Êxodo 13
Kannada Bible (GL_KANNADA) vs VC
VC Versão Católica
1 ಕರ್ತನು ಮೋಶೆಯ ಸಂಗಡ ಮಾತನಾಡಿಹೇಳಿದ್ದೇನಂದರೆ--
1 O Senhor disse a Moisés:
2 ಇಸ್ರಾಯೇಲ್ ಮಕ್ಕಳಲ್ಲಿ ಗಂಡಸರಲ್ಲಿಯೂ ಪಶುಗಳಲ್ಲಿಯೂ ಗರ್ಭ ತೆರೆಯುವ ಚೊಚ್ಚಲಾದದ್ದನ್ನೆಲ್ಲಾ ನನಗಾಗಿ ಪರಿಶುದ್ಧ ಮಾಡು; ಅದು ನನ್ನದೇ ಅಂದನು.
2 "Consagrar-me-ás todo primogênito entre os israelitas, tanto homem como animal: ele será meu."
3 ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.
3 Moisés disse ao povo: "Conservareis a memória deste dia, em que saístes do Egito, da casa da servidão, porque foi pelo poder de sua mão que o Senhor vos fez sair deste lugar; não comereis pão fermentado.
4 ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
4 Vós saís hoje do Egito, no mês das espigas.
5 ಆದದ ರಿಂದ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಅಂದರೆ ಕಾನಾನ್ಯರ ಹಿತ್ತಿಯರ ಅಮೋರಿಯರ ಹಿವ್ವಿಯರ ಯೆಬೂಸಿಯರ ಹಾಲೂ ಜೇನೂ ಹರಿಯುವ ದೇಶಕ್ಕೆ ನಿನ್ನನ್ನು ಕರೆ ತಂದಾಗ ಈ ಆಚರಣೆಯನ್ನು ಈ ತಿಂಗಳಲ್ಲಿ ಆಚರಿಸ ಬೇಕು.
5 Assim, pois, quando o Senhor te houver introduzido na terra dos cananeus, dos hiteus, dos amorreus, dos heveus e dos jebuseus, que jurou a teus pais te dar, terra que mana leite e mel, observarás este rito neste mesmo mês.
6 ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಕರ್ತನಿಗೆ ಹಬ್ಬವನ್ನಾಚ ರಿಸಬೇಕು.
6 Durante sete dias comerás pães sem fermento, e no sétimo dia haverá uma festa em honra do Senhor.
7 ಹುಳಿಯಿಲ್ಲದ ರೊಟ್ಟಿಯನ್ನು ಆ ಏಳು ದಿನಗಳಲ್ಲಿ ತಿನ್ನಬೇಕು, ನಿನ್ನ ಬಳಿಯಲ್ಲಿ ಹುಳಿ ರೊಟ್ಟಿಯು ಕಾಣಿಸಬಾರದು. ಇಲ್ಲವೆ ಹುಳಿ ಹಿಟ್ಟು ನಿನ್ನ ಯಾವ ಮೇರೆಯಲ್ಲೂ ಕಾಣಬಾರದು.
7 Comer-se-ão pães sem fermento durante sete dias. Não se verão em tua casa, em toda a extensão do território, nem pães fermentados nem fermento.
8 ಆ ದಿನದಲ್ಲಿ ನಿನ್ನ ಮಗನಿಗೆ ತಿಳಿಸಿ ಹೇಳಬೇಕಾದದ್ದೇನಂದರೆ--ನಾನು ಐಗುಪ್ತದಿಂದ ಹೊರಗೆ ಬಂದಾಗ ಕರ್ತನು ನನಗೆ ಮಾಡಿದ್ದಕ್ಕಾಗಿ ಇದು ಆಚರಿಸಲ್ಪಡುತ್ತದೆ.
