Êxodo 32

Kannada Bible (GL_KANNADA) vs BKJ

Sair da comparação
1 ಮೋಶೆಯು ಬೆಟ್ಟದಿಂದ ಇಳಿದುಬರುವದರಲ್ಲಿ ತಡವಾದದ್ದನ್ನು ಜನರು ನೋಡಿದಾಗ ಅವರು ಆರೋನನ ಬಳಿಗೆ ಕೂಡಿ ಬಂದು ಅವನಿಗೆ--ನೀನು ಎದ್ದು ನಮ್ಮ ಮುಂದೆ ಹೋಗುವ ದೇವರುಗಳನ್ನು ನಮಗಾಗಿ ಮಾಡು, ಐಗುಪ್ತದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದ ಮನುಷ್ಯನಾದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು ಅಂದರು.
1 E quando o povo viu que Moisés demorava para descer do monte, o povo se reuniu com Arão, e lhe disse: Levanta-te, faze-nos deuses que vão adiante de nós, pois quanto a este Moisés, o homem que nos tirou da terra do Egito, não sabemos o que lhe sucedeu.
2 ಅದಕ್ಕೆ ಆರೋನನು ಅವರಿಗೆ--ನಿಮ್ಮ ಹೆಂಡತಿಯರ ಮತ್ತು ನಿಮ್ಮ ಕುಮಾರ ಕುಮಾರ್ತೆಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಕಿತ್ತು ನನ್ನ ಬಳಿಗೆ ತನ್ನಿರಿ ಅಂದನು.
2 E Arão lhes disse: Arrancai os pendentes de ouro, que estão nas orelhas de vossas esposas, de vossos filhos e de vossas filhas, e trazei-os a mim.
3 ಆಗ ಜನರೆಲ್ಲರು ತಮ್ಮ ಕಿವಿಗಳಲ್ಲಿದ್ದ ಚಿನ್ನದ ವಾಲೆಗಳನ್ನು ಕಿತ್ತು ಆರೋನನ ಬಳಿಗೆ ತಂದರು.
3 E todo o povo arrancou os pendentes de ouro que estavam nas suas orelhas, e os trouxeram a Arão.
4 ಅವನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಉಳಿಯಿಂದ ರೂಪಿಸಿ ಎರಕಹೊಯ್ದ ಕರುವಾಗಿ ಮಾಡಿದನು. ಆಗ ಅವರು--ಓ ಇಸ್ರಾ ಯೇಲೇ, ನಿನ್ನನ್ನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ದೇವರುಗಳು ಇವೇ ಆಗಿರಲಿ ಅಂದರು.
4 E ele recebeu das suas mãos, e o formou com um buril, depois de o ter formado em bezerro de fundição, e eles disseram: Estes são teus deuses, ó Israel, que te tiraram da terra do Egito.
5 ಆರೋನನು ಅದನ್ನು ನೋಡಿ ಅದರ ಮುಂದೆ ಯಜ್ಞವೇದಿಯನ್ನು ಕಟ್ಟಿದನು. ಆರೋನನು--ನಾಳೆ ಕರ್ತನಿಗೆ ಹಬ್ಬ ಎಂದು ಪ್ರಕಟಿಸಿದನು.
5 E quando Arão o viu, construiu um altar diante dele. E Arão fez uma proclamação e disse: Amanhã é a festa ao SENHOR.
6 ಮರುದಿನ ದಲ್ಲಿ ಅವರು ಬೆಳಿಗ್ಗೆ ಎದ್ದು ದಹನಬಲಿಗಳನ್ನು ಅರ್ಪಿಸಿ ಸಮಾಧಾನದ ಬಲಿಗಳನ್ನು ತಂದರು. ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡು, ಎದ್ದು ಕುಣಿದಾಡಿದರು.
6 E eles se levantaram cedo no dia seguinte, e ofereceram ofertas queimadas, e trouxeram ofertas pacíficas; e o povo assentou-se para comer e beber, e se levantou para festejar.
7 ಆಗ ಕರ್ತನು ಮೋಶೆಗೆ--ನೀನು ಇಳಿದು ಹೋಗು; ನೀನು ಐಗುಪ್ತ ದೇಶದೊಳಗಿಂದ ಬರ ಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ.
