Deuteronômio 20

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಕುದುರೆಗಳನ್ನೂ ರಥ ಗಳನ್ನೂ ನಿನಗಿಂತ ಹೆಚ್ಚಾದ ಜನರನ್ನೂ ನೋಡಿದರೆ ಅವರಿಗೆ ಭಯಪಡಬೇಡ; ಐಗುಪ್ತದೇಶದೊಳಗಿಂದ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ.
1 Quando saíres à peleja contra os teus inimigos e vires cavalos, e carros, e povo maior em número do que tu, não os temerás; pois o Senhor , teu Deus, que te fez sair da terra do Egito, está contigo.
2 ನೀವು ಯುದ್ಧಕ್ಕೆ ಸವಿಾಪ ಬಂದಾಗ ಯಾಜಕನು ಹತ್ತಿರ ಬಂದು ಜನರ ಸಂಗಡ ಮಾತನಾಡಿ ಅವ ರಿಗೆ--
2 Quando vos achegardes à peleja, o sacerdote se adiantará, e falará ao povo,
3 ಓ ಇಸ್ರಾಯೇಲೇ ಕೇಳು, ನೀವು ಈಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸವಿಾಪ ಬಂದಿದ್ದೀರಿ; ನಿಮ್ಮ ಹೃದಯಗಳು ಬಳಲಬಾರದು; ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂಬೇಡಿರಿ ;
3 e dir-lhe-á: Ouvi, ó Israel, hoje, vos achegais à peleja contra os vossos inimigos; que não desfaleça o vosso coração; não tenhais medo, não tremais, nem vos aterrorizeis diante deles,
4 ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.
4 pois o Senhor , vosso Deus, é quem vai convosco a pelejar por vós contra os vossos inimigos, para vos salvar.
5 ಆಗ ಅಧಿಕಾರಿಗಳು ಜನಕ್ಕೆ--ಹೊಸ ಮನೆಯನ್ನು ಕಟ್ಟಿ ಗೃಹಪ್ರತಿಷ್ಠೆಮಾಡದ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಗೃಹಪ್ರತಿಷ್ಠೆಮಾಡದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ.
5 Os oficiais falarão ao povo, dizendo: Qual o homem que edificou casa nova e ainda não a consagrou? Vá, torne-se para casa, para que não morra na peleja, e outrem a consagre.
6 ದ್ರಾಕ್ಷೇತೋಟವನ್ನು ನೆಟ್ಟು ಅದರ ಫಲ ವನ್ನು ತಿನ್ನದೆ ಇರುವ ಮನುಷ್ಯನು ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅದರ ಫಲ ತಿನ್ನದಹಾಗೆ ಅವನು ಸಹ ತಿರುಗಿಕೊಂಡು ತನ್ನ ಮನೆಗೆ ಹೋಗಲಿ.
6 Qual o homem que plantou uma vinha e ainda não a desfrutou? Vá, torne-se para casa, para que não morra na peleja, e outrem a desfrute.
7 ಹೆಂಡತಿ ಯನ್ನು ನಿಶ್ಚಯಿಸಿಕೊಂಡು ಆಕೆಯನ್ನು ಮದುವೆ ಮಾಡಿಕೊಳ್ಳದ ಮನುಷ್ಯನು ಹಿಂತಿರುಗಿ ಮನೆಗೆ ಹೋಗಲಿ ಯುದ್ಧದಲ್ಲಿ ಸಾಯಲಾಗಿ ಮತ್ತೊಬ್ಬನು ಅವಳನ್ನು ಸೇರಿಸಿಕೊಂಡಾನು ಎಂದು ಹೇಳಬೇಕು.
7 Qual o homem que está desposado com alguma mulher e ainda não a recebeu? Vá, torne-se para casa, para que não morra na peleja, e outro homem a receba.
