Êxodo 35
Kannada Bible (GL_KANNADA) vs ARA
ARA Almeida Revista e Atualizada 1993
1 ಮೋಶೆಯು ಇಸ್ರಾಯೇಲ್ ಮಕ್ಕಳ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ--ನೀವು ಮಾಡುವದಕ್ಕೆ ಕರ್ತನು ಆಜ್ಞಾಪಿಸಿದ ವಾಕ್ಯಗಳು ಇವೇ.
1 Tendo Moisés convocado toda a congregação dos filhos de Israel, disse-lhes: São estas as palavras que o Senhor ordenou que se cumprissem:
2 ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು.
2 Trabalhareis seis dias, mas o sétimo dia vos será santo, o sábado do repouso solene ao Senhor ; quem nele trabalhar morrerá.
3 ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು ಹೇಳಿದನು.
3 Não acendereis fogo em nenhuma das vossas moradas no dia do sábado.
4 ಮೋಶೆಯು ಇಸ್ರಾಯೇಲ್ ಮಕ್ಕಳ ಸಭೆಗೆಲ್ಲಾ-- ಕರ್ತನು ಆಜ್ಞಾಪಿಸಿದ್ದು ಇದೇ. ಅದೇನಂದರೆ--
4 Disse mais Moisés a toda a congregação dos filhos de Israel: Esta é a palavra que o Senhor ordenou, dizendo:
5 ಕರ್ತನಿಗೋಸ್ಕರ ನಿಮ್ಮೊಳಗಿಂದ ಕಾಣಿಕೆಗಳನ್ನು ತೆಗೆದು ಕೊಳ್ಳಿರಿ. ಮನಃಪೂರ್ವಕವಾಗಿ ಕರ್ತನಿಗೆ ತರಬೇಕಾದವುಗಳು; ಚಿನ್ನ, ಬೆಳ್ಳಿ, ಹಿತ್ತಾಳೆ
5 Tomai, do que tendes, uma oferta para o Senhor ; cada um, de coração disposto, voluntariamente a trará por oferta ao Senhor : ouro, prata, bronze,
6 ನೀಲಿ, ಧೂಮ್ರ, ಕೆಂಪುವರ್ಣದ ನಯವಾದ ನಾರುಮಡಿ, ಮೇಕೆಯ ಕೂದಲು,
6 estofo azul, púrpura, carmesim, linho fino, pelos de cabra,
7 ಕೆಂಪು ಬಣ್ಣದಲ್ಲಿ ಅದ್ದಿದ ಟಗರಿನ ಚರ್ಮಗಳು, ಕಡಲು ಹಂದಿಯ ಚರ್ಮಗಳು ಜಾಲೀಮರವು.
7 peles de carneiro tintas de vermelho, peles finas, madeira de acácia,
8 ದೀಪಕ್ಕೋಸ್ಕರ ಎಣ್ಣೆ, ಅಭಿಷೇಕಿಸುವ ತೈಲಕ್ಕೋಸ್ಕರ ಮತ್ತು ಪರಿಮಳ ಧೂಪಕ್ಕೋಸ್ಕರ ಸುಗಂಧತೈಲ,
8 azeite para a iluminação, especiarias para o óleo da unção e para o incenso aromático,
9 ಗೋಮೇಧಕ, ಎಫೋದ್‌ನ್ನು ಎದೆಯಲ್ಲಿಯೂ ಪದಕದಲ್ಲಿಯೂ ಕೂಡ್ರಿಸಲು ರತ್ನಗಳು ಇವೆ.
9 pedras de ônix e pedras de engaste para a estola sacerdotal e para o peitoral.
10 ನಿಮ್ಮಲ್ಲಿ ಜ್ಞಾನದ ಹೃದಯವುಳ್ಳವರೆಲ್ಲರೂ ಬಂದು ಕರ್ತನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಲಿ.