7 E disse o SENHOR a Moisés: Vai e desce, porque o teu povo, que tiraste da terra do Egito, se corrompeu.
8 ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗನೆ ಬಿಟ್ಟು ತಮಗೆ ಎರಕ ಹೊಯ್ದ ಕರುವನ್ನು ಮಾಡಿ ಕೊಂಡು ಅದನ್ನು ಆರಾಧಿಸುತ್ತಾ ಅದಕ್ಕೆ ಬಲಿ ಅರ್ಪಿಸಿ--ಓ ಇಸ್ರಾಯೇಲೇ, ನಿನ್ನನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ನಿನ್ನ ದೇವರುಗಳು ಇವುಗಳೇ ಎಂದು ಹೇಳುತ್ತಾರೆ.
8 Depressa se desviaram do caminho que eu lhes ordenei. Fizeram para si um bezerro de fundição, e o adoraram, e lhe fizeram sacrifícios, e disseram: Estes são os teus deuses, ó Israel, que te tiraram da terra do Egito.
9 ಇದಲ್ಲದೆ ಕರ್ತನು ಮೋಶೆಗೆ--ನಾನು ಈ ಜನ ರನ್ನು ನೋಡಿದ್ದೇನೆ; ಇಗೋ, ಇದು ಬೊಗ್ಗದ ಕುತ್ತಿಗೆಯುಳ್ಳ ಜನವೇ.
9 E o SENHOR disse a Moisés: Tenho visto esse povo e, eis que é um povo obstinado.
10 ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.
10 Por isso, agora deixa-me só, para que minha ira se acenda contra eles, e para que eu os consuma; e farei de ti uma grande nação.
11 ಅದಕ್ಕೆ ಮೋಶೆಯು ತನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನಂದರೆ--ಕರ್ತನೇ, ನೀನು ಮಹಾಶಕ್ತಿಯಿಂದಲೂ ಬಲವುಳ್ಳ ಕೈಯಿಂದಲೂ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನರ ಮೇಲೆ ನಿನ್ನ ಕೋಪವು ಯಾಕೆ ಉರಿಯುವದು?
11 E suplicou Moisés ao SENHOR seu Deus, e disse: SENHOR, por que a tua ira se acende contra o teu povo, que tiraste da terra do Egito com grande poder, e com mão forte?
12 ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಕೊಲ್ಲುವದಕ್ಕೂ ಭೂಮಿಯ ಮೇಲಿನಿಂದ ಅವರನ್ನು ದಹಿಸಿಬಿಡುವದಕ್ಕೂ ಆತನು ಅವರನ್ನು ಹೊರಗೆ ಬರಮಾಡಿದ್ದಾನೆ ಎಂದು ಐಗುಪ್ತ್ಯರು ಯಾಕೆ ಹೇಳಬೇಕು? ನಿನ್ನ ಕೋಪದುರಿ ಯನ್ನು ಬಿಟ್ಟು ತಿರುಗಿಕೋ, ನಿನ್ನ ಜನರಿಗೆ ವಿರೋಧ ವಾದ ಈ ಕೇಡಿನ ವಿಷಯದಲ್ಲಿ ನಿನ್ನ ಮನಸ್ಸನ್ನು ಬದಲಾಯಿಸು.
12 Por que falariam os egípcios e diriam: Para mal os tirou, para matá-los nos montes, e para destruí-los da face da terra? Desvia-te da tua ardente ira, e arrepende-te deste mal contra o teu povo.
13 ಆಕಾಶದ ನಕ್ಷತ್ರಗಳ ಹಾಗೆ ನಿಮ್ಮ ಸಂತತಿಯನ್ನು ಹೆಚ್ಚಿಸಿ, ನಾನು ಹೇಳಿದ ಈ ದೇಶವನ್ನು ನಿಮ್ಮ ಸಂತತಿಯು ನಿತ್ಯವಾಗಿ ಸ್ವತಂತ್ರಿಸಿಕೊಳ್ಳುವರು ಎಂದು ಯಾರಿಗೆ ನಿನ್ನ ಆಣೆಯಿಟ್ಟು ಪ್ರಮಾಣಮಾಡಿ ದಿಯೋ ಆ ನಿನ್ನ ಸೇವಕರಾದ ಅಬ್ರಹಾಮನನ್ನೂ ಇಸಾಕನನ್ನೂ ಇಸ್ರಾಯೇಲನನ್ನೂ ಜ್ಞಾಪಕ ಮಾಡಿಕೋ ಅಂದನು.
