2 Crônicas 28

Kannada Bible (GL_KANNADA) vs NVT

Sair da comparação
NVT Nova Versão Transformadora
1 ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನು ತನ್ನ ಪಿತೃವಾದ ದಾವೀದನ ಹಾಗೆ ಕರ್ತನ ದೃಷ್ಟಿ ಯಲ್ಲಿ ಸರಿಯಾದದ್ದನ್ನು ಮಾಡಿದವನಲ್ಲ.
1 Acaz tinha 20 anos quando começou a reinar, e reinou em Jerusalém por dezesseis anos. Ao contrário de seu antepassado Davi, não fez o que era certo aos olhos do S enhor .
2 ಅವನು ಇಸ್ರಾಯೇಲಿನ ಅರಸುಗಳ ಮಾರ್ಗಗಳಲ್ಲಿ ನಡೆದು ಬಾಳನಿಗೋಸ್ಕರ ಎರಕ ಹೊಯಿದ ವಿಗ್ರಹಗಳನ್ನು ಮಾಡಿಸಿದನು.
2 Em vez disso, seguiu o exemplo dos reis de Israel. Fez ídolos de metal para adorar Baal,
3 ಇದಲ್ಲದೆ ಅವನು ಬೆನ್‌ಹಿನ್ನೋಮ ಮಗನ ತಗ್ಗಿನಲ್ಲಿ ಧೂಪವನ್ನರ್ಪಿಸಿ ಕರ್ತನು ಇಸ್ರಾ ಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯರ ಅಸಹ್ಯಗಳ ಪ್ರಕಾರ ಬೆಂಕಿಯಲ್ಲಿ ತನ್ನ ಮಕ್ಕಳನ್ನು ಸುಟ್ಟನು.
3 queimou incenso no vale de Ben-Hinom e chegou a sacrificar os próprios filhos no fogo. Desse modo, seguiu as práticas detestáveis das nações que o S enhor havia expulsado da terra diante dos israelitas.
4 ಹಾಗೆಯೇ ಅವನು ಬೆಟ್ಟಗಳಲ್ಲಿಯೂ ಮೇಡುಗಳ ಮೇಲೆಯೂ ಎಲ್ಲಾ ಹಸುರು ಗಿಡಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಅರ್ಪಿಸಿದನು.
4 Ofereceu sacrifícios e queimou incenso nos santuários idólatras, nos montes e debaixo de toda árvore verdejante.
5 ಆದದರಿಂದ ಅವನ ದೇವರಾದ ಕರ್ತನು ಅರಾಮಿನ ಅರಸನ ಕೈಯಲ್ಲಿ ಅವನನ್ನು ಒಪ್ಪಿಸಿದನು. ಅರಾಮ್ಯರು ಅವನನ್ನು ಹೊಡೆದು ಅವರಲ್ಲಿ ಅನೇಕರನ್ನು ಸೆರೆ ಯಾಗಿ ಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಇವನು ಇಸ್ರಾಯೇಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪ ಟ್ಟದ್ದರಿಂದ ಅವನು ಇವನನ್ನು ಹೊಡೆದು ದೊಡ್ಡ ಸಂಹಾರ ಮಾಡಿದನು.
5 Por isso, o S enhor , seu Deus, entregou Acaz nas mãos do rei da Síria, que o derrotou e levou muitos de seu povo para o exílio em Damasco. Também o entregou nas mãos do rei de Israel, que derrotou Acaz e matou muitos de seus soldados.
6 ಅವರು ತಮ್ಮ ಪಿತೃಗಳ ಕರ್ತನಾದ ದೇವರನ್ನು ಬಿಟ್ಟದ್ದರಿಂದ ರೆಮಲ್ಯನ ಮಗ ನಾದ ಪೆಕಹನು ಒಂದೇ ದಿವಸದೊಳಗೆ ಯೆಹೂ ದದವರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು; ಇವರೆಲ್ಲರು ಪರಾಕ್ರಮಶಾಲಿ ಗಳಾಗಿದ್ದರು.
