2 Samuel 21

Kannada Bible (GL_KANNADA) vs BKJ

Sair da comparação
1 ದಾವೀದನ ದಿವಸಗಳಲ್ಲಿ ವರುಷದಿಂದ ವರುಷಕ್ಕೆ ಮೂರು ವರುಷ ಬರ ಉಂಟಾ ಗಿತ್ತು. ಆಗ ದಾವೀದನು ಕರ್ತನನ್ನು ವಿಚಾರಿಸಿದನು. ಕರ್ತನು--ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿ ದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಇದಾಗಿದೆ ಎಂದು ಹೇಳಿದನು.
1 Então, houve fome nos dias de Davi por três anos, ano após ano; e Davi consultou o SENHOR. E o SENHOR respondeu: É por Saul, e pela sua casa sanguinária, porque ele matou os gibeonitas.
2 ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್‌ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್‌ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್‌ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)
2 E o rei chamou os gibeonitas, e disse a eles: (Ora, os gibeonitas não eram dos filhos de Israel, mas dos remanescentes dos amorreus; e os filhos de Israel haviam jurado a eles; e Saul procurou matá-los no seu zelo pelos filhos de Israel e Judá.)
3 ಆದದರಿಂದ ದಾವೀದನು ಗಿಬ್ಯೋನ್ಯರಿಗೆ--ನಾನು ನಿಮಗೆ ಮಾಡ ಬೇಕಾದದ್ದೇನು? ನೀವು ಕರ್ತನ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ ನಾನು ಯಾವದರಿಂದ ಪ್ರಾಯಶ್ಚಿತ್ತ ಮಾಡಲಿ ಎಂದು ಕೇಳಿದನು.
3 Por conseguinte, Davi disse aos gibeonitas: O que farei por vós? E com que farei a expiação, para que possais abençoar a herança do SENHOR?
4 ಆಗ ಗಿಬ್ಯೋನ್ಯರು ಅವನಿಗೆ--ಸೌಲನ ಕೈಯಿಂದಲಾದರೂ ಅವನ ಮನೆ ಯವರ ಕೈಯಿಂದಲಾದರೂ ನಮಗೆ ಬೆಳ್ಳಿಯಾದರೂ ಬಂಗಾರವಾದರೂ ಬೇಡ; ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕ ಬೇಕೆಂಬುವದು ನಮಗೆ ಅಗತ್ಯವಿಲ್ಲ ಅಂದರು. ಆಗ ಅವನು--ನೀವು ನನಗೆ ಏನು ಹೇಳುತ್ತೀರೋ ನಾನು ನಿಮಗೆ ಮಾಡುವೆನು ಅಂದನು.
4 E os gibeonitas disseram a ele: Não queremos ter nem prata, nem ouro de Saul, nem da sua casa; tampouco por nós matarás qualquer homem em Israel. E ele disse: O que vós disserdes, isto farei por vós.
5 ಅವರು ಅರಸನಿಗೆಯಾವನು ನಮ್ಮನ್ನು ಸಂಹರಿಸಿಬಿಟ್ಟು ನಾವು ಇಸ್ರಾ ಯೇಲಿನ ಎಲ್ಲಾ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ
5 E eles responderam: O homem que nos consumiu, e que maquinou contra nós para que fôssemos destruídos e não restássemos em nenhum dos limites de Israel,
6 ನಮಗೆ ಕೇಡುಮಾಡಲು ನೆನಸಿದನೋ ಅವನ ಕುಮಾರರಲ್ಲಿ ಏಳು ಮಂದಿ ನಮಗೆ ಒಪ್ಪಿಸಲ್ಪಡಲಿ. ಆಗ ನಾವು ಕರ್ತನು ಆದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಕರ್ತನಿಗೋಸ್ಕರ ಗಲ್ಲಿಗೆ ಹಾಕು ವೆವು ಅಂದರು. ಅದಕ್ಕೆ ಅರಸನು--ನಾನು ಒಪ್ಪಿಸಿ ಕೊಡುವೆನು ಅಂದನು.
6 que sete homens dos seus filhos sejam entregues a nós, e nós os enforcaremos para o SENHOR em Gibeá de Saul, a quem o SENHOR escolheu. E o rei disse: Dá-los-ei.
7 ಆದರೆ ತಮಗೂ ದಾವೀದ ನಿಗೂ ಸೌಲನ ಮಗನಾದ ಯೋನಾತಾನನಿಗೂ ಕರ್ತ ನನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ
7 O rei, porém, poupou Mefibosete, o filho de Jônatas, o filho de Saul, por causa do juramento do SENHOR que havia entre eles, entre Davi e Jônatas, o filho de Saul.
