Atos 7
Kannada Bible (GL_KANNADA) vs ACF
ACF Almeida Corrigida Fiel
1 ಆಗ ಮಹಾಯಾಜಕನು--ಈ ವಿಷಯ ಗಳು ಹೌದೋ ಎಂದು ಕೇಳಿದನು.
1 E disse o sumo sacerdote: Porventura é isto assim?
2 ಅದಕ್ಕವನು--ಜನರೇ, ಸಹೋದರರೇ, ತಂದೆಗಳೇ, ಕಿವಿಗೊಡಿರಿ; ನಮ್ಮ ತಂದೆಯಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಅವನು ಮೆಸೊಪೊತಾಮ್ಯದಲ್ಲಿದ್ದಾಗ ಮಹಿಮೆಯುಳ್ಳ ದೇವರು ಪ್ರತ್ಯಕ್ಷನಾಗಿ ಅವನಿಗೆ--
2 E ele disse: Homens, irmãos, e pais, ouvi. O Deus da glória apareceu a nosso pai Abraão, estando na mesopotâmia, antes de habitar em Harã,
3 ನೀನು ನಿನ್ನ ದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ನಿನಗೆ ತೋರಿ ಸುವ ದೇಶಕ್ಕೆ ಬರಬೇಕು ಎಂದು ಹೇಳಿದನು.
3 E disse-lhe: Sai da tua terra e dentre a tua parentela, e dirige-te à terra que eu te mostrar.
4 ಆಗ ಅಬ್ರಹಾಮನು ಕಲ್ದೀಯರ ದೇಶದೊಳಗಿಂದ ಬಂದು ಖಾರಾನಿನಲ್ಲಿ ವಾಸಮಾಡಿದನು; ತನ್ನ ತಂದೆಯು ಸತ್ತಮೇಲೆ ಅವನು ಅಲ್ಲಿಂದ ಹೊರಟು ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬಂದನು.
4 Então saiu da terra dos caldeus, e habitou em Harã. E dali, depois que seu pai faleceu, Deus o trouxe para esta terra em que habitais agora.
5 ಅಲ್ಲಿ ದೇವರು ಅವನಿಗೆ ಕಾಲಿಡುವಷ್ಟು ಸ್ವಾಸ್ತ್ಯವನ್ನು ಕೊಡ ಲಿಲ್ಲ; ಆದಾಗ್ಯೂ ಅವನಿಗೆ ಇನ್ನೂ ಮಗನು ಇಲ್ಲದಿರು ವಾಗ ಆ ದೇಶವನ್ನು ಅವನಿಗೂ ತರುವಾಯ ಅವನ ಸಂತತಿಗೂ ಸ್ವಾಸ್ಥ್ಯವಾಗಿ ಕೊಡುತ್ತೇನೆಂದು ವಾಗ್ದಾನ ಮಾಡಿದನು.
5 E não lhe deu nela herança, nem ainda o espaço de um pé; mas prometeu que lhe daria a posse dela, e depois dele, à sua descendência, não tendo ele ainda filho.
6 ಇದಲ್ಲದೆ ದೇವರು ಈ ರೀತಿ ಹೇಳಿ ದನು--ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿ ಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸ ರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು.
6 E falou Deus assim: Que a sua descendência seria peregrina em terra alheia, e a sujeitariam à escravidão, e a maltratariam por quatrocentos anos.
7 ಅವರು ದಾಸರಾಗಿ ಸೇವಿ ಸುವ ಜನಾಂಗಕ್ಕೆ ನಾನೇ ನ್ಯಾಯತೀರಿಸುವೆನು ಎಂದು ದೇವರು ಹೇಳಿದನು. ಆಮೇಲೆ ಅವರು ಹೊರಟು ಬಂದು ಈ ಸ್ಥಳದಲ್ಲಿ ನನ್ನನ್ನು ಸೇವಿಸುವರು ಎಂಬದೇ.
7 E eu julgarei a nação que os tiver escravizado, disse Deus. E depois disto sairão e me servirão neste lugar.
8 ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.