6 Em um só dia, Peca, filho de Remalias, matou 120 mil soldados de Judá, todos guerreiros experientes, pois haviam abandonado o S enhor , o Deus de seus antepassados.
7 ಇದಲ್ಲದೆ ಎಫ್ರಯಾಮ್ಯನಾಗಿರುವ ಪರಾಕ್ರಮಶಾಲಿಯಾದ ಜಿಕ್ರಿಯು ಅರಸನ ಮಗ ನಾದ ಮಾಸೇಯನನ್ನೂ ಅರಮನೆಯ ನಾಯಕನಾದ ಅಜ್ರೀಕಾಮನನ್ನೂ ಅರಸನಿಗೆ ಎರಡನೆಯವನಾದ ಎಲ್ಕಾನನನ್ನೂ ಕೊಂದುಹಾಕಿದನು.
7 Então Zicri, um guerreiro de Efraim, matou Maaseias, filho do rei, Azricão, oficial encarregado do palácio do rei, e Elcana, o segundo no comando depois do rei.
8 ಇಸ್ರಾಯೇಲಿನ ಮಕ್ಕಳು ತಮ್ಮ ಸಹೋದರರಲ್ಲಿ ಎರಡು ಲಕ್ಷ ಮಂದಿ ಸ್ತ್ರೀಯರನ್ನೂ ಕುಮಾರರನ್ನೂ ಕುಮಾರ್ತೆಗಳನ್ನೂ ಸೆರೆ ಯಾಗಿ ತಕ್ಕೊಂಡುಹೋದರು. ಇದಲ್ಲದೆ ಅವರಿಂದ ಬಹು ಕೊಳ್ಳೆಯನ್ನು ತಕ್ಕೊಂಡು ಆ ಕೊಳ್ಳೆಯನ್ನು ಸಮಾರ್ಯಕ್ಕೆ ಒಯ್ದರು.
8 Os soldados de Israel capturaram duzentas mil mulheres e crianças de Judá e tomaram enormes quantidades de despojos, que levaram para Samaria.
9 ಅಲ್ಲಿ ಕರ್ತನ ಒಬ್ಬ ಪ್ರವಾದಿ ಇದ್ದನು; ಅವನ ಹೆಸರು ಓದೇದನು. ಅವನು ಸಮಾರ್ಯಕ್ಕೆ ಬಂದ ಸೈನ್ಯೆಕ್ಕೆದುರಾಗಿ ಹೊರಟುಹೋಗಿ ಅವರಿಗೆ--ಇಗೋ, ನಿಮ್ಮ ಪಿತೃಗಳ ಕರ್ತನಾದ ದೇವರು ಯೆಹೂದದ ಮೇಲೆ ಉರಿಗೊಂಡದ್ದರಿಂದ ಆತನು ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿರಲಾಗಿ, ನೀವು ಆಕಾಶಕ್ಕೆ ಮುಟ್ಟುವ ಉಗ್ರದಿಂದ ಅವರನ್ನು ಕೊಂದುಹಾಕಿದ್ದೀರಿ.
9 Odede, profeta do S enhor , estava em Samaria quando o exército de Israel voltou. Saiu ao encontro deles e lhes disse: “O S enhor , o Deus de seus antepassados, estava irado com Judá e o entregou em suas mãos, mas vocês foram longe demais e os mataram com fúria que chegou até os céus.
10 ಈಗ ನಿಮಗೆ ದಾಸರೂ ದಾಸಿಗಳೂ ಆಗಿರುವ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ಮಕ್ಕಳನ್ನೂ ನಿಮ್ಮ ವಶಮಾಡಬೇಕೆಂದು ಅಂದುಕೊಳ್ಳುತ್ತೀರಿ. ಆದರೆ ನಿಮ್ಮಲ್ಲಿಯೇ ನಿಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಗಳು ಇಲ್ಲವೋ?
10 Agora, pretendem escravizar esse povo de Judá e de Jerusalém. E quanto a seus próprios pecados contra o S enhor , seu Deus?
