Deuteronômio 3

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ಆಗ ನಾವು ತಿರುಗಿಕೊಂಡು ಬಾಷಾನಿನ ಕಡೆಗೆ ಹೊರಟೆವು. ಬಾಷಾನಿನ ಅರಸ ನಾದ ಓಗನು ತನ್ನ ಎಲ್ಲಾ ಜನರ ಸಂಗಡ ನಮ್ಮೆದುರಿಗೆ ಎದ್ರೈಗೆ ಯುದ್ಧಮಾಡುವದಕ್ಕೆ ಹೊರಟನು.
1 — Depois, voltamos e fomos na direção de Basã. E Ogue, rei de Basã, saiu ao nosso encontro, ele e todo o seu povo, para lutar contra nós em Edrei.
2 ಆಗ ಕರ್ತನು ನನಗೆ--ಅವನಿಗೆ ಭಯಪಡಬೇಡ; ಅವ ನನ್ನೂ ಅವನ ಜನರೆಲ್ಲರನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಒಪ್ಪಿಸುತ್ತೇನೆ; ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನ ನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು ಅಂದನು.
2 Então o Senhor me disse: “Não tenha medo, porque eu o entreguei nas suas mãos, ele, todo o seu povo e a terra dele. Você fará com ele como fez com Seom, rei dos amorreus, que habitava em Hesbom.”
3 ಈ ಪ್ರಕಾರ ನಮ್ಮ ದೇವರಾದ ಕರ್ತನು ಬಾಷಾನಿನ ಅರಸನಾದ ಓಗನನ್ನೂ ಅವನ ಜನರೆಲ್ಲ ರನ್ನೂ ನಮ್ಮ ಕೈಯಲ್ಲಿ ಒಪ್ಪಿಸಿದನು; ಒಬ್ಬನಾದರೂ ತಪ್ಪಿಸಿಕೊಂಡು ಅವನಿಗೆ ಉಳಿಯದೆ ಹೋಗುವ ವರೆಗೆ ಅವನನ್ನು ಹೊಡೆದೆವು.
3 E o Senhor , nosso Deus, entregou em nossas mãos também Ogue, rei de Basã, e todo o seu povo; lutamos contra ele, até que não sobrasse ninguém.
4 ಆ ಕಾಲದಲ್ಲಿ ಅವನ ಪಟ್ಟಣ ಗಳನ್ನೆಲ್ಲಾ ಹಿಡಿದೆವು; ನಾವು ಅವರಿಂದ ತಕ್ಕೊಳ್ಳದ ಪಟ್ಟಣವು ಇದ್ದಿಲ್ಲ. ಅರ್ಗೋಬಿನ ಸುತ್ತಲಿರುವ ದೇಶ ವೆಲ್ಲಾ ಅರವತ್ತು ಪಟ್ಟಣಗಳು; ಇವೇ ಬಾಷಾನಿನಲ್ಲಿ ಓಗನ ರಾಜ್ಯವು.
4 Nesse tempo, tomamos todas as suas cidades. Não houve nenhuma cidade que não lhe tomássemos: sessenta cidades, toda a região de Argobe, o reino de Ogue, em Basã.
5 ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆಬಾಗಲು ಅಗುಳಿಗಳಿಂದ ಭದ್ರವಾಗಿದ್ದವು; ಅವುಗಳಲ್ಲದೆ ಬೈಲು ಸೀಮೆಯ ಪಟ್ಟಣಗಳು ಬಹಳ ಇದ್ದವು.
5 Todas estas cidades eram fortificadas com altas muralhas, portões e ferrolhos. Tomamos também muitas outras cidades que não tinham muralhas.
6 ನಾವು ಹೆಷ್ಬೋನಿನ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು; ಗಂಡಸರನ್ನೂ ಹೆಂಗಸರನ್ನೂ ಮಕ್ಕ ಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣ ವಾಗಿ ನಿರ್ಮೂಲಮಾಡಿದೆವು.
6 Nós as destruímos totalmente, como fizemos com Seom, rei de Hesbom, destruindo por completo cada uma das cidades com os seus homens, suas mulheres e crianças.
7 ಆದರೆ ಎಲ್ಲಾ ಪಶು ಗಳನ್ನೂ ಪಟ್ಟಣಗಳ ಕೊಳ್ಳೆಯನ್ನೂ ಸುಲಿಗೆಯಾಗಿ ತಕ್ಕೊಂಡೆವು.