8 E deu-lhe a aliança da circuncisão; e assim gerou a Isaque, e o circuncidou ao oitavo dia; e Isaque a Jacó; e Jacó aos doze patriarcas.
9 ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫ ನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. ಆದರೆ ದೇವರು ಅವನ ಸಂಗಡ ಇದ್ದು
9 E os patriarcas, movidos de inveja, venderam José para o Egito; mas Deus era com ele.
10 ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.
10 E livrou-o de todas as suas tribulações, e lhe deu graça e sabedoria ante Faraó, rei do Egito, que o constituiu governador sobre o Egito e toda a sua casa.
11 ಆಗ ಐಗುಪ್ತ ಮತ್ತು ಕಾನಾನ್ ದೇಶಗಳಲ್ಲಿ ಎಲ್ಲೆಲ್ಲಿಯೂ ಬರ ಬಂದು ದೊಡ್ಡ ಸಂಕಟವಾಯಿತು; ಆಗ ನಮ್ಮ ಪಿತೃ ಗಳಿಗೆ ಆಹಾರಕ್ಕೇನೂ ಸಿಕ್ಕಲಿಲ್ಲ.
11 Sobreveio então a todo o país do Egito e de Canaã fome e grande tribulação; e nossos pais não achavam alimentos.
12 ಆದರೆ ಐಗುಪ್ತ ದೇಶದಲ್ಲಿ ದವಸಧಾನ್ಯ ಉಂಟೆಂಬದನ್ನು ಯಾಕೋ ಬನು ಕೇಳಿ ನಮ್ಮ ಪಿತೃಗಳನ್ನು ಮೊದಲನೆಯ ಸಾರಿ ಅಲ್ಲಿಗೆ ಕಳುಹಿಸಿದನು.
12 Mas tendo ouvido Jacó que no Egito havia trigo, enviou ali nossos pais, a primeira vez.
13 ಎರಡನೆಯ ಸಾರಿ ಯೋಸೇ ಫನು ತನ್ನ ಸಹೋದರರಿಗೆ ತನ್ನನ್ನು ತೋರ್ಪಡಿಸಿ ಕೊಂಡನು; ಆಗ ಯೋಸೇಫನ ವಂಶವು ಫರೋಹನಿಗೆ ತಿಳಿಯಬಂತು.
13 E na segunda vez foi José conhecido por seus irmãos, e a sua linhagem foi manifesta a Faraó.
14 ಆಮೇಲೆ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲಾ ಬಂಧು ಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು ಕರೆ ಯಿಸಿಕೊಂಡನು.
14 E José mandou chamar a seu pai Jacó, e a toda a sua parentela, que era de setenta e cinco almas.
15 ಹೀಗೆ ಯಾಕೋಬನು ಐಗುಪ್ತ ದೇಶಕ್ಕೆ ಇಳಿದು ಹೋದನು. ಅಲ್ಲಿ ಅವನೂ ನಮ್ಮ ಪಿತೃಗಳೂ ಮೃತಿಹೊಂದಿದರು.
15 E Jacó desceu ao Egito, e morreu, ele e nossos pais;
16 ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ಅಬ್ರಹಾಮನು ಹಣಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
16 E foram transportados para Siquém, e depositados na sepultura que Abraão comprara por certa soma de dinheiro aos filhos de Emor, pai de Siquém.
17 ಆದರೆ ದೇವರು ಅಬ್ರಹಾಮನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದ ಕಾಲವು ಹತ್ತಿರಕ್ಕೆ ಬರುತ್ತಿರುವಾಗ
17 Aproximando-se, porém, o tempo da promessa que Deus tinha feito a Abraão, o povo cresceu e se multiplicou no Egito;
18 ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳಿಕೆಗೆ ಬರುವ ವರೆಗೆ ಆ ಜನರು ಐಗುಪ್ತ ದೇಶದಲ್ಲಿ ಅಭಿವೃದ್ಧಿಯಾಗಿ ಹೆಚ್ಚಿದರು.
