Atos 21
Kannada Bible (GL_KANNADA) vs AAI
AAI TUR GEWASIN O BAIBASIT BOUBUN
1 ಇದಾದ ಮೇಲೆ ನಾವು ಅವರನ್ನು ಬಿಟ್ಟು ಸಮುದ್ರಪ್ರಯಾಣವಾಗಿ ನೆಟ್ಟಗೆ ಕೋಸ್‌ಗೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಸೇರಿದೆವು.
1 Nati’imaim aotuturih naatu aihamiyih hima aki wa abai mutufor arabon ana tafaram Kos atit; mar to ana Rodes atit, nati’imaim aikofan ana Patara atit.
2 ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು ಅದನ್ನು ಹತ್ತಿ ಪ್ರಯಾಣವನ್ನು ಸಾಗಿಸಿದೆವು.
2 Wa ta au Fonisia inan atita’ur aitafabon abai atit are arabon.
3 ನಾವು ಕುಪ್ರವನ್ನು ಕಂಡು ಅದನ್ನು ಎಡಗಡೆಗೆ ಬಿಟ್ಟು ಸಿರಿಯದ ಕಡೆಗೆ ಸಾಗಿ ತೂರ್‌ಗೆ ಬಂದು ಇಳಿದೆವು. ಹಡಗು ಅಲ್ಲಿ ಸರಕನ್ನು ಇಳಿಸ ಬೇಕಾಗಿತ್ತು.
3 Yan ararabon anuwariy Cyprus a’itin naatu ai beyaw na’atune bat aki au Syria arabon ana Taiya imaim arun wa aiyut sawar hitarsuwai.
4 ಅಲ್ಲಿ ನಾವು ಶಿಷ್ಯರನ್ನು ಕಂಡು ಏಳು ದಿವಸ ಇದ್ದೆವು; ಪೌಲನು ಯೆರೂಸ ಲೇಮಿಗೆ ಹೋಗಬಾರದೆಂದು ಅವರು ಆತ್ಮನ ಮುಖಾಂತರ ಅವನಿಗೆ ಹೇಳಿದರು.
4 Nati’imaim bai’ufununayah afa atita’ourih fur ta’imon bairi ama. Naatu Anun Kakafiyin sabuw hai tur eowen Paul hitimatanuw, saise au Jerusalem men tayen.
5 ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
5 Baise bairi ama na fur yomanin tit, ai veya baib ufunamaim, ai hamiyih aki ai ef arura’ah maiye. Bai’ufununayah a’aawah natunatuh etei bairi hinawiy bar merar ai tumar ana tor dones yan are imaim sui ayowen ayoyoban.
6 ಆಗ ನಾವು ಒಬ್ಬರನ್ನೊಬ್ಬರು ಬಿಟ್ಟು ಹಡಗನ್ನು ಹತ್ತಿದಾಗ ಅವರು ತಮ್ಮ ಮನೆಗೆ ಹಿಂತಿರುಗಿದರು.
6 Imaibo bairi abi’otututuren ufunamaim, wa afe’en ayen, naatu i hai ubar himatabir maiye hin.
7 ತೂರಿನಿಂದ ಪ್ರಯಾಣವನ್ನು ಮುಗಿಸಿದ ಮೇಲೆ ಪ್ತೊಲೆಮಾಯಕ್ಕೆ ಬಂದು ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿವಸ ಇದ್ದೆವು.
7 Taiya’ane wa abai anan i Polemais imaim wa aiyut, nati’imaim taiti baitumatumayah hai merar ayi bairi veya ta’imon ama.
8 ಮರುದಿನ ಪೌಲನ ಜೊತೆಯವರಲ್ಲಿದ್ದ ನಾವು ಹೊರಟು ಕೈಸರೈಯಕ್ಕೆ ಸೇರಿ ಏಳು ಮಂದಿಯಲ್ಲಿ ಒಬ್ಬನಾಗಿದ್ದ ಸುವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ಇದ್ದೆವು.
8 Marto ai hamiyih hima aki ana Seseria atit, binanuyan orot Philip ana baremaim bairi ama. Philip i Jerusalemamaim orot 7 hirurubinih i orot ta.
9 ಇವನಿ ಪ್ರವಾದಿ ಸುತ್ತಿದ್ದ ಕನ್ಯೆಯರಾದ ನಾಲ್ಕು ಮಂದಿ ಕುಮಾರ್ತೆಯರು ಇದ್ದರು.
