Ester 4

Kannada Bible (GL_KANNADA) vs NVT

Sair da comparação
NVT Nova Versão Transformadora
1 1 ಆದದ್ದನ್ನೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಕೊಂಡು, ಗೋಣಿಯ ತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ವ್ಯಥೆ ಯಿಂದ ಗಟ್ಟಿಯಾಗಿ ಕೂಗಿದನು.
1 Quando Mardoqueu soube de tudo que havia acontecido, rasgou suas roupas, vestiu-se de pano de saco, cobriu-se de cinzas e saiu pela cidade, chorando alto e amargamente.
2 ಅವನು ಅರಸನ ಅರಮನೆಯ ಬಾಗಲಿನ ವರೆಗೆ ಬಂದನು. ಯಾಕಂದರೆ ಗೋಣಿಯತಟ್ಟನ್ನು ಉಟ್ಟುಕೊಂಡು ಅರಸನ ಅರ ಮನೆಯ ಬಾಗಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ.
2 Foi até a porta do palácio, mas ninguém que estivesse usando roupas de luto tinha permissão para entrar.
3 ಇದಲ್ಲದೆ ಅರಸನ ಮಾತೂ ಅವನ ಕಟ್ಟ ಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾ ಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿಯ ತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಮಲಗಿ ಕೊಂಡರು.
3 Quando a notícia do decreto chegou a todas as províncias, houve grande pranto entre os judeus. Jejuaram, choraram e lamentaram, e muitos se deitaram em pano de saco e em cinzas.
4 ಆಗ ಎಸ್ತೇರಳ ದಾಸಿಯರೂ ಅವಳ ಪ್ರತಿ ವಿಚಾ ರಕರೂ ಬಂದು ಅವಳಿಗೆ ತಿಳಿಸಿದರು. ಆದದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆ ಕೈಯು ಗೋಣಿಯ ತಟ್ಟನ್ನು ತೆಗೆದು ಹಾಕಿ ಧರಿಸಿ ಕೊಳ್ಳುವದಕ್ಕೆ ವಸ್ತ್ರವನ್ನು ಕಳುಹಿಸಿದಳು.
4 Quando as criadas de Ester e os eunucos vieram e lhe contaram sobre Mardoqueu, ela ficou muito angustiada. Enviou-lhe roupas para vestir em lugar do pano de saco, mas ele não aceitou.
5 ಆದರೆ ಅವನು ತಕ್ಕೊಳ್ಳಲಿಲ್ಲ. ಆಗ ಎಸ್ತೇರಳು ತನ್ನ ಬಳಿಯಲ್ಲಿ ಇರಿಸಲ್ಪಟ್ಟ ಅರಸನ ಮನೆವಾರ್ತೆಯವರಲ್ಲಿ ಹತಾಕ ನನ್ನು ಕರೆದು--ಇದೇನೆಂದೂ ಯಾತಕ್ಕೆಂದೂ ಮೊರ್ದೆ ಕೈಯಿಂದ ತಿಳಿದುಕೊಳ್ಳಬೇಕೆಂದು ಅವನಿಗೆ ಆಜ್ಞಾ ಪಿಸಿದಳು.
5 Então Ester mandou chamar Hataque, um dos eunucos do rei que havia sido nomeado para servi-la. Ordenou que ele fosse até Mardoqueu e descobrisse o que o perturbava e por que ele estava de luto.
6 ಹಾಗೆಯೇ ಹತಾಕನು ಅರಸನ ಅರ ಮನೆಯ ಬಾಗಲ ಮುಂದಿರುವ ಪಟ್ಟಣದ ಬೀದಿ ಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೊರಟುಹೋದನು.
6 Hataque foi até Mardoqueu na praça da cidade, em frente à porta do palácio.
7 ಆಗ ಮೊರ್ದೆಕೈ ತನಗೆ ಆದದ್ದನ್ನೂ ಹಾಮಾನನು ಯೆಹೂದ್ಯರನ್ನು ನಾಶಮಾಡುವ ನಿಮಿತ್ತ ಅರಸನ ಬೊಕ್ಕಸಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣ ವನ್ನೂ ಅವನಿಗೆ ತಿಳಿಸಿದನು.
7 Mardoqueu lhe contou tudo e lhe informou a quantidade exata de prata que Hamã havia prometido pagar ao tesouro real pela destruição dos judeus.
8 ಯೆಹೂದ್ಯರನ್ನು ನಾಶ ಮಾಡಲು ಶೂಷನಿನಲ್ಲಿ ಕೊಡಲ್ಪಟ್ಟ ಆಜ್ಞಾಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರ ಳಿಗೆ ತೋರಿಸಿ ತಿಳಿಸುವದಕ್ಕೂ ಅವಳು ತನ್ನ ಜನ ಕ್ಕೋಸ್ಕರ ಅರಸನ ಮುಂದೆ ಬಿನ್ನಹಮಾಡಿ ಬೇಡಿ ಕೊಳ್ಳುವದಕ್ಕೂ ಅವನ ಬಳಿಗೆ ಹೋಗಬೇಕೆಂದು ಅವಳಿಗೆ ಆಜ್ಞಾಪಿಸಲು ಹೇಳಿದನು.
8 Mardoqueu entregou a Hataque uma cópia do decreto publicado em Susã que ordenava o extermínio de todos os judeus. Pediu a Hataque que mostrasse o decreto a Ester e lhe explicasse a situação. Também pediu a Hataque que a orientasse a ir falar com o rei para implorar por misericórdia e interceder em favor de seu povo.
