Atos 19
Kannada Bible (GL_KANNADA) vs ACF
ACF Almeida Corrigida Fiel
1 ಇದಾದ ಮೇಲೆ ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮೇಲ್ಭಾ ಗದ ತೀರಗಳನ್ನು ದಾಟಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡನು.
1 E sucedeu que, enquanto Apolo estava em Corinto, Paulo, tendo passado por todas as regiões superiores, chegou a Éfeso; e achando ali alguns discípulos,
2 ಅವರಿಗೆ--ನೀವು ನಂಬಿದಾಗ ಪವಿತ್ರಾತ್ಮನನ್ನು ಹೊಂದಿದಿರೋ ಎಂದು ಕೇಳಿದ್ದಕ್ಕೆ ಅವರು ಅವನಿಗೆ--ಪವಿತ್ರಾತ್ಮನು ಇದ್ದಾ ನೆಂಬದು ನಾವು ಕೇಳಲೇ ಇಲ್ಲ ಅಂದರು.
2 Disse-lhes: Recebestes vós já o Espírito Santo quando crestes? E eles disseram-lhe: Nós nem ainda ouvimos que haja Espírito Santo.
3 ಆಗ ಅವನು ಅವರಿಗೆ--ನೀವು ಯಾವದಕ್ಕಾಗಿ ಬಾಪ್ತಿಸ್ಮ ಮಾಡಿಸಿಕೊಂಡಿರಿ ಎಂದು ಕೇಳಿದನು. ಅದಕ್ಕವರು--ಯೋಹಾನನ ಬಾಪ್ತಿಸ್ಮಕ್ಕನುಸಾರವಾಗಿ ಮಾಡಿಸಿ ಕೊಂಡೆವು ಎಂದು ಹೇಳಿದರು.
3 Perguntou-lhes, então: Em que sois batizados então? E eles disseram: No batismo de João.
4 ಆಗ ಪೌಲನು--ನಿಜವಾಗಿಯೂ ಯೋಹಾನನು ತನ್ನ ಹಿಂದೆ ಬರುವಾತ ನನ್ನು ಅಂದರೆ ಕ್ರಿಸ್ತ ಯೇಸುವನ್ನು ನಂಬಬೇಕೆಂದು ಜನರಿಗೆ ಹೇಳಿ ಮಾನಸಾಂತರದ ಬಾಪ್ತಿಸ್ಮದಿಂದ ಬಾಪ್ತಿಸ್ಮ ಮಾಡಿಸಿದನು ಎಂದು ಹೇಳಿದನು.
4 Mas Paulo disse: Certamente João batizou com o batismo de arrependimento, dizendo ao povo que cresse no que após ele havia de vir, isto é, em Jesus Cristo.
5 ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡರು.
5 E os que ouviram foram batizados em nome do Senhor Jesus.
6 ಆಗ ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಬಂದನು; ಅವರು ಭಾಷೆಗಳನ್ನಾಡಿದರು ಮತ್ತು ಪ್ರವಾದಿಸಿದರು.
6 E, impondo-lhes Paulo as mãos, veio sobre eles o Espírito Santo; e falavam línguas, e profetizavam.
7 ಅವರು ಸುಮಾರು ಹನ್ನೆರಡು ಮಂದಿ ಗಂಡಸರು.
7 E estes eram, ao todo, uns doze homens.
8 ಪೌಲನು ಅಲ್ಲಿಯ ಸಭಾಮಂದಿರದೊಳಗೆ ಹೋಗಿ ಮೂರು ತಿಂಗಳು ಅಲ್ಲಿಯೇ ದೇವರ ರಾಜ್ಯದ ವಿಷಯ ಗಳನ್ನು ಕುರಿತು ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.
8 E, entrando na sinagoga, falou ousadamente por espaço de três meses, disputando e persuadindo-os acerca do reino de Deus.
9 ಕೆಲವರು ತಮ್ಮ ಮನಸ್ಸುಗಳನ್ನು ಕಠಿಣ ಮಾಡಿಕೊಂಡು ನಂಬದೆ ಸಮೂಹದ ಮುಂದೆ ಆ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟು ಶಿಷ್ಯರನ್ನು ಬೇರೆ ಮಾಡಿ ತುರನ್ನನ ಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.