8 ಇದಲ್ಲದೆ ಅಧಿಕಾರಿಗಳು ಜನಕ್ಕೆ ಮತ್ತೆ--ಭಯಸ್ತನಾಗಿ ಬಳಲಿಹೋದ ಹೃದಯವುಳ್ಳ ಮನುಷ್ಯನು ಯಾವನು? ತನ್ನ ಹೃದಯದಂತೆ ತನ್ನ ಸಹೋದರರ ಹೃದಯವು ಬಳಲಿಹೋಗದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ ಎಂದು ಹೇಳಬೇಕು.
8 E continuarão os oficiais a falar ao povo, dizendo: Qual o homem medroso e de coração tímido? Vá, torne-se para casa, para que o coração de seus irmãos se não derreta como o seu coração.
9 ಅಧಿಕಾರಿ ಗಳು ಜನರ ಸಂಗಡ ಮಾತನಾಡಿ ಮುಗಿಸಿದಾಗ ಜನರ ಮುಂದೆ ನಡೆಯತಕ್ಕ ಸೈನ್ಯಾಧಿಪತಿಗಳನ್ನು ನೇಮಿಸಬೇಕು.
9 Quando os oficiais tiverem falado ao povo, designarão os capitães dos exércitos para a dianteira do povo.
10 ನೀನು ಯುದ್ಧಮಾಡುವ ನಿಮಿತ್ತ ಒಂದು ಪಟ್ಟ ಣದ ಹತ್ತಿರ ಬಂದರೆ ಸಮಾಧಾನಕ್ಕಾಗಿ ಅದನ್ನು ಕರೆಯಬೇಕು.
10 Quando te aproximares de alguma cidade para pelejar contra ela, oferecer-lhe-ás a paz.
11 ಆ ಪಟ್ಟಣವು ನಿನಗೆ ಸಮಾಧಾನದ ಉತ್ತರ ಕೊಟ್ಟು ಬಾಗಲನ್ನು ತೆರೆದರೆ ಅದರಲ್ಲಿರುವ ಜನರೆಲ್ಲರು ನಿನಗೆ ಕಪ್ಪಕೊಟ್ಟು ನಿನ್ನನ್ನು ಸೇವಿಸಬೇಕು.
11 Se a sua resposta é de paz, e te abrir as portas, todo o povo que nela se achar será sujeito a trabalhos forçados e te servirá.
12 ಅದು ನಿನ್ನ ಸಂಗಡ ಸಮಾಧಾನವಾಗಲೊಲ್ಲದೆ ನಿನ್ನ ಸಂಗಡ ಯುದ್ಧಮಾಡಿದರೆ ಅದಕ್ಕೆ ಮುತ್ತಿಗೆ ಹಾಕಬೇಕು.
12 Porém, se ela não fizer paz contigo, mas te fizer guerra, então, a sitiarás.
13 ನಿನ್ನ ದೇವರಾದ ಕರ್ತನು ಅದನ್ನು ನಿನ್ನ ಕೈಗೆ ಕೊಟ್ಟರೆ ಅದರ ಗಂಡಸರೆಲ್ಲರನ್ನು ಕತ್ತಿಯಿಂದ ಹೊಡೆಯಬೇಕು.
13 E o Senhor , teu Deus, a dará na tua mão; e todos os do sexo masculino que houver nela passarás a fio de espada;
14 ಆದರೆ ಹೆಂಗಸರನ್ನೂ ಚಿಕ್ಕವ ರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ನಿನಗಾಗಿ ಸುಲುಕೊಳ್ಳ ಬೇಕು; ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ನಿನ್ನ ಶತ್ರುಗಳ ಕೊಳ್ಳೆಯನ್ನು ತಿಂದುಬಿಡಬೇಕು.
14 mas as mulheres, e as crianças, e os animais, e tudo o que houver na cidade, todo o seu despojo, tomarás para ti; e desfrutarás o despojo dos inimigos que o Senhor , teu Deus, te deu.
