Deuteronômio 9
Kannada Bible (GL_KANNADA) vs BKJ
BKJ BKJ
1 ಓ ಇಸ್ರಾಯೇಲೇ, ಕೇಳು; ನೀನು ಹೋಗಿ ನಿನಗಿಂತ ದೊಡ್ಡದಾದ ಬಲಿಷ್ಠ ಜನಾಂಗ ಗಳನ್ನೂ ಆಕಾಶದ ವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ
1 Ouve, ó Israel: Hoje deves passar o Jordão, para possuíres nações maiores e mais poderosas do que tu, cidades grandes e muradas até o céu,
2 ಅನಾಕ್ಯರ ಮಕ್ಕಳ ಮುಂದೆ ಯಾರು ನಿಲ್ಲುವರು ಎಂದು ನೀನು ಕೇಳಿ ತಿಳುಕೊಂಡಂಥ ಆ ಮಹಾ ಎತ್ತರವಾದ ಜನವಾಗಿರುವ ಅನಾಕ್ಯರ ಮಕ್ಕಳನ್ನೂ ಸ್ವತಂತ್ರಿಸಿಕೊಳ್ಳುವದಕ್ಕೆ ಈಹೊತ್ತು ಯೊರ್ದನನ್ನು ದಾಟುತ್ತೀ.
2 um povo grande e alto, os filhos dos anaquins, a quem conheces e de quem ouviste falar. Quem pode resistir diante os filhos de Anaque?
3 ಹೀಗಿರುವದರಿಂದ ನೀನು ಈಹೊತ್ತು ತಿಳಿದುಕೊಳ್ಳತಕ್ಕದ್ದೇನಂದರೆ--ನಿನ್ನ ದೇವ ರಾದ ಕರ್ತನೇ ನಿನ್ನ ಮುಂದೆ ದಾಟಿಹೋಗುತ್ತಾನೆ; ಆತನು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡು ವನು; ಆತನು ಅವರನ್ನು ನಿನ್ನ ಮುಂದೆ ತಗ್ಗಿಸುವನು; ಈ ಪ್ರಕಾರ ಅವರನ್ನು ಸ್ವಾಧೀನಪಡಿಸಿಕೊಂಡು ಕರ್ತನು ನಿನಗೆ ಹೇಳಿದ ಹಾಗೆ ಅವರನ್ನು ಬೇಗ ನಾಶಮಾಡುವಿ.
3 Entendemos portanto neste dia, que o SENHOR teu Deus é aquele que vai adiante de ti; como um fogo consumidor, ele os destruirá, e fará com que caiam diante da tua face; assim tu os expulsarás, e os destruirás rapidamente, como o SENHOR te ordenou.
4 ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ತಳ್ಳಿಹಾಕಿದಾಗ--ನನ್ನ ನೀತಿಯ ನಿಮಿತ್ತ ಈ ದೇಶವನ್ನು ಸ್ವತಂತ್ರಿಸಿಕೊಳ್ಳುವ ಹಾಗೆ ಕರ್ತನು ನನ್ನನ್ನು ಕರಕೊಂಡು ಬಂದಿದ್ದಾನೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳ ಬಾರದು; ಆ ಜನಾಂಗಗಳ ಕೆಟ್ಟತನದ ನಿಮಿತ್ತ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
4 Não fales no teu coração, depois que o SENHOR teu Deus os tiver lançado fora de diante de ti, dizendo: Pela minha justiça o SENHOR me trouxe para possuir esta terra; mas pela iniquidade destas nações, o SENHOR os expulsou de diante de ti.
5 ನಿನ್ನ ನೀತಿಗೋಸ್ಕರವೂ ನಿನ್ನ ಹೃದಯದ ಯಥಾರ್ಥತೆ ಗೋಸ್ಕರವೂ ನೀನು ಅವರ ದೇಶವನ್ನು ಸ್ವತಂತ್ರಿಸಿ ಕೊಳ್ಳುವದಕ್ಕೆ ಬರುವದಿಲ್ಲ; ಆ ಜನಾಂಗಗಳ ಕೆಟ್ಟತನ ಕ್ಕೋಸ್ಕರವೂ ಕರ್ತನು ನಿನ್ನ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
5 Não é pela tua justiça, nem pela retidão do teu coração, que vais possuir a terra; mas pela iniquidade dessas nações, o SENHOR teu Deus as expulsa de diante de ti, e para que ele possa realizar a obra que o SENHOR jurou a teus pais, Abraão, Isaque e Jacó.
