2 Crônicas 33

Kannada Bible (GL_KANNADA) vs BKJ

Sair da comparação
1 1 ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ಐವತ್ತೈದು ವರುಷ ಆಳಿದನು.
1 Manassés tinha doze anos de idade quando começou a reinar; e reinou cinquenta e cinco anos em Jerusalém;
2 ಆದರೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಜನಾಂಗಗಳ ಅಸಹ್ಯಗಳ ಪ್ರಕಾರವೇ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು.
2 mas fez aquilo que era mau aos olhos do SENHOR, semelhante às abominações dos pagãos, os quais o SENHOR tinha expulsado de diante dos filhos de Israel.
3 ಏನಂದರೆ, ಅವನು ತನ್ನ ತಂದೆಯಾದ ಹಿಜ್ಕೀಯನು ಕೆಡವಿಹಾಕಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಎಬ್ಬಿಸಿ ತೋಪುಗಳನ್ನು ಹಾಕಿ ಆಕಾಶದ ಸೈನ್ಯ ಕ್ಕೆಲ್ಲಾ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.
3 Porque ele voltou a edificar os lugares altos, os quais Ezequias, o seu pai, tinha destruído; e ergueu altares para os Baalins, e fez bosques, e adorou todo o exército do céu, e os serviu.
4 ಇದ ಲ್ಲದೆ--ಯೆರೂಸಲೇಮಿನಲ್ಲಿ ನನ್ನ ಹೆಸರು ಯುಗ ಯುಗಕ್ಕೂ ಇರುವದೆಂದು ಕರ್ತನು ಹೇಳಿದ ಕರ್ತನ ಆಲಯದಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.
4 E também edificou altares na casa do SENHOR, do qual o SENHOR havia dito: Em Jerusalém estará o meu nome para sempre.
5 ಕರ್ತನ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು.
5 E ele edificou altares para todo o exército do céu nos dois pátios da casa do SENHOR.
6 ಬೆನ್‌ ಹಿನ್ನೋಮ್‌ ಮಗನ ತಗ್ಗಿನಲ್ಲಿ ತನ್ನ ಮಕ್ಕಳನ್ನು ಬೆಂಕಿ ದಾಟುವಂತೆ ಮಾಡಿದನು; ಮೇಘಮಂತ್ರ ಸರ್ಪ ಮಂತ್ರಗಳನ್ನೂ ಮಾಟವನ್ನು ಮಾಡಿದನು; ಯಕ್ಷಿಣಿ ಗಾರರ ಮಂತ್ರಗಾರರ ಬಳಿಯಲ್ಲೂ ವಿಚಾರಿಸಿದನು; ಕರ್ತನಿಗೆ ಕೋಪವನ್ನು ಎಬ್ಬಿಸುವಂತೆ ಆತನ ಸಮ್ಮುಖ ದಲ್ಲಿ ಬಹಳವಾಗಿ ಕೆಟ್ಟತನವನ್ನು ಮಾಡಿದನು.
6 E ele fez com que os seus filhos passassem pelo fogo no vale do filho de Hinom; também praticou augúrios, e usou encantamentos, e usou feitiçaria, e lidou com um espírito familiar, e com feiticeiros; ele operou muito mal aos olhos do SENHOR, para provocá-lo à ira.
7 ದೇವರು--ಈ ಆಲಯದಲ್ಲಿಯೂ ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆದುಕೊಂಡ ಯೆರೂ ಸಲೇಮಿನಲ್ಲಿಯೂ ನಾನು ನನ್ನ ಹೆಸರನ್ನು ಯುಗ ಯುಗಕ್ಕೂ ಇರಿಸುವೆನೆಂದೂ ಮೋಶೆಯಿಂದ
7 E ele colocou uma imagem esculpida, o ídolo que ele havia feito, na casa de Deus, do qual Deus havia dito para Davi e para Salomão, o seu filho: Nesta casa e em Jerusalém, a qual eu tenho escolhido diante de todas as tribos de Israel, colocarei o meu nome para sempre;
8 ಬರೆ ಯಿಸಿದ ಸಮಸ್ತ ನ್ಯಾಯಪ್ರಮಾಣವೂ ಆಜ್ಞೆಗಳೂ ಕಟ್ಟಳೆಗಳೂ ಇವುಗಳ ಪ್ರಕಾರ ನಾನು ಅವರಿಗೆ ಆಜ್ಞಾಪಿಸಿದ್ದೆನ್ನೆಲ್ಲವನ್ನು ಅವರು ಮಾಡಲು ಜಾಗ್ರತೆ ಯಾಗಿದ್ದರೆ ನಾನು ನಿಮ್ಮ ಪಿತೃಗಳಿಗೋಸ್ಕರ ನೇಮಿಸಿದ ದೇಶದೊಳಗಿಂದ ಇಸ್ರಾಯೇಲಿನ ಪಾದವನ್ನು ನಾನು ಇನ್ನು ಮೇಲೆ ಚಲಿಸ ಮಾಡುವದಿಲ್ಲವೆಂದೂ ಆತನು ದಾವೀದನಿಗೂ ಅವನ ಮಗನಾದ ಸೊಲೊಮೋನ ನಿಗೂ ಹೇಳಿದ ದೇವರ ಆಲಯದಲ್ಲಿ ಅವನು ಕೆತ್ತಿದ ವಿಗ್ರಹವನ್ನು ಮಾಡಿಸಿ ಇರಿಸಿದನು.