15 ಹೀಗೆ ಇಲ್ಲಿರುವ ಈ ಜನಾಂಗಗಳ ಪಟ್ಟಣಗಳಲ್ಲದಂಥ, ನಿನಗೆ ದೂರವಾಗಿರುವಂಥ ಪಟ್ಟಣಗಳಿಗೆಲ್ಲಾ ಹಾಗೇ ಮಾಡ ಬೇಕು.
15 Assim farás a todas as cidades que estiverem mui longe de ti, que não forem das cidades destes povos.
16 ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು.
16 Porém, das cidades destas nações que o Senhor , teu Deus, te dá em herança, não deixarás com vida tudo o que tem fôlego.
17 ಆದರೆ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿ ಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ
17 Antes, como te ordenou o Senhor , teu Deus, destruí-las-ás totalmente: os heteus, os amorreus, os cananeus, os ferezeus, os heveus e os jebuseus,
18 ಅವರು ತಮ್ಮ ದೇವರುಗಳಿಗೆ ಮಾಡಿದ ಎಲ್ಲಾ ಅಸಹ್ಯಗಳನ್ನು ಮಾಡುವದಕ್ಕೆ ನಿಮಗೆ ಕಲಿಸದ ಹಾಗೆಯೂ ನೀವು ನಿಮ್ಮ ದೇವರಾದ ಕರ್ತನಿಗೆ ಪಾಪ ಮಾಡದ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಹಾಗೆ ನಿರ್ಮೂಲ ಮಾಡಬೇಕು.
18 para que não vos ensinem a fazer segundo todas as suas abominações, que fizeram a seus deuses, pois pecaríeis contra o Senhor , vosso Deus.
19 ನೀನು ಒಂದು ಪಟ್ಟಣಕ್ಕೆ ವಿರೋಧವಾಗಿ ಯುದ್ಧ ಮಾಡಿ ಅದನ್ನು ಹಿಡಿಯುವಹಾಗೆ ಬಹಳದಿವಸ ಮುತ್ತಿಗೆ ಹಾಕಿದರೆ ಮರಗಳನ್ನು ಕೊಡಲಿತಾಗಿಸಿ ಕೆಡಿಸಬೇಡ. ಯಾಕಂದರೆ ಅವುಗಳ ಹಣ್ಣನ್ನು ನೀನು ತಿನ್ನಬಹುದು. ಅವುಗಳನ್ನು ಮುತ್ತಿಗೆಯಲ್ಲಿ ನಿನಗೆ ಸಹಾಯವಾಗುವದ ಕ್ಕೋಸ್ಕರ ಕಡಿದುಹಾಕಬಾರದು. ಹೊಲದ ಮರಗಳು ಮನುಷ್ಯರ ಜೀವಕ್ಕಾಗಿವೆ.
19 Quando sitiares uma cidade por muito tempo, pelejando contra ela para a tomar, não destruirás o seu arvoredo, metendo nele o machado, porque dele comerás; pelo que não o cortarás, pois será a árvore do campo algum homem, para que fosse sitiada por ti?
20 ಆಹಾರಕ್ಕಾಗದ ಮರ ಗಳೆಂದು ನಿನಗೆ ತಿಳಿದಿರುವ ಮರಗಳನ್ನು ಮಾತ್ರ ಕೆಡಿಸಿ ಕಡಿದುಹಾಕಿ ನಿನ್ನ ಸಂಗಡ ಯುದ್ಧಮಾಡುವ ಪಟ್ಟಣಕ್ಕೆ ವಿರೋಧವಾಗಿ ಅದು ಬೀಳುವ ತನಕ ಮುತ್ತಿಗೆ ಹಾಕಬಹುದು.
20 Mas as árvores cujos frutos souberes não se comem, destruí-las-ás, cortando-as; e, contra a cidade que guerrear contra ti, edificarás baluartes, até que seja derribada.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Deuteronômio 20, comparar traduções ou montar um estudo — tudo direto pelo WhatsApp.