2 Crônicas 24

Kannada Bible (GL_KANNADA) vs ARIB

Sair da comparação
ARIB Almeida Revisada Imprensa Bíblica
1 ಯೆಹೋವಾಷನು ಆಳಲು ಆರಂಭಿಸಿದಾಗ ಏಳು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ನಾಲ್ವತ್ತು ವರುಷ ಆಳಿದನು. ಅವನ ತಾಯಿ ಬೇರ್ಷೆಬ ಊರಿನವಳಾದ ಚಿಬ್ಯಳೆಂಬವಳು.
1 Tinha Joás sete anos quando começou a reinar, e reinou quarenta anos em Jerusalém. O nome de sua mãe era Zíbia, de Berseba.
2 ಯೆಹೋವಾಷನು ಯಾಜಕನಾದ ಯೆಹೋಯಾ ದನ ಸಮಸ್ತ ದಿವಸಗಳಲ್ಲಿ ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು.
2 E Joás fez o que era reto aos olhos do Senhor por todos os dias do sacerdote Jeoiada.
3 ಯೆಹೋಯಾ ದನು ಅವನಿಗೋಸ್ಕರ ಇಬ್ಬರು ಹೆಂಡತಿಯರನ್ನು ತಕ್ಕೊಂಡನು. ಅವನು ಕುಮಾರರನ್ನೂ ಕುಮಾರ್ತೆ ಯರನ್ನೂ ಪಡೆದನು.
3 E tomou Jeoiada para ele duas mulheres, das quais teve filhos e filhas.
4 ಇದರ ತರುವಾಯ ಏನಾಯಿತಂದರೆ, ಯೆಹೋ ವಾಷನು ಕರ್ತನ ಆಲಯವನ್ನು ದುರಸ್ತು ಮಾಡುವ ಮನಸ್ಸುಳ್ಳವನಾಗಿದ್ದನು.
4 Depois disso Joás resolveu renovar a casa do Senhor.
5 ಆದದರಿಂದ ಅವನು ಯಾಜ ಕರನ್ನೂ ಲೇವಿಯರನ್ನೂ ಕೂಡಿಸಿಕೊಂಡು ಅವರಿಗೆನೀವು ಯೆಹೂದ ಪಟ್ಟಣಗಳಿಗೆ ಹೊರಟು ಹೋಗಿ ವರುಷ ವರುಷಕ್ಕೆ ನಿಮ್ಮ ದೇವರ ಆಲಯವನ್ನು ದುರಸ್ತು ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರಿಂದ ಹಣವನ್ನು ಕೂಡಿಸಿರಿ. ಕೆಲಸವನ್ನು ಶೀಘ್ರವಾಗಿ ನಡಿಸಿರಿ ಅಂದನು. ಆದಾಗ್ಯೂ ಲೇವಿಯರು ಅವಸರ ಮಾಡದೆ ಇದ್ದರು.
5 Reuniu, pois, os sacerdotes e os levitas e lhes disse: Saí pelas cidades de Judá, e levantai dinheiro de todo a Israel, anualmente, para reparar a casa do vosso Deus; e vede que apresseis este negócio: contudo os levitas não o apressaram.
6 ಆಗ ಅರಸನು ಮುಖ್ಯಸ್ಥನಾದ ಯೆಹೋ ಯಾದನನ್ನು ಕರೇಕಳುಹಿಸಿ ಅವನಿಗೆ--ಕರ್ತನ ಸೇವಕ ನಾದ ಮೋಶೆಯೂ ಇಸ್ರಾಯೇಲಿನ ಸಭೆಯೂ ಸಾಕ್ಷಿಯ ಗುಡಾರದ ನಿಮಿತ್ತ ಆಜ್ಞಾಪಿಸಿದ ಕಾಣಿಕೆ ಯನ್ನು ಯೆಹೂದದಿಂದಲೂ ಯೆರೂಸಲೇಮಿ ನಿಂದಲೂ ಬರುವಂತೆ ಮಾಡಲು ನೀನು ಲೇವಿಯ ರನ್ನು ಯಾಕೆ ವಿಚಾರಿಸಲಿಲ್ಲ?
6 Pelo que o rei chamou Jeoiada, o chefe, e lhe perguntou: Por que não tens obrigado os levitas a trazerem de Judá e de Jerusalém o imposto ordenado por Moisés, servo do Senhor, à congregação de Israel, para a tenda do testemunho?