8 ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರ ಮಕ್ಕಳಾದ ಅರ್ಮೋನೀಯನ್ನೂ ಮೆಫೀಬೋ ಶೆತ ನನ್ನೂ ಸೌಲನ ಮಗಳಾಗಿರುವ ವಿಾಕಲಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರೀಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡುಕೊಂಡು
8 O rei, no entanto, tomou os dois filhos de Rispa, a filha de Aiá, os quais ela deu a Saul, Armoni e Mefibosete; e os cinco filhos de Mical, a filha de Saul, quem ela criou para Adriel, o filho de Barzilai, o meolatita;
9 ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಕರ್ತನ ಮುಂದೆ ಬೆಟ್ಟದ ಮೇಲೆ ಗಲ್ಲಿಗೆ ಹಾಕಿದರು. ಹಾಗೆಯೇ ಈ ಏಳು ಮಂದಿಯೂ ಒಂದೇ ಸಾರಿ ಬಿದ್ದರು. ಜವೆ ಗೋಧಿಯ ಸುಗ್ಗಿಯ ದಿನದ ಪ್ರಾರಂಭದಲ್ಲಿ ಅವರು ಕೊಂದುಹಾಕಲ್ಪಟ್ಟರು.
9 e ele os entregou nas mãos dos gibeonitas, e eles os enforcaram no outeiro diante do SENHOR; e eles caíram, todos os sete juntos, e foram levados à morte nos dias da colheita, nos primeiros dias, no início da colheita da cevada.
10 ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತಕ್ಕೊಂಡುಹೋಗಿ ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಸುಗ್ಗಿಯ ದಿವಸ ಮೊದಲುಗೊಂಡು ಆಕಾಶದಿಂದ ಅವರ ಮೇಲೆ ಮಳೆ ಸುರಿಯುವ ವರೆಗೂ ಹಗಲಲ್ಲಿ ಆಕಾಶದ ಪಕ್ಷಿಗಳೂ ರಾತ್ರಿಯಲ್ಲಿ ಅಡವಿಯ ಮೃಗಗಳೂ ಅದರ ಮೇಲೆ ಕೂತುಕೊಳ್ಳದಂತೆ ಕಾಯುತ್ತಿದ್ದಳು.
10 E Rispa, a filha de Aiá, tomou pano de saco, e o espalhou para si sobre a rocha, desde o início da colheita até que a água caiu sobre eles do céu, e não deixou que viessem sobre eles nem as aves do céu de dia, nem os animais do campo à noite.
11 ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲ್ಪಟ್ಟಿತು.
11 E disseram a Davi o que Rispa, a filha de Aiá, a concubina de Saul, havia feito.
12 ಆಗ ದಾವೀದನು ಹೋಗಿ ಫಿಲಿಷ್ಟಿಯರು ಗಿಲ್ಬೋ ವದಲ್ಲಿ ಸೌಲನನ್ನು ಹೊಡೆದಾಗ ಬೆತ್ಸಾನಿನ ಬೀದಿ ಯಲ್ಲಿ ತೂಗು ಹಾಕಿದ ಗಿಲ್ಯಾದಿನ ಯಾಬೇಷ್‌ ಪಟ್ಟಣದವರು ಅಲ್ಲಿ ಹೋಗಿ ಕದ್ದು ಒಯ್ದ
12 E Davi foi e pegou os ossos de Saul e os ossos de Jônatas, seu filho, dos homens de Jabes-Gileade, os quais os haviam roubado da rua de Bete-Seã, onde os filisteus os haviam pendurado, quando os filisteus mataram Saul em Gilboa;
13 ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಅವರಿಂದ ತಕ್ಕೊಂಡು ಅಲ್ಲಿಂದ ಬಂದು ಗಲ್ಲಿಗೆ ಹಾಕಲ್ಪಟ್ಟವರ ಎಲುಬುಗಳನ್ನೂ ಕೂಡಿಸಿ ಕೊಂಡು
13 e ele fez subir de lá os ossos de Saul e os ossos de Jônatas, seu filho; e eles reuniram os ossos daqueles que foram pendurados.
14 ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ಬೆನ್ಯಾವಿಾನನ ದೇಶದ ಚೇಲಾದಲ್ಲಿರುವ ಅವನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಣಿಟ್ಟರು. ಅವರು ಅರಸನು ಆಜ್ಞಾ ಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ ದೇಶಕ್ಕೋಸ್ಕರ ದೇವರಿಗೆ ವಿಜ್ಞಾಪನೆ ಮಾಡಿದರು.