18 Até que se levantou outro rei, que não conhecia a José.
19 ಈ ಅರಸನೇ ನಮ್ಮ ಜನರಲ್ಲಿ ಕುಯುಕ್ತಿ ಮಾಡಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ ನಮ್ಮ ಪಿತೃಗಳನ್ನು ಕ್ರೂರವಾಗಿ ನಡಿಸಿದನು.
19 Esse, usando de astúcia contra a nossa linhagem, maltratou nossos pais, ao ponto de os fazer enjeitar as suas crianças, para que não se multiplicassem.
20 ಆ ಸಮಯ ದಲ್ಲೇ ಹುಟ್ಟಿದ ಮೋಶೆಯು ದಿವ್ಯ ಸುಂದರನಾಗಿದ್ದನು; ಅವನು ತನ್ನ ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು.
20 Nesse tempo nasceu Moisés, e era mui formoso, e foi criado três meses em casa de seu pai.
21 ಆಮೇಲೆ ಅವನನ್ನು ಹೊರಗೆ ಹಾಕಿ ದಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು.
21 E, sendo enjeitado, tomou-o a filha de Faraó, e o criou como seu filho.
22 ಮೋಶೆಯು ಐಗುಪ್ತದೇಶದವರ ಸರ್ವಜ್ಞಾನವನ್ನು ಕಲಿತವನಾಗಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥ ನಾದನು.
22 E Moisés foi instruído em toda a ciência dos egípcios; e era poderoso em suas palavras e obras.
23 ಅವನಿಗೆ ನಾಲ್ವತ್ತು ವರುಷ ವಯಸ್ಸು ತುಂಬಿದಾಗ ಹೋಗಿ ತನ್ನ ಸಹೋದರರಾದ ಇಸ್ರಾ ಯೇಲ್ಯರನ್ನು ನೋಡಬೇಕೆಂಬ ಆಶೆಯು ಅವನ ಹೃದ ಯದಲ್ಲಿ ಹುಟ್ಟಿತು.
23 E, quando completou a idade de quarenta anos, veio-lhe ao coração ir visitar seus irmãos, os filhos de Israel.
24 ಅವರಲ್ಲಿ ಒಬ್ಬನಿಗೆ ಅನ್ಯಾಯ ವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯ ಕೊಟ್ಟು ಐಗುಪ್ತ್ಯನನ್ನು ಹೊಡೆದು ಹಾಕಿ ಪೀಡಿಸಲ್ಪಡು ತ್ತಿದ್ದವನಿಗಾಗಿ ಮುಯ್ಯಿ ತೀರಿಸಿದನು.
24 E, vendo maltratado um deles, o defendeu, e vingou o ofendido, matando o egípcio.
25 ಯಾಕಂದರೆ ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಮಾಡುತ್ತಾ ನೆಂಬದು ತನ್ನ ಸಹೋದರರಿಗೆ ತಿಳಿದು ಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ.
25 E ele cuidava que seus irmãos entenderiam que Deus lhes havia de dar a liberdade pela sua mão; mas eles não entenderam.
26 ಮರುದಿನ ತಾವು ಹೊಡೆದಾಡಿ ಕೊಳ್ಳುತ್ತಿರುವಾಗ ಅವನು ಕಾಣಿಸಿಕೊಂಡು--ಅಯ್ಯಗಳಿರಾ, ನೀವು ಸಹೋದರರಲ್ಲವೇ; ನೀವೇಕೆ ಒಬ್ಬರಿಗೊಬ್ಬರು ಅನ್ಯಾ ಯಮಾಡುತ್ತೀರಿ ಎಂದು ಹೇಳಿ ಅವರನ್ನು ಸಮಾಧಾನ ಪಡಿಸಬೇಕೆಂದಿದ್ದನು.
26 E no dia seguinte, pelejando eles, foi por eles visto, e quis levá-los à paz, dizendo: Homens, sois irmãos; por que vos agravais um ao outro?
