Êxodo 36

Kannada Bible (GL_KANNADA) vs NVI

Sair da comparação
NVI Nova Versão Internacional
1 ತರುವಾಯ ಬೆಚಲೇಲನೂ ಒಹೋಲಿ ಯಾಬನೂ ಪರಿಶುದ್ಧ ಸ್ಥಳದ ಸೇವೆ ಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿಯುವ ಹಾಗೆ ಕರ್ತನಿಂದ ಜ್ಞಾನ ವಿವೇಕಗಳನ್ನು ಹೊಂದಿದ ಹೃದಯದವರೆಲ್ಲರೂ ಕರ್ತನು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡಿ ದರು. ತರುವಾಯ ಪರಿಶುದ್ಧ ಸ್ಥಳದ ಸೇವೆಗೋಸ್ಕರ ಪ್ರತಿ ವಿಧವಾದ ಕೆಲಸ ಮಾಡುವದನ್ನು ತಿಳುಕೊಳ್ಳುವ ದಕ್ಕಾಗಿ ಆತನು ಜ್ಞಾನ ವಿವೇಕಗಳನ್ನು ಅನುಗ್ರಹಿಸಿದ ಬೆಚಲೇಲನೂ ಒಹೋಲಿಯಾಬನೂ ಜ್ಞಾನ ವಿವೇಕ ವಿದ್ದವರೆಲ್ಲರೂ ಎಲ್ಲವನ್ನೂ ಕರ್ತನು ಆಜ್ಞಾಪಿಸಿದಂತೆ ಮಾಡಿದರು.
1 "Assim farão Bezalel, Aoliabe e todos os homens capazes, a quem o Senhor concedeu destreza e habilidade para fazerem toda a obra de construção do santuário, realizarão a obra como o Senhor ordenou. "
2 ಬೆಚಲೇಲನನ್ನೂ ಒಹೋಲಿಯಾಬನನ್ನೂ ಕರ್ತನು ಯಾರ ಹೃದಯಗಳಲ್ಲಿ ಜ್ಞಾನವಿಟ್ಟನೋ ಆ ಜ್ಞಾನ ಹೃದಯವಿದ್ದ ಪ್ರತಿಯೊಬ್ಬನನ್ನೂ ಆ ಕೆಲಸ ಮಾಡುವದಕ್ಕೆ ಹೃದಯವು ಪ್ರೇರೇಪಿಸಲ್ಪಟ್ಟ ಪ್ರತಿ ಯೊಬ್ಬನನ್ನೂ ಮೋಶೆಯು ಕರೆದನು.
2 Então Moisés chamou Bezalel e Aoliabe e todos os homens capazes a quem o Senhor dera habilidade e que estavam dispostos a vir realizar a obra.
3 ಆಗ ಇಸ್ರಾ ಯೇಲ್‌ ಮಕ್ಕಳು ಪರಿಶುದ್ಧ ಆಲಯದ ಸೇವೆಯ ಕೆಲಸಕ್ಕೋಸ್ಕರವೂ ಅದನ್ನು ಮಾಡಿಸುವದಕ್ಕೋಸ್ಕ ರವೂ ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ಅವರು ತಕ್ಕೊಂಡರು. ಇದಲ್ಲದೆ ಅವರು ಪ್ರತಿ ಉದಯ ದಲ್ಲಿ ಅವನಿಗೆ ಇನ್ನೂ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.
3 Receberam de Moisés todas as ofertas que os israelitas tinham trazido para a obra de construção do santuário. E o povo continuava a trazer voluntariamente ofertas, manhã após manhã.
4 ಆಗ ಪರಿಶುದ್ಧ ಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಾವು ಮಾಡುತ್ತಿದ್ದ ಕೆಲಸದಿಂದ ಬಂದು
4 Por isso, todos os artesãos habilidosos que trabalhavam no santuário interromperam o trabalho
5 ಮೋಶೆಯ ಸಂಗಡ ಮಾತನಾಡಿ ಕರ್ತನು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವದಕ್ಕಿಂತಲೂ ಹೆಚ್ಚಾದದ್ದನ್ನು ಈ ಜನರು ತರುತ್ತಿದ್ದಾರೆ ಎಂದು ಹೇಳಿದರು.
5 e disseram a Moisés: "O povo está trazendo mais do que o suficiente para realizar a obra que o Senhor ordenou".