7 ಯಾಕಂದರೆ ಆ ದುಷ್ಟ ಸ್ತ್ರೀಯಾದ ಅತಲ್ಯಳ ಕುಮಾರರು ಕರ್ತನ ಆಲಯವನ್ನು ಒಡೆದು ಬಿಟ್ಟು ಕರ್ತನ ಆಲಯಕ್ಕೆ ಪ್ರತಿಷ್ಠೆಮಾಡಿ ದವುಗಳನ್ನೆಲ್ಲಾ ಬಾಳನಿಗೆ ಕೊಟ್ಟರು ಅಂದನು.
7 Pois os filhos de Atalia, aquela mulher ímpia, tinham arruinado a casa de Deus; e até empregaram todas as coisas sagradas da casa do Senhor no serviço dos baalins.
8 ಅರ ಸನ ಆಜ್ಞೆಯ ಮೇರೆಗೆ ಅವರು ಒಂದು ಪೆಟ್ಟಿಗೆಯನ್ನು ಮಾಡಿ ಕರ್ತನ ಆಲಯದ ಬಾಗಲಿನ ಹೊರಗೆ ಇಟ್ಟರು.
8 O rei, pois, deu ordem; e fizeram uma arca, e a puseram do lado de fora, à porta da casa do Senhor.
9 ದೇವರ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ ಕಾಣಿಕೆಯನ್ನು ಕರ್ತನಿಗೆ ತರಬೇಕೆಂದು ಯೆಹೂದದಲ್ಲಿಯೂ ಯೆರೂ ಸಲೇಮಿನಲ್ಲಿಯೂ ಪ್ರಕಟಮಾಡಿದರು.
9 E publicou-se em Judá e em Jerusalém que trouxessem ao Senhor o imposto que Moisés, o servo de Deus, havia ordenado a Israel no deserto.
10 ಆಗ ಎಲ್ಲಾ ಪ್ರಧಾನರೂ ಜನರೂ ಸಂತೋಷಪಟ್ಟು ತಕ್ಕೊಂಡು ಒಂದು ಪೆಟ್ಟಿಗೆಯೊಳಗೆ ತುಂಬುವಷ್ಟು ಹಾಕಿದರು.
10 Então todos os príncipes e todo o povo se alegraram, e trouxeram o imposto e o lançaram na arca, até que ficou cheia.
11 ಪೆಟ್ಟಿಗೆಯು ಲೇವಿಯರ ಕೈಯಿಂದ ಅರಸನ ಆಸ್ಥಾನಕ್ಕೆ ತರಲ್ಪಟ್ಟಾಗ ಅದರಲ್ಲಿ ಬಹಳ ಹಣ ಕಾಣಿಸಿದ್ದರಿಂದ ಅರಸನ ಶಾಸ್ತ್ರಿಯೂ ಪ್ರಧಾನ ಯಾಜಕನ ಪರಿಚಾರ ಕನೂ ಬಂದು ಪೆಟ್ಟಿಗೆಯನ್ನು ಬರಿದುಮಾಡಿ ತಕ್ಕೊಂಡು ತಿರಿಗಿ ಅದರ ಸ್ಥಳಕ್ಕೆ ಒಯ್ದಿಟ್ಟರು. ಹೀಗೆಯೇ ಅವರು ಪ್ರತಿದಿನ ಮಾಡಿ ಹಣವನ್ನು ಬಹಳ ಕೂಡಿಸಿದರು.
11 E quando era trazida a arca pelas mãos dos levitas ao recinto do rei, na ocasião em que viam que havia muito dinheiro, vinham o escrivão do rei e o deputado do sumo sacerdote, esvaziavam a arca e, tomando-a, tornavam a levá-la ao seu lugar. Assim faziam dia após dia, e ajuntaram dinheiro em abundância.
12 ಆಗ ಅರಸನೂ ಯೆಹೋಯಾದನೂ ಅದನ್ನು ಕರ್ತನ ಆಲಯದ ಸೇವೆಯ ಕಾರ್ಯವನ್ನು ಮಾಡುವ ವರಿಗೆ ಕೊಟ್ಟು ಅವರಿಂದ ಮಾಡಿಸಿದನು. ಕರ್ತನ ಆಲಯವನ್ನು ದುರಸ್ತು ಪಡಿಸುವ ನಿಮಿತ್ತ ಕಲ್ಲು ಕಡಿಯುವವರನ್ನೂ ಬಡಿಗಿಯವರನ್ನೂ ಕೂಲಿಗೆ ಕರ ಕೊಂಡರು. ಕರ್ತನ ಆಲಯವನ್ನು ಭದ್ರಮಾಡುವ ನಿಮಿತ್ತ ಕಬ್ಬಿಣ ಹಿತ್ತಾಳೆ ಕೆಲಸ ಮಾಡುವವರನ್ನು ಕೂಲಿಗೆ ಕರಕೊಂಡರು.
