2 Crônicas 29
Kannada Bible (GL_KANNADA) vs NAA
NAA Nova Almeida Atualizada 2017
1 ಹಿಜ್ಕೀಯನು ಆಳಲಾರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಅಬೀಯಳು; ಇವಳು ಜೆಕರೀಯನ ಮಗಳಾಗಿದ್ದಳು.
1 Ezequias tinha vinte e cinco anos de idade quando começou a reinar e reinou vinte e nove anos em Jerusalém. A mãe dele se chamava Abia e era filha de Zacarias.
2 ಅವನು ತನ್ನ ಪಿತೃವಾದ ದಾವೀದನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದನು.
2 Ezequias fez o que era reto aos olhos do Senhor , segundo tudo o que Davi, seu pai, havia feito.
3 ಅವನು ತನ್ನ ಆಳ್ವಿಕೆಯ ಮೊದಲನೇ ವರುಷದ ಮೊದಲನೇ ತಿಂಗಳಲ್ಲಿ ಕರ್ತನ ಮನೆಯ ಬಾಗಲು ಗಳನ್ನು ತೆರೆದು ಅವುಗಳನ್ನು ಭದ್ರಮಾಡಿಸಿದನು.
3 No primeiro ano do seu reinado, no primeiro mês, abriu os portões da Casa do Senhor e os reparou.
4 ಇದಲ್ಲದೆ ಅವನು ಯಾಜಕರನ್ನೂ ಲೇವಿಯರನ್ನೂ ಕರೆಕಳುಹಿಸಿ ಅವರನ್ನು ಮೂಡಣ ಬೀದಿಯಲ್ಲಿ ಕೂಡಿಸಿ ಕೊಂಡು ಅವರಿಗೆ ಹೇಳಿದ್ದೇನಂದರೆ--
4 Trouxe os sacerdotes e os levitas, reuniu-os na praça leste
5 ಲೇವಿಯರೇ, ನನ್ನ ಮಾತನ್ನು ಕೇಳಿರಿ; ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನಿಮ್ಮ ಪಿತೃಗಳ ಕರ್ತನಾದ ದೇವರ ಮನೆಯನ್ನು ಪರಿಶುದ್ಧಮಾಡಿ ಅದರ ಮೈಲಿಗೆಯನ್ನು ಪರಿಶುದ್ಧ ಸ್ಥಾನದಿಂದ ತೆಗೆದುಹಾಕಿರಿ.
5 e lhes disse: — Escutem, levitas! Santifiquem agora a si mesmos e santifiquem a Casa do
6 ನಮ್ಮ ಪಿತೃಗಳು ಅಪರಾಧಮಾಡಿ ನಮ್ಮ ದೇವರಾದ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ ಆತನನ್ನು ಬಿಟ್ಟು ಕರ್ತನ ನಿವಾಸ ಸ್ಥಾನದ ಕಡೆಯಿಂದ ತಮ್ಮ ಮುಖಗಳನ್ನು ತಿರುಗಿಸಿ ತಮ್ಮ ಬೆನ್ನುಗಳನ್ನು ತೋರಿಸಿದ್ದಾರೆ.
6 Porque nossos pais foram infiéis e fizeram o que era mau aos olhos do Senhor , nosso Deus, e o abandonaram. Desviaram o seu rosto do tabernáculo do Senhor e lhe viraram as costas.
7 ಇದಲ್ಲದೆ ಅವರು ದ್ವಾರಾಂಗಳದ ಬಾಗಲುಗಳನ್ನು ಮುಚ್ಚಿ ದೀಪಗಳನ್ನು ಆರಿಸಿ ಇಸ್ರಾಯೇಲಿನ ದೇವರಿಗೆ ಪರಿಶುದ್ಧ ಸ್ಥಾನದಲ್ಲಿ ಧೂಪವನ್ನು ಸುಡದೆ, ದಹನಬಲಿಗಳನ್ನು ಅರ್ಪಿ ಸದೆ ಹೋದರು.
