Deuteronômio 1

Kannada Bible (GL_KANNADA) vs VC

Sair da comparação
VC Versão Católica
1 ಮೋಶೆಯು ಎಲ್ಲಾ ಇಸ್ರಾಯೇಲ್ಯರಿಗೆ ಯೊರ್ದನಿನ ಈಚೆಯಲ್ಲಿರುವ ಅರಣ್ಯ ದಲ್ಲಿ, ಕೆಂಪು ಸಮುದ್ರಕ್ಕೆ ಎದುರಾಗಿರುವ ಬೈಲಿನಲ್ಲಿ, ಪಾರಾನ್‌, ತೋಫೆಲ್‌, ಲಾಬಾನ್‌, ಹಚೇರೋತ್‌, ದೀಜಾಹಾಬ್‌ ಎಂಬವುಗಳ ಮಧ್ಯದಲ್ಲಿ ಹೇಳಿದ ಮಾತುಗಳು ಇವೇ.
1 Eis os discursos que pronunciou Moisés a todo o Israel do outro lado do Jordão, no deserto, na planície que se estende defronte de Suf, entre Farã, Tofel, Labã, Haserot e Di-Zaab.
2 (ಹೋರೇಬಿನಿಂದ ಕಾದೇಶ್‌ ಬರ್ನೇಯಕ್ಕೆ ಸೇಯಾರ್‌ ಬೆಟ್ಟದ ಮಾರ್ಗವಾಗಿ ಹನ್ನೊಂದು ದಿವಸ ಪ್ರಯಾಣ).
2 Desde Horeb até Cades-Barne há uma distância de onze jornadas de marcha pelo caminho da montanha de Seir.
3 ನಾಲ್ವತ್ತನೇ ವರುಷದಲ್ಲಿ ಹನ್ನೊಂದನೇ ತಿಂಗಳಿನ ಮೊದಲನೇ ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಇಸ್ರಾಯೇಲ್‌ ಮಕ್ಕಳಿಗೆ, ಕರ್ತನು ಅವನಿಗೆ ಅವರ ವಿಷಯ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾತನಾಡಿದನು.
3 No quadragésimo ano, no primeiro dia do décimo primeiro mês, diante dos israelitas, Moisés pronunciou todos os discursos que o Senhor lhe tinha ordenado pronunciar,
4 ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿ ಯರ ಅರಸನಾದ ಸೀಹೋನನನ್ನೂ ಎದ್ರೈಯಲ್ಲಿ ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಅಷ್ಟಾರೋತನಲ್ಲಿ ಕೊಂದನು.
4 depois de ter derrotado Seon, rei dos amorreus que habitava em Hesebon, e Og, rei de Basã, que habitava em Astarot e Edrai.
5 ಮೋಶೆಯು ಯೊರ್ದ ನಿನ ಈಚೆಯಲ್ಲಿ ಮೋವಾಬಿನ ದೇಶದಲ್ಲಿ ಈ ನ್ಯಾಯ ಪ್ರಮಾಣವನ್ನು ವಿವರಿಸುವದಕ್ಕೆ ಆರಂಭ ಮಾಡಿ
5 Do outro lado do Jordão, na terra de Moab, Moisés começou a expor a lei, dizendo:
6 ನಮ್ಮ ದೇವರಾದ ಕರ್ತನು ಹೋರೇಬಿನಲ್ಲಿ ನಮಗೆ--ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು;
6 O Senhor, nosso Deus, falou-nos nestes termos em Horeb: tendes-vos demorado muito tempo neste monte.
7 ತಿರುಗಿಕೊಂಡು ಹೊರಟು ಅಮೋರಿಯರ ಬೆಟ್ಟಕ್ಕೂ ಅದರ ಸವಿಾಪದ ಬೈಲಿನಲ್ಲಿಯೂ ಗುಡ್ಡದಲ್ಲಿಯೂ ತಗ್ಗಿನಲ್ಲಿಯೂ ದಕ್ಷಿಣದಲ್ಲಿಯೂ ಸಮುದ್ರ ತೀರ ದಲ್ಲಿಯೂ ಇರುವ ಎಲ್ಲಾ ಸ್ಥಳಗಳಿಗೂ ಕಾನಾನ್ಯರ ದೇಶಕ್ಕೂ ಲೆಬನೋನಿಗೂ ಯೂಫ್ರೇಟೀಸ್‌ ಎಂಬ ಮಹಾನದಿಯ ಬಳಿಗೂ ಹೋಗಿರಿ.