6 ಹೀಗಿರುವದರಿಂದ ನಿನ್ನ ನೀತಿಗೋಸ್ಕರ ನಿನ್ನ ದೇವರಾದ ಕರ್ತನು ನಿನಗೆ ಈ ಉತ್ತಮ ದೇಶವನ್ನು ಸ್ವಾಧೀನಪಡಿಸಿಕೊಳ್ಳುವದಕ್ಕೆ ಕೊಡುವದಿಲ್ಲವೆಂದು ತಿಳಿದುಕೊಳ್ಳಬೇಕು; ನೀನು ಬಗ್ಗದ ಕುತ್ತಿಗೆಯುಳ್ಳ ಜನವೇ.
6 Entende, portanto, que não é pela tua justiça que o SENHOR teu Deus te dá esta boa terra para possuí-la, pois tu és um povo obstinado.
7 ನೀನು ಅರಣ್ಯದಲ್ಲಿ ನಿನ್ನ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡು, ಮರೆಯಬೇಡ; ನೀನು ಐಗುಪ್ತದೇಶದಿಂದ ಹೊರಟ ದಿವಸ ಮೊದಲು ಗೊಂಡು ಈ ಸ್ಥಳಕ್ಕೆ ಬರುವ ವರೆಗೆ ಕರ್ತನಿಗೆ ವಿರೋಧ ವಾಗಿ ತಿರುಗಿಬೀಳುತ್ತಿದ್ದಿರಿ.
7 Lembra-te, e não te esqueças como provocaste à ira ao SENHOR teu Deus no deserto; desde o dia em que deixastes a terra do Egito, até que chegastes a este lugar, fostes rebeldes contra o SENHOR.
8 ಹೋರೇಬಿನಲ್ಲಿಯೂ ಕರ್ತನಿಗೆ ಕೋಪವನ್ನೆಬ್ಬಿಸಿದಾಗ ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಸಿಟ್ಟುಮಾಡಿ ಕೊಂಡನು.
8 Também em Horebe provocastes à ira ao SENHOR, e o SENHOR se irou convosco, para vos destruir.
9 ಆ ಕಲ್ಲಿನ ಹಲಗೆಗಳನ್ನು ಅಂದರೆ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತಕ್ಕೊಳ್ಳುವದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ಬೆಟ್ಟದಲ್ಲಿದ್ದೆನು.
9 Quando subi ao monte para receber as tábuas de pedra, as tábuas do pacto que o SENHOR fez convosco, permaneci no monte quarenta dias e quarenta noites; não comi pão nem bebi água;
10 ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ; ಆಗ ದೇವರ ಬೆರಳಿನಿಂದ ಬರೆದ ಆ ಎರಡು ಕಲ್ಲಿನ ಹಲಗೆ ಗಳನ್ನು ಕರ್ತನು ನನಗೆ ಕೊಟ್ಟನು; ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭಾಕೂಟದ ದಿವಸದಲ್ಲಿ ಆಡಿದ ಮಾತುಗಳೆಲ್ಲಾ ಅವುಗಳಲ್ಲಿದ್ದವು.
10 e o SENHOR me entregou duas tábuas de pedra, escritas com o dedo de Deus; e nelas havia escrito conforme todas as palavras que o SENHOR falou convosco no monte, do meio do fogo, no dia da congregação.
11 ನಾಲ್ವತ್ತು ಹಗಲು ನಾಲ್ವತ್ತು ರಾತ್ರಿಗಳಾದ ಮೇಲೆ ಕರ್ತನು ನನಗೆ ಒಡಂಬಡಿಕೆಯ ಹಲಗೆಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟನು.
11 E aconteceu que no fim de quarenta dias e quarenta noites, que o SENHOR me deu as duas tábuas de pedra, as tábuas do pacto.
12 ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು.
12 E o SENHOR me disse: Levanta-te, desce rapidamente daqui, porque o teu povo, que tiraste do Egito se corrompeu; eles se afastaram, rapidamente, do caminho que eu lhes ordenei; eles fizeram para si mesmos uma imagem de fundição.
13 ಇದಲ್ಲದೆ ಕರ್ತನು ನನಗೆ--ನಾನು ಈ ಜನವನ್ನು ನೋಡಿದ್ದೇನೆ; ಇಗೋ, ಇದು ಬಗ್ಗದ ಕುತ್ತಿಗೆಯುಳ್ಳ ಜನವೇ.
13 Além disso, o SENHOR falou comigo, dizendo: Eu vi esse povo, e eis que é um povo obstinado;
14 ನನ್ನನ್ನು ಬಿಡು; ಆಗ ಅವರನ್ನು ನಾಶಮಾಡಿ ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು ನಿನ್ನನ್ನು ಅವರಿಗಿಂತ ಬಲವಾದ ಬಹು ಜನಾಂಗವಾಗ ಮಾಡುವೆನು ಎಂದು ಹೇಳಿದನು.
14 deixe-me sozinho, para que eu os destrua, e apague o seu nome de debaixo do céu; e farei de ti uma nação maior e mais poderosa do que eles.
