Ester 3

Kannada Bible (GL_KANNADA) vs BKJ

Sair da comparação
1 ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗ್ಯನಾದ ಹಮ್ಮೆದಾತನ ಮಗನಾದ ಹಾಮಾನನನ್ನು ದೊಡ್ಡವ ನಾಗಿ ಮಾಡಿ ಅವನನ್ನು ಎತ್ತಿ ತನ್ನ ಬಳಿಯಲ್ಲಿರುವ ಸಮಸ್ತ ಪ್ರಧಾನರಿಗಿಂತ ಅವನ ಆಸನವನ್ನು ಉನ್ನತ ಮಾಡಿದನು.
1 Depois destas coisas, o rei Assuero promoveu Hamã, o filho de Hamedata, o agagita, e exaltou-o e pôs o seu assento acima de todos os príncipes que estavam com ele.
2 ಆದಕಾರಣ ಅರಮನೆಯ ಬಾಗಲ ಲ್ಲಿರುವ ಅರಸನ ಸಮಸ್ತ ಸೇವಕರು ಬೊಗ್ಗಿ ಹಾಮಾನ ನಿಗೆ ಅಡ್ಡಬಿದ್ದರು. ಅರಸನು ಅವನನ್ನು ಕುರಿತು ಹಾಗೆಯೇ ಆಜ್ಞಾಪಿಸಿದ್ದನು, ಆದರೆ ಮೊರ್ದೆಕೈ ಬೊಗ್ಗದೆ ಅಡ್ಡಬೀಳದೆ ಇದ್ದನು.
2 E todos os servos do rei, que estavam no portão do rei, curvaram-se, e reverenciaram Hamã; porque assim tinha ordenado o rei acerca dele. Porém, Mardoqueu não se curvou, tampouco lhe fez reverência.
3 ಆಗ ಅರಮನೆಯ ಬಾಗಲಲ್ಲಿರುವ ಅರಸನ ಸೇವಕರು ಮೊರ್ದೆಕೈಗೆ ನೀನು ಅರಸನ ಆಜ್ಞೆಯನ್ನು ವಿಾರುವದೇನು ಅಂದರು.
3 Então, os servos do rei, que estavam no portão do rei, disseram a Mardoqueu: Por que transgride tu o mandamento do rei?
4 ಆದರೆ ಅವರು ದಿನ ದಿನ ಅವನಿಗೆ ಹೇಳಿದಾಗ್ಯೂ ಅವನು ಅವರ ಮಾತು ಕೇಳದೆ ಹೋದದರಿಂದ ಅವರು ಮೊರ್ದೆಕೈಯ ಮಾತುಗಳು ನಿಲ್ಲುವವೋ ಎಂದು ನೋಡಿಕೊಳ್ಳಲು ಹಾಮಾನನಿಗೆ ತಿಳಿಸಿದರು. ಯಾಕಂದರೆ ತಾನು ಯೆಹೂದ್ಯನೆಂದು ಅವರಿಗೆ ಹೇಳಿದ್ದನು.
4 Tendo eles falado com ele dia após dia e, não lhes dando ele ouvidos, referiram-no a Hamã, para ver se a conduta de Mardoqueu seria tolerada; pois Mardoqueu lhes tinha dito que era judeu.
5 ಮೊರ್ದೆಕೈ ತನಗೆ ಬೊಗ್ಗದೆ ಅಡ್ಡ ಬೀಳದೆ ಇರು ವದನ್ನು ಹಾಮಾನನು ನೋಡಿ ಕೋಪವುಳ್ಳವ ನಾದನು.
5 E quando Hamã viu que Mardoqueu não se curvava, nem lhe fazia reverência, então Hamã ficou cheio de ira.
6 ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು.
6 E ele considerou escárnio colocar as mãos somente sobre Mardoqueu; porque lhe haviam declarado o povo de Mardoqueu; porquanto Hamã buscou destruir todos os judeus, o povo de Mardoqueu, que estavam em todo o reino de Assuero.
7 ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್‌ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್‌ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್‌ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು.
