Atos 22
Kannada Bible (GL_KANNADA) vs ACF
ACF Almeida Corrigida Fiel
1 ಜನರೇ, ಸಹೋದರರೇ, ತಂದೆಗಳೇ, ನಾನು ಈಗ ನಿಮಗೆ ಮಾಡುವ ನನ್ನ ಪ್ರತಿವಾದವನ್ನು ಕೇಳಿರಿ.
1 Homens, irmàos e pais, ouvi agora a minha defesa perante vós
2 (ಅವನು ತಮ್ಮೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ್ದನ್ನು ಅವರು ಕೇಳಿ ಮತ್ತೂ ನಿಶ್ಶಬ್ದ ವಾದರು). ಆಗ ಅವನು--
2 (E, quando ouviram falar-lhes em língua hebraica, maior silêncio guardaram). E disse:
3 ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ
3 Quanto a mim, sou judeu, nascido em Tarso da Cilícia, e nesta cidade criado aos pés de Gamaliel, instruído conforme a verdade da lei de nossos pais, zelador de Deus, como todos vós hoje sois.
4 ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು.
4 E persegui este caminho até à morte, prendendo, e pondo em prisões, tanto homens como mulheres,
5 ಇದಕ್ಕೆ ಮಹಾಯಾಜಕನೂ ಹಿರೀಸಭೆ ಯವರೆಲ್ಲರೂ ನನಗೆ ಸಾಕ್ಷಿಗಳಾಗಿದ್ದಾರೆ. ಇವರಿಂದಲೇ ಅಲ್ಲಿದ್ದ ಸಹೋದರರಿಗೆ ನಾನು ಪತ್ರಗಳನ್ನು ಪಡೆದು ದಮಸ್ಕದಲ್ಲಿದ್ದವರನ್ನು ಬಂಧಿಸಿ ಯೆರೂಸಲೇಮಿಗೆ ತಂದು ಶಿಕ್ಷಿಸುವದಕ್ಕಾಗಿ ನಾನು ಅಲ್ಲಿಗೆ ಹೋದೆನು.
5 Como também o sumo sacerdote me é testemunha, e todo o conselho dos anciãos. E, recebendo destes cartas para os irmãos, fui a Damasco, para trazer maniatados para Jerusalém aqueles que ali estivessem, a fim de que fossem castigados.
6 ತರುವಾಯ ನಾನು ಪ್ರಯಾಣಮಾಡುತ್ತಾ ಸುಮಾರು ಮಧ್ಯಾಹ್ನದ ಸಮಯದಲ್ಲಿ ದಮಸ್ಕದ ಹತ್ತಿರ ಬಂದಾಗ ಫಕ್ಕನೆ ಆಕಾಶದಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲೂ ಹೊಳೆಯಿತು.
6 Ora, aconteceu que, indo eu já de caminho, e chegando perto de Damasco, quase ao meio-dia, de repente me rodeou uma grande luz do céu.
7 ಆಗ ನಾನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತೀ? ಎಂದು ಹೇಳುವ ಧ್ವನಿಯನ್ನು ಕೇಳಿದೆನು.
7 E caí por terra, e ouvi uma voz que me dizia: Saulo, Saulo, por que me persegues?
8 ಅದಕ್ಕೆ ನಾನು ಪ್ರತ್ಯುತ್ತರವಾಗಿ--ಕರ್ತನೇ, ನೀನು ಯಾರು ಎಂದು ಕೇಳಿದಾಗ ಆತನು--ನೀನು ಹಿಂಸಿಸುತ್ತಿರುವ ನಜರೇತಿನ ಯೇಸುವೇ ನಾನು ಎಂದು ನನಗೆ ಹೇಳಿದನು.
8 E eu respondi: Quem és, Senhor? E disse-me: Eu sou Jesus Nazareno, a quem tu persegues.
9 ಆಗ ನನ್ನೊಂದಿಗಿದ್ದವರು ನಿಜವಾಗಿಯೂ ಆ ಬೆಳಕನ್ನು ನೋಡಿ ಭಯಪಟ್ಟರು; ಆದರೆ ನನ್ನೊಂದಿಗೆ ಮಾತನಾಡಿದ ಆತನ ಧ್ವನಿಯನ್ನು ಅವರು ಕೇಳಲಿಲ್ಲ.
9 E os que estavam comigo viram, em verdade, a luz, e se atemorizaram muito, mas não ouviram a voz daquele que falava comigo.