15 ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು; ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು; ಒಡಂಬಡಿ ಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು.
15 Assim, eu me virei, e desci do monte, e o monte ardia com fogo; e as duas tábuas do pacto estavam em minhas duas mãos.
16 ನಾನು ನೋಡಿದಾಗ ಇಗೋ, ನೀವು ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಎರಕ ಹೊಯ್ದ ಕರುವನ್ನು ನಿಮಗೆ ಮಾಡಿ ಕೊಂಡು ಕರ್ತನು ನಿಮಗೆ ಆಜ್ಞಾಪಿಸಿದ್ದ ಮಾರ್ಗವನ್ನು ಬೇಗ ಬಿಟ್ಟುಹೋಗಿದ್ದಿರಿ.
16 E olhei, e eis que vós havíeis pecado contra o SENHOR vosso Deus, e vós tínheis feito um bezerro fundido; vos desviastes rapidamente do caminho que o SENHOR vos havia ordenado.
17 ಆಗ ನಾನು ಆ ಎರಡು ಹಲಗೆಗಳನ್ನು ತಕ್ಕೊಂಡು ನನ್ನ ಎರಡು ಕೈಗಳಿಂದ ಬಿಸಾಡಿ ನಿಮ್ಮ ಕಣ್ಣು ಮುಂದೆ ಒಡೆದು ಹಾಕಿದೆನು.
17 E olhei as duas tábuas, e as lancei de minhas duas mãos, e as quebrei diante dos vossos olhos.
18 ಆ ಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನುಮಾಡಿ ಆತನಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿ ತಿನ್ನದೆ, ನೀರು ಕುಡಿಯದೆ, ಕರ್ತನ ಮುಂದೆ ನಾನು ಬಿದ್ದಿದ್ದೆನು.
18 E caí diante do SENHOR, como nos primeiros quarenta dias e quarenta noites; não comi pão, nem bebi água, por causa de todos os vossos pecados, que pecastes, agindo impiamente aos olhos do SENHOR para provocá-lo à ira.
19 ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು; ಆ ಕಾಲದಲ್ಲಿಯೂ ಕರ್ತನು ನನ್ನ ಪ್ರಾರ್ಥನೆ ಯನ್ನು ಕೇಳಿದನು.
19 Porque tive medo, por causa da ira e do grande desprazer com que o SENHOR se acendeu contra vós, para vos destruir. Mas também neste tempo o SENHOR me ouviu.
20 ಆರೋನನನ್ನು ನಾಶಮಾಡುವ ಹಾಗೆ ಕರ್ತನು ಅವನ ಮೇಲೆಯೂ ಬಹಳ ಕೋಪ ಗೊಂಡನು. ಆದದರಿಂದ ಆರೋನನಿಗೋಸ್ಕರವೂ ಆ ಸಮಯದಲ್ಲಿ ಪ್ರಾರ್ಥನೆಮಾಡಿದೆನು.
20 E o SENHOR se irou com Arão para destruí-lo, e ao mesmo tempo orei por Arão.
21 ಇದಲ್ಲದೆ ನೀವು ಮಾಡಿದ ಪಾಪವಾಗಿರುವ ಆ ಕರುವನ್ನು ತಕ್ಕೊಂಡು ಬೆಂಕಿಯಲ್ಲಿ ಸುಟ್ಟು ತುಳಿದು ಅದು ಧೂಳಿ ನಂತೆ ಪುಡಿಯಾಗುವ ವರೆಗೆ ಚೆನ್ನಾಗಿ ಅರೆದು ಅದರ ಧೂಳನ್ನು ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ನಾನು ಹಾಕಿದೆನು.
21 E tomei o vosso pecado, o bezerro que havíeis feito, e o queimei com fogo e o pisei, e o moí em pedaços muito pequenos, até que ficaram pequenos como o pó, e lancei o seu pó no ribeiro que descia do monte.
22 ತಬೇರಾನಲ್ಲಿಯೂ ಮಸ್ಸದಲ್ಲಿಯೂ ಕಿಬ್ರೋತ್ ಹತಾವಾದಲ್ಲಿಯೂ ಕರ್ತನಿಗೆ ಕೋಪವನ್ನು ಎಬ್ಬಿಸಿದ ವರಾದಿರಿ.
22 E em Taberá, e em Massá, e em Quibrote-Hataavá provocastes a ira do SENHOR.
23 ಇದಲ್ಲದೆ ಕರ್ತನು ನಿಮ್ಮನ್ನು ಕಾದೇಶ್ ಬರ್ನೇಯದಿಂದ ಕಳುಹಿಸುವಾಗ--ನೀವು ಹೋಗಿ ನಾನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿ ಕೊಳ್ಳಿರಿ ಎಂದು ಹೇಳಿದಾಗ ನೀವು ನಿಮ್ಮ ದೇವರಾದ ಕರ್ತನ ಅಪ್ಪಣೆಗೆ ವಿರೋಧವಾಗಿ ತಿರುಗಿಬಿದ್ದು ಆತನನ್ನು ನಂಬಲಿಲ್ಲ, ಆತನ ಮಾತನ್ನು ಕೇಳಲಿಲ್ಲ.