7 Porém todo o gado e o despojo das cidades tomamos para nós, por presa.
8 ಆ ಕಾಲದಲ್ಲಿ ನಾವು ಯೊರ್ದನಿನ ಈಚೆಯಲ್ಲಿ ಅರ್ನೋನ್‌ ನದಿಯಿಂದ ಹೆರ್ಮೋನ್‌ ಬೆಟ್ಟದ ವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರ ಸರ ಕೈಯಿಂದ ತಕ್ಕೊಂಡೆವು.
8 — Assim, nesse tempo, tomamos a terra das mãos daqueles dois reis dos amorreus que estavam além do Jordão: desde o ribeiro de Arnom até o monte Hermom.
9 (ಆ ಹೆರ್ಮೋನಿಗೆ ಚೀದೋನ್ಯರು ಸಿರ್ಯೋನೆಂದೂ ಅಮೋರಿಯರು ಸೇನೀಯರೆಂದೂ ಅನ್ನುತ್ತಾರೆ.)
9 (Os sidônios chamam o Hermom de Siriom; porém os amorreus o chamam de Senir.)
10 ಬೈಲು ಸೀಮೆಯ ಎಲ್ಲಾ ಪಟ್ಟಣಗಳನ್ನೂ ಎಲ್ಲಾ ಗಿಲ್ಯಾದನ್ನೂ ಬಾಷಾನಿ ನಲ್ಲಿ ಓಗನ ರಾಜ್ಯದ ಪಟ್ಟಣಗಳಾದ ಸಲ್ಕಾ, ಎದ್ರೈ ವರೆಗೆ ಎಲ್ಲಾ ಬಾಷಾನನ್ನೂ ತಕ್ಕೊಂಡೆವು,
10 Tomamos todas as cidades do planalto, todo o Gileade e todo o Basã, até Salca e Edrei, cidades do reino de Ogue, em Basã.
11 ಮಹಾ ಶರೀರಗಳಲ್ಲಿ ಉಳಿದವರೊಳಗೆ ಬಾಷಾನಿನ ಅರಸ ನಾದ ಓಗನು ಮಾತ್ರ ಉಳಿದನು; ಅಗೋ, ಅವನ ಮಂಚವು ಕಬ್ಬಿಣದ ಮಂಚ; ಅದು ಅಮ್ಮೋನನ ಮಕ್ಕಳ ರಬ್ಬಾನಲ್ಲಿ ಉಂಟಲ್ಲವೋ? ಅದರ ಉದ್ದವು ಪುರುಷನ ಕೈಯಳತೆಯ ಪ್ರಕಾರ ಒಂಭತ್ತು ಮೊಳ, ಅಗಲವು ನಾಲ್ಕು ಮೊಳ ಇತ್ತು.
11 (Ogue, rei de Basã, era o último sobrevivente dos refains. A cama dele era feita de ferro e ainda se encontra em Rabá dos filhos de Amom. Tinha quatro metros de comprimento e um metro e oitenta de largura, pela medida comum.)
12 ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್‌ ನದಿಯ ಸವಿಾಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು ಅರ್ಧ ಗಿಲ್ಯಾದ್‌ ಬೆಟ್ಟವನ್ನೂ ಅದರ ಪಟ್ಟಣಗಳನ್ನೂ ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಕೊಟ್ಟೆನು.
12 — Tomamos posse desta terra nesse tempo. A região que vai de Aroer, que está junto ao vale de Arnom, e a metade da região montanhosa de Gileade, com as suas cidades, dei aos rubenitas e gaditas.
13 ಮಿಕ್ಕ ಗಿಲ್ಯಾದನ್ನೂ ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಕುಲಕ್ಕೆ ಕೊಟ್ಟೆನು; ಅರ್ಗೋಬಿನ ಸಮಸ್ತ ಸೀಮೆಯನ್ನೂ ಮಹಾಶರೀರಗಳ ದೇಶವೆಂದು ಹೇಳ ಲ್ಪಟ್ಟ ಸಮಸ್ತ ಭಾಷಾನನ್ನು ಅವರಿಗೆ ಕೊಟ್ಟೆನು.