7 Voltai e parti. Tomai o caminho do monte dos amorreus e das regiões vizinhas; ide às planícies, às montanhas, aos vales, ao Negeb, às costas do mar, à terra dos cananeus, ao Líbano e até o grande rio Eufrates.
8 ಇಗೋ, ಆ ದೇಶವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ; ಹೋಗಿ ಕರ್ತನು ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ ಎಂದು ಹೇಳಿದನು.
8 Eis que eu vos entrego esta terra. Ide e possuí a terra que jurei dar a vossos pais Abraão, Isaac e Jacó, a eles e à sua posteridade.
9 ಆ ಕಾಲದಲ್ಲಿ ನಾನು ನಿಮ್ಮೊಂದಿಗೆ ಮಾತನಾಡಿ-- ನಾನೊಬ್ಬನೇ ನಿಮ್ಮನ್ನು ಹೊರಲಾರೆನಂದೆನು.
9 Eu disse-vos nessa mesma época: eu sozinho não posso tomar conta de vós.
10 ನಿಮ್ಮ ದೇವರಾದ ಕರ್ತನು ನಿಮ್ಮನ್ನು ಹೆಚ್ಚಿಸಿದ್ದಾನೆ. ಇಗೋ, ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ.
10 O Senhor, vosso Deus, vos multiplicou de tal modo que sois hoje tão numerosos como as estrelas do céu.
11 ನೀವು ಈಗ ಇರುವದಕ್ಕಿಂತಲೂ ನಿಮ್ಮನ್ನು ಸಾವಿರದಷ್ಟು ಹೆಚ್ಚು ಮಾಡಿ ನಿಮಗೆ ಪ್ರಮಾಣ ಮಾಡಿದ ಹಾಗೆ ನಿಮ್ಮ ಪಿತೃಗಳ ದೇವರಾದ ಕರ್ತನು ಆಶೀರ್ವದಿಸಲಿ.
11 Que o Senhor, o Deus de vossos pais, vos multiplique mil vezes mais e vos abençoe como prometeu.
12 ನಿಮ್ಮ ಚಿಂತೆಯನ್ನೂ ಭಾರವನ್ನೂ ವ್ಯಾಜ್ಯವನ್ನೂ ನಾನೊಬ್ಬನೇ ಹೇಗೆ ಹೊರಲಿ?
12 Como poderia eu sozinho encarregar-me de vós e levar o fardo de vossas contendas?
13 ನಿಮ್ಮ ಗೋತ್ರಗಳಲ್ಲಿ ಪ್ರಸಿದ್ಧರಾಗಿದ್ದು ಜ್ಞಾನವೂ ಬುದ್ಧಿಯೂಳ್ಳ ಮನುಷ್ಯರನ್ನು ಆರಿಸಿಕೊಳ್ಳಿರಿ; ಆಗ ನಾನು ಅವರನ್ನು ನಿಮಗೆ ಮುಖ್ಯಸ್ಥರನ್ನಾಗಿ ಮಾಡುವೆನು ಅಂದನು.
