
21 E a fina flor de todas as suas tropas cairá à espada, e os que restarem serão espalhados a todos os ventos; e sabereis que eu, o Senhor, o disse.
22 ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದ ಲ್ಲದೆ ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು; ಎಳೆಯದಾದ ಒಂದನ್ನು ಕತ್ತರಿಸಿ ಎತ್ತರವಾದ ಪರ್ವತದ ಮೇಲೆ ನಾಟುವೆನು.
22 Assim diz o Senhor Deus: Também eu tomarei um broto do topo do cedro, e o plantarei; do principal dos seus renovos cortarei o mais tenro, e o plantarei sobre um monte alto e sublime.
23 ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು; ಅದರ ಕೊಂಬೆಗಳು ಒಡೆದು ಫಲಫಲಿಸುವದು; ಘನವುಳ್ಳ ದೇವದಾರು ಆಗುವದು; ಪ್ರತಿಯೊಂದು ಪುಕ್ಕಗಳುಳ್ಳ ಪಕ್ಷಿಗಳು ಅದರ ಕೊಂಬೆಗಳ ನೆರಳಿನ ಕೆಳಗೆ ವಾಸ ಮಾಡುವವು; ಅದರಡಿಯಲ್ಲಿ ವಾಸಿಸುವವು.
23 No monte alto de Israel o plantarei; e produzirá ramos, e dará fruto, e se fará um cedro excelente. Habitarão debaixo dele aves de toda a sorte; à sombra dos seus ramos habitarão.
24 ಕರ್ತ ನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾ ದದ್ದನ್ನು ಎತ್ತರಪಡಿಸಿ (ಬೆಳಸಿ) ಹಸುರಾಗಿರುವದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರ ಣ್ಯದ ಸಕಲ ವೃಕ್ಷಗಳು ತಿಳಿಯುವವೆಂದು ಕರ್ತನಾದ ನಾನೇ ಮಾತನಾಡಿ ಅದನ್ನು ಮಾಡಿದ್ದೇನೆ.
24 Assim saberão todas as árvores do campo que eu, o Senhor, abati a árvore alta, elevei a árvore baixa, sequei a árvore verde, e fiz reverdecer a árvore seca; eu, e Senhor, o disse, e o farei.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Ezequiel 17, comparar traduções ou montar um estudo — tudo direto pelo WhatsApp.