Deuteronômio 22

Kannada Bible (GL_KANNADA) vs BKJ

Sair da comparação
1 1 ನಿನ್ನ ಸಹೋದರನ ಎತ್ತಾಗಲಿ ಕುರಿಯಾಗಲಿ ಮಾರ್ಗ ತಪ್ಪಿದ್ದನ್ನು ನೋಡಿ ಅವುಗಳನ್ನು ಅಲಕ್ಷ್ಯ ಮಾಡಬಾರದು; ಹೇಗಾದರೂ ಅವುಗಳನ್ನು ನಿನ್ನ ಸಹೋದರನಿಗೆ ತಿರುಗಿ ಕೊಡಬೇಕು.
1 Se vires extraviado o boi do teu irmão, ou a sua ovelha, não te desinteressarás deles; de qualquer maneira, os trará de volta ao teu irmão.
2 ಆದರೆ ನಿನ್ನ ಸಹೋದರನು ನಿನಗೆ ಸವಿಾಪವಾಗಿರದೆ ಹೋದರೆ ಇಲ್ಲವೆ ಅವನ ಗುರುತು ನಿನಗೆ ತಿಳಿಯದೆ ಇದ್ದರೆ ತಪ್ಪಿ ಹೋದದ್ದನ್ನು ನಿನ್ನ ಮನೆಗೆ ಒಯ್ಯಬೇಕು; ನಿನ್ನ ಸಹೋದರನು ಅದನ್ನು ಹುಡುಕುವ ವರೆಗೆ ಅದು ನಿನ್ನ ಸಂಗಡ ಇರಬೇಕು; ತರುವಾಯ ಅದನ್ನು ಹಿಂದಕ್ಕೆ ಅವನಿಗೆ ಕೊಡಬೇಕು.
2 E se teu irmão não estiver perto de ti, ou se não o conheceres, então trarás ele à tua própria casa, e estará contigo até que teu irmão o busque, e o restituirás a ele.
3 ಅವನ ಕತ್ತೆಗೆ ಹಾಗೆಯೇ ಮಾಡಬೇಕು; ಅವನ ವಸ್ತ್ರಕ್ಕೂ ಹಾಗೆಯೇ ಮಾಡ ಬೇಕು; ನಿನ್ನ ಸಹೋದರನು ಕಳೆದುಕೊಂಡ ಎಲ್ಲಾ ವಸ್ತುಗಳನ್ನು ನೀನು ಕಂಡುಕೊಂಡರೆ ಹಾಗೆಯೇ ಮಾಡಬೇಕು;
3 De igual maneira, farás com o seu jumento; e o mesmo farás com a sua veste; e com todas as coisas perdidas de teu irmão, que ele tiver perdido, e que encontrares, farás do mesmo modo; não podes esconder-te.
4 ನೀನು ಕಾಣದವನಂತೆ ಇರಬಾರದು. ನಿನ್ನ ಸಹೋದರನ ಕತ್ತೆಯಾಗಲಿ ಎತ್ತಾಗಲಿ ಮಾರ್ಗ ದಲ್ಲಿ ಬಿದ್ದಿರುವದನ್ನು ನೋಡಿದರೆ ಅಲಕ್ಷ್ಯಮಾಡ ಬೇಡ; ಹೇಗಾದರೂ ಅವುಗಳನ್ನು ಎಬ್ಬಿಸುವದಕ್ಕೆ ಅವನಿಗೆ ಖಂಡಿತಾ ಸಹಾಯಮಾಡಬೇಕು.
4 Não verás o jumento de teu irmão, ou o seu boi caídos pelo caminho, e não te esconderás deles; certamente o ajudarás a levantá-los outra vez.
5 ಸ್ತ್ರೀಯು ಪುರುಷನ ಉಡಿಗೆ ಉಟ್ಟುಕೊಳ್ಳಬಾರದು; ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು; ಇವುಗಳನ್ನು ಮಾಡುವವರೆಲ್ಲಾ ಕರ್ತನಿಗೆ ಅಸಹ್ಯ.
5 A mulher não vestirá aquilo que pertence a um homem, e um homem não vestirá a veste de uma mulher; porque todos os que fazem isso são uma abominação para o SENHOR teu Deus.