13 Lembra-te de Abraão, Isaque e Israel, teus servos, aos quais juraste por ti mesmo e lhes disseste: Multiplicarei a vossa semente como as estrelas do céu, e toda esta terra de que falei darei à vossa semente, e eles a herdarão para sempre.
14 ಆಗ ಕರ್ತನು ತನ್ನ ಜನರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯದಲ್ಲಿ ಮನಸ್ಸನ್ನು ಬದಲಾಯಿಸಿ ಕೊಂಡನು.
14 E o SENHOR desistiu do mal que tinha pensado fazer ao seu povo.
15 ಆಗ ಮೋಶೆಯು ತಿರುಗಿಕೊಂಡು ಎರಡೂ ಬದಿಯಲ್ಲಿ ಬರೆದಿರುವ ಹಲಗೆಗಳಾದ ಸಾಕ್ಷಿಯ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದಿ ಳಿದನು; ಆ ಹಲಗೆಗಳು ಈ ಪಕ್ಕದಲ್ಲಿಯೂ ಆ ಪಕ್ಕದಲ್ಲಿಯೂ ಬರೆಯಲ್ಪಟ್ಟಿದ್ದವು.
15 E Moisés se virou e desceu do monte, e as duas tábuas do testemunho estavam em sua mão. As tábuas estavam escritas de ambos os lados; de um e de outro lado estavam escritas.
16 ಆ ಹಲಗೆಗಳು ದೇವರ ಕೆಲಸವಾಗಿದ್ದವು. ಆ ಬರಹವು ಹಲಗೆಗಳ ಮೇಲೆ ಕೆತ್ತಿದ ದೇವರ ಬರಹವೇ.
16 E as tábuas eram a obra de Deus, e a escrita era a escrita de Deus, gravada nas tábuas.
17 ಜನರು ಕೂಗುತ್ತಿದ್ದ ಶಬ್ದವನ್ನು ಯೆಹೋಶುವನು ಕೇಳಿದಾಗ ಮೋಶೆಗೆ--ಪಾಳೆಯದಲ್ಲಿ ಯುದ್ಧದ ಶಬ್ದವು ಇದೆ ಎಂದು ಹೇಳಿದನು.
17 E quando Josué ouviu o som do povo que jubilava, disse a Moisés: Há alarido de guerra no acampamento.
18 ಅದಕ್ಕೆ ಮೋಶೆಯು--ಅದು ಜಯಧ್ವನಿಯು ಅಲ್ಲ, ಅಪ ಜಯದ ಧ್ವನಿಯೂ ಅಲ್ಲ, ಆದರೆ ಹಾಡುವವರ ಧ್ವನಿ ಯನ್ನು ನಾನು ಕೇಳುತ್ತೇನೆ ಅಂದನು.
18 E ele disse: Não é voz dos que gritam por domínio, nem é a voz dos que entoam derrota, mas ouço um alarido dos que cantam.
19 ಇದಾದ ಮೇಲೆ ಮೋಶೆಯು ಪಾಳೆಯದ ಸವಿಾಪಕ್ಕೆ ಬಂದು ಆ ಕರುವನ್ನೂ ಅವರ ನಾಟ್ಯವನ್ನೂ ನೋಡಿ ಕೋಪ ಗೊಂಡು ಕೈಯಲ್ಲಿದ್ದ ಹಲಗೆಗಳನ್ನು ಬಿಸಾಡಿ ಬೆಟ್ಟದ ಅಡಿಯಲ್ಲಿ ಅವುಗಳನ್ನು ಒಡೆದುಬಿಟ್ಟನು.
19 E aconteceu, assim que ele se aproximou do acampamento, que viu o bezerro, e a dança, a ira de Moisés se acendeu, e ele lançou as tábuas da sua mão, e as quebrou ao pé do monte.
20 ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಪುಡಿಯಾಗುವ ವರೆಗೆ ಅರೆಸಿ ನೀರಿನ ಮೇಲೆ ಚೆಲ್ಲಿ ಆ ನೀರನ್ನು ಇಸ್ರಾಯೇಲ್‌ ಮಕ್ಕಳು ಕುಡಿಯುವಂತೆ ಮಾಡಿದನು.
20 E ele tomou o bezerro que eles tinham feito, e queimou-o no fogo; e o moeu até se tornar em pó, e o espalhou sobre a água, e fez os filhos de Israel beberem dela.
21 ಮೋಶೆಯು ಆರೋನನಿಗೆ--ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು ಎಂದು ಕೇಳಿದನು.