9 Mas, como alguns deles se endurecessem e não obedecessem, falando mal do Caminho perante a multidão, retirou-se deles, e separou os discípulos, disputando todos os dias na escola de um certo Tirano.
10 ಇದು ಎರಡು ವರುಷಗಳವರೆಗೂ ನಡೆದದ್ದರಿಂದ ಆಸ್ಯದಲ್ಲಿ ವಾಸವಾಗಿದ್ದ ಯೆಹೂದ್ಯರೂ ಗ್ರೀಕರೂ ಕರ್ತನಾದ ಯೇಸು ಕ್ರಿಸ್ತನ ವಾಕ್ಯವನ್ನು ಕೇಳಿದರು.
10 E durou isto por espaço de dois anos; de tal maneira que todos os que habitavam na Ásia ouviram a palavra do Senhor Jesus, assim judeus como gregos.
11 ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದದರಿಂದ
11 E Deus pelas mãos de Paulo fazia maravilhas extraordinárias.
12 ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು.
12 De sorte que até os lenços e aventais se levavam do seu corpo aos enfermos, e as enfermidades fugiam deles, e os espíritos malignos saíam.
13 ಆಗ ದೆವ್ವ ಬಿಡಿಸುವವರಾಗಿ ದೇಶಸಂಚಾರ ಮಾಡುತ್ತಿದ್ದ ಯೆಹೂದ್ಯರಲ್ಲಿ ಕೆಲವರು ದುರಾತ್ಮ ಹಿಡಿದವ ರಿಗೆ--ಪೌಲನು ಸಾರುವ ಯೇಸುವಿನ ಆಣೆ ಎಂದು ನಾವು ನಿಮಗೆ ಹೇಳುತ್ತೇವೆ ಎಂದು ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗ ಮಾಡುವದಕ್ಕೆ ತೊಡಗಿದರು.
13 E alguns dos exorcistas judeus ambulantes tentavam invocar o nome do Senhor Jesus sobre os que tinham espíritos malignos, dizendo: Esconjuro-vos por Jesus a quem Paulo prega.
14 ಯಾಜಕರಲ್ಲಿ ಮುಖ್ಯನಾದ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಕುಮಾರರು ಹಾಗೆ ಮಾಡಿದರು.
14 E os que faziam isto eram sete filhos de Ceva, judeu, principal dos sacerdotes.
15 ಆದರೆ ದುರಾತ್ಮವು ಪ್ರತ್ಯುತ್ತರವಾಗಿ--ನಾನು ಯೇಸುವನ್ನು ಬಲ್ಲೆನು, ಪೌಲನನ್ನೂ ಬಲ್ಲೆನು; ನೀವಾದರೆ ಯಾರು ಎಂದು ಕೇಳಿತು.
15 Respondendo, porém, o espírito maligno, disse: Conheço a Jesus, e bem sei quem é Paulo; mas vós quem sois?
16 ದುರಾತ್ಮಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿಬಿದ್ದು ಅವರನ್ನು ಸೋಲಿಸಿ ಬಲಾತ್ಕರಿ ಸಿದ್ದರಿಂದ ಅವರು ಬೆತ್ತಲೆಯಾಗಿ ಗಾಯಗೊಂಡು ಆ ಮನೆಯೊಳಗಿಂದ ಓಡಿ ಹೋದರು.
16 E, saltando neles o homem que tinha o espírito maligno, e assenhoreando-se de todos, pôde mais do que eles; de tal maneira que, nus e feridos, fugiram daquela casa.
17 ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರಿಗೆ ಭಯಹಿಡಿಯಿತು. ಕರ್ತನಾದ ಯೇಸು ವಿನ ಹೆಸರು ಘನಹೊಂದಿತು.
17 E foi isto notório a todos os que habitavam em Éfeso, tanto judeus como gregos; e caiu temor sobre todos eles, e o nome do Senhor Jesus era engrandecido.