10 ನಾನು--ಕರ್ತನೇ, ನಾನೇನು ಮಾಡಬೇಕು ಎಂದು ಕೇಳಿದೆನು; ಅದಕ್ಕೆ ಕರ್ತನು ನನಗೆ--ನೀನೆದ್ದು ದಮಸ್ಕದೊಳಕ್ಕೆ ಹೋಗು; ನಿನಗೆ ನೇಮಿಸಲ್ಪ ಟ್ಟವುಗಳೆಲ್ಲವು ಅಲ್ಲಿ ನಿನಗೆ ತಿಳಿಸಲ್ಪಡುವವು ಎಂದು ಹೇಳಿದನು.
10 Então disse eu: Senhor, que farei? E o Senhor disse-me: Levanta-te, e vai a Damasco, e ali se te dirá tudo o que te é ordenado fazer.
11 ಆ ಬೆಳಕಿನ ಪ್ರಭಾವದ ನಿಮಿತ್ತವಾಗಿ ನನ್ನ ಕಣ್ಣು ಕಾಣಲಾರದೆ ಇದ್ದಾಗ ನನ್ನ ಜೊತೆಯಲ್ಲಿ ದ್ದವರು ನನ್ನ ಕೈ ಹಿಡಿದು ಕರಕೊಂಡು ಹೋದದ್ದರಿಂದ ನಾನು ದಮಸ್ಕಕ್ಕೆ ಬಂದೆನು.
11 E, como eu não via, por causa do esplendor daquela luz, fui levado pela mão dos que estavam comigo, e cheguei a Damasco.
12 ಅಲ್ಲಿ ವಾಸಿಸುತ್ತಿದ್ದ ಅನನೀಯ ಎಂಬ ಒಬ್ಬ ಮನುಷ್ಯನು ಎಲ್ಲಾ ಯೆಹೂದ್ಯರಿಂದ ಒಳ್ಳೆಯವನೆಂದು ಸಾಕ್ಷಿಪಡೆದು ನ್ಯಾಯಪ್ರಮಾಣದ ಪ್ರಕಾರ ಭಕ್ತಿಯುಳ್ಳವನಾಗಿದ್ದನು.
12 E um certo Ananias, homem piedoso conforme a lei, que tinha bom testemunho de todos os judeus que ali moravam,
13 ಅವನು ನನ್ನ ಬಳಿಗೆ ಬಂದು ನಿಂತು--ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದು ಎಂದು ಹೇಳಿದನು. ಅದೇ ಗಳಿಗೆಯಲ್ಲಿ ನಾನು ಅವನನ್ನು ನೋಡಿದೆನು.
13 Vindo ter comigo, e apresentando-se, disse-me: Saulo, irmão, recobra a vista. E naquela mesma hora o vi.
14 ಆಗ ಅವನು--ನಮ್ಮ ಪಿತೃಗಳ ದೇವರ ಚಿತ್ತವನ್ನು ನೀನು ತಿಳುಕೊಳ್ಳು ವಂತೆಯೂ ಆ ನೀತಿವಂತನನ್ನು ನೋಡುವಂತೆಯೂ ಆತನ ಬಾಯಿಂದ ಬಂದ ಸ್ವರವನ್ನು ಕೇಳುವಂತೆಯೂ ಆತನು ನಿನ್ನನ್ನು ಆರಿಸಿಕೊಂಡಿದ್ದಾನೆ.
14 E ele disse: O Deus de nossos pais de antemão te designou para que conheças a sua vontade, e vejas aquele Justo e ouças a voz da sua boca.
15 ನೀನು ನೋಡಿ ಕೇಳಿದವುಗಳ ವಿಷಯವಾಗಿ ಎಲ್ಲಾ ಮನುಷ್ಯ ರಿಗೆ ಆತನ ಸಾಕ್ಷಿಯಾಗಿರುವಿ.
15 Porque hás de ser sua testemunha para com todos os homens do que tens visto e ouvido.
16 ಈಗ ನೀನು ತಡಮಾಡುವದು ಯಾಕೆ? ಎದ್ದು ಬಾಪ್ತಿಸ್ಮ ಮಾಡಿಸಿ ಕೊಂಡು ಕರ್ತನ ಹೆಸರನ್ನು ಹೇಳಿಕೊಳ್ಳುವವನಾಗಿ ನಿನ್ನ ಪಾಪಗಳನ್ನು ತೊಳೆದುಕೋ ಎಂದು ಹೇಳಿದನು.