7 Também fecharam os portões do pórtico, apagaram as lâmpadas, não queimaram incenso, nem ofereceram holocaustos no santuário ao Deus de Israel.
8 ಆದದರಿಂದ ಯೆಹೂದದ ಮೇಲೆ ಯೂ ಮತ್ತು ಯೆರೂಸಲೇಮಿನವರ ಮೇಲೆಯೂ ಕರ್ತನ ರೌದ್ರವಾಯಿತು; ನೀವು ನಿಮ್ಮ ಕಣ್ಣುಗಳಿಂದ ನೋಡುವ ಹಾಗೆ ಆತನು ಅವರನ್ನು ಕಳವಳಕ್ಕೂ ವಿಸ್ಮಯಕ್ಕೂ ಅಪಹಾಸ್ಯಕ್ಕೂ ಒಪ್ಪಿಸಿಕೊಟ್ಟನು.
8 Por isso a ira do Senhor veio sobre Judá e Jerusalém, e ele os transformou em objeto de espanto, de horror e de vaias, como vocês estão vendo com os seus próprios olhos.
9 ಅದ ಕ್ಕೋಸ್ಕರ ಇಗೋ, ನಮ್ಮ ಪಿತೃಗಳು ಕತ್ತಿಯಿಂದ ಬಿದ್ದಿ ದ್ದಾರೆ; ನಮ್ಮ ಕುಮಾರರೂ ಕುಮಾರ್ತೆಯರೂ ಹೆಂಡ ತಿಯರೂ ಸೆರೆಯಲ್ಲಿದ್ದಾರೆ.
9 Porque eis que os nossos pais caíram à espada, e, por isso, os nossos filhos, as nossas filhas e as nossas mulheres foram para o cativeiro.
10 ಈಗ ಇಸ್ರಾಯೇಲಿನ ದೇವರಾದ ಕರ್ತನ ಉಗ್ರಕೋಪವು ನಮ್ಮನ್ನು ಬಿಟ್ಟು ಹೋಗುವ ಹಾಗೆ ನಾನು ಆತನ ಸಂಗಡ ಒಡಂಬಡಿ ಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.
10 — Agora estou resolvido a fazer uma aliança com o Senhor , Deus de Israel, para que o furor da sua ira se afaste de nós.
11 ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯಾಕಂದರೆ ತನ್ನ ಸಮ್ಮುಖದಲ್ಲಿ ನಿಲ್ಲುವದಕ್ಕೂ ತನ್ನನ್ನು ಸೇವಿಸುವದಕ್ಕೂ ಸೇವಕರಾಗಿರುವದಕ್ಕೂ ಧೂಪಸುಡುವದಕ್ಕೂ ಕರ್ತನು ನಿಮ್ಮನ್ನು ಆದುಕೊಂಡಿದ್ದಾನೆ ಅಂದನು.
11 Meus filhos, não sejam negligentes, pois o Senhor os escolheu para estarem diante dele para o servirem, para serem os seus ministros e queimarem incenso.
12 ಆಗ ಲೇವಿಯರಾದ ಕೆಹಾತ್ಯರ ಮಕ್ಕಳಲ್ಲಿ ಅಮಾಸೈ ಯನ ಮಗನಾದ ಮಹತನೂ ಅಜರ್ಯನ ಮಗನಾದ ಯೋವೇಲೂ ಮೆರಾರೀಯ ಮಕ್ಕಳಲ್ಲಿ ಅಬ್ದೀಯ ಮಗ ನಾದ ಕೀಷನೂ ಯಹಲ್ಲೇಲನ ಮಗನಾದ ಅಜ ರ್ಯನೂ ಗೆರ್ಷೋನ್ಯರಲ್ಲಿ ಜಿಮ್ಮನ ಮಗನಾದ ಯೋವಾಹನೂ ಯೋವಾಹನ ಮಗನಾದ ಏದೆನೂ
12 Então se levantaram os seguintes levitas: Maate, filho de Amasai, e Joel, filho de Azarias, dos filhos dos coatitas; Quis, filho de Abdi, e Azarias, filho de Jealelel, dos filhos de Merari; Joá, filho de Zima, e Éden, filho de Joá, dos filhos de Gérson;
13 ಎಲೀಚಾಫಾನನ ಮಕ್ಕಳಲ್ಲಿ ಶಿಮ್ರಿಯೂ ಯೆಗೀ ಯೇಲನೂ ಆಸಾಫನ ಮಕ್ಕಳಲ್ಲಿ
13 Sinri e Jeuel, dos filhos de Elisafã; Zacarias e Matanias, dos filhos de Asafe;
14 ಜೆಕರ್ಯನೂ ಮತ್ತನ್ಯನೂ ಹೆಮಾನನ ಮಕ್ಕಳಲ್ಲಿ ಯೆಹೀಯೇಲನೂ ಶಿಮ್ಮನೂ ಯೆದುತೂನನ ಮಕ್ಕಳಲ್ಲಿ ಶೆಮಾಯನೂ ಉಜ್ಜೀಯೇಲನೂ ಎದ್ದರು.