10 Venham todos os homens hábeis entre vós e façam tudo o que o Senhor ordenou:
11 ಅವು ಯಾವವಂದರೆ: ಗುಡಾರವನ್ನೂ ಅದರ ಡೇರೆಯನ್ನೂ ಅದರ ಹೊದಿಕೆಯನ್ನೂ ಅದರ ಕೊಂಡಿಗಳನ್ನೂ ಅದರ ಹಲಗೆಗಳನ್ನೂ ಅದರ ಅಗುಳಿಗಳನ್ನೂ ಅದರ ಸ್ತಂಭ ಗಳನ್ನೂ ಅದರ ಕುಳಿಗಳನ್ನೂ
11 o tabernáculo com sua tenda e a sua coberta, os seus ganchos, as suas tábuas, as suas vergas, as suas colunas e as suas bases;
12 ಮಂಜೂಷವನ್ನೂ ಅದರ ಕೋಲುಗಳನ್ನೂ ಅವುಗಳೊಂದಿಗೆ ಕರುಣಾಸನ ವನ್ನೂ ಮರೆಮಾಡುವ ತೆರೆಯನ್ನೂ
12 a arca e os seus varais, o propiciatório e o véu do reposteiro;
13 ಮೇಜನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಸಮ್ಮುಖದ ರೊಟ್ಟಿಯನ್ನೂ
13 a mesa e os seus varais, e todos os seus utensílios, e os pães da proposição;
14 ಬೆಳಕಿಗಾಗಿ ದೀಪಸ್ತಂಭವನ್ನೂ ಅದರ ಉಪಕರಣಗಳನ್ನೂ ಅದರ ದೀಪಗಳನ್ನೂ ಬೆಳಕಿಗಾಗಿ ಎಣ್ಣೆಯನ್ನೂ
14 o candelabro da iluminação, e os seus utensílios, e as suas lâmpadas, e o azeite para a iluminação;
15 ಧೂಪ ವೇದಿಯನ್ನೂ ಅದರ ಕೋಲುಗಳನ್ನೂ ಅಭಿಷೇಕಿಸುವ ಎಣ್ಣೆಯನ್ನೂ ಪರಿಮಳ ಧೂಪವನ್ನೂ ಗುಡಾರದಲ್ಲಿ ಪ್ರವೇಶಿಸುವ ಬಾಗಲಿನ ತೆರೆಯನ್ನೂ
15 o altar do incenso e os seus varais, e o óleo da unção, e o incenso aromático, e o reposteiro da porta à entrada do tabernáculo;
16 ಯಜ್ಞವೇದಿ ಯನ್ನೂ ಅದರೊಂದಿಗೆ ಹಿತ್ತಾಳೆಯ ಜಲ್ಲಡಿಯನ್ನೂ ಅದರ ಕೋಲುಗಳನ್ನೂ ಅದರ ಎಲ್ಲಾ ಉಪಕರಣ ಗಳನ್ನೂ ಗಂಗಾಳವನ್ನೂ ಅದರ ಪೀಠ
16 o altar do holocausto e a sua grelha de bronze, os seus varais e todos os seus utensílios, a bacia e o seu suporte;
17 ಅಂಗಳದ ಪರದೆಗಳನ್ನೂ ಅದರ ಸ್ತಂಭಗಳನ್ನೂ ಅದರ ಕುಳಿಗ ಳನ್ನೂ ಅಂಗಳದ ಬಾಗಲಿನ ತೆರೆಗಳನ್ನೂ
17 as cortinas do átrio, e as suas colunas, e as suas bases, e o reposteiro da porta do átrio;
18 ಗುಡಾರದ ಗೂಟಗಳನ್ನೂ ಅಂಗಳದ ಗೂಟಗಳನ್ನೂ ಅವುಗಳ ಹಗ್ಗಗಳನ್ನೂ
18 as estacas do tabernáculo, e as estacas do átrio, e as suas cordas;
19 ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದ ಕ್ಕಾಗಿ ಸೇವೆಯ ವಸ್ತ್ರಗಳನ್ನೂ ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನೂ ಯಾಜಕ ಸೇವೆಗೋಸ್ಕರ ಅವನ ಕುಮಾರರ ವಸ್ತ್ರಗಳನ್ನೂ ಮಾಡಲಿ ಅಂದನು.
19 as vestes do ministério para ministrar no santuário, as vestes santas do sacerdote Arão e as vestes de seus filhos, para oficiarem como sacerdotes.