8 Explicarás então a teu filho: isso é em memória do que o Senhor fez por mim, quando saí do Egito.
9 ಕರ್ತನ ನ್ಯಾಯಪ್ರಮಾಣವು ನಿನ್ನ ಬಾಯಲ್ಲಿ ಇರುವಂತೆ ಅದು (ಆಚರಣೆಯು) ನಿನ್ನ ಕೈ ಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ಮಧ್ಯೆ ಜ್ಞಾಪಕಾರ್ಥವಾಗಿಯೂ ಇರ ಬೇಕು. ಕರ್ತನು ನಿನ್ನನ್ನು ತನ್ನ ಬಲವಾದ ಕೈಯಿಂದ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
9 Será isso para ti como um sinal sobre tua mão, como uma marca entre os teus olhos, a fim de que tenhas na boca a lei do Senhor, porque foi graças à sua poderosa mão que o Senhor te fez sair do Egito.
10 ಹೀಗಿರು ವದರಿಂದ ನೀನು ವರುಷ ವರುಷಕ್ಕೆ ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಕೊಳ್ಳಬೇಕು.
10 Observarás a cada ano essa prescrição no tempo prescrito.
11 ಕರ್ತನು ನಿನಗೂ ನಿನ್ನ ಪಿತೃಗಳಿಗೂ ಪ್ರಮಾಣಮಾಡಿದ ಪ್ರಕಾರ ನಿನ್ನನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಅದನ್ನು ನಿನಗೆ ಕೊಡುವನು.
11 "Quando o Senhor te houver introduzido na terra dos cananeus, como ele jurou a ti e a teus pais, e te houver dado essa terra,
12 ಗರ್ಭ ತೆರೆಯುವದೆಲ್ಲಾ ಅಂದರೆ ನಿನಗಿರುವ ಪಶುಗಳಲ್ಲಿ ಮೊದಲು ಹುಟ್ಟಿದ್ದನ್ನೆಲ್ಲಾ ಪ್ರತ್ಯೇಕಿಸಬೇಕು. ಗಂಡಾದವುಗಳು ಕರ್ತನವುಗಳೇ.
12 consagrarás ao Senhor todo primogênito; mesmo os primogênitos de teus animais, os machos, serão do Senhor.
13 ಮೊದಲು ಹುಟ್ಟಿದ ಕತ್ತೆಗಳನ್ನೆಲ್ಲಾ ಕುರಿಮರಿ ಯಿಂದ ವಿಮೋಚಿಸಬೇಕು. ಹಾಗೆ ವಿಮೋಚನೆ ಮಾಡದೆಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರ ಚೊಚ್ಚಲ ಗಂಡುಮಕ್ಕಳನ್ನು ನೀನು ವಿಮೋಚಿಸಬೇಕು.
13 Entretanto, resgatarás com um cordeiro todo primogênito do jumento; do contrário, quebrar-lhe-ás a nuca. Todo primogênito dos homens entre teus filhos, resgatá-lo-ás igualmente.
14 ಇದಲ್ಲದೆ ಮುಂದೆ ಬರುವ ಕಾಲದಲ್ಲಿ ನಿನ್ನ ಮಗನು ನಿನಗೆ--ಇದೇನು ಎಂದು ಕೇಳುವಾಗ ನೀನು ಅವನಿಗೆಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದ ದಾಸತ್ವದ ಮನೆಯಿಂದ ಹೊರಗೆ ಬರಮಾಡಿದ್ದಾನೆ.
14 E, quando teu filho te perguntar um dia o que isso significa, dir-lhe-ás: é que o Senhor nos tirou do Egito com sua mão poderosa, da casa da servidão.
15 ಫರೋಹನು ನಮ್ಮನ್ನು ಕಳುಹಿಸದೆ ಕಠಿಣವಾಗಿದ್ದದರಿಂದ ಕರ್ತನು ಐಗುಪ್ತದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಅಂದರೆ ಮನುಷ್ಯರಲ್ಲಿ ಚೊಚ್ಚಲಾ ದದ್ದು ಮೊದಲುಗೊಂಡು ಪಶುಗಳ ಚೊಚ್ಚಲಾದ ವುಗಳ ವರೆಗೆ ಕೊಂದುಹಾಕಿದನು. ಆದ್ದರಿಂದ ನಾನು ಚೊಚ್ಚಲಾದ ಗಂಡಾದವುಗಳನ್ನೆಲ್ಲಾ ಕರ್ತನಿಗೆ ಅರ್ಪಿ ಸುತ್ತೇನೆ. ನನ್ನ ಮಕ್ಕಳಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇನೆ ಎಂದು ಹೇಳಬೇಕು ಅಂದನು.