6 ನಿನಗೆ ಮಾರ್ಗದಲ್ಲಿ ಯಾವದಾದರೊಂದು ಗಿಡದ ಲ್ಲಾಗಲಿ ನೆಲದಲ್ಲಾಗಲಿ ಮರಿಗಳುಳ್ಳ ಇಲ್ಲವೆ ಮೊಟ್ಟೆಗ ಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ ಮರಿಗಳ ಮೇಲೆಯಾ ಗಲಿ ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತು ಕೊಂಡಿದ್ದರೆ ಮರಿಗಳ ಸಂಗಡ ತಾಯಿಯನ್ನು ತಕ್ಕೊಳ್ಳ ಬಾರದು;
6 Se por acaso vires um ninho de ave no caminho, em uma árvore, ou no chão, quer sejam filhotes ou ovos, e a mãe sobre os filhotes, ou sobre os ovos, não pegarás a mãe com os filhotes,
7 ನಿನಗೆ ಒಳ್ಳೇದಾಗುವ ಹಾಗೆಯೂ ನಿನ್ನ ದಿನಗಳು ಹೆಚ್ಚುವ ಹಾಗೆಯೂ ಹೇಗಾದರೂ ತಾಯಿ ಯನ್ನು ಕಳುಹಿಸಿಬಿಟ್ಟು ಮರಿಗಳನ್ನು ತಕ್ಕೊಳ್ಳಬೇಕು.
7 mas deixarás ir a mãe, e ficarás com os filhotes; para que te vá bem, e para que possas prolongar os teus dias.
8 ನೀನು ಹೊಸ ಮನೆಯನ್ನು ಕಟ್ಟಿದಾಗ ಯಾವನಾ ದರೂ ಅದರ ಮೇಲಿನಿಂದ ಬೀಳುವ ಪಕ್ಷದಲ್ಲಿ ನೀನು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಗೆ ಸಣ್ಣಗೋಡೆ ಕಟ್ಟಬೇಕು.
8 Quando edificares uma casa nova, farás um parapeito para o teu telhado, para que não tragas sangue sobre a tua casa, se algum homem cair de lá.
9 ನಿನ್ನ ದ್ರಾಕ್ಷೇತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜದ ಪೈರೂ ದ್ರಾಕ್ಷೇತೋಟದ ಹುಟ್ಟುವಳಿಯೂ ಅಶುದ್ಧವಾಗು ವವು.
9 Não semearás a tua vinha com sementes diferentes, para que o fruto da tua semente, que semeaste, e o fruto da tua vinha, não se contaminem.
10 ಎತ್ತನ್ನು ಕತ್ತೆಯೊಂದಿಗೆ ಹೂಡಬೇಡ.
10 Não lavrarás com um boi e um jumento juntos.
11 ಉಣ್ಣೆಯೂ ಸಣಬೂ ಕೂಡಿಸಿ ಮಾಡಿದ ವಸ್ತ್ರವನ್ನು ಹೊದಿಯಬಾರದು.
11 Não vestirás uma veste de tipos diferentes, como linho e lã juntos.
12 ನೀನು ಹೊದ್ದುಕೊಳ್ಳುವ ಶಲ್ಯದ ನಾಲ್ಕು ಮೂಲೆ ಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು.
12 Farás franjas para os quatro cantos da tua veste, com que te cobres.
13 ಒಬ್ಬನು ಹೆಂಡತಿಯನ್ನು ತಕ್ಕೊಂಡು ಅವಳ ಬಳಿಗೆ ಬಂದ ಮೇಲೆ ಅವಳನ್ನು ಹಗೆಮಾಡಿ
13 Se algum homem tomar uma esposa, e entrar a ela, e a odiar,
14 ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟು ಅವಳ ಹೆಸರನ್ನು ಕೆಡಿಸಿ--ಈ ಹೆಂಗಸನ್ನು ನಾನು ತಕ್ಕೊಂಡು ಅವಳ ಬಳಿಗೆ ಬಂದಾಗ ಅವಳು ಕನ್ಯಾಸ್ತ್ರೀ ಅಲ್ಲವೆಂದು ಕಂಡೆನೆಂಬದಾಗಿ ಹೇಳಿದರೆ
14 e tiver oportunidade de falar contra ela, e lhe trouxer má reputação, e disser: Eu tomei esta mulher, e quando me cheguei a ela, descobri que não era virgem;
15 ಆ ಹುಡುಗಿಯ ತಂದೆಯೂ ತಾಯಿಯೂ ಆ ಹುಡುಗಿಯ ಕನ್ಯಾ ಭಾವದ ಲಕ್ಷಣಗಳನ್ನು ತಕ್ಕೊಂಡು, ಪಟ್ಟಣದ ಹಿರಿಯರ ಮುಂದೆ ಬಾಗಲಿನ ಬಳಿಗೆ ತರಬೇಕು.