14 Jeuel e Simei, dos filhos de Hemã; Semaías e Uziel, dos filhos de Jedutum.
15 ಇವರು ತಮ್ಮ ಸಹೋ ದರರನ್ನು ಕೂಡಿಸಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ವಾಕ್ಯದಿಂದ ಅರಸನ ಆಜ್ಞೆಯ ಪ್ರಕಾರ ಕರ್ತನ ಆಲಯವನ್ನು ಶುಚಿಮಾಡಲು ಬಂದರು.
15 Congregaram os seus irmãos, santificaram-se e vieram, cumprindo a ordem do rei, segundo as palavras do Senhor , para purificar a Casa do Senhor .
16 ಯಾಜ ಕರು ಕರ್ತನ ಆಲಯವನ್ನು ಶುಚಿಮಾಡಲು ಅದರ ಒಳಭಾಗದಲ್ಲಿ ಪ್ರವೇಶಿಸಿ ಕರ್ತನ ಮಂದಿರದಲ್ಲಿ ಕಂಡ ಮೈಲಿಗೆಯನ್ನು ಕರ್ತನ ಮನೆಯ ಅಂಗಳದೊಳಗೆ ತಂದರು; ಆಗ ಲೇವಿಯರು ಅದನ್ನು ತೆಗೆದುಕೊಂಡು ಕಿದ್ರೋನು ಹಳ್ಳದಲ್ಲಿ ಹಾಕಲು ಹೊರಗೆ ಒಯ್ದರು.
16 Os sacerdotes entraram na Casa do Senhor , para a purificar, e tiraram para fora, ao pátio da Casa do Senhor , todas as coisas impuras que encontraram no templo do Senhor . E os levitas pegaram essas coisas e as levaram para fora, ao vale do Cedrom.
17 ಅವರು ಮೊದಲನೇ ತಿಂಗಳಿನ ಮೊದಲನೇ ದಿವಸ ದಲ್ಲಿ ಪರಿಶುದ್ಧ ಮಾಡಲು ಆರಂಭಿಸಿ ಆ ತಿಂಗಳ ಎಂಟನೇ ದಿವಸದಲ್ಲಿ ಕರ್ತನ ದ್ವಾರಾಂಗಳದ ವರೆಗೂ ಬಂದರು. ಹೀಗೆಯೇ ಎಂಟು ದಿವಸಗಳಲ್ಲಿ ಕರ್ತನ ಮನೆಯನ್ನು ಪರಿಶುದ್ಧಮಾಡಿ ಅದನ್ನು ಮೊದಲನೇ ತಿಂಗಳಿನ ಹದಿನಾರನೇ ದಿವಸದಲ್ಲಿ ತೀರಿಸಿದರು.
17 Começaram a santificar no primeiro dia do primeiro mês e no oitavo dia do mês chegaram ao pórtico do Senhor . Em oito dias santificaram a Casa do Senhor e no décimo sexto dia do mês terminaram.
