2 Samuel 5
Kannada Bible (GL_KANNADA) vs ARIB
ARIB Almeida Revisada Imprensa Bíblica
1 ಇದಾದ ಮೇಲೆ ಇಸ್ರಾಯೇಲ್ ಗೋತ್ರ ಗಳೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.
1 Então todas as tribos de Israel vieram a Davi em Hebrom e disseram: Eis-nos aqui, teus ossos e tua carne!
2 ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವನಾಗಿಯೂ ಆಗಿದ್ದಿ. ಆದದರಿಂದ ಕರ್ತನು ನಿನಗೆ--ನೀನು ನನ್ನ ಜನರಾದ ಇಸ್ರಾಯೇ ಲನ್ನು ಮೇಯಿಸುವಿ; ಇಸ್ರಾಯೇಲಿನ ಮೇಲೆ ನಾಯಕನಾಗಿರುವಿ ಎಂದು ಹೇಳಿದನು ಅಂದರು.
2 Além disso, outrora, quando Saul ainda reinava sobre nós, eras tu o que saías e entravas com Israel; e também o Senhor te disse: Tu apascentarás o meu povo de Israel, e tu serás chefe sobre Israel.
3 ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರೂ ಹೆಬ್ರೋನಿನಲ್ಲಿರುವ ಅರಸನ ಬಳಿಗೆ ಬಂದಾಗ ಅರಸ ನಾದ ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸ ನಾಗಿರಲು ಅಭಿಷೇಕಮಾಡಿದರು.
3 Assim, pois, todos os anciãos de Israel vieram ter com o rei em Hebrom; e o rei Davi fez aliança com eles em Hebrom, perante o Senhor; e ungiram a Davi rei sobre Israel.
4 ದಾವೀದನು ಆಳಲು ಪ್ರಾರಂಭಿಸಿದಾಗ ಮೂವತ್ತು ವರುಷದವ ನಾಗಿದ್ದನು; ಅವನು ನಾಲ್ವತ್ತು ವರುಷ ಆಳಿದನು.
4 Trinta anos tinha Davi quando começou a reinar, e reinou quarenta anos.
5 ಅವನು ಹೆಬ್ರೋನಿನಲ್ಲಿ ಯೆಹೂದ ಜನರ ಮೇಲೆ ಏಳುವರೆ ವರುಷ ಆಳಿದನು. ಯೆರೂಸಲೇಮಿನಲ್ಲಿ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಎಲ್ಲಾ ಯೆಹೂ ದದ ಜನರ ಮೇಲೆಯೂ ಮೂವತ್ತುಮೂರು ವರುಷ ಆಳಿದನು.
5 Em Hebrom reinou sete anos e seis meses sobre Judá, e em Jerusalém reinou trinta e três anos sobre todo o Israel e Judá.
6 ಆಗ ಅರಸನೂ ಅವನ ಜನರೂ ದೇಶದ ನಿವಾಸಿ ಗಳಾದ ಯೆಬೂಸಿಯರು ಒಳಗೆ ಯೆರೂಸಲೇಮಿಗೆ ಬಂದರು. ದಾವೀದನು ಇದರಲ್ಲಿ ಬರಲಾರನೆಂದು ಅವರು ನೆನಸಿ ದಾವೀದನಿಗೆ--ನೀನು ಕುರುಡರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು ನೀನು ಇಲ್ಲಿಗೆ ಬರಲಾರಿ ಅಂದರು.
6 Depois partiu o rei com os seus homens para Jerusalém, contra os jebuseus, que habitavam naquela terra, os quais disseram a Davi: Não entrarás aqui; os cegos e es coxos te repelirão; querendo dizer: Davi de maneira alguma entrará aqui.
7 ಆದಾಗ್ಯೂ ದಾವೀದನು ಚೀಯೋನಿನ ಕೋಟೆಯನ್ನು ಹಿಡುಕೊಂಡನು. ಅದೇ ದಾವೀದನ ಪಟ್ಟಣವು.
7 Todavia Davi tomou a fortaleza de Sião; esta é a cidade de Davi.
8 ಆ ದಿವಸದಲ್ಲಿ ದಾವೀದನುಕಂದಕವನ್ನು ದಾಟಿ ಯೆಬೂಸಿಯರನ್ನು ಅಂದರೆ ದಾವೀದನ ಪ್ರಾಣ ದ್ವೇಷಿಗಳಾದ ಕುಂಟರನ್ನೂ ಕುರು ಡರನ್ನೂ ಹೊಡೆಯುವವನು (ಮುಖ್ಯಸ್ಥನೂ ಅಧಿ ಪತಿಯೂ ಆಗಿರುವನು) ಎಂದು ಹೇಳಿದ್ದನು. ಅದಕ್ಕೆ ಅವರು--ಕುರುಡರೂ ಕುಂಟರೂ ಮನೆಯೊಳಗೆ ಬರಕೂಡದು ಅಂದರು.
8 Ora, Davi disse naquele dia: Todo o que ferir os jebuseus, suba ao canal, e fira a esses coxos e cegos, a quem a alma de Davi aborrece. Por isso se diz: Nem cego nem, coxo entrara na casa.
9 ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು.
9 Assim habitou Davi na fortaleza, e chamou-a cidade de Davi; e foi levantando edifícios em redor, desde Milo para dentro.
10 ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು.
10 Davi ia-se engrandecendo cada vez mais, porque o Senhor Deus dos exércitos era com ele.
11 ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.
11 Hirão, rei de Tiro, enviou mensageiros a Davi, e madeira de cedro, e carpinteiros e pedreiros, que edificaram para Davi uma casa.