14 E os ossos de Saul e Jônatas, seu filho, enterraram na região de Benjamim em Zela, no sepulcro de Quis, seu pai; e eles executaram tudo o que o rei ordenou. E depois disso, rogaram a Deus pela terra.
15 ಫಿಲಿಷ್ಟಿಯರು ತಿರಿಗಿ ಇಸ್ರಾಯೇಲ್ಯರ ಮೇಲೆ ಯುದ್ಧಮಾಡಿದರು. ಆಗ ದಾವೀದನೂ ಅವನ ಸಂಗಡ ಇದ್ದ ಅವನ ಸೇವಕರೂ ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧಮಾಡಿದರು; ಆದರೆ ದಾವೀದನು ದಣಿದು ಹೋದನು.
15 Além disso, os filisteus ainda fizeram guerra contra Israel; e Davi desceu, e com ele os seus servos, e lutou contra os filisteus; e Davi ficou fatigado.
16 ಆಗ ಮುನ್ನೂರು ಶೇಕೆಲ ತೂಕವಾದ ಹಿತ್ತಾಳೆಯ ಈಟಿಯುಳ್ಳವನಾಗಿ ಹೊಸ ಕತ್ತಿಯನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ಮಹಾ ಶರೀರದವನ ಮಕ್ಕಳಲ್ಲಿ ಇಷ್ಬೀಬೆನೋಬ್‌ನು ದಾವೀದ ನನ್ನು ಕೊಲ್ಲಬೇಕೆಂದಿದ್ದನು.
16 E Isbi-Benobe, que era um dos filhos do gigante, cuja lança pesava trezentos shekels de bronze em peso, estando ele cingido com uma espada nova, pensou ter matado Davi.
17 ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.
17 Todavia, Abisai, o filho de Zeruia, socorreu-o, e feriu o filisteu, e o matou. Então, os homens de Davi juraram a ele, dizendo: Tu não sairás mais conosco à batalha, para que não extingas a luz de Israel.
18 ತರುವಾಯ ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿ ನಲ್ಲಿ ಯುದ್ಧ ಉಂಟಾಯಿತು. ಆಗ ಹುಷಾತನಾದ ಸಿಬ್ಬೆಕೈನು ಮಹಾಶರೀರದವನ ಮಕ್ಕಳಲ್ಲಿ ಸಫ್‌ ಎಂಬವನನ್ನು ಕೊಂದನು.
18 E sucedeu, depois disso, que houve novamente uma batalha com os filisteus em Gobe; então Sibecai, o husatita, matou Safe, o qual era dos filhos dos gigantes.
19 ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ಉಂಟಾದಾಗ ಬೇತ್ಲೆಹೇಮಿನವನಾದ ಯಾರೇಯೋರೆ ಗೀಮ್‌ ಎಂಬವನ ಮಗನಾಗಿರುವ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನ ಸಹೋದರನನ್ನು ಕೊಂದನು. ಈ ಗೊಲ್ಯಾತನ ಈಟಿಯ ಕಟ್ಟಿಗೆಯು ನೆಯ್ಯುವವರ ದೋಣೀ ಮರಕ್ಕೆ ಸಮಾನವಾಗಿತ್ತು.
19 E houve novamente batalha em Gobe com os filisteus, onde Elanã, o filho de Jaaré-Oregim, um belemita, matou o irmão de Golias, o geteu, de cuja lança a vara era como um eixo de tecelão.
20 ಗತ್‌ ಊರಿನಲ್ಲಿ ಯುದ್ಧ ಉಂಟಾದಾಗ ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು; ಅವನ ಕೈಕಾಲುಗಳ ಬೆರಳುಗಳು ಆರು ಆರಾಗಿ ಲೆಖ್ಖದಲ್ಲಿ ಇಪ್ಪತ್ತು ನಾಲ್ಕು ಆಗಿದ್ದವು. ಇವನು ಸಹ ಮಹಾಶರೀರದವನಿಗೆ ಹುಟ್ಟಿ ದನು.
20 E ainda houve uma batalha em Gate, onde havia um homem de grande estatura, que tinha seis dedos em cada mão, e seis dedos em cada pé, vinte e quatro em número; e ele também nasceu dos gigantes.
21 ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾಗಿರುವ ಶಿಮ್ಮನ ಮಗ ನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
21 E quando ele desafiou Israel, Jônatas, o filho de Simeia, irmão de Davi, o matou.
22 ಈ ನಾಲ್ಕು ಮಂದಿಯು ಗತ್‌ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು.
22 Esses quatro nasceram dos gigantes em Gate, e caíram pela mão de Davi, e pela mão dos seus servos.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Samuel 21, comparar traduções ou montar um estudo — tudo direto pelo WhatsApp.