Deuteronômio 26

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ಇದಲ್ಲದೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ
1 — Ao entrar na terra que o Senhor , seu Deus, lhe dá por herança, ao possuí-la e morar nela,
2 ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು.
2 você deve pegar as primícias de todos os frutos que colheu na terra que o Senhor , seu Deus, lhe deu, colocá-las num cesto e ir ao lugar que o Senhor , seu Deus, escolher para ali fazer habitar o seu nome.
3 ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ--ಕರ್ತನು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ನಾನು ಸೇರಿದ್ದೇನೆಂದು ಈಹೊತ್ತು ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡುತ್ತೇನೆ ಎಂದು ಹೇಳಬೇಕು.
3 Você chegará ao sacerdote que estiver de serviço naqueles dias e lhe dirá: “Hoje declaro ao Senhor , seu Deus, que entrei na terra que o Senhor , sob juramento, prometeu dar aos nossos pais.”
4 ಆಗ ಯಾಜಕನು ಪುಟ್ಟಿಯನ್ನು ನಿನ್ನ ಕೈಯಿಂದ ತೆಗೆದು ನಿನ್ನ ದೇವರಾದ ಕರ್ತನ ಬಲಿಪೀಠದ ಮುಂದೆ ಇಡಬೇಕು.
4 O sacerdote pegará o cesto e o colocará diante do altar do Senhor , seu Deus.
5 ಆ ಮೇಲೆ ನೀನು ಉತ್ತರಕೊಟ್ಟು ನಿನ್ನ ದೇವರಾದ ಕರ್ತನ ಮುಂದೆ--ನನ್ನ ತಂದೆ ನಾಶ ವಾಗುವ ಅರಾಮ್ಯನಾಗಿ ಐಗುಪ್ತಕ್ಕೆ ಇಳಿದು ಹೋಗಿ ಅಲ್ಲಿ ಸ್ವಲ್ಪ ಮಂದಿಯ ಸಂಗಡ ಪರವಾಸವಾಗಿದ್ದು ಅಲ್ಲಿ ದೊಡ್ಡದಾದ, ಬಲಿಷ್ಠವಾದ, ಅಧಿಕವಾದ ಜನಾಂಗವಾದನು.
5 Então você testificará diante do Senhor , seu Deus, dizendo: “Meu pai foi um arameu prestes a perecer. Ele foi para o Egito, e ali viveu como estrangeiro com pouca gente; e ali veio a ser uma nação grande, forte e numerosa.
6 ಆದರೆ ಐಗುಪ್ತ್ಯರು ನಮಗೆ ಕೇಡನ್ನುಮಾಡಿ ನಮ್ಮನ್ನು ಕುಂದಿಸಿ ಕಠಿಣವಾದ ಸೇವೆಯನ್ನು ನಮ್ಮ ಮೇಲೆ ಹೊರಿಸಿದರು.
6 Mas os egípcios nos maltrataram, oprimiram e nos impuseram dura servidão.
7 ಆಗ ನಾವು ನಮ್ಮ ಪಿತೃಗಳ ದೇವರಾದ ಕರ್ತನಿಗೆ ಮೊರೆ ಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ ನಮ್ಮ ಸಂಕಟವನ್ನೂ ಕಷ್ಟವನ್ನೂ ಬಾಧೆಯನ್ನೂ ನೋಡಿದನು.
7 Clamamos ao Senhor , Deus de nossos pais; e o Senhor ouviu a nossa voz e viu a nossa angústia, o nosso trabalho e a nossa opressão.
8 ಆದದರಿಂದ ಕರ್ತನು ನಮ್ಮನ್ನು ತನ್ನ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾ ಭಯದಿಂದಲೂ ಗುರುತುಗಳಿಂದಲೂ ಅದ್ಭುತ ಗಳಿಂದಲೂ ಐಗುಪ್ತದಿಂದ ಹೊರಗೆ ಬರಮಾಡಿ
8 E o Senhor nos tirou do Egito com mão poderosa, com braço estendido, com grande espanto, com sinais e com milagres.
9 ನಮ್ಮನ್ನು ಈ ಸ್ಥಳಕ್ಕೆ ಕರಕೊಂಡು ಬಂದು ಹಾಲೂ ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿ ದ್ದಾನೆ.