11 ಆದದ ರಿಂದ ನೀವು ನನ್ನ ಮಾತು ಕೇಳಿ ನಿಮ್ಮ ಸಹೋದರ ರಲ್ಲಿ ನೀವು ಸೆರೆಯಾಗಿ ತಕ್ಕೊಂಡ ಸೆರೆಯವರನ್ನು ಬಿಟ್ಟುಬಿಡಿರಿ. ಯಾಕಂದರೆ ಉರಿಯುತ್ತಿರುವ ಕರ್ತನ ಕೋಪವು ನಿಮ್ಮ ಮೇಲೆ ಇರುವದು ಅಂದನು.
11 Ouçam-me e mandem de volta esses prisioneiros que vocês capturaram, pois são seus parentes. Tenham cuidado, pois a ira ardente do S enhor se voltou contra vocês!”.
12 ಆಗ ಎಫ್ರಾಯಾಮನ ಮಕ್ಕಳ ಶ್ರೇಷ್ಠರಲ್ಲಿ ಕೆಲವರಾಗಿರುವ ಯೆಹೋಹಾನಾನನ ಮಗನಾದ ಅಜರ್ಯನೂ ಮೆಷಿ ಲ್ಲೇಮೋತನ ಮಗನಾದ ಬೆರಕ್ಯನೂ ಶಲ್ಲೂಮನ ಮಗನಾದ ಹಿಜ್ಕಿಯನೂ ಹದ್ಲೈಯನ ಮಗನಾದ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧ ವಾಗಿ ಎದ್ದು
12 Então alguns dos líderes de Israel — Azarias, filho de Joanã, Berequias, filho de Mesilemote, Jeizquias, filho de Salum, e Amasa, filho de Hadlai — confrontaram os homens que voltavam da batalha.
13 ಅವರಿಗೆ--ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ ಎಂದು ಹೇಳಿದರು; ಯಾಕಂದರೆ ನಾವು ಕರ್ತನಿಗೆ ವಿರೋಧವಾಗಿ ಅಪರಾಧ ಮಾಡಿ ದ್ದೇವೆ. ನೀವು ನಮ್ಮ ಪಾಪಗಳನ್ನೂ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾ ಧವು ದೊಡ್ಡದಾಗಿದೆ; ಇಸ್ರಾಯೇಲಿನ ಮೇಲೆ ಉಗ್ರ ಕೋಪವು ಉಂಟಾಯಿತು ಅಂದರು.
13 “Não tragam os prisioneiros para cá!”, disseram. “Se o fizerem, aumentaremos nossos pecados e nossa culpa diante do S enhor . Nossa culpa já é grande, e a ira ardente do S enhor se voltou contra Israel!”
14 ಆಗ ಸೈನ್ಯದ ವರು ಸೆರೆಯವರನ್ನೂ ಕೊಳ್ಳೆಯನ್ನೂ ಪ್ರಧಾನರ ಮುಂದೆಯೂ ಸಮಸ್ತ ಕೂಟದ ಮುಂದೆಯೂ ಬಿಟ್ಟು ಬಿಟ್ಟರು.
14 Então os guerreiros libertaram os prisioneiros e colocaram os despojos diante dos líderes do povo.
15 ಆಗ ಹೆಸರಿನಿಂದ ಹೇಳಲ್ಪಟ್ಟ ಆ ಮನು ಷ್ಯರು ಎದ್ದು ಸೆರೆಯವರನ್ನು ತೆಗೆದುಕೊಂಡು ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವದಕ್ಕೂ ಕುಡಿಯುವದಕ್ಕೂ ಕೊಟ್ಟು ಅವರ ತಲೆಗಳಿಗೆ ಎಣ್ಣೆ ಯನ್ನು ಹಚ್ಚಿ ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ಕರಕೊಂಡು ಹೋಗಿ ಸಮಾರ್ಯಕ್ಕೆ ಹಿಂತಿರುಗಿದರು.
15 Os quatro homens já mencionados por nome vieram à frente e deram roupas dos despojos aos presos que estavam nus. Vestiram-nos, deram-lhes sandálias, providenciaram comida e bebida para eles e aplicaram bálsamo sobre seus ferimentos. Puseram sobre jumentos aqueles que estavam fracos e levaram todos os prisioneiros de volta para seu povo em Jericó, a cidade das palmeiras. Depois, voltaram para Samaria.