18 ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಕರ್ತನ ಸಮಸ್ತ ಆಲಯವನ್ನೂ ದಹನಬಲಿಯ ಯಜ್ಞವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಸಮ್ಮುಖದ ರೊಟ್ಟಿಯ ಮೇಜನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಶುಚಿಮಾಡಿದೆವು.
18 Então foram falar com o rei Ezequias no palácio e disseram: — Já purificamos toda a Casa do
19 ಇದಲ್ಲದೆ ಅರಸನಾದ ಆಹಾಜನು ಆಳಿದಾಗ ತನ್ನ ಅಕೃತ್ಯದಿಂದ ಬಿಸಾಡಿದ ಎಲ್ಲಾ ಸಾಮಾನುಗಳನ್ನು ಸಿದ್ಧ ಮಾಡಿ ಪರಿಶುದ್ಧಮಾಡಿದೆವು; ಇಗೋ, ಅವು ಕರ್ತನ ಬಲಿಪೀಠದ ಮುಂದಿರುತ್ತವೆ ಎಂದು ಹೇಳಿದರು.
19 Também todos os objetos que o rei Acaz, em sua infidelidade, jogou fora durante o seu reinado, nós já preparamos e santificamos; e eis que estão diante do altar do Senhor .
20 ಆಗ ಅರಸನಾದ ಹಿಜ್ಕೀಯನು ಉದಯದಲ್ಲಿ ಎದ್ದು ಪಟ್ಟಣದ ಪ್ರಧಾನರನ್ನು ಕೂಡಿಸಿ ಕರ್ತನ ಆಲಯಕ್ಕೆ ಹೋದನು.
20 Então o rei Ezequias se levantou de madrugada, reuniu os chefes da cidade e subiu à Casa do Senhor .
21 ಅವರು ರಾಜ್ಯಕ್ಕೋಸ್ಕರವೂ ಪರಿಶುದ್ಧ ಸ್ಥಾನಕ್ಕೋಸ್ಕರವೂ ಯೆಹೂದಕ್ಕೋಸ್ಕರವೂ ಪಾಪದ ಬಲಿಯಾಗಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಮೇಕೆ ಗಳನ್ನೂ ತಂದರು. ಆಗ ಕರ್ತನ ಬಲಿಪೀಠದ ಮೇಲೆ ಅವುಗಳನ್ನು ಅರ್ಪಿಸಲು ಆರೋನನ ಮಕ್ಕಳಾದ ಯಾಜಕರಿಗೆ ಹೇಳಿದನು.
21 Mandou trazer sete novilhos, sete carneiros, sete cordeiros e sete bodes, como oferta pelo pecado a favor do reino, do santuário e de Judá; e ordenou aos filhos de Arão, os sacerdotes, que os oferecessem sobre o altar do Senhor .
22 ಹೀಗೆ ಅವರು ಹೋರಿ ಗಳನ್ನು ವಧಿಸಿದಾಗ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಚಿಮಿಕಿಸಿದರು; ಹಾಗೆಯೇ ಅವರು ಟಗರುಗಳನ್ನು ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು; ಅವರು ಕುರಿಮರಿ ಗಳನ್ನೂ ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು.
22 Mortos os novilhos, os sacerdotes pegaram o sangue e o aspergiram sobre o altar; mataram os carneiros e aspergiram o sangue sobre o altar; também mataram os cordeiros e aspergiram o sangue sobre o altar.
23 ಅರಸನ ಮುಂದೆಯೂ ಸಭೆಯ ಮುಂದೆಯೂ ಪಾಪದ ಬಲಿಯಾದ ಮೇಕೆ ಹೋತ ಗಳನ್ನು ಹತ್ತಿರ ತಕ್ಕೊಂಡು ಬಂದು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು.
