Efésios 4

Kannada Bible (GL_KANNADA) vs ARC

Sair da comparação
ARC Almeida Revista e Corrigida 2009
1 ಆದದರಿಂದ ನೀವು ಕರೆಯಲ್ಪಟ್ಟ ಕರೆಯುವಿಕೆಗೆ ಯೋಗ್ಯರಾಗಿ ನಡೆದುಕೊಳ್ಳ ಬೇಕೆಂದು ಕರ್ತನ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
1 Rogo-vos, pois, eu, o preso do Senhor, que andeis como é digno da vocação com que fostes chamados,
2 ನೀವು ಪೂರ್ಣ ವಿನಯ ಸಾತ್ವಿಕತ್ವ ಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವ ರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
2 com toda a humildade e mansidão, com longanimidade, suportando-vos uns aos outros em amor,
3 ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ ಕೊಳ್ಳುವದಕ್ಕೆ ಆಸಕ್ತರಾಗಿರ್ರಿ.
3 procurando guardar a unidade do Espírito pelo vínculo da paz:
4 ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ,
4 há um só corpo e um só Espírito, como também fostes chamados em uma só esperança da vossa vocação;
5 ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ.
5 um só Senhor, uma só fé, um só batismo;
6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
6 um só Deus e Pai de todos, o qual é sobre todos, e por todos, e em todos.
7 ಆದರೆ ಕ್ರಿಸ್ತನು ಅನುಗ್ರಹಿಸಿದ ದಾನದ ಅಳತೆ ಗನುಸಾರವಾಗಿ ನಮ್ಮಲ್ಲಿ ಪ್ರತಿಯೊಬ್ಬನಿಗೆ ಕೃಪೆಯು ಕೊಡಲ್ಪಟ್ಟಿತು.
7 Mas a graça foi dada a cada um de nós segundo a medida do dom de Cristo.
8 ಆದದರಿಂದ--ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ ಸೆರೆಯನ್ನು ಸೆರೆಹಿಡಿದುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಕೊಟ್ಟನು ಎಂದು ಆತನು ಹೇಳುತ್ತಾನೆ.
8 Pelo que diz: Subindo ao alto, levou cativo o cativeiro e deu dons aos homens.
9 (ಏರಿ ಹೋದನೆಂದು ಹೇಳಿ ದ್ದರಲ್ಲಿ ಮೊದಲು ಭೂಮಿಯ ಅಧೋಭಾಗಕ್ಕೆ ಇಳಿ ದಿದ್ದನೆಂತಲೂ ಹೇಳಿದ ಹಾಗಾಯಿತಲ್ಲವೇ?
9 Ora, isto — ele subiu — que é, senão que também, antes, tinha descido às partes mais baixas da terra?
10 ಇಳಿದು ಬಂದಾತನು ಮೇಲಣ ಎಲ್ಲಾ ಆಕಾಶ ಗಳಿಗಿಂತ ಉನ್ನತವಾಗಿ ಏರಿ ಹೋದಾತನೇ; ಆದದರಿಂದ ಆತನು ಸಮಸ್ತವನ್ನು ತುಂಬಿದವ ನಾದನು).
10 Aquele que desceu é também o mesmo que subiu acima de todos os céus, para cumprir todas as coisas.
11 ಪರಿಶುದ್ಧರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸೇವೆಯ ಕೆಲಸಕ್ಕೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೂಸ್ಕರವೂ
11 E ele mesmo deu uns para apóstolos, e outros para profetas, e outros para evangelistas, e outros para pastores e doutores,
12 ಆತನು ಕೆಲವರನ್ನು ಅಪೋಸ್ತರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರ ನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು.
12 querendo o aperfeiçoamento dos santos, para a obra do ministério, para edificação do corpo de Cristo,
13 ಹೀಗೆ ನಾವೆಲ್ಲರೂ ನಂಬಿಕೆಯ ಅನ್ಯೋನ್ಯತೆಯಲ್ಲಿಯೂ ದೇವಕುಮಾರನ ಜ್ಞಾನದಲ್ಲಿಯೂ ಪರಿಪೂರ್ಣ ಮನುಷ್ಯನಾಗುವದಕ್ಕೆ ಕ್ರಿಸ್ತನ ಪರಿಪೂರ್ಣತೆಯ ನೀಳದ ಪ್ರಮಾಣಕ್ಕೆ ಮುಟ್ಟುವೆವು.
13 até que todos cheguemos à unidade da fé e ao conhecimento do Filho de Deus, a varão perfeito, à medida da estatura completa de Cristo,
14 ನಾವು ಇನ್ನು ಮೇಲೆ ಹೊಂಚು ಹಾಕುವವರ ವಂಚನೆಗೂ ಮನುಷ್ಯರ ಕಪಟದಿಂದಲೂ ಮೋಸದ ಉಪಾಯ ಮಾಡುವ ತಂತ್ರದಿಂದಲೂ ಬೋಧನೆಯ ಪ್ರತಿಯೊಂದು ಗಾಳಿ ಯಿಂದಲೂ ಬಡಿಯಲ್ಪಟ್ಟು ಅತ್ತಿತ್ತ ನೂಕಾಡಲ್ಪಡುವ ಬಾಲಕರಂತೆ ಇರಬಾರದು.