9 I natunatun baibitar etei kwafe’en biyah numih God ana tur orerereb isan ana usar hibai hima’am.
10 ನಾವು ಅಲ್ಲಿ ಆನೇಕ ದಿವಸಗಳು ಇದ್ದ ತರುವಾಯ ಅಗಬನೆಂಬ ಒಬ್ಬ ಪ್ರವಾದಿಯು ಯೂದಾಯದಿಂದ ಅಲ್ಲಿಗೆ ಬಂದನು.
10 Seseria imaim veya bai’ab na’atube ama’am ufunamaim dinab orot wabin Agabus Judea’ane natit.
11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಕಟ್ಟನ್ನು ತೆಗೆದು ತನ್ನ ಸ್ವಂತ ಕೈಕಾಲುಗಳನ್ನು ಕಟ್ಟಿಕೊಂಡು--ಈ ನಡುಕಟ್ಟು ಯಾವನದೋ ಆ ಮನುಷ್ಯನನ್ನು ಯೆಹೂದ್ಯರು ಯೆರೂಸಲೇಮಿನಲ್ಲಿ ಹೀಗೆ ಕಟ್ಟಿ ಅನ್ಯಜನರ ಕೈಗೆ ಒಪ್ಪಿಸುವರು ಎಂದು ಪವಿತ್ರಾತ್ಮನು ಹೇಳುತ್ತಾನೆ ಅಂದ
11 Na aki biyai tit basit Paul ana kikir bai i taiyuwin an uman iutatanen naatu eo, “God Anun Kakafiyin iti na’atube eo, Orot iti kikir matuwan Jerusalemamaim Jew sabuw boro iti na’atube isan hinasinaf hinab Eteni Sabuw hinitih.”
12 ನಾವೂ ಇವುಗಳನ್ನು ಕೇಳಿದಾಗ ಅವನು ಯೆರೂಸಲೇಮಿಗೆ ಹೋಗಬಾರ ದೆಂದು ನಾವು ಆ ಸ್ಥಳದಲ್ಲಿದ್ದವರೂ ಅವನನ್ನು ಬೇಡಿ ಕೊಂಡೆವು.
12 Aki iti tur anonowar ana maramaim sabuw nati’imaim hima’am bairi ai fefeyan ayai Paul au Jerusalem na isan a’otan.
13 ಅದಕ್ಕೆ ಪೌಲನು ಪ್ರತ್ಯುತ್ತರ ವಾಗಿ--ನೀವು ಅತ್ತು ನನ್ನ ಹೃದಯವನ್ನು ಒಡೆಯುವ ದೇನು? ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತವಾಗಿ ಬಂಧಿಸಲ್ಪಡುವದಕ್ಕೆ ಮಾತ್ರವಲ್ಲದೆ ಯೆರೂಸಲೇಮಿನಲ್ಲಿ ಸಾಯುವದಕ್ಕೂ ನಾನು ಸಿದ್ಧ ನಾಗಿದ್ದೇನೆ ಎಂದು ಹೇಳಿದನು.
13 Baise Paul iyafuti eo, “Kwa aisim iti na’atube kwao kwarerey ayu dogorou ana babanin kwabitin? Ayu i men buwu fatumu akisin isan abogaigiwasomih, baise Jerusalemamaim Regah Jesu wabinamaim morob isan auman abogaigiwas.”
14 ಅವನು ಒಪ್ಪದೆ ಇದ್ದದರಿಂದ--ಕರ್ತನ ಚಿತ್ತದಂತೆಯೇ ಆಗಲಿ ಎಂದು ಹೇಳಿ ನಾವು ಸುಮ್ಮನಾದೆವು.
14 Yan baikitabirin isan asinaf, baise men karam. Imih aibagun naatu ao, “Regah ana kok na’atube namatar.”
15 ಆ ದಿವಸಗಳಾದ ಮೇಲೆ ನಾವು ಸಿದ್ಧಪಡಿಸಿ ಕೊಂಡು ಯೆರೂಸಲೇಮಿಗೆ ಹೋದೆವು.