9 ಆಗ ಹತಾಕನು ಬಂದು ಮೊರ್ದೆಕೈಯ ಮಾತು ಗಳನ್ನು ಎಸ್ತೇರಳಿಗೆ ತಿಳಿಸಿದನು.
9 Hataque voltou a Ester com o recado de Mardoqueu.
10 ಎಸ್ತೇರಳು ಮೊರ್ದೆ ಕೈಗೆ ಹೇಳಲು ಹತಾಕನಿಗೆ ಆಜ್ಞಾಪಿಸಿದ್ದೇನಂದರೆ--
10 Então Ester mandou Hataque dizer a Mardoqueu:
11 ಕರಿಸಲ್ಪಡದೆ ಅರಸನ ಬಳಿಗೆ ಒಳಮನೆಯಲ್ಲಿ ಪ್ರವೇಶಿಸುವ ಯಾವನಾದರೂ ಗಂಡಸಾದರೂ ಸರಿ ಹೆಂಗಸಾದರೂ ಸರಿ ಬದುಕುವ ಹಾಗೆ ಅರಸನು ಬಂಗಾರದ ಮುದ್ರೆ ಕೋಲನ್ನು ಅವನ ಬಳಿಗೆ ಚಾಚಿ ದರೆ ಹೊರತು ಅವನನ್ನು ಕೊಲ್ಲಬೇಕೆಂಬ ಅವನ ಆಜ್ಞೆ ಒಂದೇ ಉಂಟೆಂದು ಅರಸನ ಸಮಸ್ತ ಸೇವ ಕರೂ ಅರಸನ ಪ್ರಾಂತ್ಯಗಳ ಜನರೂ ತಿಳಿದಿದ್ದಾರೆ. ಆದರೆ ನಾನು ಈ ಮೂವತ್ತು ದಿವಸಗಳಿಂದ ಅರಸನ ಬಳಿಗೆ ಕರೆಯಲ್ಪಡಲಿಲ್ಲ ಎಂದು ಅಂದಾಗ
11 “Todos os oficiais do rei, e até mesmo o povo das províncias, sabem que qualquer pessoa que se apresenta diante do rei no pátio interno sem ter sido convidada está condenada a morrer, a menos que o rei lhe estenda seu cetro de ouro. Além do mais, há trinta dias o rei não me chama à sua presença”.
12 ಅವರು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದರು.
12 E o recado de Ester foi transmitido a Mardoqueu.
13 ಆಗ ಮೊರ್ದೆಕೈ ಎಸ್ತೇರಳಿಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ--ನೀನು ಅರಮನೆಯಲ್ಲಿರುವ ದರಿಂದ ಸಮಸ್ತ ಯೆಹೂದ್ಯರಲ್ಲಿ ತಪ್ಪಿಸಿಕೊಳ್ಳುವೆ ನೆಂದು ನೆನಸಬೇಡ.
13 Mardoqueu enviou esta resposta a Ester: “Não pense que por estar no palácio você escapará quando todos os outros judeus forem mortos.
14 ನೀನು ಈ ಕಾಲದಲ್ಲಿ ಮೌನವಾಗಿಯೇ ಇದ್ದರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ವಿಶ್ರಾಂತಿಯೂ ಬಿಡುಗಡೆಯೂ ಉಂಟಾಗುವವು; ಆದರೆ ನೀನೂ ನಿನ್ನ ತಂದೆಯ ಮನೆಯೂ ನಾಶವಾಗಿ ಹೋಗುವಿರಿ. ಇಂಥಾ ಕಾಲ ಕ್ಕೋಸ್ಕರ ನೀನು ರಾಜತ್ವಕ್ಕೆ ಬಂದಿ ಏನೋ ತಿಳಿದ ವರು ಯಾರು ಅಂದನು.
14 Se ficar calada num momento como este, alívio e livramento virão de outra parte para os judeus, mas você e seus parentes morrerão. Quem sabe não foi justamente para uma ocasião como esta que você chegou à posição de rainha?”.
15 ಎಸ್ತೇರಳು ಮೊರ್ದೆಕೈಗೆ ಹೇಳಿ ಕಳುಹಿಸಿದ ಪ್ರತ್ಯುತ್ತರವೇನಂದರೆ -- ನೀನು ಹೋಗಿ ಶೂಷನಿನಲ್ಲಿರುವ ಸಮಸ್ತ ಯೆಹೂದ್ಯರನ್ನು ಕೂಡಿಸಿ ನನಗೋಸ್ಕರ ರಾತ್ರಿ ಹಗಲೂ ಮೂರು ದಿವಸ ತಿನ್ನದೆಯೂ ಕುಡಿಯದೆಯೂ ಉಪವಾಸ ಮಾಡಿರಿ.
15 Então Ester enviou esta resposta a Mardoqueu:
16 ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.
16 “Vá, reúna todos os judeus de Susã e jejuem por mim. Não comam nem bebam durante três dias e três noites. Minhas criadas e eu faremos o mesmo. Depois, irei à presença do rei, mesmo que seja contra a lei. Se eu tiver de morrer, morrerei”.
17 ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
17 Mardoqueu foi e fez tudo conforme as instruções de Ester.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ester 4, comparar traduções ou montar um estudo — tudo direto pelo WhatsApp.