15 então o pai da donzela e a sua mãe tomarão e apresentarão os sinais da virgindade da donzela aos anciãos da cidade, junto à porta,
16 ಆ ಮೇಲೆ ಹುಡುಗಿಯ ತಂದೆಯು ಹಿರಿಯರಿಗೆ ಹೇಳತಕ್ಕದ್ದೇ ನೆಂದರೆ--ನನ್ನ ಮಗಳನ್ನು ಈ ಮನುಷ್ಯನಿಗೆ ಹೆಂಡತಿ ಯಾಗಿ ಕೊಟ್ಟಿದ್ದೇನೆ; ಅವನು ಅವಳನ್ನು ಹಗೆಮಾಡಿ ದ್ದಾನೆ;
16 e o pai da donzela dirá aos anciãos: Dei minha filha a este homem como esposa, e ele a odeia;
17 ಇಗೋ, ಅವನು--ನಿನ್ನ ಮಗಳು ಕನ್ಯಾಸ್ತ್ರೀ ಅಲ್ಲವೆಂದು ಕಂಡೆನೆಂಬದಾಗಿ ಅವಳಿಗೆ ವಿರೋಧವಾದ ಕೆಟ್ಟಮಾತಿಗೆ ಆಸ್ಪದಕೊಟ್ಟಿದ್ದಾನೆ; ಆದರೂ ಇದೆ ನನ್ನ ಮಗಳ ಕನ್ಯಾಭಾವದ ಲಕ್ಷಣಗಳು. ಹೀಗೆ ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
17 e eis que teve oportunidade de falar contra ela, dizendo: Não achei virgem a tua filha; mas estes são os sinais da virgindade de minha filha. E eles estenderão o pano diante dos anciãos da cidade.
18 ಆಗ ಪಟ್ಟಣದ ಹಿರಿಯರು ಆ ಮನುಷ್ಯನನ್ನು ತೆಗೆದುಕೊಂಡು ಅವನನ್ನು ಶಿಕ್ಷಿಸಬೇಕು.
18 E os anciãos daquela cidade tomarão esse homem e o punirão;
19 ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ಯಾ ಸ್ತ್ರೀಯ ಹೆಸರನ್ನು ಕೆಡಿಸಿದ್ದರಿಂದ ಅವನು ಬೆಳ್ಳಿಯ ನೂರು ಹಣಗಳನ್ನು ದಂಡ ತೆಗೆದುಕೊಂಡು ಆ ಹುಡುಗಿಯ ತಂದೆಗೆ ಕೊಡಬೇಕು; ಇದಲ್ಲದೆ ಅವಳು ಅವನಿಗೆ ಹೆಂಡತಿ ಯಾಗಬೇಕು; ಅವನು ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಬಾರದು.
19 e o castigarão em cem shekels de prata, e os darão ao pai da donzela, porque ele trouxe má fama a uma virgem de Israel, e ela será sua esposa, e ele não poderá despedi-la em todos os seus dias.
20 ಈ ಮಾತು ಸತ್ಯವಾಗಿದ್ದು, ಆ ಹುಡುಗಿಯಲ್ಲಿ ಕನ್ಯಾಭಾವದ ಲಕ್ಷಣ ಕಾಣದೆ ಇದ್ದರೆ
20 Mas se isto for verdade, e os sinais da virgindade não forem encontrados na donzela,
21 ಆ ಹುಡುಗಿ ಯನ್ನು ಅವಳ ತಂದೆಯ ಮನೆಯ ಬಾಗಲಿಗೆ ತರಬೇಕು; ಅವಳ ಪಟ್ಟಣದ ಮನುಷ್ಯರು ಅವಳನ್ನು ಸಾಯುವ ಹಾಗೆ ಕಲ್ಲೆಸೆಯಬೇಕು; ಅವಳು ತಂದೆಯ ಮನೆಯಲ್ಲಿ ಸೂಳೆತನ ಮಾಡಿ ಇಸ್ರಾಯೇಲಿನಲ್ಲಿ ದುಷ್ಟತನವನ್ನು ಮಾಡಿದ್ದಾಳೆ. ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕಬೇಕು;
21 então eles levarão a donzela até a porta da casa do seu pai, e os homens da sua cidade a apedrejarão com pedras, para que morra; porque ela fez tolice em Israel, agindo como prostituta na casa do seu pai; assim afastarás o mal do teu meio.