18 ನಂಬಿದ ಅನೇಕರು ಬಂದು ಒಪ್ಪಿಕೊಂಡು ತಮ್ಮ ಕ್ರಿಯೆಗಳನ್ನು ತೋರಿಸಿ ದರು.
18 E muitos dos que tinham crido vinham, confessando e publicando os seus feitos.
19 ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದ ವರಲ್ಲಿ ಅನೇಕರು ಸಹ ಬಂದು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವು ಗಳ ಕ್ರಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಎಂದು ತಿಳಿದು ಕೊಂಡರು.
19 Também muitos dos que seguiam artes mágicas trouxeram os seus livros, e os queimaram na presença de todos e, feita a conta do seu preço, acharam que montava a cinqüenta mil peças de prata.
20 ಈ ರೀತಿಯಾಗಿ ದೇವರ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲ ವಾಯಿತು.
20 Assim a palavra do Senhor crescia poderosamente e prevalecia.
21 ಇವುಗಳಾದ ಮೇಲೆ ಪೌಲನು ತಾನು ಮಕೆದೋನ್ಯವನ್ನೂ ಅಖಾಯವನ್ನೂ ಹಾಯ್ದು ಯೆರೂಸಲೇಮಿಗೆ ಹೋಗಬೇಕೆಂದು ಆತ್ಮದಲ್ಲಿ ಉದ್ದೇಶಿಸಿ--ಅಲ್ಲಿಗೆ ಹೋದಮೇಲೆ ನಾನು ರೋಮ್ ವನ್ನು ಸಹ ನೋಡಲೇಬೇಕು ಎಂದು ಹೇಳಿದನು.
21 E, cumpridas estas coisas, Paulo propôs, em espírito, ir a Jerusalém, passando pela Macedônia e pela Acaia, dizendo: Depois que houver estado ali, importa-me ver também Roma.
22 ಹೀಗೆ ಅವನು ತನಗೆ ಉಪಚಾರ ಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಎರಸ್ತನನ್ನೂ ಮಕೆ ದೋನ್ಯಕ್ಕೆ ಕಳುಹಿಸಿ ತಾನಾದರೋ ಆಸ್ಯದಲ್ಲಿ ಕೆಲವು ಕಾಲ ನಿಂತನು.
22 E, enviando à Macedônia dois daqueles que o serviam, Timóteo e Erasto, ficou ele por algum tempo na Ásia.
23 ಅದೇ ಸಮಯದಲ್ಲಿ ಆ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.
23 E, naquele mesmo tempo, houve um não pequeno alvoroço acerca do Caminho.
24 ಹೇಗಂದರೆ ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಡಯಾನಿಗೆ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸಬಿನವರಿಗೆ ಬಹಳ ಲಾಭವನ್ನುಂಟುಮಾಡುತ್ತಿದ್ದನು.
24 Porque um certo ourives da prata, por nome Demétrio, que fazia de prata nichos de Diana, dava não pouco lucro aos artífices,
25 ಅವನು ಅವರನ್ನೂ ಆ ಕಸಬಿನ ಸಂಬಂಧವಾದ ಕೆಲಸದವರನ್ನೂ ಒಟ್ಟಿಗೆ ಕರೆಯಿಸಿ ಅವರಿಗೆ--ಅಯ್ಯ ಗಳಿರಾ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾ ಗುತ್ತದೆಂದು ನೀವು ಬಲ್ಲಿರಿ.
25 Aos quais, havendo-os ajuntado com os oficiais de obras semelhantes, disse: Senhores, vós bem sabeis que deste ofício temos a nossa prosperidade;
26 ಆದರೆ ಕೈಯಿಂದ ಮಾಡಿದವುಗಳು ದೇವರುಗಳಲ್ಲವೆಂದು ಈ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯ ಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿ ಬಿಟ್ಟಿದ್ದಾನೆಂಬದನ್ನು ನೀವು ನೋಡುತ್ತೀರಿ
26 E bem vedes e ouvis que não só em Éfeso, mas até quase em toda a Ásia, este Paulo tem convencido e afastado uma grande multidão, dizendo que não são deuses os que se fazem com as mãos.