7 No primeiro mês, isto é, no mês de nisã, no décimo segundo ano do rei Assuero, lançou-se Pur, isto é, a sorte, diante de Hamã, dia após dia, e mês após mês, até o décimo segundo mês, que é o mês de adar.
8 ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.
8 E Hamã disse ao rei Assuero: Existe um certo povo espalhado e disperso no meio do povo em todas as províncias do teu reino; e as suas leis são diferentes de todos os povos; tampouco guardam eles as leis do rei; portanto não é de proveito para o rei tolerá-los.
9 ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು.
9 Se aprouver ao rei, que seja escrito que eles podem ser destruídos; e eu pagarei dez mil talentos de prata às mãos daqueles que tiverem o encargo do negócio, para trazê-lo às tesourarias do rei.
10 ಆಗ ಅರಸನು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನಿಗೆ ಕೊಟ್ಟನು.
10 E o rei tirou o seu anel da sua mão, e o deu a Hamã, o filho de Hamedata, o agagita, o inimigo dos judeus.
11 ಅರಸನು ಹಾಮಾನನಿಗೆ, ಬೆಳ್ಳಿಯನ್ನೂ ಆ ಜನವನ್ನೂ ನಿನಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡುವದಕ್ಕೆ ನಿನ್ನ ಕೈಯಲ್ಲಿ ಅವು ಒಪ್ಪಿಸ ಲ್ಪಟ್ಟಿವೆ ಅಂದನು.
11 E o rei disse a Hamã: A prata te é dada, o povo também, para fazeres com eles como te parecer bem.
12 ಆಗ ಮೊದಲನೇ ತಿಂಗಳ ಹದಿಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಹಾಮಾನನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಪ್ರತಿ ಪ್ರಾಂತ್ಯದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತ್ಯದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅದರದರ ಬರಹದ ಪ್ರಕಾರವಾಗಿಯೂ ಜನರ ಪ್ರತಿಯೊಬ್ಬರ ಭಾಷೆಯ ಪ್ರಕಾರವಾಗಿಯೂ ಬರೆಯಲ್ಪಟ್ಟಿತು. ಅದು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟಿತು.
12 Então foram chamados os escribas do rei no décimo terceiro dia do primeiro mês, e ali foi escrito conforme tudo o que Hamã havia ordenado aos tenentes do rei, e aos governadores que estavam sobre cada província, e aos governadores de cada povo e cada província de acordo com a sua escrita, e a cada povo segundo a sua língua; em nome do rei Assuero isto foi escrito, e selado com o anel do rei.
13 ಒಂದೇ ದಿನದಲ್ಲಿ ಅಂದರೆ ಅಡಾರ್‌ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು.
13 E as cartas foram enviadas por mensageiros a todas as províncias do rei, para que destruíssem, matassem, e fizessem perecer a todos os judeus, tanto moços como velhos, crianças pequenas e mulheres, em um mesmo dia, a saber, no décimo terceiro dia do décimo segundo mês, o qual é o mês de adar, e que saqueassem o seu despojo.
14 ಅವರು ಆ ದಿನಕ್ಕೆ ಸಿದ್ಧವಾಗಿರುವ ಹಾಗೆ ಪ್ರತಿ ಪ್ರಾಂತ್ಯದಲ್ಲಿ ಕಟ್ಟಳೆಯಾಗಿ ಬರೆದ ಪತ್ರಿಕೆಯು ಎಲ್ಲಾ ಜನಗಳಿಗೆ ಪ್ರಸಿದ್ಧ ಮಾಡಲ್ಪಟ್ಟಿತು.
14 A cópia do escrito para um mandamento a ser dado em cada província, foi publicada a todo o povo, para que eles estivessem preparados para aquele dia.
15 ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್‌ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್‌ ಪಟ್ಟಣವು ತಳ ಮಳಗೊಂಡಿತು.
15 Os mensageiros saíram às pressas pela ordem do rei, e o decreto foi dado no palácio de Susã. E o rei e Hamã se assentaram para beber; mas a cidade de Susã ficou perplexa.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Ester 3, comparar traduções ou montar um estudo — tudo direto pelo WhatsApp.