15 Veya bai’ab na’atube nati’imaim ama’am ufunamaim ai sawar abobuna au Jerusalem amisir.
16 ಆಗ ಕೈಸರೈಯದ ಶಿಷ್ಯರಲ್ಲಿ ಸಹ ಕೆಲವರು ನಮ್ಮೊಂದಿಗೆ ಬಂದು ನಾವು ಕುಪ್ರದ ಮ್ನಾಸೋನನೆಂಬ ಪ್ರಾಯ ಹೋದ ಒಬ್ಬ ಶಿಷ್ಯನ ಕೂಡ ಇಳುಕೊಳ್ಳುವಂತೆ ತಮ್ಮೊಂದಿಗೆ ಅವನನ್ನು ಕರಕೊಂಡು ಬಂದರು.
16 Seseria’amaim bai’ufununayah afa hinawiyi bairi ana orot Mason ana baremaim atit, iti orot ana tafaram i Cyprus, naatu i auman marasika baitumatumayan matar ma’am.
17 ನಾವು ಯೆರೂಸಲೇಮಿಗೆ ಬಂದಾಗ ಸಹೋದ ರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು.
17 Ayen ana Jerusalem atitit ana veya baitumatumayah nati’imaim hima’am hiyasisir ai merar hiyi.
18 ಮರುದಿನ ಪೌಲನು ನಮ್ಮ ಕೂಡ ಯಾಕೋಬನ ಬಳಿಗೆ ಬಂದನು; ಆಗ ಹಿರಿಯರೆಲ್ಲರೂ ಅಲ್ಲಿ ಕೂಡಿದ್ದರು.
18 Marto Paul bairi ana James a’itin naatu nati ana veya’amaim regaregah ai’in etei nati’imaim hiru’ay.
19 ಅವನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕ ದೇವರು ಪ್ರತ್ಯೇಕವಾಗಿ ಅನ್ಯ ಜನರಲ್ಲಿ ಎಂಥ ಕಾರ್ಯಗಳನ್ನು ಮಾಡಿಸಿದನೆಂದು ವಿವರಿಸಿದನು.
19 Paul hai merar yi naatu i ana bowabow etei Ufun Sabuw wanawanahimaim God mi’itube ibais bowabow ana tur etei aneika busuruf idudur in yomanin easa’ub.
20 ಅವರು ಅದನ್ನು ಕೇಳಿ ಕರ್ತನನ್ನು ಮಹಿಮೆಪಡಿಸಿ ಅವನಿಗೆ--ಸಹೋದರನೇ, ವಿಶ್ವಾಸಿ ಗಳಾದ ಯೆಹೂದ್ಯರು ಎಷ್ಟೋ ಸಾವಿರ ಮಂದಿ ಇದ್ದಾರೆಂಬದನ್ನು ನೀನು ನೋಡುತ್ತೀಯಲ್ಲಾ. ಅವರೆಲ್ಲರೂ ನ್ಯಾಯಪ್ರಮಾಣದ ವಿಷಯದಲ್ಲಿ ಅಭಿಮಾನವುಳ್ಳವರಾಗಿದ್ದಾರೆ.
20 Eo hinonowar ufunamaim etei’imak God ana merar hiy hibora’ara’ah. Imaibo Paul isan hio, “Taiu inaso’ob Jew moumurih na’in thousand ana fofonin hina baitumatumayah himatar. Baise etei’imak tekokok i ofafar hinabukikin hinabosiyasiyar.
21 ಅವರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬಾರದೆಂದೂ ಆಚಾರಗಳ ಪ್ರಕಾರ ನಡೆಯಬಾರದೆಂದೂ ಹೇಳುತ್ತಾ ಮೋಶೆ ಬರೆದದ್ದನ್ನು ತ್ಯಜಿಸಬೇಕೆಂದು ಅನ್ಯಜನರಲ್ಲಿರುವ ಯೆಹೂದ್ಯರಿಗೆ ನೀನು ಬೋಧಿಸುತ್ತಿದ್ದೀ ಎಂಬದಾಗಿ ನಿನ್ನ ವಿಷಯದಲ್ಲಿ ಅವರು ಕೇಳಿದ್ದಾರೆ.
21 Baise iti’imaim tur i iti na’atube hinowar, O i Jew sabuw iyab nati Ufun Sabuw hai tafaramamaim tema’am kubi’obaiyih Moses ana ofafar i hinihamiy, naatu hai kek hai ar men hina’afuw naatu Jew hai binanakwar men hini’ufunun.