8 tampouco voltarei a remover o meu pé de Israel, da terra que indiquei aos vossos pais; para que eles atentem a tudo o que eu lhes tenho ordenado, de acordo com toda a lei e com os estatutos e as ordenanças pelas mãos de Moisés.
9 ಹೀಗೆಯೇ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ನಾಶ ಮಾಡಿದ ಜನಾಂಗಗಳಿಗಿಂತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಕೆಟ್ಟದ್ದನ್ನು ಮಾಡು ವದಕ್ಕೆ ತಪ್ಪಿಹೋಗುವಂತೆ ಮನಸ್ಸೆಯು ಮಾಡಿದನು.
9 Assim, Manassés fez com que Judá e os habitantes de Jerusalém errassem, e fizessem pior do que os pagãos, aos quais o SENHOR tinha destruído diante dos filhos de Israel.
10 ಕರ್ತನು ಮನಸ್ಸೆಯೊಂದಿಗೂ ಅವನ ಜನ ರೊಂದಿಗೂ ಮಾತನಾಡಿದನು; ಆದರೆ ಅವರು ಆಲೈ ಸದೆ ಹೋದರು.
10 E o SENHOR falou a Manassés, e ao seu povo; mas eles não quiseram ouvir.
11 ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.
11 Porquanto o SENHOR trouxe sobre eles os capitães do exército do rei da Assíria, os quais tiraram Manassés do meio dos espinhos, e o ataram com grilhões, e o carregaram para Babilônia.
12 ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು.
12 E, quando ele esteve em aflição, buscou ao SENHOR seu Deus, e se humilhou grandemente diante do Deus dos seus pais,
13 ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
13 e orou a ele; Deus aceitou-lhe a petição, e ouviu a sua súplica, e o trouxe de volta a Jerusalém, ao seu reino. Então, Manassés soube que o SENHOR era Deus.
14 ಇದಾದ ತರುವಾಯ ಮನಸ್ಸೆಯು ದಾವೀದನ ಪಟ್ಟಣದ ಹೊರಭಾಗದಲ್ಲಿ ಗೀಹೋನಿನ ಪಶ್ಚಿಮ ಕಡೆಯ ತಗ್ಗಿನಲ್ಲಿ ವಿಾನುಬಾಗಲ ದ್ವಾರದ ವರೆಗೆ ಓಫೆಲ್‌ ಸುತ್ತಲೂ ಗೋಡೆಯನ್ನು ಕಟ್ಟಿಸಿ ಅದನ್ನು ಬಹಳ ಎತ್ತರ ಮಾಡಿ ಯೆಹೂದದ ಸಮಸ್ತ ಕೋಟೆ ಯುಳ್ಳ ಪಟ್ಟಣಗಳಲ್ಲಿ ಸೈನ್ಯದ ಅಧಿಪತಿಗಳನ್ನು ಇಟ್ಟನು.
14 Ora, depois disso ele edificou um muro na parte externa da cidade de Davi, sobre o lado oeste de Giom, no vale, a saber, na entrada do portão do peixe, e que cercava Ofel, e se erguia a grande altura, e colocou capitães de guerra em todas as cidades fortificadas de Judá.
15 ಇದಲ್ಲದೆ ಅವನು ಅನ್ಯ ದೇವರುಗಳನ್ನೂ ಕರ್ತನ ಆಲಯದಲ್ಲಿರುವ ವಿಗ್ರಹವನ್ನೂ ಕರ್ತನ ಆಲಯದ ಪರ್ವತದಲ್ಲಿಯೂ ಯೆರೂಸಲೇಮಿನ ಲ್ಲಿಯೂ ತಾನು ಕಟ್ಟಿಸಿದ ಸಮಸ್ತ ಬಲಿಪೀಠಗಳನ್ನೂ ತೆಗೆದುಹಾಕಿ ಅವುಗಳನ್ನು ಪಟ್ಟಣದ ಹೊರಗೆ ಬಿಸಾಡಿ ಬಿಟ್ಟನು.
15 E ele removeu os deuses estranhos, e o ídolo da casa do SENHOR, e todos os altares que havia edificado no monte da casa do SENHOR, e em Jerusalém, e os lançou fora da cidade.
16 ಅವನು ಕರ್ತನ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ಸಮಾಧಾನದ ಬಲಿಗಳನ್ನೂ ಸ್ತೋತ್ರದ ಬಲಿಗಳನ್ನೂ ಅರ್ಪಿಸಿ ಇಸ್ರಾಯೇಲಿನ ದೇವರಾದ ಕರ್ತನನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿ ದನು.
16 E ele reparou o altar do SENHOR, e sobre ele sacrificou ofertas de paz e ofertas de gratidão, e ordenou a Judá que servisse o SENHOR Deus de Israel.
