2 Crônicas 34

Kannada Bible (GL_KANNADA) vs NVI

Sair da comparação
NVI Nova Versão Internacional
1 ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಮೂವತ್ತೊಂದು ವರುಷ ಆಳಿದನು.
1 Josias tinha oito anos de idade quando começou a reinar, e reinou trinta e um anos em Jerusalém.
2 ಅವನು ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು; ಎಡಗಡೆಗಾದರೂ ಬಲಗಡೆಗಾದರೂ ತೊಲಗದೆ ತನ್ನ ಪಿತೃವಾದ ದಾವೀದನ ಮಾರ್ಗ ಗಳಲ್ಲಿ ನಡೆದನು.
2 Ele fez o que o Senhor aprova e andou nos caminhos de Davi, seu predecessor, sem desviar-se nem para a direita nem para a esquerda.
3 ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.
3 No oitavo ano do seu reinado, sendo ainda bem jovem, ele começou a buscar o Deus de Davi, seu predecessor. No décimo segundo ano, começou a purificar Judá e Jerusalém dos altares idólatras, dos postes sagrados, das imagens esculpidas e dos ídolos de metal.
4 ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ
4 Sob as suas ordens foram derrubados os altares dos baalins; além disso, ele despedaçou os altares de incenso que ficavam acima deles. Também despedaçou e reduziu a pó os postes sagrados, as imagens esculpidas e os ídolos de metal, e os espalhou sobre os túmulos daqueles que lhes haviam oferecido sacrifícios.
5 ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು, ಯೆಹೂ ದವನ್ನೂ ಯೆರೂಸಲೇಮನ್ನೂ ಶುಚಿಮಾಡಿದರು.
5 Depois queimou os ossos dos sacerdotes sobre esses altares, purificando assim Judá e Jerusalém.
6 ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ ಎಫ್ರಾಯಾಮ್‌ ಸಿಮೆಯೋನ್‌ ಪಟ್ಟಣಗಳು ಮೊದಲು ಗೊಂಡು ನಫ್ತ್ತಾಲಿಯ ವರೆಗೂ ಸುತ್ತಲೂ ಮಾಡಿದರು.
6 Nas cidades das tribos de Manassés, de Efraim e de Simeão, e até mesmo de Naftali, e nas ruínas ao redor delas,
7 ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್‌ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.
7 derrubou os altares e os postes sagrados, esmagou os ídolos, reduzindo-os a pó, e despedaçou todos os altares de incenso espalhados por Israel. Então voltou para Jerusalém.
8 ಆದರೆ ಯೋಷೀಯನ ಆಳ್ವಿಕೆಯ ಹದಿನೆಂಟನೇ ವರುಷದಲ್ಲಿ ಅವನು ದೇಶವನ್ನೂ ಆಲಯವನ್ನೂ ಶುಚಿಮಾಡಿದ ತರುವಾಯ ತನ್ನ ದೇವರಾದ ಕರ್ತನ ಆಲಯವನ್ನು ದುರಸ್ತುಮಾಡುವದಕ್ಕೆ ಅಚಲ್ಯನ ಮಗ ನಾದ ಶಾಫಾನನನ್ನೂ ಪಟ್ಟಣದ ಅಧಿಪತಿಯಾದ ಮಾಸೇಯನನ್ನೂ ರಾಯಸದವನಾದ ಯೋವಾಹಾ ಜನ ಮಗನಾದ ಯೋವಾಹನನ್ನೂ ಕಳುಹಿಸಿದನು.
8 No décimo oitavo ano do seu reinado, a fim de purificar o país e o templo, ele enviou Safã, filho de Azalias, e Maaséias, governador da cidade, junto com Joá, filho do arquivista real Joacaz, para restaurarem o templo do Senhor, do seu Deus.
9 ಅವರು ಪ್ರಧಾನ ಯಾಜಕನಾದ ಹಿಲ್ಕೀಯನ ಬಳಿಗೆ ಬಂದು ದ್ವಾರಪಾಲಕರಾದ ಲೇವಿಯರು ಮನಸ್ಸೆ ಎಫ್ರಾ ಯಾಮಿನವರ ಕೈಯಿಂದಲೂ ಇಸ್ರಾಯೇಲಿನ ಉಳಿದ ವರ ಕೈಯಿಂದಲೂ ಯೆಹೂದ ಬೆನ್ಯಾವಿಾನಿನವರೆ ಲ್ಲರ ಕೈಯಿಂದಲೂ ಕೂಡಿಸಿ ಅದನ್ನು ಯೆರೂಸಲೇ ಮಿಗೆ ತಿರಿಗಿ ಬಂದು ದೇವರ ಆಲಯಕ್ಕೆ ಹಣವನ್ನು ಕೊಟ್ಟರು.