13 Escolhei, de cada uma de vossas tribos, homens sábios, prudentes e experimentados, que eu ponha à vossa frente.
14 ಅದಕ್ಕೆ ನೀವು ನನಗೆ ಉತ್ತರ ಕೊಟ್ಟು ಹೇಳಿದ್ದೇನಂದರೆ--ನಿನ್ನ ಆಲೋ ಚನೆಯಂತೆ ಮಾಡುವದು ನಮಗೆ ಒಳ್ಳೇದು ಅಂದಾಗ
14 Vós então me respondesses: é uma boa coisa o que nos propões.
15 ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ
15 Tome, pois, dentre vós, homens sábios e experimentados que pus à vossa frente como chefes de milhares de centenas, de cinqüentenas e de dezenas e como escribas em vossas tribos.
16 ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ.
16 Nesse mesmo tempo dei esta ordem aos vossos juízes: dai audiência aos vossos irmãos e julgai com eqüidade as questões de cada um deles com o seu irmão ou com o estrangeiro que mora com ele.
17 ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.
17 Não fareis distinção de pessoas em vossos julgamentos. Ouvireis o pequeno como o grande, sem temor de ninguém, porque o juízo é de Deus. Se uma questão vos parecer muito complicada, trá-la-eis diante de mim para que eu a ouça.
18 ಆ ಸಮಯದಲ್ಲಿ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ನಿಮಗೆ ಆಜ್ಞಾಪಿಸಿದೆನು.
18 É assim que, naquele tempo, vos ordenei tudo o que devíeis fazer.
19 ಆಗ ನೀವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ ಪ್ರಕಾರ ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಅರಣ್ಯವನ್ನೆಲ್ಲಾ ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು.
19 Depois partimos de Horeb para atravessar esse vasto e terrível deserto que vistes, do monte dos amorreus, como nos havia ordenado o Senhor, nosso Deus. E chegamos a Cades-Barne.
20 ಆಗ ನಾನು ನಿಮಗೆ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ಅಮೋರಿಯರ ಬೆಟ್ಟಕ್ಕೆ ಬಂದಿರಿ;
20 Eu disse-vos então: Eis-vos chegados ao monte dos amorreus que o Senhor, nosso Deus, nos dá.
21 ಇಗೋ, ನಿನ್ನ ದೇವರಾದ ಕರ್ತನು ದೇಶವನ್ನು ನಿನ್ನ ಮುಂದೆ ಇಟ್ಟಿದ್ದಾನೆ; ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ಹೋಗಿ ಅದನ್ನು ಸ್ವಾಧೀನಪಡಿಸಿಕೋ; ಭಯಪಡಬೇಡ, ಧೈರ್ಯಗೆಡಬೇಡ ಅಂದೆನು.
21 Vê: o Senhor, teu Deus, entrega-te a terra. Subi e possuí-a, como o prometeu o Deus de teus pais. Não tenhas medo; não te assustes.
22 ಆಗ ನೀವೆಲ್ಲರೂ ನನ್ನ ಬಳಿಗೆ ಬಂದು--ನಮ್ಮ ಮುಂದಾಗಿ ಮನುಷ್ಯರನ್ನು ಕಳುಹಿಸೋಣ, ಅವರು ನಮಗೆ ಆ ದೇಶವನ್ನು ಪರಿಶೀಲಿಸಿ ನೋಡಿ ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತಿಳಿಸಲಿ ಅಂದಿರಿ.
22 Vós vos aproximasses de mim e dissesses: enviemos homens adiante de nós, que explorem a terra e nos ensinem por que caminho devemos subir, e para que cidades devemos ir.
23 ಆ ಮಾತು ನನಗೆ ಒಳ್ಳೇದೆಂದು ತೋಚಿತು; ನಾನು ನಿಮ್ಮಲ್ಲಿ ಕುಲಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿ ಯನ್ನು ತಕ್ಕೊಂಡೆನು.