6 ಆಗ ಮೋಶೆಯು ಇನ್ನು ಮೇಲೆ ಪರಿಶುದ್ಧ ಸ್ಥಳದ ಕಾಣಿಕೆ ಗೋಸ್ಕರ ಯಾವ ಗಂಡಸಾಗಲಿ ಹೆಂಗಸಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸ ಬೇಕೆಂಬದಾಗಿ ಆಜ್ಞಾಪಿಸಬೇಕು ಎಂದು ಹೇಳಿದನು. ಹೀಗೆ ಜನರು ತರುವದನ್ನು ನಿಲ್ಲಿಸಿಬಿಟ್ಟರು.
6 Então Moisés ordenou que fosse feita esta proclamação em todo o acampamento: "Nenhum homem ou mulher deverá fazer mais nada para ser oferecido ao santuário". Assim, o povo foi impedido de trazer mais,
7 ಅವರಿಗೆ ಎಲ್ಲಾ ಕೆಲಸವನ್ನು ಮಾಡುವದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಾನು ಇತ್ತು.
7 pois o que já haviam recebido era mais que suficiente para realizar toda a obra.
8 ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು.
8 Todos os homens capazes dentre os trabalhadores fizeram o tabernáculo com dez cortinas internas de linho fino trançado e de fios de tecido azul, roxo e vermelho, com os querubins bordados sobre eles.
9 ಒಂದು ತೆರೆಯು ಇಪ್ಪತ್ತೆಂಟು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ತೆರೆಗಳೆಲ್ಲಾ ಒಂದೇ ಅಳತೆಯವುಗಳಾಗಿದ್ದವು.
9 Todas as cortinas internas tinham o mesmo tamanho: doze metros e sessenta centímetros de comprimento por um metro e oitenta centímetros de largura.
10 ಅವನು ಐದು ತೆರೆಗಳನ್ನು ಒಂದಕ್ಕೊಂದು ಜೋಡಿ ಸಿದನು, ಬೇರೆ ಐದು ತೆರೆಗಳನ್ನೂ ಒಂದಕ್ಕೊಂದು ಜೋಡಿಸಿದನು.
10 Prendeu cinco cortinas internas, e fez o mesmo com as outras cinco.
11 ಈ ಎರಡು ಜೋಡನೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು;
11 Em seguida fez laçadas de tecido azul ao longo da borda da última cortina interna do primeiro conjunto de cortinas internas, fazendo o mesmo com o segundo conjunto.
12 ಒಂದು ತೆರೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ ಇನ್ನೊಂದು ತೆರೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದನು. ಆ ಕುಣಿಕೆಗಳು ಒಂದು ತೆರೆಯನ್ನು ಮತ್ತೊಂದು ತೆರೆಯು ಹಿಡಿದುಕೊಳ್ಳುವಂತೆ ಮಾಡಿದನು.
12 Fez também cinqüenta laçadas na primeira cortina interna e cinqüenta laçadas na última cortina interna do segundo conjunto; as laçadas estavam opostas umas às outras.
13 ಅವನು ಚಿನ್ನದ ಐವತ್ತು ಕೊಂಡಿಗಳನ್ನು ಮಾಡಿ ಆ ಕೊಂಡಿಗಳಿಂದ ತೆರೆಗಳನ್ನು ಒಂದ ಕ್ಕೊಂದಾಗಿ ಜೋಡಿಸಿದನು. ಹೀಗೆ ಅದು ಒಂದೇ ಗುಡಾರವಾಯಿತು.
13 Depois fez cinqüenta ganchos de ouro e com eles prendeu um conjunto de cortinas internas ao outro, para que o tabernáculo formasse um todo.
14 ಈ ಗುಡಾರದ ಮೇಲಿನ ಡೇರೆಗೋಸ್ಕರ ಅವನು ಮೇಕೆಯ ಕೂದಲಿನ ಹನ್ನೊಂದು ತೆರೆಗಳನ್ನು ಮಾಡಿ ಸಿದನು.
14 Com o total de onze cortinas internas de pêlos de cabra fez uma tenda para cobrir o tabernáculo.
15 ಒಂದು ತೆರೆಯು ಮೂವತ್ತು ಮೊಳ ಉದ್ದ ವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. ಹನ್ನೊಂದು ತೆರೆಗಳೂ ಒಂದೇ ಅಳತೆಯಾಗಿದ್ದವು.
15 As onze cortinas internas tinham a mesma medida: treze metros e meio de comprimento por um metro e oitenta centímetros de largura.
16 ಅವನು ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿದನು.