9 Ele nos trouxe a este lugar e nos deu esta terra, terra que mana leite e mel.
10 ಹೀಗಿರುವದರಿಂದ ಇಗೋ ಕರ್ತನೇ, ನೀನು ನನಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿ ದ್ದೇನೆ ಎಂದು ಹೇಳಬೇಕು. ಆಗ ಅದನ್ನು ನಿನ್ನ ದೇವ ರಾದ ಕರ್ತನ ಮುಂದೆ ನೀನು ಇಟ್ಟು ನಿನ್ನ ದೇವರಾದ ಕರ್ತನನ್ನು ಆರಾಧಿಸಬೇಕು.
10 Eis que, agora, trago as primícias dos frutos da terra que tu, ó Senhor , me deste.” Então você as colocará diante do Senhor , seu Deus, e se prostrará diante dele.
11 ನಿನ್ನ ದೇವರಾದ ಕರ್ತನು ನಿನಗೂ ನಿನ್ನ ಮನೆಗೂ ಕೊಡುವ ಎಲ್ಲಾ ಒಳ್ಳೆ ವಸ್ತುಗಳಲ್ಲಿ ನೀನೂ ಲೇವಿಯರೂ ನಿನ್ನ ಸಂಗಡ ಇರುವ ಪರವಾಸಿಯೂ ಸಂತೋಷಪಡಬೇಕು.
11 Você se alegrará por todo o bem que o Senhor , seu Deus, tem dado a você e à sua casa. E também se alegrarão os levitas e os estrangeiros que morarem onde você vive.
12 ಹತ್ತನೆಯ ಪಾಲನ್ನು ಕೊಡುವ ವರುಷವಾಗಿರುವ ಮೂರನೆಯ ವರುಷದಲ್ಲಿ ನೀನು ನಿನ್ನ ಎಲ್ಲಾ ಹುಟ್ಟು ವಳಿಯ ಹತ್ತನೇ ಪಾಲನ್ನು ಕೊಟ್ಟು ತೀರಿಸಿದ ಮೇಲೆ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಡಬೇಕು; ಅವನು ನಿನ್ನ ಬಾಗಲುಗಳಲ್ಲಿ ತಿಂದು ತೃಪ್ತಿ ಹೊಂದಲಿ.
12 — Quando, no terceiro ano, que é o ano dos dízimos, você acabar de separar todos os dízimos da colheita, você os dará aos levitas, aos estrangeiros, aos órfãos e às viúvas, para que comam até se fartarem nas cidades de vocês.
13 ಆಗ ನೀನು ನಿನ್ನ ದೇವರಾದ ಕರ್ತನ ಮುಂದೆ--ನಾನು ಪರಿಶುದ್ಧವಾದವುಗಳನ್ನು ನನ್ನ ಮನೆಯೊಳಗಿಂದ ತಕ್ಕೊಂಡು ನೀನು ನನಗೆ ಆಜ್ಞಾಪಿಸಿದ ಎಲ್ಲಾ ಆಜ್ಞೆಗಳ ಹಾಗೆಯೇ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಟ್ಟಿ ದ್ದೇನೆ; ನಿನ್ನ ಆಜ್ಞೆಗಳನ್ನು ವಿಾರಲಿಲ್ಲ, ಮರೆಯಲಿಲ್ಲ.
13 Depois, diante do Senhor , seu Deus, você dirá: “Tirei de minha casa o que é consagrado e dei também aos levitas, aos estrangeiros, aos órfãos, às viúvas, segundo todos os mandamentos que me tens ordenado; nada transgredi dos teus mandamentos, nem deles me esqueci.
14 ದುಃಖದಲ್ಲಿರುವಾಗ ಅದರಲ್ಲಿ ತಿನ್ನಲಿಲ್ಲ, ಅದರಲ್ಲಿ ತಕ್ಕೊಂಡು ಅಶುದ್ಧವಾದದ್ದಕ್ಕೂ ಉಪಯೋಗಿಸಲಿಲ್ಲ. ಅದರಲ್ಲಿ ಸತ್ತವರಿಗೋಸ್ಕರ ಏನೂ ಕೊಡಲಿಲ್ಲ; ನನ್ನ ದೇವರಾದ ಕರ್ತನ ಮಾತನ್ನು ಕೇಳಿದ್ದೇನೆ; ನೀನು ನನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದೇನೆ.