27 ಆದರೆ ತನ್ನ ನೆರೆಯವನಿಗೆ ಅನ್ಯಾಯಮಾಡುತ್ತಿದ್ದವನು--ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿದವರು ಯಾರು?
27 E o que ofendia o seu próximo o repeliu, dizendo: Quem te constituiu príncipe e juiz sobre nós?
28 ನಿನ್ನೆ ಆ ಐಗುಪ್ತ್ಯನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿದ್ದೀಯೋ ಎಂದು ಹೇಳಿ ಅವನನ್ನು ನೂಕಿಬಿಟ್ಟನು.
28 Queres tu matar-me, como ontem mataste o egípcio?
29 ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ಮಿದ್ಯಾನ್ ದೇಶದಲ್ಲಿ ಪ್ರವಾಸಿಯಾದನು. ಅಲ್ಲಿ ಅವನಿಂದ ಇಬ್ಬರು ಕುಮಾರರು ಹುಟ್ಟಿದರು.
29 E a esta palavra fugiu Moisés, e esteve como estrangeiro na terra de Midiã, onde gerou dois filhos.
30 ನಾಲ್ವತ್ತು ವರುಷ ತುಂಬಿದ ಮೇಲೆ ಸೀನಾಯಿ ಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.
30 E, completados quarenta anos, apareceu-lhe o anjo do Senhor no deserto do monte Sinai, numa chama de fogo no meio de uma sarça.
31 ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ನೋಡಬೇಕೆಂದು ಹತ್ತಿರಕ್ಕೆ ಬಂದನು.
31 Então Moisés, quando viu isto, se maravilhou da visão; e, aproximando-se para observar, foi-lhe dirigida a voz do Senhor,
32 ಆಗ--ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ಹೇಳುವ ಕರ್ತನ ಧ್ವನಿಯು ಅವನಿಗಾಯಿತು. ಆಗ ಮೋಶೆಯು ನಡುಗುತ್ತಾ ಅದನ್ನು ನೋಡುವದಕ್ಕೆ ಧೈರ್ಯವಿಲ್ಲ ದವನಾದನು.
32 Dizendo: Eu sou o Deus de teus pais, o Deus de Abraão, e o Deus de Isaque, e o Deus de Jacó. E Moisés, todo trêmulo, não ousava olhar.
33 ಕರ್ತನು ಅವನಿಗೆ--ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿ.
33 E disse-lhe o Senhor: Tira as alparcas dos teus pés, porque o lugar em que estás é terra santa.
34 ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು.
34 Tenho visto atentamente a aflição do meu povo que está no Egito, e ouvi os seus gemidos, e desci a livrá-los. Agora, pois, vem, e enviar-te-ei ao Egito.
35 ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು.
35 A este Moisés, ao qual haviam negado, dizendo: Quem te constituiu príncipe e juiz? a este enviou Deus como príncipe e libertador, pela mão do anjo que lhe aparecera na sarça.
36 ಅವನು ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರ ದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತ ಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದ ಮೇಲೆ ಅವರನ್ನು ನಡೆಸಿಕೊಂಡು ಬಂದನು.
36 Foi este que os conduziu para fora, fazendo prodígios e sinais na terra do Egito, e no Mar Vermelho, e no deserto, por quarenta anos.
37 ನಿಮ್ಮ ದೇವರಾದ ಕರ್ತನು ನನ್ನನ್ನು ಎಬ್ಬಿಸಿದಂತೆ ನಿಮ್ಮ ಸಹೋದರರಲ್ಲಿ ಒಬ್ಬ ಪ್ರವಾದಿಯನ್ನು ನಿಮ ಗಾಗಿ ಎಬ್ಬಿಸುವನು; ನೀವು ಆತನ ಮಾತಿಗೆ ಕಿವಿಗೊಡ ಬೇಕೆಂದು ಇಸ್ರಾಯೇಲ್ ಜನರಿಗೆ ಹೇಳಿದ ಆ ಮೋಶೆಯು ಇವನೇ.
37 Este é aquele Moisés que disse aos filhos de Israel: O Senhor vosso Deus vos levantará dentre vossos irmãos um profeta como eu; a ele ouvireis.