22 ಆದದರಿಂದ ಏನು ಮಾಡಬೇಕು? ಸಮೂಹವು ಕೂಡಿಬರುವದು ಅವಶ್ಯವಾಗಿದೆ; ನೀನು ಇಲ್ಲಿಗೆ ಬಂದಿದ್ದೀ ಎಂದು ಅವರಿಗೆ ಗೊತ್ತಾಗುವದು.
22 Aki boro abisa ana sinaf, anayabin o ina ititit a tur i sabuw hinowaraka.
23 ಆದಕಾರಣ ನಾವು ನಿನಗೆ ಹೇಳುವದನ್ನು ಮಾಡು; ನಮ್ಮಲ್ಲಿ ಪ್ರಮಾಣ ಮಾಡಿದ ನಾಲ್ಕು ಮಂದಿ ಇದ್ದಾರೆ.
23 Imih abisa anao na’atube inasinaf? Orot etei kwafe’en i hai omatanen ta God isan hio baifaro.
24 ನೀನು ಅವರನ್ನು ಕರೆದುಕೊಂಡು ಹೋಗಿ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವಂತೆ ನೀನೂ ಅವ ರೊಂದಿಗೆ ನಿನ್ನನ್ನು ಶುದ್ಧಮಾಡಿಕೊಂಡು ಅವರಿ ಗೋಸ್ಕರ ವೆಚ್ಚಮಾಡು; ಆಗ ನಿನ್ನ ವಿಷಯವಾಗಿ ಅವರು ಕೇಳಿದವುಗಳು ಏನೂ ಅಲ್ಲವೆಂದೂ ನೀನು ಸಹ ಕ್ರಮವಾಗಿ ನಡೆಯುತ್ತಾ ನ್ಯಾಯಪ್ರಮಾಣ
24 Imih o i boro inikofanih bairi kwanan kouksouwen ana yohar wanawanan kwanarun naatu aribuh mafur o inibaiyanih aribuh hinamafur, saise o isa iti’imaim hibifufuwen sabuw boro hinaso’ob nati tur i baifuwen, anayabin i hiso’ob o i ofafar kubi’ufunun.
25 ನಂಬಿರುವ ಅನ್ಯಜನರ ವಿಷಯವಾದರೋ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ನಾವು ತೀರ್ಮಾನಿಸಿ ಬರೆದೆವೆಂದು ಹೇಳಿದರು.
25 Baise Ufunane sabuw baitumatumayah isah, aki fef ta ai yafar in hai tur a’owen bay uma matamatar isah hisisibor men hinaa, masanuw rara auman men hinaa, o for sikah birabir men hinaa naatu men hina’in hinisesebar kwanekwan.”
26 ಆಗ ಪೌಲನು ಆ ಮನುಷ್ಯರನ್ನು ಕರೆದು ಕೊಂಡು ಮರುದಿನ ಅವರೊಂದಿಗೆ ತನ್ನನ್ನು ಶುದ್ಧಮಾಡಿಕೊಂಡು ಅವರಲ್ಲಿ ಪ್ರತಿಯೊಬ್ಬನಿಗಾಗಿ ಅರ್ಪಣೆಯನ್ನು ಸಮರ್ಪಿಸುವ ವರೆಗೆ ಶುದ್ಧೀಕರಣದ ದಿವಸಗಳು ಪೂರೈಸಲ್ಪಟ್ಟವೆಂದು ಸೂಚಿಸುವಂತೆ ದೇವಾಲಯದಲ್ಲಿ ಪ್ರವೇಶಿಸಿದನು.
26 Marto Paul orot buwih bairi hai binanakwar eo na’atube kousouwih isan hirun, orot kwafe’en hikukusouwih i auman kusouw. Imaibo i na Tafaror Bar hai tur eowen veya biy boro kouksouwen ana yomanin nasawar naatu siwar orot ta’ita’imon isah hinasibor.