22 ಒಬ್ಬ ಮನುಷ್ಯನು ಮುತ್ತೈದೆಯ ಸಂಗಡ ಮಲಗಿ ಕೊಂಡವನಾಗಿ ಸಿಕ್ಕಿದರೆ ಆ ಸ್ತ್ರೀಯ ಸಂಗಡ ಮಲಗಿ ಕೊಂಡ ಮನುಷ್ಯನೂ ಆ ಸ್ತ್ರೀಯೂ ಅವರಿಬ್ಬರೂ ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
22 Se um homem for encontrado deitado com uma mulher que tenha um marido, então ambos deverão morrer, tanto o homem que se deitou com a mulher, como a mulher; assim afastarás o mal de Israel.
23 ಕನ್ಯಾ ಸ್ತ್ರೀಯಾದ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯಮಾಡಿರಲಾಗಿ ಮತ್ತೊಬ್ಬ ಮನುಷ್ಯನು ಪಟ್ಟಣ ದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ
23 Se uma donzela que é virgem for prometida a um esposo, e um homem a encontrar na cidade, e se deitar com ela,
24 ಅವರಿಬ್ಬರನ್ನು ಆ ಪಟ್ಟಣದ ಬಾಗಲಿನ ಹೊರಗೆ ತಂದು ಅವರು ಸಾಯುವ ಹಾಗೆ ಕಲ್ಲೆಸೆಯಬೇಕು; ಆ ಹುಡುಗಿಯು ಪಟ್ಟಣದಲ್ಲಿ ಇದ್ದಾಗ್ಯೂ ಕೂಗದೆ ಇದ್ದದ್ದರಿಂದಲೂ ಆ ಮನುಷ್ಯನು, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸ ಬೇಕು. ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದು ಹಾಕಬೇಕು.
24 então trareis a ambos à porta da cidade, e os apedrejareis com pedras, para que morram; a donzela, porque não gritou quando estava na cidade; e o homem, porque ele humilhou a esposa do seu próximo; assim afastarás o mal do vosso meio.
25 ಒಬ್ಬ ಮನುಷ್ಯನು ನಿಶ್ಚಯಮಾಡಿದ ಹುಡುಗಿ ಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ ಅವಳ ಸಂಗಡ ಮಲಗಿದರೆ ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬೇಡ
25 Mas se um homem encontrar uma donzela prometida no campo, e o homem a forçar e se deitar com ela, então somente o homem que se deitar com ela morrerá;
26 ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
26 mas à donzela nada farás; não há na donzela nenhum pecado merecedor de morte; pois é como quando um homem se levanta contra o seu próximo e o mata. Assim é este caso,
27 ಅವನು ಹೊಲದಲ್ಲಿ ಅವಳನ್ನು ಕಂಡನು; ನಿಶ್ಚಯಮಾಡಿದ ಆ ಹುಡುಗಿ ಕೂಗಿದಳು, ಆದರೆ ರಕ್ಷಿಸುವವನು ಅವಳಿಗೆ ಯಾರೂ ಇಲ್ಲ.
27 porque a achou no campo, e a donzela prometida gritou, e não houve ninguém que a salvasse.
28 ಒಬ್ಬ ಮನುಷ್ಯನು ನಿಶ್ಚಯಮಾಡದಿರುವ ಕನ್ಯಾ ಸ್ತ್ರೀಯಾದ ಹುಡುಗಿಯನ್ನು ಕಂಡು ಅವಳನ್ನು ಹಿಡಿದು ಅವಳ ಸಂಗಡ ಮಲಗುವಲ್ಲಿ ಅವನು ಸಿಕ್ಕಿದರೆ
28 Se um homem encontrar uma donzela que é uma virgem, que não é prometida, e a tomar e se deitar com ela, e eles forem encontrados;
29 ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿಯ ಹಣಗಳನ್ನು ಕೊಡಬೇಕು; ಮತ್ತು ಅವಳು ಅವನಿಗೆ ಹೆಂಡತಿಯಾಗಬೇಕು; ಅವನು ಅವಳನ್ನು ಕೆಡಿಸಿದ್ದರಿಂದ ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಿಬಿಡಕೂಡದು.
29 então o homem que se deitou com ela dará ao pai da donzela cinquenta shekels de prata, e ela será sua esposa; porque ele a humilhou, não poderá despedi-la em todos os seus dias.
30 ಒಬ್ಬನು ತನ್ನ ತಂದೆಯ ಹೆಂಡತಿಯನ್ನು ತಕ್ಕೊಳ್ಳ ಕೂಡದು; ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆಯ ಕೂಡದು.
30 Um homem não tomará a esposa do seu pai, nem descobrirá o manto do seu pai.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Deuteronômio 22, comparar traduções ou montar um estudo — tudo direto pelo WhatsApp.