21 E disse Moisés a Arão: O que este povo fez a ti para que trouxesses tão grande pecado sobre eles?
22 ಅದಕ್ಕೆ ಆರೋನನು--ನನ್ನ ಒಡೆಯನ ಕೋಪ ಉರಿಯದೆ ಇರಲಿ. ಈ ಜನರು ಕೇಡಿನ ಮನಸ್ಸಿನವರಾಗಿದ್ದಾರೆಂದು ನೀನು ಬಲ್ಲೆ.
22 E disse Arão: Que a ira de meu senhor não se acenda; conheces o povo, que ele é inclinado para o mal.
23 ನಮಗೋಸ್ಕರ ನಮ್ಮ ಮುಂದೆ ಹೋಗುವ ದೇವರುಗಳನ್ನು ಮಾಡು. ಯಾಕಂದರೆ ಐಗುಪ್ತದೇಶದೊಳಗಿಂದ ನಮ್ಮನ್ನು ಬರಮಾಡಿದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು ಎಂದು ನನಗೆ ಅವರು ಹೇಳಿದರು.
23 Porque me disseram: Faze-nos deuses, que irão adiante de nós, pois quanto a este Moisés, o homem que nos tirou da terra do Egito, não sabemos o que lhe sucedeu.
24 ಆದದರಿಂದ ನಾನು ಅವರಿಗೆ--ಚಿನ್ನ ಇದ್ದವರು ಅದನ್ನು ಕಿತ್ತು ಬಿಡಲಿ ಅಂದೆನು. ಅವರು ಅದನ್ನು ನನಗೆ ಕೊಟ್ಟರು. ನಾನು ಅದನ್ನು ಬೆಂಕಿಯಲ್ಲಿ ಹಾಕಿದಾಗ ಈ ಕರುವು ಉಂಟಾ ಯಿತು ಅಂದೆನು.
24 E eu lhes disse: Todo aquele que tiver algum ouro, que o arranque. Assim eles me deram. Então eu o lancei no fogo, e dele saiu este bezerro.
25 ಜನರು ಬೆತ್ತಲೆಯಾಗಿರುವದನ್ನು ಮೋಶೆಯು ನೋಡಿದಾಗ (ಆರೋನನು ಅವರ ಶತ್ರುಗಳ ಮಧ್ಯ ದಲ್ಲಿ ನಾಚಿಕೆಯಾಗುವಂತೆ ಅವರನ್ನು ಬೆತ್ತಲೆಯಾಗಿ ಮಾಡಿದ್ದನು.)
25 E quando Moisés viu que o povo estava nu (porque Arão os havia despido para vergonha entre os seus inimigos),
26 ಅವನು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು--ಕರ್ತನ ಪಕ್ಷದವನು ಯಾರು ಅವನು ನನ್ನ ಬಳಿಗೆ ಬರಲಿ ಅಂದನು. ಆಗ ಲೇವಿಯ ಕುಮಾರರೆಲ್ಲರು ಅವನ ಬಳಿಗೆ ಕೂಡಿ ಬಂದರು.
26 então Moisés se colocou na porta do acampamento e disse: Quem está do lado do SENHOR? Que ele venha a mim. E todos os filhos de Levi se achegaram a ele.
27 ಅವನು ಅವರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದಲ್ಲೆಲ್ಲಾ ಒಳಗಿನಿಂದ ಹೊರಕ್ಕೆ ದ್ವಾರದಿಂದ ದ್ವಾರಕ್ಕೆ ಹೋಗಿ ತನ್ನ ಸಹೋದರನನ್ನೂ ತನ್ನ ಜೊತೆಗಾರನನ್ನೂ ತನ್ನ ನೆರೆಯವನನ್ನೂ ಕೊಲ್ಲಲಿ ಎಂದು ಹೇಳಿದನು.
27 E ele lhes disse: Assim diz o SENHOR Deus de Israel: Ponha cada homem sua espada sobre o seu lado, e entrai e saí de porta em porta em todo o acampamento, e mate cada homem o seu irmão, e cada homem o seu amigo, e cada homem o seu próximo.
28 ಲೇವಿಯ ಮಕ್ಕಳು ಮೋಶೆಯ ಮಾತಿನಂತೆ ಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರುಸಾವಿರ ಜನರು ಸತ್ತರು.