23 Vosso parecer agradou-me, e escolhi dentre vós doze homens, um de cada tribo.
24 ಅವರು ಹೋಗಿ ಬೆಟ್ಟವನ್ನೇರಿ ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು ಅದನ್ನು ಹೊಂಚಿ ನೋಡಿ
24 Eles partiram, subiram as montanhas e chegaram ao vale de Escol, explorando a terra.
25 ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತಕ್ಕೊಂಡು ನಮ್ಮ ಬಳಿಗೆ ತಂದು ನಮಗೆ ಸಮಾಚಾರ ವನ್ನು ತಿಳಿಸಿ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶವು ಒಳ್ಳೇದು ಎಂದು ಹೇಳಿದಿರಿ.
25 Tomaram consigo frutos da terra e no-los trouxeram dizendo: a terra que nos dá o Senhor, nosso Deus, é boa.
26 ಆದರೆ ನೀವು ಮೇಲೆ ಹೋಗುವದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಕರ್ತನ ಅಪ್ಪಣೆಗೆ ತಿರುಗಿಬಿದ್ದು
26 Mas não quisesses subir a ela, e fostes rebeldes ao mandamento do Senhor, nosso Deus.
27 ನಿಮ್ಮ ಗುಡಾರಗಳಲ್ಲಿ ಗುಣುಗುಟ್ಟಿ--ಕರ್ತನು ನಮ್ಮನ್ನು ಹಗೆಮಾಡಿದ್ದರಿಂದ ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ ನಾಶಮಾಡುವದಕ್ಕೆ ಐಗುಪ್ತದೇಶದೊಳ ಗಿಂದ ಹೊರಗೆ ಬರಮಾಡಿದ್ದಾನೆ.
27 E murmurasses em vossas tendas, dizendo: o Senhor tem-nos ódio, e por isso nos tirou da terra do Egito para entregar-nos ao extermínio pelas mãos dos amorreus.
28 ನಾವು ಎಲ್ಲಿಗೆ ಹೋಗೋಣ? ನಮ್ಮ ಸಹೋದರರು--ಆ ಜನರು ನಮಗಿಂತ ದೊಡ್ಡವರೂ ಉದ್ದವಾದವರೂ; ಪಟ್ಟಣ ಗಳು ದೊಡ್ಡವುಗಳೂ ಆಕಾಶದ ಎತ್ತರಕ್ಕೂ ಗೋಡೆ ಯುಳ್ಳವುಗಳೂ; ಇದಲ್ಲದೆ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ ಎಂದು ಹೇಳಿದಿರಿ.
28 Para onde iremos? Nossos irmãos fizeram-nos perder a coragem quando nos disseram ter visto um povo maior e de estatura mais alta que a nossa, e cidades grandes e fortificadas, cujos muros se elevavam até o céu, e até mesmo filhos de Enacim.
29 ಆಗ ನಾನು ನಿಮಗೆ--ಅಂಜಬೇಡಿರಿ; ಅವರಿಗೆ ಭಯಪಡಬೇಡಿರಿ.
29 Eu vos respondi: não vos assusteis; não tenhais medo deles.
30 ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು.
30 o Senhor, vosso Deus, que marcha diante de vós, combaterá ele mesmo em vosso lugar, como sempre o fez sob os vossos olhos, no Egito
31 ಈ ಅರಣ್ಯದಲ್ಲಿ ನಿಮ್ಮ ದೇವ ರಾದ ಕರ್ತನು, ನಿಮ್ಮನ್ನು ತಂದೆ ಮಗನನ್ನು ಹೊತ್ತು ಕೊಳ್ಳುವ ಪ್ರಕಾರ ನೀವು ಹೋದ ಮಾರ್ಗದಲ್ಲೆಲ್ಲಾ ಈ ಸ್ಥಳಕ್ಕೆ ಬರುವ ಪರ್ಯಂತರ ಹೊತ್ತುಕೊಂಡನೆಂದು ನೋಡಿದ್ದೀರಲ್ಲಾ ಅಂದೆನು.
31 e no deserto. No deserto, tu mesmo viste como o Senhor, teu Deus, te levou por todo caminho por onde andaste, como um homem costuma levar seu filho, até que chegásseis a esse lugar.
