Êxodo 22
Kannada Bible (GL_KANNADA) vs ARC
ARC Almeida Revista e Corrigida 2009
1 ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಕೊಯ್ದರೆ ಇಲ್ಲವೆ ಅದನ್ನು ಮಾರಿದರೆ ಅವನು ಒಂದು ಎತ್ತಿಗೆ ಬದಲಾಗಿ ಐದು ಎತ್ತುಗಳನ್ನೂ ಒಂದು ಕುರಿಗೆ ನಾಲ್ಕು ಕುರಿಗಳನ್ನೂ ಕೊಡಬೇಕು.
1 Se alguém furtar boi ou ovelha e o degolar ou vender, por um boi pagará cinco bois; e pela ovelha, quatro ovelhas.
2 ಒಬ್ಬ ಕಳ್ಳನು ಕನ್ನ ಕೊರೆಯುವಾಗ ಸಿಕ್ಕಿದರೆ ಅವನನ್ನು ಹೊಡೆದು ಸಾಯಿಸುವವನ ರಕ್ತಸುರಿಸಬಾರದು.
2 Se o ladrão for achado a minar, e for ferido, e morrer, o que o feriu não será culpado do sangue.
3 ಅವನು ಕಳ್ಳತನ ಮಾಡುವಾಗ ಸೂರ್ಯೋದಯ ವಾದರೆ ಹೊಡೆದವನ ರಕ್ತ ಸುರಿಸಬೇಕು; ಕಳ್ಳನು ಸಿಕ್ಕಿದರೆ ಪೂರ್ಣವಾಗಿ ಬದಲು ಕೊಡಬೇಕು. ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ ಅವನ ಕಳ್ಳತನಕ್ಕಾಗಿ ಅವನು ಮಾರಲ್ಪಡಬೇಕು.
3 Se o sol houver saído sobre ele, será culpado do sangue. O ladrão fará restituição total; e se não tiver com que pagar, será vendido por seu furto.
4 ಕಳ್ಳತನ ಮಾಡಿದ ಎತ್ತಾಗಲಿ ಕತ್ತೆಯಾಗಲಿ ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ನಿಜವಾಗಿ ಸಿಕ್ಕಿದರೆ ಅವನು ಎರಡರಷ್ಟು ತಿರಿಗಿ ಕೊಡಬೇಕು.
4 Se o furto for achado vivo na sua mão, seja boi, ou jumento, ou ovelha, pagará o dobro.
5 ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ ದ್ರಾಕ್ಷೇತೋಟವನ್ನೂ ಮೇಯಿಸಿ ದರೆ ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ ದ್ರಾಕ್ಷೇತೋಟದಲ್ಲಿ ಉತ್ತಮವಾದದ್ದನ್ನೂ ಬದಲು ಕೊಡಬೇಕು.
5 Se alguém fizer pastar o seu animal num campo ou numa vinha e o largar para comer no campo de outro, o melhor do seu próprio campo e o melhor da sua própria vinha restituirá.
6 ಬೆಂಕಿ ಹತ್ತಿ ಅದು ಮುಳ್ಳಿನ ಬೇಲಿಗೆ ತಗುಲಿ ಸಿವುಡುಗಳ ಬಣವಿಗಳನ್ನಾಗಲಿ ನಿಂತ ಬೆಳೆಯನ್ನಾಗಲಿ ಹೊಲವನ್ನಾಗಲಿ ಸುಟ್ಟುಬಿಟ್ಟರೆ ಆ ಬೆಂಕಿಯನ್ನು ಹಚ್ಚಿದ ವನು ಖಂಡಿತವಾಗಿ ಬದಲು ಕೊಡಬೇಕು.
6 Se rebentar um fogo, e pegar aos espinhos, e abrasar a meda de trigo, ou a seara, ou o campo, aquele que acendeu o fogo pagará totalmente o queimado.