14 para que não sejamos mais meninos inconstantes, levados em roda por todo vento de doutrina, pelo engano dos homens que, com astúcia, enganam fraudulosamente.
15 ಆದರೆ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ ಎಲ್ಲಾ ವಿಷಯಗಳಲ್ಲಿ ತಲೆಯು ತಾನೇ ಆಗಿರುವ ಕ್ರಿಸ್ತನಲ್ಲಿ ಬೆಳೆಯಿರಿ.
15 Antes, seguindo a verdade em amor, cresçamos em tudo naquele que é a cabeça, Cristo,
16 ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲು ಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯಹೊಂದಿ ಪ್ರೀತಿ ಯಿಂದ ತನ್ನಲ್ಲಿ ಐಕ್ಯವಾಗಿದ್ದು ಭಕ್ತಿವೃದ್ಧಿಯನ್ನು ಹೊಂದುತ್ತದೆ.
16 do qual todo o corpo, bem-ajustado e ligado pelo auxílio de todas as juntas, segundo a justa operação de cada parte, faz o aumento do corpo, para sua edificação em amor.
17 ಆದದರಿಂದ ಅನ್ಯಜನರು ನಡೆದುಕೊಳ್ಳುವ ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರ ದೆಂದು ಕರ್ತನಲ್ಲಿರುವವನಾಗಿ ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ. ಅವರು ನಿಷ್ಪ್ರಯೋಜನ ವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ;
17 E digo isto e testifico no Senhor, para que não andeis mais como andam também os outros gentios, na vaidade do seu sentido,
18 ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕುರುಡುತನದ ನಿಮಿತ್ತದಿಂದಲೂ ತಮ್ಮಲ್ಲಿರುವ ಆಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.
18 entenebrecidos no entendimento, separados da vida de Deus, pela ignorância que há neles, pela dureza do seu coração,
19 ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.
19 os quais, havendo perdido todo o sentimento, se entregaram à dissolução, para, com avidez, cometerem toda impureza.
20 ನೀವಾದರೋ ಕ್ರಿಸ್ತನನ್ನು ಹಾಗೆ ಕಲಿತುಕೊಳ್ಳಲಿಲ್ಲ.
20 Mas vós não aprendestes assim a Cristo,
21 ಆತನನ್ನೇ ಕೇಳಿದಿರಲ್ಲಾ, ಆತನಲ್ಲಿಯೇ ಉಪದೇಶ ವನ್ನು ಹೊಂದಿದಿರಲ್ಲಾ.
21 se é que o tendes ouvido e nele fostes ensinados, como está a verdade em Jesus,
22 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು.
22 que, quanto ao trato passado, vos despojeis do velho homem, que se corrompe pelas concupiscências do engano,
23 ನೀವು ನಿಮ್ಮ ಮನಸ್ಸಿನಭಾವದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
23 e vos renoveis no espírito do vosso sentido,
24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ನೀತಿಯಲ್ಲಿಯೂ ನಿಜವಾದ ಪರಿಶುದ್ಧತೆಯಲ್ಲಿಯೂ ನಿರ್ಮಿಸಲ್ಪಟ್ಟಿದೆ.
24 e vos revistais do novo homem, que, segundo Deus, é criado em verdadeira justiça e santidade.
25 ಆದ ಕಾರಣ ಸುಳ್ಳಾಡುವದನ್ನು ಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.
25 Pelo que deixai a mentira e falai a verdade cada um com o seu próximo; porque somos membros uns dos outros.
26 ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ;
26 Irai-vos e não pequeis; não se ponha o sol sobre a vossa ira.
27 ಸೈತಾನನಿಗೆ ಅವಕಾಶ ಕೊಡಲೇಬೇಡಿರಿ.
27 Não deis lugar ao diabo.
28 ಕಳವು ಮಾಡುವವನು ಇನ್ನು ಮೇಲೆ ಕಳವು ಮಾಡದೆ ಕೈಯಿಂದ ಯಾವದಾದರೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕೊರತೆಯಲ್ಲಿರುವವರಿಗೆ ಕೊಡು ವದಕ್ಕೆ ಅವನಿಂದಾ ಗುವದು.
28 Aquele que furtava não furte mais; antes, trabalhe, fazendo com as mãos o que é bom, para que tenha o que repartir com o que tiver necessidade.
29 ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.
29 Não saia da vossa boca nenhuma palavra torpe, mas só a que for boa para promover a edificação, para que dê graça aos que a ouvem.
30 ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.
30 E não entristeçais o Espírito Santo de Deus, no qual estais selados para o Dia da redenção.
31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.
31 Toda amargura, e ira, e cólera, e gritaria, e blasfêmias, e toda malícia seja tirada de entre vós.
32 ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ.
32 Antes, sede uns para com os outros benignos, misericordiosos, perdoando-vos uns aos outros, como também Deus vos perdoou em Cristo.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Efésios 4, comparar traduções ou montar um estudo — tudo direto pelo WhatsApp.