32 ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಕರ್ತನನ್ನು ನಂಬಲಿಲ್ಲ.
32 E apesar disso não tivesses confiança no Senhor, vosso Deus,
33 ಇಳುಕೊಳ್ಳುವದಕ್ಕೆ ನಿಮಗೆ ಸ್ಥಳವನ್ನು ವಿಚಾರಿಸಲೂ ನೀವು ಹೋಗತಕ್ಕ ಮಾರ್ಗ ವನ್ನು ನಿಮಗೆ ತೋರಿಸಲೂ ರಾತ್ರಿಹೊತ್ತು ಬೆಂಕಿ ಯಲ್ಲಿಯೂ ಹಗಲುಹೊತ್ತು ಮೇಘದಲ್ಲಿಯೂ ಮಾರ್ಗದಲ್ಲಿ ಆತನೇ ನಿಮ್ಮ ಮುಂದೆ ಹೋದನು.
33 o qual, procurando-vos um lugar onde acampar, marchava adiante de vós no caminho, de noite no fogo, para vos mostrar o caminho, e de dia na nuvem.
34 ಕರ್ತನು ನಿಮ್ಮ ಮಾತುಗಳ ಧ್ವನಿಯನ್ನು ಕೇಳಿ ಕೋಪಿಸಿಕೊಂಡು ಪ್ರಮಾಣಮಾಡಿ--
34 O Senhor, tendo ouvido o som de vossas palavras, encolerizou-se e fez este juramento:
35 ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.
35 nenhum dos homens desta geração perversa verá a boa terra que eu, com juramento, prometi dar a vossos pais,
36 ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಕರ್ತನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದ ಅವನು ಸಂಚರಿಸಿದ ದೇಶ ವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು.
36 exceto Caleb, filho de Jefoné. Este vê-la-á, e eu darei a ele e a seus filhos o solo que ele pisou, porque cumpriu a vontade do Senhor.
37 ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
37 Até contra mim se irritou o Senhor por causa de vós: tu tampouco, disse-me ele, entrarás nessa terra!
38 ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗನಾದ ಯೆಹೋಶುವನೇ ಅದರಲ್ಲಿ ಪ್ರವೇಶಿ ಸುವನು; ಅವನಿಗೆ ಧೈರ್ಯಕೊಡು; ಅವನೇ ಅದನ್ನು ಇಸ್ರಾಯೇಲಿಗೆ ಸ್ವಾಸ್ತ್ಯವಾಗಿ ಕೊಡುವನು.
38 É Josué, filho de Nun, que ali entrará. Anima-o, pois é ele que introduzirá Israel na possessão da terra.
39 ಇದಲ್ಲದೆ ಸುಲಿಗೆ ಆಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈಹೊತ್ತು ಮೇಲು ಕೇಡು ಅರಿಯದ ನಿಮ್ಮ ಮಕ್ಕಳೂ ಅವರೇ ಅದರಲ್ಲಿ ಪ್ರವೇಶಿಸುವರು; ಅವರಿಗೆ ಅದನ್ನು ಕೊಡುವೆನು; ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು.
39 Vossos filhinhos, dos quais dissesses que seriam a presa do deserto, e vossos filhos, que hoje ainda não sabem distinguir o bem do mal, estes entrarão; a eles darei a terra e a possuirão.
40 ನೀವಾದರೋ ತಿರುಗಿಕೊಂಡು ಕೆಂಪು ಸಮುದ್ರದ ಮಾರ್ಗವಾಗಿ ಅರಣ್ಯಕ್ಕೆ ಹೊರಟುಹೋಗಿರಿ ಎಂದು ಹೇಳಿದನು.