7 ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ ಸಾಮಾನುಗಳನ್ನಾಗಲಿ ಇಟ್ಟುಕೊಳ್ಳುವದಕ್ಕೆ ಕೊಟ್ಟಾಗ ಅದು ಅವನ ಮನೆಯಿಂದ ಕಳ್ಳತನವಾಗಿ ಆ ಕಳ್ಳನು ಸಿಕ್ಕಿದರೆ ಅವನು ಎರಡರಷ್ಟು ಕೊಡಬೇಕು.
7 Se alguém der prata ou objetos ao seu próximo a guardar, e isso for furtado da casa daquele homem, se o ladrão se achar, pagará o dobro.
8 ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ಸಾಮಾನುಗಳನ್ನು ಅವನು ಮುಟ್ಟಲಿಲ್ಲ ವೆಂದು ವಿಚಾರಿಸುವದಕ್ಕೆ ನ್ಯಾಯಾಧಿಪತಿಗಳ ಬಳಿಗೆ ಅವನನ್ನು ಬರಮಾಡಬೇಕು.
8 Se o ladrão não se achar, então, o dono da casa será levado diante dos juízes, a ver se não meteu a sua mão na fazenda do seu próximo.
9 ಎತ್ತು ಕತ್ತೆ ಕುರೀ ವಸ್ತ್ರಗಳ ವಿಷಯವಾದ ಎಲ್ಲಾ ಅಪರಾಧಗಳಿಗೋಸ್ಕರ ಇಲ್ಲವೆ ಕಳೆದು ಹೋದ ಯಾವದೇ ತರದ ವಸ್ತುಗಳ ವಿಷಯ ದಲ್ಲಿ ಒಬ್ಬನು ಇನ್ನೊಬ್ಬನ ಬಳಿಯಲ್ಲಿ ಅದನ್ನು ಕಂಡು ಇದು ತನ್ನದೆಂದು ಹೇಳಿದ ಪಕ್ಷಕ್ಕೆ ಆ ಇಬ್ಬರ ವ್ಯಾಜ್ಯವು ನ್ಯಾಯಾಧಿಪತಿಗಳ ಮುಂದೆ ಬರಬೇಕು. ನ್ಯಾಯಾಧಿ ಪತಿಗಳು ಯಾರನ್ನು ಅಪರಾಧಿಯೆಂದು ನಿರ್ಣಯಿಸು ವರೋ ಅವನು ಎರಡರಷ್ಟು ತನ್ನ ನೆರೆಯವನಿಗೆ ಕೊಡಬೇಕು.
9 Sobre todo negócio de injustiça, sobre boi, sobre jumento, sobre gado miúdo, sobre veste, sobre toda coisa perdida, de que alguém disser que é sua, a causa de ambos virá perante os juízes; aquele a quem condenarem os juízes o pagará em dobro ao seu próximo.
10 ಒಬ್ಬನು ತನ್ನ ನೆರೆಯವನಿಗೆ ಕತ್ತೆಯನ್ನಾದರೂ ಎತ್ತನ್ನಾದರೂ ಕುರಿಯನ್ನಾದರೂ ಬೇರೆ ಯಾವ ಪಶು ವನ್ನಾದರೂ ಕಾಯುವದಕ್ಕೆ ಕೊಟ್ಟಾಗ ಅದು ಸತ್ತರೆ ಇಲ್ಲವೆ ಊನವಾದರೆ ಇಲ್ಲವೆ ಯಾರೂ ನೋಡದೆ ಇದ್ದಾಗ ಓಡಿಸಿಕೊಂಡು ಹೋದರೆ
10 Se alguém der a seu próximo a guardar um jumento, ou boi, ou ovelha, ou algum animal, e morrer, ou for dilacerado, ou afugentado, ninguém o vendo,
11 ತಾನು ತನ್ನ ನೆರೆಯವನ ವಸ್ತುವನ್ನು ತೆಗೆದುಕೊಳ್ಳಲಿಲ್ಲವೆಂದು ಅವರಿಬ್ಬರ ಮಧ್ಯದಲ್ಲಿ ಕರ್ತನ ಮೇಲೆ ಪ್ರಮಾಣ ಮಾಡಬೇಕು. ಅದನ್ನು (ಪಶುವಿನ) ಯಜಮಾನನು ಒಪ್ಪಿದರೆ ಅವನು ಬದಲುಕೊಡಬಾರದು.