9 Eles foram entregar ao sumo sacerdote Hilquias a prata que havia sido trazida ao templo de Deus e que os porteiros levitas haviam recolhido das ofertas do povo de Manassés e de Efraim, e de todo o remanescente de Israel, e também de todo o povo de Judá e de Benjamim e dos habitantes de Jerusalém.
10 ಕರ್ತನ ಆಲಯದ ಕೆಲಸದವರ ವಿಚಾರ ಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಇವರು ಆಲಯ ವನ್ನು ಭದ್ರಪಡಿಸಿ ದುರಸ್ತುಮಾಡಲು ಕರ್ತನ ಆಲ ಯದಲ್ಲಿ ಕೆಲಸ ಮಾಡುವವರಿಗೆ ಅದನ್ನು ಕೊಟ್ಟರು.
10 Então confiaram a prata aos homens nomeados para supervisionarem a reforma no templo do Senhor, que pagavam os trabalhadores que faziam os reparos no templo.
11 ಕೆತ್ತಿದ ಕಲ್ಲುಗಳನ್ನೂ ಜಂತೆಗಳಿಗೋಸ್ಕರ ಮರಗ ಳನ್ನೂ ಕೊಂಡುಕೊಂಡವರಾಗಿ ಯೆಹೂದದ ಅರಸು ಗಳು ಕೆಡವಿಹಾಕಿದ ಮನೆಗಳಲ್ಲಿ ನೆಲಕ್ಕೆ ಹಾಸುವದ ಕ್ಕೋಸ್ಕರ ಶಿಲ್ಪಿಯವರಿಗೂ ಕಟ್ಟುವವರಿಗೂ ಕೊಟ್ಟರು.
11 Também deram dessa prata aos carpinteiros e aos construtores para comprarem pedras lavradas, e madeira para as juntas e as vigas dos edifícios que os reis de Judá haviam deixado ficar em ruínas.
12 ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿ ದರು. ಅವರ ವಿಚಾರಣೆಯ ಕರ್ತರು ಯಾರಂದರೆ: ಮೆರಾರಿಯ ಕುಮಾರರಲ್ಲಿ ಲೇವಿಯರಾದ ಯಹತನೂ ಒಬದ್ಯನೂ; ಕೆಹಾತ್ಯರ ಮಕ್ಕಳಲ್ಲಿ ಜೆಕರೀಯನೂ ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವ ರಾದ ಲೇವಿಯರೆಲ್ಲರೂ ಅದನ್ನು ನಡಿಸುತ್ತಾ ಇದ್ದರು.
12 Esses homens fizeram o trabalho com fidelidade. Eram dirigidos por Jaate e Obadias, levitas descendentes de Merari, e Zacarias e Mesulão, descendentes de Coate. Todos os levitas que sabiam tocar instrumentos musicais
13 ಇದಲ್ಲದೆ ಹೊರೆಗಾರರ ಮೇಲೆಯೂ ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ವಿಚಾರಕರಾಗಿದ್ದರು. ಲೇವಿಯವರಲ್ಲಿ ಕೆಲವರು ರಾಯಸದವರೂ ಯಜಮಾನರೂ ದ್ವಾರಪಾಲಕರೂ ಆಗಿದ್ದರು.
13 estavam encarregados dos operários e supervisionavam todos os trabalhadores em todas as funções. Outros levitas eram secretários, oficiais e porteiros.
14 ಆದರೆ ಕರ್ತನ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತಕ್ಕೊಂಡು ಬರುವಾಗ ಯಾಜಕ ನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಕರ್ತನ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡನು.
14 Enquanto recolhiam a prata que tinha sido levada para o templo do Senhor, o sacerdote Hilquias encontrou o livro da Lei do Senhor que havia sido dada por meio de Moisés.
15 ಆಗ ಹಿಲ್ಕೀಯನು ಪ್ರತ್ಯುತ್ತರ ಕೊಟ್ಟು ರಾಯಸದ ವನಾದ ಶಾಫಾನನಿಗೆ--ಕರ್ತನ ಆಲಯದಲ್ಲಿ ನ್ಯಾಯ ಪ್ರಮಾಣದ ಪುಸ್ತಕವು ನನಗೆ ಸಿಕ್ಕಿತು ಎಂದು ಹೇಳಿ ದನು. ಮತ್ತು ಹಿಲ್ಕೀಯನು ಆ ಪುಸ್ತಕವನ್ನು ಶಾಫಾನ ನಿಗೆ ಒಪ್ಪಿಸಿದನು.