27 ಇದರಿಂದ ನಮ್ಮ ಈ ಉದ್ಯೋಗಕ್ಕೆ ಅಪಾಯ ಬರುವ ಹಾಗಿರುವದಲ್ಲದೆ ಡಯಾನಿ ಮಹಾದೇವಿಯ ಗುಡಿಯು ಗಣನೆಗೆ ಬಾರದೆ ಹೋಗುವ ಹಾಗೆ ಎಲ್ಲಾ ಆಸ್ಯಸೀಮೆ ಮತ್ತು ಲೊಕವು ಪೂಜಿಸುವ ಈಕೆಯ ವೈಭವವು ನಾಶವಾಗ ತಕ್ಕದೆಂದು ಹೇಳಿದನು.
27 E não somente há o perigo de que a nossa profissão caia em descrédito, mas também de que o próprio templo da grande deusa Diana seja estimado em nada, vindo a ser destruída a majestade daquela que toda a Ásia e o mundo veneram.
28 ಅವರು ಈ ಮಾತುಗಳನ್ನು ಕೇಳಿ ರೌದ್ರವುಳ್ಳವರಾಗಿ-- ಎಫೆಸದವರ ಡಯಾನಿಯು ದೊಡ್ಡವಳು ಎಂದು ಕೂಗುತ್ತಾ ಹೇಳಿದರು.
28 E, ouvindo-o, encheram-se de ira, e clamaram, dizendo: Grande é a Diana dos efésios.
29 ಆಗ ಊರೆಲ್ಲಾ ಗಲಿಬಿಲಿಯಾಯಿತು; ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನು ಅರಿಸ್ತಾರ್ಕನನ್ನು ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.
29 E encheu-se de confusão toda a cidade e, unânimes, correram ao teatro, arrebatando a Gaio e a Aristarco, macedônios, companheiros de Paulo na viagem.
30 ಪೌಲನು ಜನರೊಳಗೆ ಹೋಗ ಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
30 E, querendo Paulo apresentar-se ao povo, não lho permitiram os discípulos.
31 ಇದಲ್ಲದೆ ಆಸ್ಯದಲ್ಲಿ ಅವನಿಗೆ ಸ್ನೇಹಿತರಾಗಿದ್ದ ಪ್ರಮುಖರಲ್ಲಿ ಕೆಲವರು ಅವನು ನಾಟಕ ಶಾಲೆಯೊಳಗೆ ಹೋಗಿ ಅಪಾಯಕ್ಕೆ ಗುರಿಮಾಡಿಕೊಳ್ಳ ಬಾರದೆಂದು ಅವನಿಗೆ ಹೇಳಿ ಕಳುಹಿಸಿದರು.
31 E também alguns dos principais da Ásia, que eram seus amigos, lhe rogaram que não se apresentasse no teatro.
32 ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ.
32 Uns, pois, clamavam de uma maneira, outros de outra, porque o ajuntamento era confuso; e os mais deles não sabiam por que causa se tinham ajuntado.
33 ಅವರು ಅಲೆಕ್ಸಾಂದ್ರನನ್ನು ಸಮೂಹ ದೊಳಗಿಂದ ಹೊರಗೆ ತಂದಾಗ ಯೆಹೂದ್ಯರು ಅವನನ್ನು ಮುಂದೆ ತಂದರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಜನರಿಗೆ ಪ್ರತಿವಾದ ಮಾಡ ಬೇಕೆಂದಿದ್ದನು.
33 Então tiraram Alexandre dentre a multidão, impelindo-o os judeus para diante; e Alexandre, acenando com a mão, queria dar razão disto ao povo.
34 ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ--ಎಫೆಸದವರ ಡಯಾನಿ ದೊಡ್ಡವಳು ಎಂದು ಹೆಚ್ಚು ಕಡಿಮೆ ಎರಡು ಘಂಟೆ ಹೊತ್ತು ಕೂಗಿದರು.
34 Mas quando conheceram que era judeu, todos unanimemente levantaram a voz, clamando por espaço de quase duas horas: Grande é a Diana dos efésios.