20 ಆಗ ಇಸ್ರಾಯೇಲ್ ಮಕ್ಕಳ ಸಭೆಯವರೆಲ್ಲರೂ ಮೋಶೆಯ ಎದುರಿನಿಂದ ಹೊರಟುಹೋದರು.
20 Então, toda a congregação dos filhos de Israel saiu da presença de Moisés,
21 ಅವರಲ್ಲಿ ಪ್ರತಿಯೊಬ್ಬನು ಹೃದಯ ಪ್ರೇರಣೆಯಿಂದ ಮತ್ತು ಪ್ರತಿಯೊಬ್ಬನು ತನ್ನ ಮನಸ್ಸು ಇಷ್ಟಪಡುವಂತೆ ಸಭೆಯ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಕರ್ತನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.
21 e veio todo homem cujo coração o moveu e cujo espírito o impeliu e trouxe a oferta ao Senhor para a obra da tenda da congregação, e para todo o seu serviço, e para as vestes sagradas.
22 ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮುರುವುಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಪ್ರತಿಯೊಬ್ಬನೂ ಚಿನ್ನದ ಕಾಣಿಕೆಯನ್ನು ಕರ್ತನಿಗೆ ಅರ್ಪಿಸಿದನು.
22 Vieram homens e mulheres, todos dispostos de coração; trouxeram fivelas, pendentes, anéis, braceletes, todos os objetos de ouro; todo homem fazia oferta de ouro ao Senhor ;
23 ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ, ಮೇಕೆಯ ಕೂದಲು; ಟಗರುಗಳ ಕೆಂಪು ಬಣ್ಣದ ಚರ್ಮಗಳು, ಕಡಲು ಹಂದಿಯ ಚರ್ಮಗಳು, ಯಾರ ಬಳಿಯಲ್ಲಿದ್ದವೋ ಅವರೆಲ್ಲರು ತಂದರು.
23 e todo homem possuidor de estofo azul, púrpura, carmesim, linho fino, pelos de cabra, peles de carneiro tintas de vermelho e peles de animais marinhos os trazia.
24 ಬೆಳ್ಳಿ ಹಿತ್ತಾಳೆಗಳ ಕಾಣಿಕೆ ಗಳನ್ನು ಅರ್ಪಿಸುವದಕ್ಕೆ ಮನಸ್ಸಿದ್ದವರೆಲ್ಲರೂ ಕರ್ತನಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸ ಕ್ಕೋಸ್ಕರ ಜಾಲೀ ಮರವಿದ್ದವರು ಅದನ್ನು ತಂದರು.
24 Todo aquele que fazia oferta de prata ou de bronze por oferta ao Senhor a trazia; e todo possuidor de madeira de acácia para toda obra do serviço a trazia.
25 ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು.
25 Todas as mulheres hábeis traziam o que, por suas próprias mãos, tinham fiado: estofo azul, púrpura, carmesim e linho fino.
26 ಜ್ಞಾನದಲ್ಲಿ ಹೃದಯ ಪ್ರೇರಣೆ ಹೊಂದಿದ ಸ್ತ್ರೀಯರೆಲ್ಲರೂ ಮೇಕೆ ಕೂದಲುಗಳನ್ನೂ ನೇಯ್ದರು.
26 E todas as mulheres cujo coração as moveu em habilidade fiavam os pelos de cabra.
27 ಅಧಿಪತಿಗಳು ಎಫೋ ದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ
27 Os príncipes traziam pedras de ônix, e pedras de engaste para a estola sacerdotal e para o peitoral,
28 ಸುಗಂಧದ್ರವ್ಯ ಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲ ಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆ ಯನ್ನೂ ತಂದರು.
28 e os arômatas, e o azeite para a iluminação, e para o óleo da unção, e para o incenso aromático.
29 ಹೀಗೆ ಮಾಡಬೇಕೆಂದು ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ತರುವದಕ್ಕೆ ಹೃದಯ ಪ್ರೇರಿತರಾದ ಇಸ್ರಾಯೇಲಿನ ಎಲ್ಲಾ ಪುರುಷರೂ ಸ್ತ್ರೀಯರೂ ಕರ್ತ ನಿಗೆ ಮನಃಪೂರ್ವಕವಾದ ಕಾಣಿಕೆಯನ್ನು ತಂದರು.