15 Hilquias disse ao secretário Safã: "Encontrei o livro da Lei no templo do Senhor". E o entregou a Safã.
16 ಶಾಫಾನನು ಆ ಪುಸ್ತಕವನ್ನು ಅರಸನ ಬಳಿಗೆ ತಕ್ಕೊಂಡು ಹೋಗಿ ಅರಸನಿಗೆ ಈ ಮಾತನ್ನು ತಿರಿಗಿ ಹೇಳಿದನು. ಏನಂದರೆ, ನಿನ್ನ ಸೇವಕರ ಕೈಗೆ ಒಪ್ಪಿಸಿದ್ದನ್ನೆಲ್ಲಾ ಅವರು ಮಾಡುತ್ತಾರೆ.
16 Então Safã levou o livro ao rei e lhe informou: "Teus servos estão fazendo tudo o que lhes foi ordenado.
17 ಇದಲ್ಲದೆ ಅವರು ಕರ್ತನ ಆಲಯದಲ್ಲಿ ಸಿಕ್ಕಿದ ಹಣವನ್ನು ಸುರಿದು ವಿಚಾರಕರ ಕೈಯಲ್ಲಿಯೂ ಕೆಲಸದವರ ಕೈಯ ಲ್ಲಿಯೂ ಒಪ್ಪಿಸಿದ್ದಾರೆ.
17 Fundiram a prata que estava no templo do Senhor e a confiaram aos supervisores e aos trabalhadores".
18 ರಾಯಸದವನಾದ ಶಾಫಾ ನನು ಅರಸನಿಗೆ--ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಕೊಟ್ಟಿದ್ದಾನೆ ಎಂದು ತಿಳಿಸಿದನು; ಆಗ ಶಾಫಾನನು ಅದನ್ನು ಅರಸನ ಮುಂದೆ ಓದಿದನು.
18 E acrescentou: "O sacerdote Hilquias entregou-me um livro". E Safã leu trechos do livro para o rei.
19 ಅರಸನು ನ್ಯಾಯಪ್ರಮಾಣದ ವಾಕ್ಯಗಳನ್ನು ಕೇಳಿ ದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು.
19 Assim que o rei ouviu as palavras da Lei, rasgou suas vestes
20 ಅರಸನು ಹಿಲ್ಕೀಯನಿಗೂ ಶಾಫಾನನ ಮಗನಾದ ಅಹೀಕಾಮ ನಿಗೂ ವಿಾಕನ ಮಗನಾದ ಅಬ್ದೋನನಿಗೂ ರಾಯಸದ ವನಾದ ಶಾಫಾನನಿಗೂ ಅರಸನ ಸೇವಕನಾದ ಅಸಾಯ ನಿಗೂ ಆಜ್ಞಾಪಿಸಿ--
20 e deu estas ordens a Hilquias, a Aicam, filho de Safã, a Abdom, filho de Mica, ao secretário Safã e ao auxiliar real Asaías:
21 ನೀವು ಹೋಗಿ ನನಗೋಸ್ಕ ರವೂ ಇಸ್ರಾಯೇಲಿನಲ್ಲಿಯೂ ಯೆಹೂದದಲ್ಲಿಯೂ ಉಳಿದವರಿಗೋಸ್ಕರವೂ ಸಿಕ್ಕಿದ ಪುಸ್ತಕದ ಮಾತು ಗಳನ್ನು ಕುರಿತು ಕರ್ತನನ್ನು ವಿಚಾರಿಸಿರಿ. ಯಾಕಂದರೆ ನಮ್ಮ ಪಿತೃಗಳು ಈ ಪುಸ್ತಕದಲ್ಲಿ ಬರೆದ ಎಲ್ಲಾದರ ಪ್ರಕಾರ ಮಾಡಲು ಕರ್ತನ ವಾಕ್ಯವನ್ನು ಕೈಕೊಳ್ಳದೆ ಇದ್ದದರಿಂದ ನಮ್ಮ ಮೇಲೆ ಸುರಿದ ಕರ್ತನ ಕೋಪವು ದೊಡ್ಡದಾಗಿದೆ ಎಂದು ಹೇಳಿದನು.