35 ಆಗ ಪುರಸಭೆಯ ಕಾರ್ಯದರ್ಶಿಯು ಜನರನ್ನು ಸಮಾಧಾನಪಡಿಸಿ ಹೇಳಿದ್ದೇನಂದರೆ--ಎಫೆಸದ ಜನರೇ, ಎಫೆಸದವರ ಈ ಪಟ್ಟಣವು ಮಹಾದೇವತೆಯಾದ ಡಯಾನಿಯನ್ನೂ ಬೃಹಸ್ಪತಿಯಿಂದ ಕೆಳಗೆ ಬಿದ್ದ ಪ್ರತಿಮೆಯನ್ನೂ ಹೇಗೆ ಆರಾದ್ಧಿಸುವದೆಂದು ತಿಳಿಯದ ಮನುಷ್ಯನು ಯಾವನು?
35 Então o escrivão da cidade, tendo apaziguado a multidão, disse: Homens efésios, qual é o homem que não sabe que a cidade dos efésios é a guardadora do templo da grande deusa Diana, e da imagem que desceu de Júpiter?
36 ಈ ಸಂಗತಿ ಅಲ್ಲವೆನ್ನುವದಕ್ಕೆ ಯಾರಿಂದಲೂ ಆಗದಿರುವದರಿಂದ ನೀವು ಶಾಂತಿ ಯಿಂದಿರಬೇಕು; ದುಡುಕಿನಿಂದ ಏನೂ ಮಾಡಬಾರದು.
36 Ora, não podendo isto ser contraditado, convém que vos aplaqueis e nada façais temerariamente;
37 ಯಾಕಂದರೆ ನೀವು ತಂದಿರುವ ಈ ಮನುಷ್ಯರು ದೇವಸ್ಥಾನಗಳನ್ನು ದೋಚಿಕೊಳ್ಳುವವರೂ ಅಲ್ಲ, ನಿಮ್ಮ ದೇವಿಯನ್ನು ದೂಷಿಸುವವರೂ ಅಲ್ಲ.
37 Porque estes homens que aqui trouxestes nem são sacrílegos nem blasfemam da vossa deusa.
38 ಹೀಗಿರುವದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಕಸಬಿನವರಿಗೂ ಯಾವನ ಮೇಲಾದರೂ ವ್ಯವಹಾರವಿದ್ದರೆ ಕಾನೂನು ಇದೆ, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯ ವಾಡಿಕೊಳ್ಳಲಿ.
38 Mas, se Demétrio e os artífices que estão com ele têm alguma coisa contra alguém, há audiências e há procônsules; que se acusem uns aos outros;
39 ನೀವು ಬೇರೆ ವಿಷಯವಾಗಿ ಏನಾ ದರೂ ವಿಚಾರಣೆ ಬೇಕಾದರೆ ಅದು ನೆರೆದು ಬಂದ ನ್ಯಾಯಸಭೆಯಲ್ಲಿ ತೀರ್ಮಾನಿಸಲ್ಪಡಬೇಕು.
39 E, se alguma outra coisa demandais, averiguar-se-á em legítima assembléia.
40 ಯಾಕಂ ದರೆ ಈ ಜನಸಂದಣಿಯನ್ನು ಕುರಿತಾಗಿ ಸಮಾಧಾನ ಹೇಳುವದಕ್ಕೆ ಯಾವ ಕಾರಣವೂ ಇಲ್ಲದಿರುವದರಿಂದ ಈ ದಿನದ ದಂಗೆಯ ವಿಷಯವಾಗಿ ನ್ಯಾಯವಿಚಾರಣೆಗೆ ಗುರಿಯಾಗುವವರಾಗಿದ್ದೇವೆ ಎಂದು ಹೇಳಿ
40 Na verdade até corremos perigo de que, por hoje, sejamos acusados de sedição, não havendo causa alguma com que possamos justificar este concurso.
41 ಅವನು ಆ ಗುಂಪನ್ನು ಹಾಗೆ ಕಳುಹಿಸಿಬಿಟ್ಟನು.
41 E, tendo dito isto, despediu a assembléia.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar Atos 19, comparar traduções ou montar um estudo — tudo direto pelo WhatsApp.