15 E, como o faraó se obstinasse em não nos deixar partir, o Senhor matou todos os primogênitos do Egito, desde os primogênitos dos homens até os dos animais. Eis por que sacrifico ao Senhor todos os primogênitos machos dos animais, e devo resgatar todo primogênito entre meus filhos.
16 ಇದು ನಿನ್ನ ಕೈಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ನಡುವೆ ಹಣೆಯ ಕಟ್ಟಾಗಿಯೂ ಇರಲಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದೊಳಗಿನಿಂದ ಹೊರಗೆ ಬರಮಾಡಿದ್ದಾನೆ.
16 Isso será como um sinal sobre tua mão e como uma marca entre teus olhos, porque foi pelo poder de sua mão que o Senhor nos tirou do Egito".
17 ಫರೋಹನು ಜನರನ್ನು ಕಳುಹಿಸಿಬಿಟ್ಟಾಗ ಫಿಲಿಷ್ಟಿಯರ ದೇಶದ ದಾರಿಯು ಸವಿಾಪವಿದ್ದರೂ ದೇವರು ಅವರನ್ನು ಅದರಲ್ಲಿ ನಡಿಸಲಿಲ್ಲ; ಯಾಕಂದರೆ ದೇವರು--ಜನರು ಯುದ್ಧವನ್ನು ನೋಡಿ ಮನಸ್ಸನ್ನು ಬೇರೆ ಮಾಡಿಕೊಂಡು ಅವರು ಐಗುಪ್ತಕ್ಕೆ ಹಿಂದಿರುಗಾರು ಎಂದು ಅಂದುಕೊಂಡನು.
17 Tendo o faraó deixado partir o povo, Deus não o conduziu pelo caminho da terra dos filisteus, que é, no entanto, o mais curto, pois disse: "Talvez o povo possa arrepender-se, no momento em que tiver de enfrentar um combate e voltar para o Egito".
18 ಹೀಗಿರುವದರಿಂದ ಕರ್ತನು ಜನರನ್ನು ಕೆಂಪು ಸಮುದ್ರದ ಅರಣ್ಯ ಮಾರ್ಗ ದಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದನು. ಆದಾಗ್ಯೂ ಇಸ್ರಾಯೇಲ್ ಮಕ್ಕಳು ಯುದ್ಧಸನ್ನದ್ಧರಾಗಿ ಐಗುಪ್ತದೇಶದೊಳಗಿಂದ ಹೋದರು.
18 Por isso, Deus fez com que o povo desse uma volta pelo deserto, para o lado do mar Vermelho. Os israelitas partiram do Egito em boa ordem.
19 ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬು ಗಳನ್ನು ತಕ್ಕೊಂಡು ಹೋದನು. ಅವನು ಇಸ್ರಾಯೇಲ್ ಮಕ್ಕಳಿಗೆ--ದೇವರು ನಿಶ್ಚಯವಾಗಿಯೂ ನಿಮ್ಮನ್ನು ದರ್ಶಿಸುವನು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು ಎಂದು ಹೇಳಿ ಖಂಡಿತವಾಗಿ ಪ್ರಮಾಣಮಾಡಿಸಿದ್ದನು.
19 Moisés levou consigo os ossos de José, porque este fizera os filhos de Israel jurarem: "Quando Deus vos visitar, levareis daqui os meus ossos convosco".
20 ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ ಏತಾಮಿನ ಅರಣ್ಯದ ಅಂಚಿನಲ್ಲಿ ಇಳುಕೊಂಡರು.
20 Tendo partido de Socot, acamparam em Etão, na extremidade do deserto.
21 ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.
21 O Senhor ia adiante deles: de dia numa coluna de nuvens para guiá-los pelo caminho; e de noite numa coluna de fogo para alumiá-los; de sorte que podiam marchar de dia e de noite.
22 ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ.
22 Nunca a coluna de nuvens deixou de preceder o povo durante o dia, nem a coluna de fogo durante a noite.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Êxodo 13, comparar traduções ou montar um estudo — tudo direto pelo WhatsApp.