16 ಅದೇ ಕಾಲದಲ್ಲಿ ಅರಸನಾದ ಆಹಾಜನು ಅಶ್ಶೂ ರಿನ ಅರಸುಗಳ ಬಳಿಗೆ ಕಳುಹಿಸಿ ಸಹಾಯ ಬೇಡಿ ಕೊಂಡನು.
16 Nessa época, o rei Acaz pediu ajuda ao rei da Assíria.
17 ಯಾಕಂದರೆ ಎದೋಮ್ಯರು ತಿರಿಗಿ ಬಂದು ಯೆಹೂದದವರನ್ನು ಸಂಹರಿಸಿ ಕೆಲವರನ್ನು ಸೆರೆಯಾಗಿ ತಕ್ಕೊಂಡು ಹೋದರು.
17 Os exércitos de Edom tinham invadido Judá outra vez e levado prisioneiros.
18 ಇದಲ್ಲದೆ ಫಿಲಿ ಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ ಯೆಹೂ ದದ ದಕ್ಷಿಣ ಪಾರ್ಶ್ವದಲ್ಲಿಯೂ ಹೊಕ್ಕು ಬೇತ್ಷೆಮೆ ಷನ್ನೂ ಅಯ್ಯಾಲೋನನ್ನೂ ಗೆದೇರೋತನ್ನೂ ಸೋಕೋವನ್ನೂ ಅದರ ಗ್ರಾಮಗಳನ್ನೂ ತಿಮ್ನಾ ವನ್ನೂ ಅದರ ಗ್ರಾಮಗಳನ್ನೂ ಗಿಮ್ಜೋವನ್ನೂ ಅದರ ಗ್ರಾಮಗಳನ್ನೂ ತಕ್ಕೊಂಡು ಅಲ್ಲಿ ವಾಸವಾಗಿದ್ದರು.
18 Os filisteus haviam atacado cidades nas colinas de Judá e no Neguebe. Conquistaram e ocuparam Bete-Semes, Aijalom e Gederote, além de Socó, Timna e Ginzo, com seus povoados.
19 ಯಾಕಂದರೆ ಇಸ್ರಾಯೇಲಿನ ಅರಸನಾದ ಆಹಾ ಜನ ನಿಮಿತ್ತ ಕರ್ತನು ಯೆಹೂದವನ್ನು ತಗ್ಗಿಸಿದನು. ಅವನು ಯೆಹೂದವನ್ನು ಬೆತ್ತಲೆಯಾಗಿ ಮಾಡಿ ಕರ್ತ ನಿಗೆ ವಿರೋಧವಾಗಿ ಬಹಳ ಅಪರಾಧ ಮಾಡಿದನು.
19 O S enhor humilhou Judá por causa de Acaz, rei de Judá, pois ele havia incentivado o povo a pecar e havia sido inteiramente infiel ao S enhor .
20 ಆಗ ಅಶ್ಶೂರಿನ ಅರಸನಾದ ತಿಗ್ಲತ್ಪಿಲೆಸರನು ಅವನ ಬಳಿಗೆ ಬಂದು ಅವನನ್ನು ಬಲಪಡಿಸದೆ ಬಾಧೆಪಡಿಸಿ ದನು.
20 Quando Tiglate-Pileser, rei da Assíria, chegou, atacou Acaz em vez de ajudá-lo.
21 ಆಹಾಜನು ಕರ್ತನ ಮನೆಯಿಂದಲೂ ಅರಮನೆಯಿಂದಲೂ ಪ್ರಧಾನರಿಂದಲೂ ಒಂದು ಪಾಲನ್ನು ತೆಗೆದುಕೊಂಡು ಅಶ್ಶೂರಿನ ಅರಸನಿಗೆ ಕೊಟ್ಟನು; ಆದರೆ ಅವನು ಇವನಿಗೆ ಸಹಾಯ ಮಾಡದೆ ಹೋದನು.