16 Prendeu cinco cortinas internas num conjunto e as outras seis noutro conjunto.
17 ಅವನು ತೆರೆಯ ಕೊನೇ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಎರಡನೆಯ ತೆರೆಯನ್ನು ಜೋಡಿಸುವ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಿದನು.
17 Depois fez cinqüenta laçadas em volta da borda da última cortina interna de um dos conjuntos e também na borda da última cortina interna do outro conjunto.
18 ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡ ಣೆಗೆ ಅವನು ಐವತ್ತು ಹಿತ್ತಾಳೆಯ ಕೊಂಡಿಗಳನ್ನು ಮಾಡಿದನು.
18 Fez também cinqüenta ganchos de bronze para unir a tenda, formando um todo.
19 ಅವನು ಆ ಡೇರೆಗಾಗಿ ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದ ಹೊದಿಕೆಯನ್ನು ಮಾಡಿದನು. ಅದರ ಮೇಲೆ ಕಡಲ ಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದನು.
19 Em seguida fez para a tenda uma cobertura de pele de carneiro tingida de vermelho, e por cima desta uma cobertura de couro.
20 ಗುಡಾರವು ನಿಂತುಕೊಂಡಿರುವದಕ್ಕೆ ಅವನು ಜಾಲೀ ಮರದಿಂದ ಹಲಗೆಗಳನ್ನು ಮಾಡಿದನು.
20 Fez ainda armações verticais de madeira de acácia para o tabernáculo.
21 ಒಂದು ಹಲಗೆಯ ಉದ್ದಳತೆ ಹತ್ತು ಮೊಳದ್ದಾಗಿಯೂಆ ಹಲಗೆಯ ಅಗಲಳತೆ ಒಂದುವರೆ ಮೊಳದ್ದಾಗಿಯೂ ಇತ್ತು.
21 Cada armação tinha quatro metros e meio de comprimento por setenta centímetros de largura,
22 ಒಂದು ಹಲಗೆಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದನು; ಅದೇ ಪ್ರಕಾರ ಅವನು ಗುಡಾರದ ಎಲ್ಲಾ ಹಲಗೆಗಳಿಗೆ ಮಾಡಿದನು.
22 com dois encaixes paralelos um ao outro. E fez todas as armações do tabernáculo dessa madeira.
23 ಅವನು ಗುಡಾರಕ್ಕೋಸ್ಕರ ಹಲಗೆ ಗಳನ್ನು ಮಾಡಿದನು. ದಕ್ಷಿಣ ದಿಕ್ಕಿಗೆ ದಕ್ಷಿಣಭಾಗಕ್ಕೆ ಇಪ್ಪತ್ತು ಹಲಗೆಗಳನ್ನು ಮಾಡಿದನು.
23 Fez também vinte armações para o lado sul do tabernáculo
24 ಅವನು ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು; ಒಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ ಇನ್ನೊಂದು ಹಲಗೆಯ ಕೆಳಗೆ ಇರುವ ಎರಡು ಕೈಗಳಿಗೋಸ್ಕರ ಎರಡು ಕಾಲುಗಳನ್ನೂ
24 e quarenta bases de prata para serem colocadas debaixo delas; duas bases para cada armação, uma debaixo de cada encaixe.
25 ಗುಡಾರದ ಉತ್ತರ ದಿಕ್ಕಿನ ಮೂಲೆಯ ಇನ್ನೊಂದು ಭಾಗಕ್ಕೆ ಅವನು ಇಪ್ಪತ್ತು ಹಲಗೆಗಳನ್ನೂ ಮಾಡಿದನು.
25 Para o outro lado, o lado norte do tabernáculo, fez vinte armações
26 ಒಂದೊಂದು ಹಲಗೆಯ ಕೆಳಗೆ ಎರಡೆರಡಾಗಿ ನಾಲ್ವತ್ತು ಬೆಳ್ಳಿಯ ಕಾಲುಗಳನ್ನು ಮಾಡಿದನು.
26 e quarenta bases de prata, duas debaixo de cada armação.
27 ಗುಡಾರದ ಪಶ್ಚಿಮ ಭಾಗದ ಮಗ್ಗಲುಗಳಿಗೆ ಆರು ಹಲಗೆಗಳನ್ನು ಮಾಡಿ ದನು.
27 Fez ainda seis armações na parte de trás do tabernáculo, isto é, para o lado ocidental,
28 ಅವನು ಗುಡಾರದ ಎರಡು ಪಾರ್ಶ್ವಗಳಲ್ಲಿ ರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡಿದನು.