16 E agora por que te deténs? Levanta-te, e batiza-te, e lava os teus pecados, invocando o nome do Senhor.
17 ಇದಾದ ಮೇಲೆ ನಾನು ಯೆರೂಸಲೇಮಿಗೆ ತಿರಿಗಿ ಬಂದು ದೇವಾಲಯದಲ್ಲಿ ಪ್ರಾರ್ಥಿಸುತ್ತಾ ಪರವಶ ನಾಗಿದ್ದೆನು; ಆಗ--
17 E aconteceu que, tornando eu para Jerusalém, quando orava no templo, fui arrebatado para fora de mim.
18 ನೀನು ತ್ವರೆಪಟ್ಟು ಯೆರೂಸ ಲೇಮಿನಿಂದ ಬೇಗನೆ ಹೊರಟು ಹೋಗು; ನನ್ನ ವಿಷಯವಾದ ಸಾಕ್ಷಿಯನ್ನು ಅವರು ಅಂಗೀಕರಿಸುವದಿಲ್ಲ ಎಂದು ನನಗೆ ಹೇಳಿದಾತನನ್ನು ನಾನು ಕಂಡೆನು.
18 E vi aquele que me dizia: Dá-te pressa e sai apressadamente de Jerusalém; porque não receberão o teu testemunho acerca de mim.
19 ಅದಕ್ಕೆ ನಾನು--ಕರ್ತನೇ, ಪ್ರತಿಯೊಂದು ಸಭಾ ಮಂದಿರದಲ್ಲಿ ನಿನ್ನ ಮೇಲೆ ನಂಬಿಕೆಯಿಟ್ಟವರನ್ನು ನಾನು ಸೆರೆಮನೆಯಲ್ಲಿ ಹಾಕಿಸಿ ಹೊಡೆದೆನೆಂದು ಅವರಿಗೆ ತಿಳಿದದೆ;
19 E eu disse: Senhor, eles bem sabem que eu lançava na prisão e açoitava nas sinagogas os que criam em ti.
20 ಹತಸಾಕ್ಷಿಯಾದ ಸ್ತೆಫನನ ರಕ್ತವು ಸುರಿಯಲ್ಪಟ್ಟಿದ್ದಾಗ ನಾನು ಸಹ ಹತ್ತಿರ ನಿಂತು ಅವನ ಸಾವಿಗೆ ಒಪ್ಪಿದವನಾಗಿ ಅವನನ್ನು ಕೊಂದವರ ವಸ್ತ್ರವನ್ನು ಕಾಯುತ್ತಿದ್ದೆನು ಎಂದು ಹೇಳಿದೆನು.
20 E quando o sangue de Estêvão, tua testemunha, se derramava, também eu estava presente, e consentia na sua morte, e guardava as capas dos que o matavam.
21 ಅದಕ್ಕೆ ಆತನು--ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುವೆನು ಎಂದು ನನಗೆ ಹೇಳಿದನು.
21 E disse-me: Vai, porque hei de enviar-te aos gentios de longe.
22 ಈ ಮಾತಿನತನಕ ಅವನು ಹೇಳಿದ್ದನ್ನು ಅವರು ಕೇಳಿ ತಮ್ಮ ಧ್ವನಿಗಳನ್ನೆತ್ತಿ--ಇಂಥವನನ್ನು ಭೂಮಿ ಯಿಂದ ತೆಗೆದುಹಾಕಿರಿ; ಇವನು ಜೀವಿಸುವದು ಯುಕ್ತವಲ್ಲ ಎಂದು ಕೂಗಿದರು.
22 E ouviram-no até esta palavra, e levantaram a voz, dizendo: Tira da terra um tal homem, porque não convém que viva.
23 ಅವರು ಕೂಗಾಡಿ ತಮ್ಮ ವಸ್ತ್ರಗಳನ್ನು ಕಿತ್ತುಹಾಕುತ್ತಾ ಧೂಳನ್ನು ಗಾಳಿಗೆ ತೂರುತ್ತಿದ್ದಾಗ
23 E, clamando eles, e arrojando de si as vestes, e lançando pó para o ar,
24 ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು;
24 O tribuno mandou que o levassem para a fortaleza, dizendo que o examinassem com açoites, para saber por que causa assim clamavam contra ele.