13 O resto de Gileade e toda a região de Basã, o reino de Ogue, dei à meia tribo de Manassés. (Toda aquela região de Argobe, todo o Basã, se chamava a terra dos refains.)
14 ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್‌ ಯಾಯಾ ರೆಂದು ಹೆಸರಿಟ್ಟನು.
14 Jair, filho de Manassés, tomou toda a região de Argobe até a fronteira dos gesuritas e maacatitas, isto é, Basã, e às aldeias chamou pelo seu nome: Havote-Jair, até o dia de hoje.
15 ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
15 A Maquir dei Gileade.
16 ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್‌ ಮೊದಲುಗೊಂಡು ಅರ್ನೋನ್‌ ನದಿಯ ವರೆಗೆ ಕೊಟ್ಟೆನು.
16 Aos rubenitas e gaditas dei desde Gileade até o vale de Arnom, cujo meio serve de fronteira; e até o ribeiro de Jaboque, na fronteira dos filhos de Amom,
17 ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್‌ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್‌ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.
17 bem como a Arabá e o Jordão por fronteira, desde Quinerete até o mar da Arabá, o mar Salgado, pelas encostas do monte Pisga, para o leste.
18 ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ನಿಮಗೆ ಈ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆ; ಯುದ್ಧಸ್ಥ ರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲ್‌ ಮಕ್ಕಳ ಮುಂದೆ ಆಯುಧ ಧರಿಸಿ ಕೊಂಡು ಹಾದುಹೋಗಬೇಕು.
18 — Nesse mesmo tempo, eu lhes ordenei, dizendo: “O Senhor , o Deus de vocês, lhes deu esta terra, para que vocês tomem posse dela. Todos os homens valentes, armados, devem passar adiante de seus irmãos, os filhos de Israel.
19 ನಿಮ್ಮ ಹೆಂಡತಿ ಯರೂ ಮಕ್ಕಳೂ ಪಶುಗಳೂ (ನಿಮಗೆ ಬಹಳ ಪಶುಗಳಿವೆ ಎಂದು ನನಗೆ ತಿಳಿದಿದೆ)
19 Tão somente as mulheres, as crianças e o gado de vocês — porque sei que vocês têm muito gado — ficarão nas cidades que já lhes dei.
20 ಕರ್ತನು ನಿಮಗಾದ ಹಾಗೆ ನಿಮ್ಮ ಸಹೋದರರಿಗೂ ವಿಶ್ರಾಂತಿ ಕೊಡುವ ವರೆಗೂ ನಿಮ್ಮ ದೇವರಾದ ಕರ್ತನು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವ ವರೆಗೆ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಬೇಕು; ಆ ಮೇಲೆ ನಾನು ನಿಮಗೆ ಕೊಟ್ಟ ನಿಮ್ಮ ನಿಮ್ಮ ಸ್ವಾಸ್ತ್ಯಗಳ ಬಳಿಗೆ ತಿರುಗಬಹುದು ಎಂಬದು.
20 Vocês deverão lutar até que o Senhor dê descanso a seus irmãos como deu a vocês, para que eles também ocupem a terra que o Senhor , o Deus de vocês, está dando a eles do outro lado do Jordão; depois, vocês poderão voltar, cada um à propriedade que lhe dei.”
21 ಆ ಕಾಲದಲ್ಲಿ ನಾನು ಯೆಹೋಶುವನಿಗೆ ಆಜ್ಞಾ ಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ಆ ಇಬ್ಬರು ಅರಸರಿಗೆ ಮಾಡಿದ್ದನ್ನೆಲ್ಲಾ ನಿನ್ನ ಕಣ್ಣು ಗಳು ನೋಡಿದವು. ನೀನು ಹಾದುಹೋಗುವ ಎಲ್ಲಾ ರಾಜ್ಯಗಳಿಗೆ ಕರ್ತನು ಹಾಗೆಯೇ ಮಾಡುವನು.
21 — Também, nesse tempo, dei ordem a Josué, dizendo: “Você viu tudo o que o Senhor , o Deus de vocês, tem feito com esses dois reis; assim o Senhor fará com todos os reinos em que você entrar.
22 ನೀವು ಅವುಗಳಿಗೆ ಭಯಪಡಬೇಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ತಾನೇ ನಿಮಗೋಸ್ಕರ ಯುದ್ಧಮಾಡುತ್ತಾನೆ ಎಂಬದು.