40 Quanto a vós, voltai para trás e parti para o deserto na direção do mar Vermelho.
41 ನೀವು ಉತ್ತರ ಕೊಟ್ಟು ನನಗೆ--ಕರ್ತನಿಗೆ ಪಾಪ ಮಾಡಿದ್ದೇವೆ; ನಮ್ಮ ದೇವರಾದ ಕರ್ತನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ನಾವು ಹೋಗಿ ಯುದ್ಧ ಮಾಡುತ್ತೇವೆ ಅಂದಿರಿ. ನೀವೆಲ್ಲರು ನಿಮ್ಮ ಯುದ್ಧದ ಆಯುಧಗಳನ್ನು ತೆಗೆದುಕೊಂಡ ಮೇಲೆ ಬೆಟ್ಟಕ್ಕೆ ಹೋಗುವದು ಸಣ್ಣಕೆಲಸವೆಂದು ನೆನಸಿದಿರಿ.
41 Vós respondestes-me: pecamos contra o Senhor. Vamos combater, como o Senhor, nosso Deus, nos ordenou. E quando cada um de vós, tomando as suas armas, vos dispusesses inconsideradamente a marchar sobre o monte,
42 ಆದರೆ ಕರ್ತನು ನನಗೆ--ಹೋಗಬೇಡಿರಿ; ಯುದ್ಧಮಾಡ ಬೇಡಿರಿ; ಯಾಕಂದರೆ ನಾನು ನಿಮ್ಮ ಮಧ್ಯದಲ್ಲಿ ಇರುವದಿಲ್ಲ; ನೀವು ನಿಮ್ಮ ಶತ್ರುಗಳಿಂದ ಹೊಡೆಯ ಲ್ಪಡುವಿರಿ ಎಂದು ಅವರಿಗೆ ಹೇಳು ಅಂದನು.
42 o Senhor disse-me: dize-lhes: não subais, não entreis em combate algum, porque não estou no meio de vós. Se o fizerdes, sereis vencidos por vossos inimigos.
43 ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ ಕರ್ತನ ಅಪ್ಪಣೆಗೆ ತಿರುಗಿಬಿದ್ದು ವ್ಯರ್ಥ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.
43 Em vão vos referi todas essas palavras: não me ouvisses e tivesses a presunção de subir o monte, a despeito das ordens do Senhor.
44 ಆಗ ಆ ಬೆಟ್ಟ ದಲ್ಲಿ ವಾಸಮಾಡುವ ಅಮೋರಿಯರು ನಿಮ್ಮೆದುರಿಗೆ ಹೊರಟು ಜೇನು ಹುಳಗಳು ಮುತ್ತಿಕೊಂಡಂತೆ ನಿಮ್ಮ ಬೆನ್ನುಹತ್ತಿ ಸೇಯಾರಿನಲ್ಲಿ ಹೊರ್ಮದ ಪರ್ಯಂತರ ನಿಮ್ಮನ್ನು ಸಂಹಾರಮಾಡಿದರು.
44 Então os amorreus que habitavam nessa montanha saíram contra vós, perseguiram-vos como abelhas e retalharam-vos desde Seir até Horma.
45 ಆಗ ನೀವು ತಿರುಗಿಕೊಂಡು ಕರ್ತನ ಮುಂದೆ ಗೋಳಾಡಿದಿರಿ; ಆದರೆ ಕರ್ತನು ನಿಮ್ಮ ಧ್ವನಿಯನ್ನು ಕೇಳಲಿಲ್ಲ, ನಿಮಗೆ ಕಿವಿಗೊಡಲಿಲ್ಲ.
45 Voltando, chorasses diante do Senhor, mas o Senhor não ouviu os vossos clamores, nem vos inclinou os seus ouvidos.
46 ಆ ಮೇಲೆ ನೀವು ಕಾದೇಶಿನಲ್ಲಿ ವಾಸವಾಗಿದ್ದ ಕಾಲದ ಪ್ರಕಾರ ಬಹಳ ದಿವಸ ವಾಸವಾಗಿದ್ದಿರಿ.
46 Por isso é que ficastes tanto tempo em Cades, como o sabeis.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Deuteronômio 1, comparar traduções ou montar um estudo — tudo direto pelo WhatsApp.