27 ಆ ಏಳು ದಿವಸಗಳು ತುಂಬುತ್ತಿರುವಾಗ ಆಸ್ಯ ದಿಂದ ಬಂದಿದ್ದ ಯೆಹೂದ್ಯರು ಅವನನ್ನು ದೇವಾಲ ಯದಲ್ಲಿ ಕಂಡು ಜನರೆಲ್ಲರನ್ನು ಉದ್ರೇಕಿಸಿ ಅವನನ್ನು ಹಿಡಿದು--
27 Kousouwen in fur ta’imon yomanin tit baisawarinamih auman Jew sabuw afa Asia wanawanane hina hima’am Paul Tafaror Baremaim hi’itin. Sabuw kou’ay gagamin na’in hikura’ara’ahih himisir Paul bain bai’a’afiyin isan hinunuw,
28 ಇಸ್ರಾಯೇಲ್ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ
28 hitar koukuw hi’af hio, “Israel Oro’orot kwana kwaibaisi! Iti orot efan etei remor ana bai’obaiyenamaim it ata sabuw isah tur kakafin maiyow eo, naatu ata ofafar baihamiyin isan eo’o, naatu iti Tafaror Bar wabin ebi’afiy. Naatu kakafin gagamin anababatun sisinaf i kwana’itin, Ufunane Sabuw buwih hina hirun ata Bar Gagamin gubagub tibitin.
29 (ಮುಂಚೆ ಎಫೆಸದವನಾದ ತ್ರೊಫಿಮನನ್ನು ಪೌಲನೊಂದಿಗೆ ಆ ಪಟ್ಟಣದಲ್ಲಿ ಅವರು ಕಂಡಿದ್ದರಿಂದ ಅವನನ್ನು ದೇವಾಲಯದೊಳಗೆ ಪೌಲನು ಕರೆದುಕೊಂಡು ಬಂದಿದ್ದನೆಂದು ಭಾವಿಸಿದರು).
29 (Iti na’atube hio anayabin Trofimus, Ephesusine nan hairi nati bar merar gagaminamaim Paul bairi hima hireremor hi’itih, naatu hinot i hibuwih bairi Tafaror Bar ana efanamaim hirun.)
30 ಆಗ ಪಟ್ಟಣವೆಲ್ಲಾ ಕದಲಿಹೋಯಿತು. ಜನರು ಒಟ್ಟಾಗಿ ಓಡಿಬಂದು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದ ಕೂಡಲೆ ಬಾಗಿಲುಗಳು ಮುಚ್ಚಲ್ಪಟ್ಟವು.
30 Nati bar merar gagamin ana sabuw etei kura’ara’ahih nan ufun hinunuw hitit Paul hibai hitain kwekwekwetar hitit Tafaror Bar gagamin ufunane hire. Naatu marta’imon etawan hihir.
31 ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು.
31 Paul hita’asabunimih hibiwa’an, baise tur marta’imon nunuw Rome baiyowayah hai ukwarin nowar Jerusalem wanawanan i uruw giririf mamatar.
32 ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ತೆಗೆದುಕೊಂಡು ಅವರ ಬಳಿಗೆ ಓಡಿ ಬಂದನು. ಅವರು ಮುಖ್ಯ ನಾಯಕನನ್ನೂ ಸೈನಿಕರನ್ನೂ ನೋಡಿ ಪೌಲನನ್ನು ಹೊಡೆಯುವದನ್ನು ಬಿಟ್ಟರು.
32 Matan kabiy baiyowayah orot afa hai ukwarih bairi buwih hinunuw hire kou’ay wanawanah hirun, sabuw kakafih baiyowayah hai orot ukwarih bairi hinan hi’itih Paul hirabirab hihamiy.
33 ಮುಖ್ಯ ನಾಯಕನು ಹತ್ತರಕ್ಕೆ ಬಂದು ಅವನನ್ನು ಹಿಡಿದು ಅವನಿಗೆ ಜೋಡು ಸರಪಣಿಯಿಂದ ಕಟ್ಟಬೇಕೆಂದು ಅಪ್ಪಣೆ ಕೊಟ್ಟು--ಅವನು ಯಾರು? ಏನು ಮಾಡಿದ್ದಾನೆ ಎಂದು ಕೇಳಿದನು.
33 Baiyowayah hai ukwarin na Paul biyan tit bai ana orot uwih chain rou’ab hibow hifatum, imaibo ibatiyih, “Iti orot i yait naatu abisa sinaf?”
34 ಆಗ ಸಮೂಹದಲ್ಲಿ ಕೆಲವರು ಒಂದು ವಿಧವಾಗಿ ಬೇರೆ ಕೆಲವರು ಇನ್ನೊಂದು ವಿಧವಾಗಿ ಕೂಗಿದಾಗ ಆ ಗದ್ದಲದ ನಿಜಸ್ಥಿತಿಯನ್ನು ಅವನು ತಿಳಿಯಲಾರದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟನು.