23 Para oferta pelo pecado, trouxeram os bodes diante do rei e da congregação, e estes puseram as mãos sobre eles.
24 ಆಗ ಸಮಸ್ತ ಇಸ್ರಾಯೇ ಲಿಗೋಸ್ಕರ ಪ್ರಾಯಶ್ಚಿತ್ತವಾಗಿ ಯಾಜಕರು ಅವುಗಳನ್ನು ವಧಿಸಿ ಬಲಿಪೀಠದ ಮೇಲೆ ಅವುಗಳ ರಕ್ತದಿಂದ ಪಾಪ ನಿವಾರಣೆ ಮಾಡಿದರು. ದಹನಬಲಿಯೂ ಪಾಪದ ಬಲಿಯೂ ಸಮಸ್ತ ಇಸ್ರಾಯೇಲಿಗೋಸ್ಕರ ಆಗ ಬೇಕೆಂದು ಅರಸನು ಆಜ್ಞಾಪಿಸಿದನು,
24 Os sacerdotes os mataram e, com o sangue, fizeram uma oferta pelo pecado, ao pé do altar, para expiação de todo o Israel, porque o rei havia ordenado que se fizesse aquele holocausto e oferta pelo pecado, por todo o Israel.
25 ಇದಲ್ಲದೆ ದಾವೀದನೂ ಅರಸನ ದರ್ಶಿಯಾದ ಗಾದನೂ ಪ್ರವಾ ದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ ತಾಳ ವೀಣೆ ಕಿನ್ನರಿಗಳನ್ನು ಹಿಡಿದವರಾಗಿ ಕರ್ತನ ಆಲಯದಲ್ಲಿ ಲೇವಿಯರನ್ನು ನಿಲ್ಲಿಸಿದನು. ಕರ್ತನ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹಾಗೆ ಇತ್ತು.
25 Também pôs os levitas na Casa do Senhor com címbalos, liras e harpas, segundo o mandado de Davi e de Gade, o vidente do rei, e do profeta Natã. Porque este mandado veio do Senhor , por meio de seus profetas.
26 ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರುವಾಗ
26 Os levitas estavam em pé com os instrumentos musicais de Davi, e os sacerdotes tinham as trombetas.
27 ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿ ಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗ ಳಿಂದಲೂ ಕರ್ತನ ಹಾಡು ಆರಂಭವಾಯಿತು.
27 Ezequias ordenou que oferecessem o holocausto sobre o altar. No momento em que começou o holocausto, começou também o cântico ao Senhor com as trombetas, ao som dos instrumentos musicais de Davi, rei de Israel.
28 ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ಪರ್ಯಂತರ ಹಾಡುಗಾರರು ಹಾಡಿದರು, ತುತೂರಿ ಊದುವವರು ಊದಿದರು.
28 Toda a congregação se prostrou, quando se entoava o cântico, e as trombetas soavam; tudo isto até findar-se o holocausto.
29 ಅವರು ಅರ್ಪಿಸುವದು ತೀರಿದಾಗ ಅರಸನೂ ಅವನ ಸಂಗಡ ಇದ್ದವರೆಲ್ಲರೂ ಬೊಗ್ಗಿ ಆರಾಧಿಸಿ ದರು.
29 Depois que eles terminaram de oferecer o sacrifício, o rei e todos os que estavam com ele se prostraram e adoraram.
30 ಇದಲ್ಲದೆ ಅರಸನಾದ ಹಿಜ್ಕೀಯನೂ ಪ್ರಧಾ ನರೂ ದಾವೀದನ ಮತ್ತು ಪ್ರವಾದಿಯಾದ ಆಸಾಫನ ಮಾತುಗಳಿಂದ ಕರ್ತನನ್ನು ಸ್ತುತಿಸಬೇಕೆಂದು ಲೇವಿ ಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಬೊಗ್ಗಿಕೊಂಡು ಆರಾಧಿಸಿದರು.
30 Então o rei Ezequias e os chefes ordenaram aos levitas que louvassem o Senhor com as palavras de Davi e de Asafe, o vidente. Eles o fizeram com alegria, e se inclinaram, e adoraram.