23 Do mesmo modo quando o SENHOR vos enviou de Cades-Barneia, dizendo: Ide e possuí a terra que vos dei; então vos rebelastes contra o mandamento do SENHOR vosso Deus, e não crestes nele, nem ouvistes a sua voz.
24 ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಕರ್ತನಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದಿರಿ.
24 Fostes rebeldes contra o SENHOR desde o dia em que vos conheci.
25 ಹೀಗಿರಲಾಗಿ ಕರ್ತನು ನಿಮ್ಮನ್ನು ನಾಶಮಾಡು ತ್ತೇನೆಂದು ಹೇಳಿದ್ದರಿಂದ ನಾನು ಮುಂಚೆ ಬಿದ್ದುಕೊಂಡ ಹಾಗೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ಕರ್ತನ ಮುಂದೆ ಬಿದ್ದಿದ್ದೆನು.
25 Assim, caí diante do SENHOR quarenta dias e quarenta noites, como caí na primeira, porque o SENHOR havia dito que vos destruiria.
26 ನಾನು ಕರ್ತನಿಗೆ ಪ್ರಾರ್ಥನೆ ಮಾಡಿ--ಓ ಕರ್ತನಾದ ದೇವರೇ, ನೀನು ನಿನ್ನ ಮಹತ್ವದಿಂದ ವಿಮೋಚಿಸಿ, ಬಲವಾದ ಕೈಯಿಂದ ಐಗುಪ್ತದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನ ವನ್ನೂ ನಿನ್ನ ಸ್ವಾಸ್ತ್ಯವನ್ನೂ ನಾಶಮಾಡಬೇಡ.
26 Portanto orei diante do SENHOR, e disse: Ó Senhor DEUS, não destruas o teu povo e a tua herança, que resgataste com a tua grandeza, que trouxeste do Egito com mão forte.
27 ನಿನ್ನ ದಾಸರಾದ ಅಬ್ರಹಾಮ್ ಇಸಾಕ್ ಯಾಕೋಬರನ್ನು ಜ್ಞಾಪಕಮಾಡಿಕೋ; ಈ ಜನರ ಕಾಠಿಣ್ಯದ ಮೇಲೆಯೂ ಇಲ್ಲವೆ ಅವರ ದುಷ್ಟತ್ವದ ಮೇಲೆಯೂ ಅವರ ಪಾಪದ ಮೇಲೆಯೂ ದೃಷ್ಟಿ ಇಡಬೇಡ.
27 Lembra-te dos teus servos, Abraão, Isaque e Jacó; não olhes para a teimosia deste povo, nem para a sua iniquidade, nem para o seu pecado,
28 ನಮ್ಮನ್ನು ಎಲ್ಲಿಂದ ಹೊರಗೆ ಬರಮಾಡಿದಿಯೋ ಆ ದೇಶವು--ಕರ್ತನು ಅವರಿಗೆ ಹೇಳಿದ ದೇಶದಲ್ಲಿ ಅವರನ್ನು ಬರಮಾಡ ಲಾರದೆ ಇದ್ದದ್ದರಿಂದಲೂ ಅವರನ್ನು ಹಗೆಮಾಡಿದ್ದ ರಿಂದಲೂ ಅರಣ್ಯದಲ್ಲಿ ಅವರನ್ನು ಕೊಂದುಹಾಕುವ ಹಾಗೆ ಅವರನ್ನು ಹೊರಗೆ ಬರಮಾಡಿದನೆಂದು ಹೇಳಬಾರದು.
28 para que a terra de onde nos tiraste não diga: Pois o SENHOR não pôde trazê-los à terra que lhes prometeu, e porque os odiava, ele os tirou para matá-los no deserto.
29 ಆದಾಗ್ಯೂ ನೀನು ನಿನ್ನ ದೊಡ್ಡ ಶಕ್ತಿಯಿಂದಲೂ ಚಾಚಿದ ನಿನ್ನ ಕೈಯಿಂದಲೂ ಹೊರಗೆ ಬರಮಾಡಿದ ನಿನ್ನ ಜನವೂ ಸ್ವಾಸ್ತ್ಯವೂ ಇವರೇ ಎಂದು ಹೇಳಿದೆನು.
29 Mas eles são o teu povo e a tua herança, que trouxeste pelo teu grande poder e pelo teu braço estendido.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Deuteronômio 9, comparar traduções ou montar um estudo — tudo direto pelo WhatsApp.