21 "Vão consultar o Senhor por mim e pelo remanescente de Israel e de Judá acerca do que está escrito neste livro que foi encontrado. A ira do Senhor contra nós deve ser grande, pois os nossos antepassados não obedeceram à palavra do Senhor e não agiram de acordo com tudo o que está escrito neste livro".
22 ಆಗ ಹಿಲ್ಕೀ ಯನೂ ಅರಸನಿಂದ ನೇಮಿಸಲ್ಪಟ್ಟವರೂ ಹಸ್ರನ ಮಗನೂ ತೊಕ್ಹತನ ಮಗನೂ ವಸ್ತ್ರಗಳ ಕಾವಲುಗಾ ರನೂ ಆದ ಶಲ್ಲೂಮನ ಹೆಂಡತಿಯಾಗಿರುವ ಪ್ರವಾದಿ ನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಅದನ್ನು ಕುರಿತು ಮಾತನಾಡಿದರು. (ಅವಳು ಯೆರೂ ಸಲೇಮಿನೊಳಗೆ ಮಹಾವಿದ್ಯಾಲಯದಲ್ಲಿ ವಾಸವಾಗಿ ದ್ದಳು.)
22 Hilquias e aqueles que o rei tinha enviado com ele foram falar com a profetisa Hulda, mulher de Salum, responsável pelo guarda-roupa do templo, filho de Tocate e neto de Harás. Ela morava no bairro novo de Jerusalém.
23 ಆಗ ಅವಳು--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದೇನಂದರೆ
23 Ela lhes disse: "Assim diz o Senhor, o Deus de Israel: ‘Digam ao homem que os enviou a mim:
24 ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನೂ ಯೆಹೂದದ ಅರಸನ ಮುಂದೆ ಅವರು ಓದಿದ ಪುಸ್ತಕದಲ್ಲಿ ಬರೆ ಯಲ್ಪಟ್ಟ ಎಲ್ಲಾ ಶಾಪಗಳನ್ನೂ ಬರಮಾಡುವೆನು.
24 Assim diz o Senhor: Eu vou trazer uma desgraça sobre este lugar e sobre seus habitantes; todas as maldições escritas no livro que foi lido na presença do rei de Judá.
25 ಯಾಕಂದರೆ ತಮ್ಮ ಸಮಸ್ತ ಕೈ ಕ್ರಿಯೆಗಳಿಂದ ನನಗೆ ಕೋಪವನ್ನೆಬ್ಬಿಸುವ ಹಾಗೆ ಅವರು ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಸುರಿಸಲ್ಪಡುವದು; ಅದು ಆರಿಹೋಗುವದಿಲ್ಲ.
25 Porque me abandonaram e queimaram incenso a outros deuses, provocando-me a ira por meio de todos os ídolos que as mãos deles têm feito, minha ira arderá contra este lugar e não será apagada’.
26 ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ--ನೀನು ಕೇಳಿದ ಮಾತುಗ ಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--
26 Digam ao rei de Judá, que os enviou para consultar o Senhor: ‘Assim diz o Senhor, o Deus de Israel, acerca das palavras que você ouviu:
27 ನೀನು ಈ ಸ್ಥಳಕ್ಕೆ ವಿರೋಧ ವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ಆತನ ಮುಂದೆ ನಿನ್ನನ್ನು ತಗ್ಗಿಸಿಕೊಂಡಿ. ನಿನ್ನನ್ನು ನನ್ನ ಮುಂದೆ ತಗ್ಗಿಸಿ ಕೊಂಡು ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದರಿಂದ ನಾನು ಅವನ ಮೊರೆಯನ್ನು ಕೇಳಿದೆನೆಂದು ಕರ್ತನು ಹೇಳುತ್ತಾನೆ.
27 Já que o seu coração se abriu e você se humilhou diante de Deus quando ouviu o que ele falou contra este lugar e contra os seus habitantes, e você se humilhou diante de mim, rasgou as suas vestes e chorou na minha presença, eu o ouvi, declara o Senhor.
28 ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ಸಮಾಧಾನದಿಂದ ನಿನ್ನ ಸಮಾ ಧಿಗೆ ಸೇರಿಸಲ್ಪಡುವಿ. ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ನೋಡುವದಿಲ್ಲ ಎಂದು ಕರ್ತನು ಹೇಳುತ್ತಾನೆ ಎಂದು ಹೇಳಿದಳು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ಹೇಳಿದರು.
28 Portanto, eu o reunirei aos seus antepassados, e você será sepultado em paz. Seus olhos não verão a desgraça que trarei sobre este lugar e sobre seus habitantes’ ". Então eles levaram a resposta ao rei.