17 ಆದಾಗ್ಯೂ ಜನರು ಇನ್ನೂ ಉನ್ನತ ಸ್ಥಳ ಗಳಲ್ಲಿಯೇ ತಮ್ಮ ದೇವರಾದ ಕರ್ತನಿಗೆ ಮಾತ್ರ ಬಲಿಯನ್ನರ್ಪಿಸುತ್ತಾ ಇದ್ದರು.
17 Todavia, o povo ainda sacrificava nos lugares altos, porém somente ao SENHOR seu Deus.
18 ಮನಸ್ಸೆಯ ಇತರ ಕ್ರಿಯೆಗಳೂ ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ ಇಸ್ರಾಯೇಲಿನ ದೇವರಾದ ಕರ್ತನ ನಾಮದಲ್ಲಿ ಅವನ ಸಂಗಡ ಮಾತನಾಡಿದ ಪ್ರವಾದಿಗಳ ಮಾತುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
18 Ora, o restante dos atos de Manassés, e a sua oração ao seu Deus, e as palavras dos videntes que falaram com ele em nome do SENHOR, Deus de Israel, eis que estão escritos no livro dos reis de Israel.
19 ಇದಲ್ಲದೆ ಅವನ ಪ್ರಾರ್ಥನೆಯೂ ಅವನು ದೇವ ರಿಗೆ ಭಿನ್ನವಿಸಿದ್ದೂ ಅವನ ಸಮಸ್ತ ಪಾಪವೂ ಅವನ ಅಪರಾಧವೂ ಅವನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಉನ್ನತ ಸ್ಥಳಗಳಲ್ಲಿ ಕಟ್ಟಿಸಿದ ತೋಪುಗಳೂ ಕೆತ್ತಿಸಿದ ವಿಗ್ರಹಗಳೂ ಸ್ಥಾಪಿಸಿದ ಸ್ಥಳಗಳೂ ಇಗೋ, ಪ್ರವಾದಿ ಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿವೆ.
19 Também a sua oração, e como Deus foi clamado por ele, e todos os seus pecados, e a sua transgressão, e os lugares nos quais ele edificou lugares altos, e ergueu bosques e imagens esculpidas, antes de ser humilhado; eis que estão escritos entre os dizeres dos videntes.
20 ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ಅವನ ಸ್ವಂತ ಮನೆಯಲ್ಲಿ ಹೂಣಿಟ್ಟರು; ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಆಳಿದನು.
20 Assim, Manassés dormiu com os seus pais, e o sepultaram na sua própria casa; e Amom, o seu filho, reinou em seu lugar.
21 ಆಮೋನನು ಆಳಲು ಆರಂಭಿಸಿದಾಗ ಇಪ್ಪತ್ತೆ ರಡು ವರುಷದವನಾಗಿದ್ದು, ಯೆರೂಸಲೇಮಿನಲ್ಲಿ ಎರಡು ವರುಷ ಆಳಿದನು.
21 Amom tinha vinte e dois anos de idade quando começou a reinar; e reinou dois anos em Jerusalém.
22 ಆದರೆ ಅವನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆಮೋನನು ತನ್ನ ತಂದೆಯಾದ ಮನಸ್ಸೆಯು ಮಾಡಿದ ಕೆತ್ತಿದ ವಿಗ್ರಹಗಳಿಗೆ ಬಲಿಗಳನ್ನರ್ಪಿಸಿ ಅವುಗಳನ್ನು ಸೇವಿಸಿ ದನು.
22 Porém, ele fez aquilo que era mau aos olhos do SENHOR, como fez Manassés, o seu pai; porque Amom sacrificou a todas as imagens esculpidas que Manassés, o seu pai, havia feito, e as serviu;
23 ತನ್ನ ತಂದೆಯಾದ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ ಆಮೋನನು ಕರ್ತನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ; ಆದರೆ ಆಮೋನನು ಅಧಿಕ ವಾಗಿ ಅಪರಾಧ ಮಾಡಿದನು.
23 e não se humilhou diante do SENHOR, como Manassés, o seu pai, havia se humilhado; porém Amom transgrediu mais e mais.
24 ಆದದರಿಂದ ಅವನ ಸೇವಕರು ಅವನ ಮೇಲೆ ಒಳಸಂಚು ಮಾಡಿ ಅವನ ಸ್ವಂತ ಮನೆಯಲ್ಲಿ ಅವನನ್ನು ಕೊಂದುಹಾಕಿದರು.
24 E os seus servos conspiraram contra ele, e o mataram na sua própria casa.
25 ಆದರೆ ದೇಶದ ಜನರು ಅರಸನಾದ ಆಮೋನನ ಮೇಲೆ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಅವನ ಮಗನಾದ ಯೋಷೀಯನನ್ನು ಅವನಿಗೆ ಬದ ಲಾಗಿ ಅರಸನನ್ನಾಗಿ ಮಾಡಿದರು.
25 Porém, o povo da terra matou todos aqueles que haviam conspirado contra o rei Amom; e o povo da terra fez de Josias, o seu filho, rei no seu lugar.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Crônicas 33, comparar traduções ou montar um estudo — tudo direto pelo WhatsApp.