25 ಅವರು ಅವನನ್ನು ಬಾರುಗಳಿಂದ ಕಟ್ಟುತ್ತಿರುವಾಗ ಪೌಲನು ಹತ್ತಿರ ನಿಂತಿದ್ದ ಶತಾಧಿಪತಿಗೆ--ರೋಮ್ ನವನಾದ ಒಬ್ಬನನ್ನು ನ್ಯಾಯವಿಚಾರಣೆ ಮಾಡದೆ ಕೊರಡೆಯಿಂದ ಹೊಡಿಸುವದು ನಿಮಗೆ ನ್ಯಾಯವೋ ಎಂದು ಕೇಳಿದನು.
25 E, quando o estavam atando com correias, disse Paulo ao centurião que ali estava: É-vos lícito açoitar um romano, sem ser condenado?
26 ಆಗ ಶತಾಧಿಪತಿಯು ಅದನ್ನು ಕೇಳಿ ಅಲ್ಲಿಂದ ಹೋಗಿ ಮುಖ್ಯ ನಾಯಕನಿಗೆ--ನೀನು ಮಾಡುವದರಲ್ಲಿ ಎಚ್ಚರಿಕೆಯಾಗಿರು; ಈ ಮನುಷ್ಯನು ರೋಮ್‌ನವನು ಎಂದು ಹೇಳಿದನು.
26 E, ouvindo isto, o centurião foi, e anunciou ao tribuno, dizendo: Vê o que vais fazer, porque este homem é romano.
27 ಆಗ ಮುಖ್ಯ ನಾಯಕನು ಬಂದು ಅವನಿಗೆ--ನೀನು ರೋಮ್‌ನವನೋ? ನನಗೆ ಹೇಳು ಎಂದು ಕೇಳಿದ್ದಕ್ಕೆ ಅವನು--ಹೌದು ಅಂದನು.
27 E, vindo o tribuno, disse-lhe: Dize-me, és tu romano? E ele disse: Sim.
28 ಅದಕ್ಕೆ ಮುಖ್ಯ ನಾಯಕನು ಪ್ರತ್ಯುತ್ತರವಾಗಿ--ನಾನು ಬಹಳ ಹಣ ಕೊಟ್ಟು ಪೌರತ್ವವನ್ನು ಪಡೆದುಕೊಂಡಿರುವೆನು ಅಂದನು. ಅದಕ್ಕೆ ಪೌಲನು--ನಾನಾದರೋ ಹುಟ್ಟು ಪೌರತ್ವನು ಎಂದು ಹೇಳಿದನು.
28 E respondeu o tribuno: Eu com grande soma de dinheiro alcancei este direito de cidadão. Paulo disse: Mas eu o sou de nascimento.
29 ಆಗ ಅವನನ್ನು ವಿಚಾರಿಸಬೇಕೆಂದಿದ್ದವರು ಕೂಡಲೆ ಅವನನ್ನು ಬಿಟ್ಟು ಹೋದರು; ಇದಲ್ಲದೆ ಆ ಮುಖ್ಯನಾಯಕನು ಸಹ ತಾನು ಬಂಧಿಸಿದವನು ರೋಮ್‌ನವನೆಂದು ತಿಳಿದು ಭಯಪಟ್ಟನು.
29 E logo dele se apartaram os que o haviam de examinar; e até o tribuno teve temor, quando soube que era romano, visto que o tinha ligado.
30 ಅವನ ಮೇಲೆ ಯೆಹೂದ್ಯರು ತಪ್ಪು ಹೊರಿಸಿದ ನಿಜವಾದ ವಿಷಯವನ್ನು ತಿಳಿಯಬೇಕೆಂದು ಅಪೇಕ್ಷಿಸಿ ಮುಖ್ಯ ನಾಯಕನು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಪ್ರಧಾನಯಾಜಕರೂ ಆಲೋಚನಾ ಸಭೆಯವ ರೆಲ್ಲರೂ ಸೇರಿಬರಬೇಕೆಂದು ಅಪ್ಪಣೆ ಕೊಟ್ಟ ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದ
30 E no dia seguinte, querendo saber ao certo a causa por que era acusado pelos judeus, soltou-o das prisões, e mandou vir o principais dos sacerdotes, e todo o seu conselho; e, trazendo Paulo, o apresentou diante deles.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Atos 22, comparar traduções ou montar um estudo — tudo direto pelo WhatsApp.