28 E os filhos de Levi fizeram conforme a palavra de Moisés, e caíram do povo naquele dia em torno de três mil homens.
29 ಮೋಶೆಯು--ಈ ದಿನ ಆತನು ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ಅನುಗ್ರಹಿಸುವಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಮಗನಿಗೋಸ್ಕರವೂ ತನ್ನ ಸಹೋದರನಿಗೋಸ್ಕರವೂ ಈ ದಿನ ಕರ್ತನಿಗೆ ಪ್ರತಿಷ್ಠೆ ಮಾಡಿಕೊಳ್ಳಲಿ ಅಂದನು.
29 Porque Moisés havia dito: Consagrai-vos hoje ao SENHOR, cada homem contra o seu filho, e sobre o seu irmão, para que ele vos possa conceder bênção hoje.
30 ಮರುದಿನದಲ್ಲಿ ಆದದ್ದೇನಂದರೆ, ಮೋಶೆಯು ಜನರಿಗೆ-ನೀವು ದೊಡ್ಡ ಪಾಪವನ್ನು ಮಾಡಿದ್ದೀರಿ, (ಆದದರಿಂದ) ಈಗ ನಾನು ಕರ್ತನ ಬಳಿಗೆ ಹೋಗು ವೆನು, ಒಂದು ವೇಳೆ ನಿಮ್ಮ ಪಾಪಕ್ಕಾಗಿ ನಾನು ಪ್ರಾಯ ಶ್ಚಿತ್ತ ಮಾಡಿಯೇನು ಅಂದನು.
30 E aconteceu que, no dia seguinte, Moisés disse ao povo: Vós pecastes com grande pecado, e agora subirei ao SENHOR; talvez possa fazer propiciação pelo vosso pecado.
31 ಹೀಗೆ ಮೋಶೆಯು ಕರ್ತನ ಬಳಿಗೆ ತಿರಿಗಿ ಹೋಗಿ ಹೇಳಿದ್ದೇನಂದರೆ, ಅಯ್ಯೋ, ಈ ಜನರು ದೊಡ್ಡ ಪಾಪವನ್ನು ಮಾಡಿದ್ದಾರೆ. ಅವರು ತಮಗೆ ಚಿನ್ನದ ದೇವರುಗಳನ್ನು ಮಾಡಿಕೊಂಡಿದ್ದಾರೆ.
31 E Moisés retornou ao SENHOR, e disse: Ó, este povo pecou com grande pecado, e fizeram deuses de ouro para si.
32 ಆದಾಗ್ಯೂ ಈಗ ನೀನು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲ ವಾದರೆ ನೀನು ಬರೆದ ನಿನ್ನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು ಎಂದು ಬೇಡಿಕೊಂಡನು.
32 Agora, pois, perdoa o seu pecado; e se não, apaga-me, rogo-te, do teu livro que escreveste.
33 ಅದಕ್ಕೆ ಕರ್ತನು ಮೋಶೆಗೆ--ನನಗೆ ವಿರೋಧ ವಾಗಿ ಪಾಪಮಾಡಿದವನ ಹೆಸರನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಬಿಡುವೆನು.
33 E disse o SENHOR a Moisés: Aquele que pecou contra mim, este apagarei do meu livro.
34 ಆದರೆ ಈಗ ನೀನು ಹೋರಟು ನಾನು ನಿನಗೆ ಹೇಳಿದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಹೋಗು; ಇಗೋ, ನನ್ನ ದೂತನು ನಿನ್ನ ಮುಂದೆ ಹೋಗುವನು. ಆದಾಗ್ಯೂ ನಾನು ಶಿಕ್ಷಿಸುವ ದಿನದಲ್ಲಿ ಅವರ ಪಾಪಕ್ಕೆ ತಕ್ಕಂತೆ ಶಿಕ್ಷಿಸುವೆನು.
34 Por isso, agora vai, leva o povo até o lugar de que te falei. Eis que meu Anjo irá adiante de ti; porém no dia da minha visitação, sobre eles visitarei o seu pecado.
35 ಹೀಗೆ ಜನರ ಪ್ರೇರಣೆಯಿಂದ ಆರೋನನು ಕರುವನ್ನು ಮಾಡಿದ್ದರಿಂದ ಕರ್ತನು ಜನರನ್ನು ಬಾಧಿಸಿದನು.
35 E o SENHOR afligiu o povo, por ter feito o bezerro que Arão fizera.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Êxodo 32, comparar traduções ou montar um estudo — tudo direto pelo WhatsApp.