11 então, haverá juramento do Senhor entre ambos, de que não meteu a sua mão na fazenda do seu próximo; e seu dono o aceitará, e o outro não o restituirá.
12 ಆದರೆ ಅದು ಕಳ್ಳತನವಾಗಿ ಅವನಿಂದ ಒಯ್ಯಲ್ಪಟ್ಟಿದ್ದರೆ ಯಜ ಮಾನನಿಗೆ ಬದಲುಕೊಡಬೇಕು.
12 Mas, se lhe for furtado, o pagará ao seu dono.
13 ಅದು (ಕಾಡು ಮೃಗದಿಂದ) ಕೊಲ್ಲಲ್ಪಟ್ಟಿದ್ದರೆ ಅದನ್ನು ಸಾಕ್ಷಿಗಾಗಿ ತರಲಿ, ಕೊಲ್ಲಲ್ಪಟ್ಟದ್ದಕ್ಕೆ ಬದಲು ಕೊಡಬಾರದು.
13 Porém, se lhe for dilacerado, trá-lo-á em testemunho disso e não pagará o dilacerado.
14 ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಎರವಾಗಿತಕ್ಕೊಂಡಿರಲಾಗಿ ಒಡೆಯನು ಅದರ ಹತ್ತಿರ ಇಲ್ಲದಿ ರುವಾಗ ಆ ಪಶುವು ಊನವಾದರೆ ಇಲ್ಲವೆ ಅದು ಸತ್ತರೆ ಅದಕ್ಕೆ ಅವನು ಖಂಡಿತವಾಗಿ ಬದಲು ಕೊಡ ಬೇಕು.
14 E, se alguém a seu próximo pedir alguma coisa, e for danificada ou morta, não estando presente o seu dono, certamente a restituirá.
15 ಆದರೆ ಯಜಮಾನನು ಅದರ ಸಂಗಡ ಇದ್ದರೆ ಬದಲು ಕೊಡದೆ ಇರಲಿ. ಅದು ಬಾಡಿಗೆಗೆ ತಂದಿದ್ದರೆ ಅದರ ಬಾಡಿಗೆಯಲ್ಲಿಯೇ ಬಂದಿರುವದು.
15 Se o seu dono esteve presente, não a restituirá; se foi alugada, será pelo seu aluguel.
16 ಇದಲ್ಲದೆ ಒಬ್ಬನು ನಿಶ್ಚಯಮಾಡದ ಕನ್ನಿಕೆಯನ್ನು ಮೋಸಗೊಳಿಸಿ ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಅವಳಿಗೆ ಖಂಡಿತವಾಗಿ ತೆರವು ಕೊಡಬೇಕು.
16 Se alguém enganar alguma virgem, que não for desposada, e se deitar com ela, certamente a dotará por sua mulher.
17 ಅವಳ ತಂದೆಗೆ ಆಕೆಯನ್ನು ಕೊಡುವದಕ್ಕೆ ಮನಸ್ಸಿಲ್ಲದಿದ್ದರೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.
17 Se seu pai inteiramente recusar dar-lha, dará dinheiro conforme ao dote das virgens.
18 ಮಾಟಗಾರ್ತಿಯನ್ನು ಬದುಕ ಗೊಡಿಸಬಾರದು.
18 A feiticeira não deixarás viver.
19 ಮೃಗದ ಸಂಗಡ ಮಲಗುವ ಯಾರಾದರೂ ಸರಿಯೇ ಅವರು ಖಂಡಿತವಾಗಿ ಕೊಲ್ಲಲ್ಪಡಬೇಕು.
19 Todo aquele que se deitar com animal certamente morrerá.
20 ಕರ್ತನಿಗೆ ಹೊರತಾಗಿ ಮತ್ತೊಬ್ಬ ದೇವರಿಗೆ ಯಜ್ಞ ಮಾಡುವವನು ಸಂಪೂರ್ಣವಾಗಿ ನಾಶವಾಗಬೇಕು.