38 ಇವನೇ ಸೀನಾಯಿ ಬೆಟ್ಟದಲ್ಲಿ ತನ್ನೊಡನೆಯೂ ಪಿತೃಗಳೊಡನೆಯೂ ಮಾತನಾಡಿದ ದೂತನೊಂದಿಗೆ ಅಡವಿಯಲ್ಲಿದ್ದ ಸಭೆ ಯಲ್ಲಿದ್ದುಕೊಂಡು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು.
38 Este é o que esteve entre a congregação no deserto, com o anjo que lhe falava no monte Sinai, e com nossos pais, o qual recebeu as palavras de vida para no-las dar.
39 ಆದರೆ ನಮ ಪಿತೃಗಳು ಅವನ ಮಾತುಗಳಿಗೆ ವಿಧೇಯರಾಗದೆ ಅವನನ್ನು ತಳ್ಳಿಬಿಟ್ಟು ತಮ್ಮ ಹೃದಯಗಳಲ್ಲಿ ಹಿಂದಕ್ಕೆ ಐಗುಪ್ತದ ಕಡೆಗೆ ತಿರುಗಿಕೊಂಡು
39 Ao qual nossos pais não quiseram obedecer, antes o rejeitaram e em seu coração se tornaram ao Egito,
40 ಅವರು ಆರೋನ ನಿಗೆ--ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ; ಆದದರಿಂದ ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರು ಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು.
40 Dizendo a Arão: Faze-nos deuses que vão adiante de nós; porque a esse Moisés, que nos tirou da terra do Egito, não sabemos o que lhe aconteceu.
41 ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಸ್ವಂತ ಕೈಗಳಿಂದ ಮಾಡಿದ ಕೆಲಸಗಳಲ್ಲಿ ಉಲ್ಲಾಸಪಟ್ಟರು.
41 E naqueles dias fizeram o bezerro, e ofereceram sacrifícios ao ídolo, e se alegraram nas obras das suas mãos.
42 ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರಗಣ ವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ-- ಓ ಇಸ್ರಾಯೇಲ್ ಮನೆತನದವರೇ, ನೀವು ಅರಣ್ಯದಲ್ಲಿ ನಾಲ್ವತ್ತು ವರುಷ ಪ್ರಾಣಿಗಳನ್ನು ಕೊಂದು ಬಲಿಗಳನ್ನು ನನಗೆ ಅರ್ಪಿಸುತ್ತಿದ್ದಿರೆ
42 Mas Deus se afastou, e os abandonou a que servissem ao exército do céu, como está escrito no livro dos profetas: Porventura me oferecestes vítimas e sacrifícios No deserto por quarenta anos, ó casa de Israel?
43 ಹೌದು, ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನು ರೊಂಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಅಟ್ಟಿಬಿಡುವೆನು ಎಂಬದು.
43 Antes tomastes o tabernáculo de Moloque,E a estrela do vosso deus Renfã, figuras que vós fizestes para as adorar.Transportar-vos-ei, pois, para além da Babilônia.
44 ಸಾಕ್ಷೀಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತನಾಡಿದಾತನು ಅವನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸ ಬೇಕೆಂದು ನೇಮಿಸಿದ್ದನು.
44 Estava entre nossos pais no deserto o tabernáculo do testemunho, como ordenara aquele que disse a Moisés que o fizesse segundo o modelo que tinha visto.
45 ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು.
45 O qual, nossos pais, recebendo-o também, o levaram com Josué quando entraram na posse das nações que Deus lançou para fora da presença de nossos pais, até aos dias de Davi,
46 ದಾವೀದನು ದೇವರ ಸನ್ನಿಧಾನದಲ್ಲಿ ದಯೆ ಹೊಂದಿ ಯಾಕೋಬನ ದೇವರಿಗೋಸ್ಕರ ಆಲಯ ವನ್ನು ಕಟ್ಟಬೇಕೆಂದು ಅಪೇಕ್ಷಿಸಿದನು.