34 Sabuw kou’ay wanawanan hibatabat asir hi’af hi’o kwanekwan, baiyowayan ukwarin sawar yabin abisa isan mamatar nowar gewasomih biwa’an men karam, anayabin uruwane ra’at imih baiyowayah iuwih Paul hibai hirun baiyowayah hai bar hiyari’y.
35 ಅವನು ಮೆಟ್ಟಲುಗಳ ಮೇಲೆ ಬಂದಾಗ ಜನರ ಬಲಾತ್ಕಾರದ ನಿಮಿತ್ತ ಸೈನಿಕರು ಅವನನ್ನು ಹೊತ್ತು ಕೊಂಡು ಹೋದರು.
35 Paul hibai hirun wawanamaim hitit rakit sabuw hiturafef hi’itin, basit baiyowayah Paul hibora’ah hi’abar.
36 ಯಾಕಂದರೆ ಗುಂಪಾಗಿ ಕೂಡಿದ ಜನರು ಹಿಂದಿನಿಂದ ಬಂದು--ಅವನನ್ನು ತೆಗೆದುಹಾಕು ಎಂದು ಕೂಗುತ್ತಿದ್ದರು.
36 Sabuw ufuh hitarkoukuw hina hio, “Kwa’asabun emorob!”
37 ಪೌಲನನ್ನು ಕೋಟೆಯೊಳಗೆ ಕರೆದುಕೊಂಡು ಹೋಗುವದಕ್ಕಿದ್ದಾಗ ಅವನು ಸಹಸ್ರಾಧಿಪತಿಗೆ-- ನಿನ್ನೊಂದಿಗೆ ನಾನು ಮಾತನಾಡಬಹುದೋ ಎಂದು ಕೇಳಿದಾಗ ಅವನು--ನೀನು ಗ್ರೀಕ್ ಮಾತನಾಡ ಬಲ್ಲೆಯಾ?
37 Paul hibai baiyowayah hai bar hirur auman baiyowayah hai ukwarin isan eo, “Karam boro tur ta atao itanowar?” Baiyowayan hai orot ukwarin Paul ibatiy, “O Greek tur iso’ob?
38 ಸ್ವಲ್ಪ ದಿವಸಗಳ ಮುಂಚೆ ದಂಗೆಯ ನ್ನೆಬ್ಬಿಸಿ ಕೊಲೆಗಡುಕರಾದ ನಾಲ್ಕುಸಾವಿರ ಮನುಷ್ಯ ರನ್ನು ಅಡವಿಗೆ ತೆಗೆದುಕೊಂಡು ಹೋದ ಆ ಐಗುಪ್ತ್ಯನು ನೀನೇ ಅಲ್ಲವೋ ಎಂದು ಕೇಳಿದನು.
38 O men Egypt orot iti boro’omo sabuw 4,000 baiyow kwanekwaneyah ibow arar yan itit gawan isan ibirakit wari’en?”
39 ಆದರೆ ಪೌಲನು--ನಾನು ಪ್ರಖ್ಯಾತವಾದ ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ನಿವಾಸಿಯಾಗಿರುವ ಯೆಹೂದ್ಯನು; ಈ ಜನರಿಗೆ ಮಾತನಾಡುವಂತೆ ನನಗೆ ಅಪ್ಪಣೆ ಕೊಡು ಎಂದು ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ ಅಂದನು.
39 Paul iya’afut eo, “Ayu i Jew orot, Tarsus imaim atufuw Silisia wanawanan, bar merar gagamin ayu i ana matuwan ama’am imih akokok o baibasit ititu sabuw isah atao.”
40 ಅವನು ಅಪ್ಪಣೆ ಕೊಟ್ಟಾಗ ಪೌಲನು ಮೆಟ್ಟಲುಗಳ ಮೇಲೆ ನಿಂತು ಜನರಿಗೆ ಕೈಸನ್ನೆ ಮಾಡಿದನು. ದೊಡ್ಡ ನಿಶ್ಶಬ್ದತೆ ಉಂಟಾದಾಗ ಇಬ್ರಿಯ ಭಾಷೆಯಲ್ಲಿ ಅವರೊಂದಿಗೆ--
40 Baiyowayah hai orot ukwarin baibasit Paul itin yen wawan afe’en bat umanamaim sabuw etei rutanih etei awah fot, imaibo Paul Hebrew turamaim eo hinowar.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Atos 21, comparar traduções ou montar um estudo — tudo direto pelo WhatsApp.