21 Acaz tomou objetos de valor do templo do S enhor , do palácio real e das casas de seus oficiais e os entregou ao rei da Assíria como tributo, mas de nada adiantou.
22 ಇದಲ್ಲದೆ ಅರಸನಾದ ಆಹಾಜನು ತನ್ನ ಇಕ್ಕಟ್ಟಿನ ಕಾಲದಲ್ಲಿ ಮತ್ತಷ್ಟು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದನು.
22 Mesmo nesse tempo de grande dificuldade, o rei Acaz foi ainda mais infiel ao S enhor .
23 ಏನಂದರೆ, ಅವನು ಅರಾಮಿನ ಅರಸುಗಳ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ--ಅವು ನನಗೆ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ ಎಂದು ಅಂದುಕೊಂಡು ತನ್ನನ್ನು ಹೊಡೆದ ದಮಸ್ಕ ದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಅವು ಅವನನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಬೀಳುವಂತೆ ಮಾಡಿದವು.
23 Ofereceu sacrifícios aos deuses de Damasco que o haviam derrotado, pois disse: “Visto que esses deuses ajudaram o rei da Síria, também me ajudarão se eu lhes oferecer sacrifícios”. Em vez disso, porém, eles foram a causa de sua ruína e da ruína de todo o Judá.
24 ಇದಲ್ಲದೆ ಆಹಾಜನು ದೇವರ ಮನೆಯ ಸಾಮಾನುಗಳನ್ನು ಕೂಡಿಸಿ ದೇವರ ಆಲಯದ ಸಾಮಾನುಗಳನ್ನು ತುಂಡುಗಳಾಗಿ ಕತ್ತರಿಸಿ ಕರ್ತನ ಮನೆಯ ಬಾಗಿಲುಗಳನ್ನು ಮುಚ್ಚಿಬಿಟ್ಟು ಯೆರೂ ಸಲೇಮಿನ ಸಮಸ್ತ ಮೂಲೆಗಳಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.
24 Acaz pegou os utensílios do templo de Deus e os despedaçou. Trancou as portas do templo do S enhor para que ninguém pudesse adorar ali e fez altares idólatras em cada esquina de Jerusalém.
25 ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪಸುಡುವದಕ್ಕಾಗಿ ಎತ್ತರ ಸ್ಥಳಗಳನ್ನು ಕಟ್ಟಿಸಿ ತನ್ನ ಪಿತೃಗಳ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದನು.
25 Colocou santuários idólatras em todas as cidades de Judá para queimar incenso a outros deuses. Com isso, provocou a ira do S enhor , o Deus de seus antepassados.
26 ಅವನ ಇತರ ಕ್ರಿಯೆಗಳೂ ಅವನ ಸಕಲ ಮಾರ್ಗಗಳೂ--ಮೊದಲನೆಯವುಗಳೂ ಕಡೆಯವು ಗಳೂ ಇಗೋ, ಯೆಹೂದದ ಇಸ್ರಾಯೇಲ್ಯರ ಅರಸು ಗಳ ಪುಸ್ತಕದಲ್ಲಿ ಬರೆಯಲ್ಪಟ್ಟವೆ.
26 Os demais acontecimentos do reinado de Acaz e tudo que ele fez, do início ao fim, estão registrados no Livro dos Reis de Judá e de Israel .
27 ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ಯೆರೂಸಲೇಮ್‌ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಇಸ್ರಾಯೇಲಿನ ಅರಸುಗಳ ಸಮಾಧಿಯ ಸ್ಥಳದಲ್ಲಿ ಅವನನ್ನು ತರಲಿಲ್ಲ. ಅವನ ಮಗನಾದ ಹಿಜ್ಕೀಯನು ಅವನಿಗೆ ಬದಲಾಗಿ ಆಳಿದನು.
27 Quando Acaz morreu e se reuniu a seus antepassados, foi sepultado em Jerusalém, mas não no cemitério dos reis de Judá. Seu filho Ezequias foi seu sucessor.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Crônicas 28, comparar traduções ou montar um estudo — tudo direto pelo WhatsApp.