46 Que achou graça diante de Deus, e pediu que pudesse achar tabernáculo para o Deus de Jacó.
47 ಆದರೆ ಸೊಲೊಮೋನನು ಆತನಿಗೋಸ್ಕರ ಮನೆಯನ್ನು ಕಟ್ಟಿಸಿದನು.
47 E Salomão lhe edificou casa;
48 ಆದರೂ ಮಹೋನ್ನತನು ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವಾತನಲ್ಲ. ಯಾಕಂದರೆ--
48 Mas o Altíssimo não habita em templos feitos por mãos de homens, como diz o profeta:
49 ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಪೀಠ, ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ಇಲ್ಲವೆ ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು?
49 O céu é o meu trono,e a terra o estrado dos meus pés.Que casa me edificareis? diz o Senhor,Ou qual é o lugar do meu repouso?
50 ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಪ್ರವಾದಿಯು ನುಡಿದಿದ್ದಾನೆ.
50 Porventura não fez a minha mão todas estas coisas?
51 ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.
51 Homens de dura cerviz, e incircuncisos de coração e ouvido, vós sempre resistis ao Espírito Santo; assim vós sois como vossos pais.
52 ಪ್ರವಾದಿ ಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿ ದ್ದಾರೆ? ಅವರು ಆ ನೀತಿವಂತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು. ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ.
52 A qual dos profetas não perseguiram vossos pais? Até mataram os que anteriormente anunciaram a vinda do Justo, do qual vós agora fostes traidores e homicidas;
53 ದೇವದೂತರ ಮೂಲಕ ನೇಮಕವಾದ ನ್ಯಾಯ ಪ್ರಮಾಣವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸಲಿಲ್ಲ ಎಂದು ಹೇಳಿದನು.
53 Vós, que recebestes a lei por ordenação dos anjos, e não a guardastes.
54 ಈ ಮಾತುಗಳನ್ನು ಕೇಳಿ ಅವರು ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಅವನ ಮೇಲೆ ಹಲ್ಲುಕಡಿದರು.
54 E, ouvindo eles isto, enfureciam-se em seus corações, e rangiam os dentes contra ele.
55 ಆದರೆ ಅವನು ಪವಿತ್ರಾತ್ಮಭರಿತನಾಗಿ ಪರಲೋಕ ದೊಳಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು--
55 Mas ele, estando cheio do Espírito Santo, fixando os olhos no céu, viu a glória de Deus, e Jesus, que estava à direita de Deus;
56 ಆಗೋ, ಪರಲೋಕವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರು ವದನ್ನೂ ನಾನು ನೋಡುತ್ತೇನೆ ಎಂದು ಹೇಳಿದನು.
56 E disse: Eis que vejo os céus abertos, e o Filho do homem, que está em pé à mão direita de Deus.
57 ಆದರೆ ಅವರು ಮಹಾಶಬ್ದದಿಂದ ಕೂಗಿ ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಒಮ್ಮನಸ್ಸಿನಿಂದ ಅವನ ಮೇಲೆ ಬಿದ್ದು
57 Mas eles gritaram com grande voz, taparam os seus ouvidos, e arremeteram unânimes contra ele.
58 ಅವನನ್ನು ಊರಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು.
58 E, expulsando-o da cidade, o apedrejavam. E as testemunhas depuseram as suas capas aos pés de um jovem chamado Saulo.
59 ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು--ಕರ್ತನಾದ ಯೇಸುವೇ, ನನ್ನಾತ್ಮವನ್ನು ಸೇರಿ ಸಿಕೋ ಎಂದು ದೇವರನ್ನು ಪ್ರಾರ್ಥಿಸಿ,
59 E apedrejaram a Estêvão que em invocação dizia: Senhor Jesus, recebe o meu espírito.
60 ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು.
60 E, pondo-se de joelhos, clamou com grande voz: Senhor, não lhes imputes este pecado. E, tendo dito isto, adormeceu.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Atos 7, comparar traduções ou montar um estudo — tudo direto pelo WhatsApp.