22 Não tenham medo deles, porque o Senhor , o Deus de vocês, é o que luta por vocês.”
23 ಆ ಕಾಲದಲ್ಲಿ ನಾನು ಕರ್ತನಿಗೆ ಮಾಡಿದ ಬಿನ್ನಹ ವೇನಂದರೆ--
23 — Também eu, nesse tempo, implorei ao Senhor , dizendo:
24 ನನ್ನ ದೇವರಾದ ಕರ್ತನೇ, ನೀನು ನಿನ್ನ ಸೇವಕನಿಗೆ ನಿನ್ನ ಮಹಿಮೆಯನ್ನೂ ನಿನ್ನ ಕೈಯ ಶಕ್ತಿಯನ್ನೂ ತೋರಿಸುವದಕ್ಕೆ ಆರಂಭಮಾಡಿದಿ; ನಿನ್ನ ಕೃತ್ಯಗಳ ಹಾಗೆಯೂ ನಿನ್ನ ಪರಾಕ್ರಮದ ಹಾಗೆಯೂ ಮಾಡಲು ಶಕ್ತನಾದ ದೇವರು ಪರಲೋಕದಲ್ಲಾಗಲಿ ಭೂಮಿಯಲ್ಲಾಗಲಿ ಯಾರಿದ್ದಾರೆ? ನಾನು ದಾಟಿ ಹೋಗಿ
24 “Ó Senhor Deus, já começaste a mostrar ao teu servo a tua grandeza e a tua mão poderosa! Pois que deus há, nos céus ou na terra, que possa fazer as obras e os feitos poderosos que tu realizas?
25 ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೇ ದೇಶವನ್ನೂ ಆ ಒಳ್ಳೇ ಬೆಟ್ಟವನ್ನೂ ಲೆಬನೋನನ್ನೂ ನೋಡುವದಕ್ಕೆ ಅಪ್ಪಣೆಯಾಗಬೇಕು ಎಂಬದೇ.
25 Peço-te que me deixes passar, para que eu veja esta boa terra que está do outro lado do Jordão, esta boa região montanhosa e o Líbano.”
26 ಆದರೆ ಕರ್ತನು ನಿಮಗೋಸ್ಕರ ನನ್ನ ಮೇಲೆ ಕೋಪಗೊಂಡು ನನ್ನ ಮನವಿಯನ್ನು ಕೇಳಲಿಲ್ಲ; ಕರ್ತನು ನನಗೆ--ಇನ್ನು ಸಾಕು; ಈ ವಿಷಯ ದಲ್ಲಿ ನನ್ನ ಸಂಗಡ ಇನ್ನೂ ಮಾತನಾಡಬೇಡ.
26 Porém o Senhor estava indignado contra mim, por causa de vocês, e não me ouviu. Pelo contrário, ele me disse: “Basta! Não me fale mais nisso.
27 ಪಿಸ್ಗಾದ ತುದಿಗೆ ಏರಿ ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಕಣ್ಣುಗಳನ್ನೆತ್ತಿ ಅದನ್ನು ಕಣ್ಣಾರೆ ನೋಡು; ಆದರೆ ಈ ಯೊರ್ದನನ್ನು ನೀನು ದಾಟಿಹೋಗುವದಿಲ್ಲ.
27 Suba ao alto do monte Pisga e levante os olhos para o oeste, para o norte, para o sul e para o leste e contemple com os seus próprios olhos, porque você não passará este Jordão.
28 ಆದರೆ ಯೆಹೋಶು ವನಿಗೆ ಆಜ್ಞಾಪಿಸಿ ಅವನಿಗೆ ದೃಢಮಾಡಿ ಬಲಪಡಿಸು; ಅವನು ಈ ಜನರ ಮುಂದೆ ದಾಟಿಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಸ್ತ್ಯ ವಾಗಿ ಹೊಂದುವಂತೆ ಮಾಡುವನು ಎಂದು ಹೇಳಿದನು.
28 Dê ordens a Josué, anime-o e fortaleça-o; porque ele irá à frente deste povo e o fará possuir a terra que você apenas verá.”
29 ಆಗ ನಾವು ಬೇತ್‌ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ವಾಸವಾಗಿದ್ದೆವು.
29 — Assim, ficamos no vale diante de Bete-Peor.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Deuteronômio 3, comparar traduções ou montar um estudo — tudo direto pelo WhatsApp.