20 O que sacrificar aos deuses e não só ao Senhor será morto.
21 ಪರದೇಶಸ್ಥನನ್ನು ಉಪದ್ರವಪಡಿಸಬೇಡ, ಬಾಧೆ ಪಡಿಸಲೂಬೇಡ; ಯಾಕಂದರೆ ನೀವು ಐಗುಪ್ತದೇಶ ದಲ್ಲಿ ಪರದೇಶಿಗಳಾಗಿದ್ದಿರಿ.
21 O estrangeiro não afligirás, nem o oprimirás; pois estrangeiros fostes na terra do Egito.
22 ಯಾವ ವಿಧವೆಯನ್ನೂ ದಿಕ್ಕಿಲ್ಲದ ಮಗುವನ್ನೂ ಬಾಧಿಸಬಾರದು.
22 A nenhuma viúva nem órfão afligireis.
23 ಯಾವದೆ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ನನಗೆ ಮೊರೆಯಿಟ್ಟರೆ ನಾನು ನಿಶ್ಚಯವಾಗಿ ಅವರ ಮೊರೆಯನ್ನು ಕೇಳುವೆನು.
23 Se de alguma maneira os afligirdes, e eles clamarem a mim, eu certamente ouvirei o seu clamor,
24 ಆಗ ನನ್ನ ಕೋಪವು ಉರಿಯುವದು. ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗಿ ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
24 e a minha ira se acenderá, e vos matarei à espada; e vossas mulheres ficarão viúvas, e vossos filhos, órfãos.
25 ನಿನ್ನ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರಿಂದ ಬಡ್ಡಿ ತಕ್ಕೊಳ್ಳಬಾರದು. ಇಲ್ಲವೆ ಅವರ ಮೇಲೆ ಬಡ್ಡಿ ಹೊರಿಸ ಬೇಡ.
25 Se emprestares dinheiro ao meu povo, ao pobre que está contigo, não te haverás com ele como um usurário; não lhe imporás usura.
26 ನಿನ್ನ ನೆರೆಯವನ ಉಡುಪನ್ನು ಅಡವಾಗಿ ತಂದರೆ ಸೂರ್ಯನು ಮುಳುಗುವದರೊಳಗಾಗಿ ಅವ ನಿಗೆ ಹಿಂದಕ್ಕೆ ಕೊಡಬೇಕು.
26 Se tomares em penhor a veste do teu próximo, lho restituirás antes do pôr do sol,
27 ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವದನ್ನು ಹೊದ್ದುಕೊಂಡು ಮಲಗಿ ಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ನಾನು ಕೃಪಾಳುವು.
27 porque aquela é a sua cobertura e a veste da sua pele; em que se deitaria? Será, pois, que, quando clamar a mim, eu o ouvirei, porque sou misericordioso.
28 ದೇವರನ್ನು ನಿಂದಿಸಬೇಡ; ಇಲ್ಲವೆ ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.
28 Os juízes não amaldiçoarás e o príncipe dentre o teu povo não maldirás.
29 ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು.
29 As tuas primícias e os teus licores não retardarás; o primogênito de teus filhos me darás.
30 ಅದರಂತೆಯೇ ನಿನ್ನ ಎತ್ತುಗಳ ಲ್ಲಿಯೂ ಕುರಿಗಳಲ್ಲಿಯೂ ಮಾಡಬೇಕು. ಅದು ಏಳು ದಿನ ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನ ಅದನ್ನು ನನಗೆ ಕೊಡಬೇಕು.
30 Assim farás dos teus bois e das tuas ovelhas; sete dias estarão com sua mãe, e ao oitavo dia mos darás.
31 ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಹೊಲದಲ್ಲಿ (ಮೃಗದಿಂದ) ಕೊಲ್ಲಲ್ಪಟ್ಟದ್ದನ್ನು ನೀವು ತಿನ್ನದೆ ಅದನ್ನು ನಾಯಿಗಳಿಗೆ ಹಾಕಬೇಕು.
31 E ser-me-eis homens santos; portanto, não comereis carne despedaçada no campo; aos cães a lançareis.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Êxodo 22, comparar traduções ou montar um estudo — tudo direto pelo WhatsApp.