29 Os filhos de Israel trouxeram oferta voluntária ao Senhor , a saber, todo homem e mulher cujo coração os dispôs para trazerem uma oferta para toda a obra que o Senhor tinha ordenado se fizesse por intermédio de Moisés.
30 ಆಗ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ--ನೋಡಿರಿ, ಕರ್ತನು ಯೂದ ಕುಲದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲೇಲ ನನ್ನು ಹೆಸರು ಹೇಳಿ ಕರೆದು
30 Disse Moisés aos filhos de Israel: Eis que o Senhor chamou pelo nome a Bezalel, filho de Uri, filho de Hur, da tribo de Judá,
31 ಅವನನ್ನು ದೇವರಾತ್ಮ ನಿಂದ ಜ್ಞಾನದಲ್ಲಿಯೂ ತಿಳುವಳಿಕೆಯಲ್ಲಿಯೂ ವಿವೇಕ ದಲ್ಲಿಯೂ ಎಲ್ಲಾ ವಿಧವಾದ ಕೌಶಲ್ಯದಲ್ಲಿಯೂ
31 e o Espírito de Deus o encheu de habilidade, inteligência e conhecimento em todo artifício,
32 ಚಿನ್ನ ಬೆಳ್ಳಿ ಹಿತ್ತಾಳೆ ಇವುಗಳಿಂದ ವಿಚಿತ್ರವಾದ ಕಲ್ಪನೆಯ ಕೆಲಸವನ್ನು ಮಾಡುವದರಲ್ಲಿಯೂ
32 e para elaborar desenhos e trabalhar em ouro, em prata, em bronze,
33 ಕಲ್ಲುಗಳನ್ನು ಕೆತ್ತಿಡುವದರಲ್ಲಿಯೂ ಮರ ಕೆತ್ತನೆಯಲ್ಲಿಯೂ ಎಲ್ಲಾ ತರವಾದ ಕೌಶಲ್ಯದ ಕೆಲಸದಲ್ಲಿಯೂ ಜ್ಞಾನದಿಂದ ತುಂಬಿಸಿದ್ದಾನೆ.
33 e para lapidação de pedras de engaste, e para entalho de madeira, e para toda sorte de lavores.
34 ಇದಲ್ಲದೆ ಅವನಿಗೂ ದಾನ ಕುಲದ ವನಾದ ಅಹೀಸಾಮಾಕನ ಮಗನಾದ ಒಹೋಲಿಯಾ ಬನಿಗೂ ಕಲಿಸುವ ಹೃದಯವನ್ನು ಕೊಟ್ಟಿದ್ದಾನೆ.
34 Também lhe dispôs o coração para ensinar a outrem, a ele e a Aoliabe, filho de Aisamaque, da tribo de Dã.
35 ಅವರು ಕೆತ್ತನೆಯ ಕೆಲಸಗಳನ್ನು ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಮಾಡುವದಕ್ಕೂ ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ ಇವು ಗಳಲ್ಲಿ ಕಸೂತಿ ಕೆಲಸ ಮಾಡುವದಕ್ಕೂ ನೇಯ್ಗೆಯ ಕೆಲಸ ಮಾಡುವದಕ್ಕೂ ಅಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಕಲ್ಪಿಸಿ ಮಾಡುವವರಂತೆಯೂ ಹೀಗೆ ಎಲ್ಲಾ ತರವಾದ ಕೆಲಸಮಾಡುವದಕ್ಕೆ ಜ್ಞಾನದ ಹೃದಯವನ್ನು ದೇವರು ಅವರಲ್ಲಿ ತುಂಬಿಸಿದ್ದಾನೆ.
35 Encheu-os de habilidade para fazer toda obra de mestre, até a mais engenhosa, e a do bordador em estofo azul, em púrpura, em carmesim e em linho fino, e a do tecelão, sim, toda sorte de obra e a elaborar desenhos.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Êxodo 35, comparar traduções ou montar um estudo — tudo direto pelo WhatsApp.