14 Dos dízimos não comi quando estava de luto e deles nada tirei estando impuro, nem deles dei para a casa de algum morto; obedeci à voz do Senhor , meu Deus; segundo tudo o que me ordenaste, assim eu fiz.
15 ಆಕಾಶದೊಳಗಿಂದ, ನಿನ್ನ ಪರಿಶುದ್ಧ ನಿವಾಸದೊ ಳಗಿಂದ ಕಣ್ಣಿಡು; ನಿನ್ನ ಜನರಾದ ಇಸ್ರಾಯೇಲನ್ನೂ ನೀನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ಪ್ರಕಾರ ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ದೇಶವಾಗಿರುವಂಥ ದೇಶವನ್ನೂ ಆಶೀರ್ವದಿಸು ಎಂದು ಹೇಳಬೇಕು.
15 Olha desde a tua santa habitação, desde o céu, e abençoa Israel, o teu povo, e a terra que nos deste, como juraste aos nossos pais, terra que mana leite e mel.”
16 ಈ ನಿಯಮ ನ್ಯಾಯಗಳನ್ನು ಮಾಡಬೇಕೆಂದು ನಿನ್ನ ದೇವರಾದ ಕರ್ತನು ಈಹೊತ್ತು ನಿನಗೆ ಆಜ್ಞಾಪಿಸು ತ್ತಾನೆ; ಆದದರಿಂದ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಕಾಪಾಡಿ ಕೈಕೊಳ್ಳ ಬೇಕು.
16 — Hoje o Senhor , seu Deus, ordena que vocês cumpram estes estatutos e juízos; portanto, vocês devem guardar e cumpri-los de todo o seu coração e de toda a sua alma.
17 ನೀನು ಈಹೊತ್ತು ಕರ್ತನು--ನಿನಗೆ ದೇವರಾಗಬೇಕೆಂದೂ ಆತನ ಮಾರ್ಗಗಳಲ್ಲಿ ನಡೆದು ಆತನ ನಿಯಮ ಆಜ್ಞೆ ನ್ಯಾಯಗಳನ್ನು ಕಾಪಾಡಿ ಆತನ ಸ್ವರ ಕೇಳುತ್ತೇನೆಂದೂ ದೃಢವಾಗಿ ಹೇಳಿದಿ.
17 Hoje vocês declararam que o Senhor será o seu Deus, e que vocês andarão nos seus caminhos, guardarão os seus estatutos, os seus mandamentos e os seus juízos e que darão ouvidos à sua voz.
18 ಕರ್ತನು ಈಹೊತ್ತು ನಿನಗೆ ತಾನು ವಾಗ್ದಾನಮಾಡಿದಂತೆ ನೀನು ಆತನಿಗೆ ಅಸಮಾನ್ಯ ಜನವಾಗಬೇಕೆಂದೂ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಬೇಕೆಂದೂ
18 E hoje o Senhor declarou que vocês serão o seu povo próprio, como ele prometeu, e que vocês devem guardar todos os seus mandamentos.
19 ಆತನು ಮಾಡಿದ ಎಲ್ಲಾ ಜನಾಂಗಗಳ ಮೇಲೆ ಸ್ತುತಿಯಲ್ಲಿಯೂ ಹೆಸರಿನಲ್ಲಿಯೂ ಘನತೆಯಲ್ಲಿಯೂ ನೀನು ಉನ್ನತ ವಾಗಬೇಕೆಂದೂ ನೀನು ನಿನ್ನ ದೇವರಾದ ಕರ್ತನಿಗೆ ಆತನು ಹೇಳಿದಂತೆ ಪರಿಶುದ್ಧ ಜನವಾಗಬೇಕೆಂದೂ ದೃಢವಾಗಿ ಹೇಳಿದ್ದಾನೆ.
19 Assim ele vai exaltá-los em louvor, renome e glória sobre todas as nações que fez e para que vocês sejam povo santo ao Senhor , seu Deus, como ele falou.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Deuteronômio 26, comparar traduções ou montar um estudo — tudo direto pelo WhatsApp.