29 ಆಗ ಅರಸನು ಕರೇ ಕಳುಹಿಸಿ ಯೆಹೂದದ ಯೆರೂಸಲೇಮಿನ ಹಿರಿಯರೆಲ್ಲರನ್ನು ತನ್ನ ಬಳಿಯಲ್ಲಿ ಕೂಡಿಸಿದನು.
29 Então o rei convocou todas as autoridades de Judá e de Jerusalém.
30 ಆಗ ಅರಸನೂ ಯೆಹೂದದ ಸಮಸ್ತ ಮನುಷ್ಯರೂ ಯೆರೂಸಲೇಮಿನ ನಿವಾಸಿಗಳೂ ಯಾಜ ಕರೂ ಲೇವಿಯರೂ ಹಿರಿಕಿರಿಯರಾದ ಸಮಸ್ತ ಜನರೂ ಕರ್ತನ ಆಲಯಕ್ಕೆ ಹೋದರು. ಅವನು ಕರ್ತನ ಆಲಯದಲ್ಲಿ ಕಂಡುಕೊಂಡ ಒಡಂಬಡಿಕೆಯ ಪುಸ್ತಕದ ಮಾತುಗಳನ್ನೆಲ್ಲಾ ಅವರು ಕೇಳುವ ಹಾಗೆ ಓದಿದನು.
30 Depois subiu ao templo do Senhor acompanhado por todos os homens de Judá, todo o povo de Jerusalém, os sacerdotes e os levitas: todo o povo, dos mais simples aos mais importantes. Para todos o rei leu em voz alta todas as palavras do Livro da Aliança, que havia sido encontrado no templo do Senhor.
31 ಅರಸನು ತನ್ನ ಸ್ಥಳದಲ್ಲಿ ನಿಂತುಕೊಂಡು ಕರ್ತನನ್ನು ಹಿಂಬಾಲಿಸುವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನೂ ತನ್ನ ಪೂರ್ಣಹೃದಯದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳ ಹಾಗೆ ಮಾಡುವದಕ್ಕೂ ಕರ್ತನ ಮುಂದೆ ಒಡಂಬಡಿಕೆ ಮಾಡಿದನು.
31 Ele tomou o seu lugar e, na presença do Senhor, fez uma aliança, comprometendo-se a seguir o Senhor e obedecer de todo o coração e de toda a alma aos seus mandamentos, seus testemunhos e seus decretos, cumprindo as palavras da aliança escritas naquele livro.
32 ಇದಲ್ಲದೆ ಅವನು ಯೆರೂಸಲೇಮಿ ನಲ್ಲಿಯೂ ಬೆನ್ಯಾವಿಾನಿನಲ್ಲಿಯೂ ಸಿಕ್ಕಿದವರೆಲ್ಲರನ್ನು ಅದಕ್ಕೆ ಒಪ್ಪುವಂತೆ ಮಾಡಿದನು. ಹಾಗೆಯೇ ಯೆರೂ ಸಲೇಮಿನ ನಿವಾಸಿಗಳು ತಮ್ಮ ಪಿತೃಗಳ ದೇವರ ಒಡಂಬಡಿಕೆಯ ಪ್ರಕಾರ ಮಾಡಿದರು.
32 Depois fez com que todos em Jerusalém e em Benjamim se comprometessem com a aliança; os habitantes de Jerusalém passaram a cumprir a aliança de Deus, o Deus dos seus antepassados.
33 ಹೀಗೆಯೇ ಯೋಷೀಯನು ಇಸ್ರಾಯೇಲ್‌ ಮಕ್ಕಳಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದು ಹಾಕಿ ಇಸ್ರಾಯೇಲಿನಲ್ಲಿ ಉಳಿದಿರುವರೆಲ್ಲರೂ ತಮ್ಮ ದೇವರಾದ ಕರ್ತನನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವ ರಾದ ಕರ್ತನನ್ನು ಹಿಂಬಾಲಿಸುವದನ್ನು ಬಿಡದೆ ಇದ್ದರು.
33 Josias retirou todos os ídolos detestáveis de todo o território dos israelitas e obrigou todos os que estavam em Israel a servirem ao Senhor, ao seu Deus. E enquanto ele viveu, o povo não deixou de seguir o Senhor, o Deus dos seus antepassados.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Crônicas 34, comparar traduções ou montar um estudo — tudo direto pelo WhatsApp.