28 e duas armações foram montadas nos cantos, na parte de trás do tabernáculo.
29 ಅವುಗಳು ಅಡಿಯಲ್ಲಿಯೂ ಮೇಲ್ಗಡೆಯಲ್ಲಿಯೂ ಒಂದೇ ಉಂಗುರದಿಂದ ಜೋಡಿಸಲ್ಪಟ್ಟವು. ಇದೇ ರೀತಿಯಲ್ಲಿ ಅವನು ಎರಡೂ ಮೂಲೆಗಳಲ್ಲಿರುವ ಎರಡಕ್ಕೂ ಮಾಡಿದನು.
29 Nesses dois cantos as armações eram duplas, desde a parte inferior até a mais alta, colocadas numa só argola, ambas feitas do mesmo modo.
30 ಇಂಥ ಎಂಟು ಹಲಗೆ ಗಳಿದ್ದವು; ಪ್ರತಿಯೊಂದು ಹಲಗೆಯ ಕೆಳಗೆ ಎರಡೆರಡು ಕಾಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕಾಲು ಗಳಿದ್ದವು.
30 Havia, pois, oito armações e dezesseis bases de prata, duas debaixo de cada armação.
31 ಅವನು ಜಾಲೀ ಮರದ ಅಗುಳಿಗಳನ್ನು ಮಾಡಿದನು; ಗುಡಾರದ ಒಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು,
31 Também fez travessões de madeira de acácia: cinco para as armações de um lado do tabernáculo,
32 ಗುಡಾರದ ಇನ್ನೊಂದು ಭಾಗದ ಹಲಗೆಗಳಿಗೆ ಐದು ಅಗುಳಿಗಳು, ಗುಡಾರದ ಪಶ್ಚಿಮ ಭಾಗಗಳಲ್ಲಿರುವ ಹಲಗೆಗಳಿಗೆ ಐದು ಅಗುಳಿಗಳನ್ನು ಮಾಡಿದನು.
32 cinco para as do outro lado e cinco para as do lado ocidental, na parte de trás do tabernáculo.
33 ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಬದಿಯಿಂದ ಇನ್ನೊಂದು ಬದಿಯ ವರೆಗೆ ಹಾದು ಹೋಗುವ ಹಾಗೆ ಮಾಡಿದನು.
33 Fez o travessão central de uma extremidade à outra, passando pelo meio das armações.
34 ಆ ಹಲಗೆಗಳನ್ನು ಚಿನ್ನದಿಂದ ಹೊದಿಸಿ ಅಗುಳಿಗಳಿಗೆ ಬಳೆಗಳಾಗಿರುವ ಉಂಗುರಗಳನ್ನು ಚಿನ್ನದಿಂದ ಮಾಡಿ ಅಗುಳಿಗಳನ್ನು ಚಿನ್ನದಿಂದ ಹೊದಿಸಿದನು.
34 Revestiu de ouro as armações e fez argolas de ouro para sustentar os travessões, os quais também revestiu de ouro.
35 ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು.
35 Fez o véu de linho fino trançado e de fios de tecido azul, roxo e vermelho, e mandou bordar nele querubins.
36 ಇದಲ್ಲದೆ ಜಾಲೀ ಮರದ ನಾಲ್ಕು ಸ್ತಂಭಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿಸಿ ದನು. ಅವುಗಳ ಮೊಳೆಗಳು ಚಿನ್ನದವುಗಳಾಗಿದ್ದವು; ಅವನು ಅವುಗಳಿಗೆ ಬೆಳ್ಳಿಯ ನಾಲ್ಕು ಕಾಲುಗಳನ್ನು ಎರಕಹೊಯ್ದನು.
36 Fez-lhe quatro colunas de madeira de acácia e as revestiu de ouro. Fez-lhe ainda ganchos de ouro e fundiu as suas bases de prata.
37 ಬಾಗಲಿಗೆ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನಾರುಗಳಿಂದ ಕಸೂತಿ ಹಾಕಿ ತೆರೆಯನ್ನು ಮಾಡಿದನು;
37 Para a entrada da tenda fez uma cortina de linho fino trançado e de fios de tecido azul, roxo e vermelho, obra de bordador;
38 ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು.
38 e fez-lhe cinco colunas com ganchos. Revestiu de ouro as partes superior e lateral das colunas e fez de bronze as suas cinco bases.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Êxodo 36, comparar traduções ou montar um estudo — tudo direto pelo WhatsApp.