31 ಹಿಜ್ಕೀಯನು ಅವರಿಗೆ ಉತ್ತರಕೊಟ್ಟು--ಈಗ ನೀವು ನಿಮ್ಮನ್ನು ಕರ್ತನಿಗೆ ಪ್ರತಿಷ್ಠೆಮಾಡಿದ್ದ ರಿಂದ ಸವಿಾಪಕ್ಕೆ ಬಂದು ಬಲಿಗಳನ್ನೂ ಸ್ತೋತ್ರ ಅರ್ಪಣೆಗಳನ್ನೂ ಕರ್ತನ ಆಲಯಕ್ಕೆ ತಕ್ಕೊಂಡು ಬನ್ನಿರಿ ಅಂದನು. ಆಗ ಕೂಟದವರು ಬಲಿಗಳನ್ನೂ ಸ್ತೋತ್ರದ ಅರ್ಪಣೆಗಳನ್ನೂ ಉಚಿತಾರ್ಥ ವಾಗಿ ಕೊಡಲು ಮನಸ್ಸುಳ್ಳವರು ದಹನಬಲಿಗಳನ್ನೂ ತಂದರು.
31 Ezequias tomou a palavra e disse: — Agora vocês se consagraram ao A congregação trouxe sacrifícios e ofertas de ação de graças, e todos os que estavam de coração disposto trouxeram holocaustos.
32 ಸಭೆಯು ತಂದ ದಹನ ಬಲಿಗಳ ಲೆಕ್ಕ ವೇನಂದರೆ: ಎಪ್ಪತ್ತು ಹೋರಿಗಳು, ನೂರು ಟಗರು ಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಕರ್ತನಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು.
32 O número dos holocaustos que a congregação trouxe foi de setenta bois, cem carneiros e duzentos cordeiros; tudo isto em holocausto para o Senhor .
33 ಪ್ರತಿಷ್ಠೆ ಮಾಡ ಲ್ಪಟ್ಟವುಗಳು ಆರುನೂರು ಹೋರಿಗಳೂ ಮೂರು ಸಾವಿರ ಕುರಿಗಳೂ ಇದ್ದವು.
33 Também foram consagrados seiscentos bois e três mil ovelhas.
34 ಯಾಜಕರು ಸ್ವಲ್ಪ ಜನರಾಗಿದ್ದು ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದದ್ದರಿಂದ ಕೆಲಸವು ತೀರುವ ವರೆಗೂ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವ ವರೆಗೂ ಲೇವಿ ಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಯಾಕಂದರೆ ತಮ್ಮನ್ನು ಪರಿಶುದ್ಧಮಾಡಿ ಕೊಳ್ಳಲು ಯಾಜಕರಿಗಿಂತ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು.
34 Os sacerdotes, porém, eram muito poucos e não conseguiam tirar a pele de todos os holocaustos. Por isso os seus irmãos, os levitas, os ajudaram, até findar-se a obra e até que os outros sacerdotes se santificaram. Porque os levitas foram mais retos de coração, para se santificarem, do que os sacerdotes.
35 ಇದಲ್ಲದೆ ದಹನಬಲಿ ಗಳೂ ಸಮಾಧಾನದ ಬಲಿಗಳ ಕೊಬ್ಬೂ ದಹನ ಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳ ವಾಗಿದ್ದವು. ಹೀಗೆಯೇ ಕರ್ತನ ಆಲಯದ ಸೇವೆಯು ಸಿದ್ಧವಾಯಿತು.
35 Além dos holocaustos em abundância, houve também a gordura das ofertas pacíficas e as libações para os holocaustos. Assim se restabeleceu o ministério da Casa do
36 ಆಗ ದೇವರು ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ ಜನರೆಲ್ಲರೂ ಸಂತೋಷಪಟ್ಟರು; ಯಾಕಂದರೆ ಈ ಕಾರ್ಯವು ಅಕಸ್ಮಾತ್ತಾಗಿ ಆಯಿತು.
36 Ezequias e todo o povo se alegraram com o que Deus tinha feito pelo povo, porque esta obra foi feita em pouco tempo.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 2 Crônicas 29, comparar traduções ou montar um estudo — tudo direto pelo WhatsApp.