12 ದಾವೀದನು ತನ್ನನ್ನು ಕರ್ತನು ಇಸ್ರಾಯೇ ಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದನೆಂದೂ ತನ್ನ ಜನವಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದನೆಂದೂ ತಿಳಿದುಕೊಂಡನು.
12 Entendeu, pois, Davi que o Senhor o confirmara rei sobre Israel, e que exaltara e reino dele por amar do seu povo Israel.
13 ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ ಯೆರೂಸಲೇಮಿನಿಂದ ಇನ್ನೂ ಕೆಲವು ಮಂದಿ ಉಪಪತ್ನಿಯರನ್ನೂ ಹೆಂಡತಿಯರನ್ನೂ ಮಾಡಿಕೊಂಡನು; ದಾವೀದನಿಗೆ ಇನ್ನೂ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.
13 Davi tomou ainda para si concubinas e mulheres de Jerusalém, depois que viera de Hebrom; e nasceram a Davi mais filhos e filhas.
14 ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಯಾವವೆಂದರೆ; ಶಮ್ಮೂವ ಶೊಬಾಬ್ ನಾತಾನ್
14 São estes os nomes dos que lhe nasceram em Jerusalém: Samua, Sobabe, Natã, Salomão,
15 ಸೊಲೊಮೋನ್ ಇಬ್ಹಾರ್
15 Ibar, Elisua, Nefegue, Jafia,
16 ಎಲೀಷೂವ ನೆಫೆಗ್ ಯಾಫೀಯ ಎಲೀಷಾಮ ಎಲ್ಯಾದ ಎಲೀಫೆ ಲೆಟ್ ಇವರೇ.
16 Elisama, e Eliadá e Elifelete.
17 ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಲು ಅಭಿಷೇಕಮಾಡಿದ್ದಾರೆಂದು ಫಿಲಿಷ್ಟಿ ಯರು ಕೇಳಿದಾಗ ಅವರೆಲ್ಲರು ದಾವೀದನನ್ನು ಹುಡುಕು ವದಕ್ಕೆ ಬಂದರು. ಅದನ್ನು ದಾವೀದನು ಕೇಳಿ ಗಡಿ ಸ್ಥಳಕ್ಕೆ ಹೋದನು.
17 Quando os filisteus ouviram que Davi fora ungido rei sobre Israel, subiram todos em busca dele. Ouvindo isto, Davi desceu à fortaleza.
18 ಆದರೆ ಫಿಲಿಷ್ಟಿಯರು ಬಂದು ರೆಫಾಯಾಮ್ ತಗ್ಗಿನಲ್ಲಿ ಇಳುಕೊಂಡರು.
18 Os filisteus vieram, e se estenderam pelo vale de Refaim.
19 ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು.
19 Pelo que Davi consultou ao Senhor, dizendo: Subirei contra os filisteus? entregar-mos-ás nas mãos? Respondeu o Senhor a Davi: Sobe, pois eu entregarei os filisteus nas tuas mãos.
20 ಆದಕಾರಣ ದಾವೀದನು ಬಾಳ್‌ಪೆರಾಚೀಮಿಗೆ ಬಂದು ಅಲ್ಲಿ ಅವರನ್ನು ಹೊಡೆದು--ನೀರು ಕಟ್ಟೆ ಒಡೆದು ಹರಿಯುವ ಹಾಗೆ ಕರ್ತನು ನನ್ನ ಮುಂದೆ ನನ್ನ ಶತ್ರುಗಳ ಮೇಲೆ ಹರಿದು ಬಿದ್ದಿದ್ದಾನೆ ಎಂದು ಹೇಳಿ ಆ ಸ್ಥಳಕ್ಕೆ ಬಾಳ್‌ಪೆರಾಚೀಮ್ ಎಂದು ಹೆಸರಿ ಟ್ಟನು.
20 Então foi Davi a Baal-Perazim, e ali os derrotou; e disse: O Senhor rompeu os meus inimigos diante de mim, como as águas rompem barreiras. Por isso chamou o nome daquele lugar Baal-Perazim.
21 ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು.
21 Os filisteus deixaram lá os seus ídolos, e Davi e os seus homens os levaram.
22 ಫಿಲಿಷ್ಟಿಯರು ತಿರಿಗಿ ಬಂದು ರೆಫಾಯಾಮ್ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು.
22 Tornaram ainda os filisteus a subir, e se espalharam pelo vale de Refaim.
23 ದಾವೀ ದನು ಕರ್ತನನ್ನು ಕೇಳಿಕೊಂಡಾಗ ಆತನು ಅವನಿಗೆನೀನು ಹೋಗದೆ ಅವರ ಹಿಂದುಗಡೆ ಸುತ್ತಿಕೊಂಡು ಹೋಗಿ ಹಿಪ್ಪಲಿ ಗಿಡಗಳಿಗೆದುರಾಗಿ ಅವರ ಮೇಲೆ ಬರಬೇಕು.
23 E Davi consultou ao Senhor, que respondeu: Não subirás; mas rodeia-os por detrás, e virás sobre eles por defronte dos balsameiros.
24 ಹಿಪ್ಪಲಿ ಗಿಡಗಳ ಶಿಖರಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗ ಚೇತರಿಸಿಕೊಳ್ಳ ಬೇಕು. ಯಾಕಂದರೆ ಆಗಲೇ ಕರ್ತನು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಡು ವನು ಅಂದನು.
24 E há de ser que, ouvindo tu o ruído de marcha pelas copas dos balsameiros, então te apressarás, porque é o Senhor que sai diante de ti, a ferir o arraial dos filisteus.
25 ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
25 Fez, pois, Davi como o Senhor lhe havia ordenado; e feriu os filisteus desde Geba, até chegar a Gezer.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 2 Samuel 5, comparar traduções ou montar um estudo — tudo direto pelo WhatsApp.