12 E o rei e Jeoiada davam-no aos encarregados da obra da casa do Senhor; e assalariaram pedreiros e carpinteiros para renovarem a casa do Senhor, como também os que trabalhavam em ferro e em bronze para repararem a casa do Senhor.
13 ಹೀಗೆಯೇ ಕೆಲಸದವರು ಕೆಲಸವನ್ನು ನಡಿಸಿದ್ದರಿಂದ ಕೆಲಸವು ಅವರ ಕೈಯಿಂದ ಪೂರ್ಣ ವಾಯಿತು, ಅವರು ಕರ್ತನ ಆಲಯವನ್ನು ಇದ್ದ ಸ್ಥಿತಿಯಲ್ಲಿ ನಿಲ್ಲಿಸಿ ಅದನ್ನು ಬಲಪಡಿಸಿದರು.
13 Assim os encarregados da obra faziam com que o serviço da reparação progredisse nas suas mãos; e restituíram a casa de Deus a seu estado anterior, e a consolidaram.
14 ಅವರು ಅದನ್ನು ಮುಗಿಸಿದ ಮೇಲೆ ಮಿಕ್ಕ ಹಣವನ್ನು ಅರ ಸನ ಮುಂದೆಯೂ ಯೆಹೋಯಾದನ ಮುಂದೆಯೂ ತಂದರು. ಅದರಿಂದ ಕರ್ತನ ಆಲಯಕ್ಕೋಸ್ಕರ ಬಂಗಾ ರದ ಬೆಳ್ಳಿಪಾತ್ರೆಗಳಾದ ಸೇವೆಯ ಪಾತ್ರೆಗಳೂ ಅರ್ಪಣೆಯ ಪಾತ್ರೆಗಳೂ ಸೌಟುಗಳೂ ಮಾಡಲ್ಪ ಟ್ಟವು. ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಕರ್ತನ ಆಲಯದಲ್ಲಿ ದಹನಬಲಿ ಗಳನ್ನು ಅರ್ಪಿಸಿದರು.
14 Depois de acabarem a obra trouxeram ao rei e a Jeoiada o resto do dinheiro, e dele se fizeram utensílios para a casa do Senhor, para serem usados no ministério e nos holocaustos, e colheres, e vasos de ouro e de prata. E se ofereciam holocaustos continuamente na casa do Senhor, por todos os dias de Jeoiada.
15 ಯೆಹೋಯಾದನು ಮುದುಕನಾಗಿ ದಿವಸಗಳು ತುಂಬಿ ಸತ್ತುಹೋದನು. ಅವನು ಸಾಯುವಾಗ ನೂರ ಮೂವತ್ತು ವರುಷಗಳುಳ್ಳವನಾಗಿದ್ದನು.
15 Jeoiada, porém, envelheceu e, cheio de dias, morreu; tinha cento e trinta anos quando morreu.
16 ಅವನು ದೇವರಿಗೋಸ್ಕರವಾಗಿಯೂ ಆತನ ಆಲಯಕ್ಕೋಸ್ಕರ ವಾಗಿಯೂ ಇಸ್ರಾಯೇಲಿನಲ್ಲಿ ಒಳ್ಳೇದನ್ನು ಮಾಡಿ ದ್ದದ್ದರಿಂದ ಅವರು ಅವನನ್ನು ದಾವೀದನ ಪಟ್ಟಣ ದಲ್ಲಿ ಅರಸುಗಳ ಬಳಿಯಲ್ಲಿ ಹೂಣಿಟ್ಟರು.
16 E o sepultaram na cidade de Davi com os reis, porque tinha feito o bem em Israel, e para com Deus e sua casa.
17 ಆದರೆ ಯೆಹೋಯಾದನು ಸತ್ತತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡ ಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು.
17 E depois da morte de Jeoiada vieram os príncipes de Judá e prostraram-se diante do rei; então o rei lhes deu ouvidos.
18 ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು.
18 E eles, abandonando a casa do Senhor, Deus de seus pais, serviram aos aserins e aos ídolos; de sorte que veio grande ira sobre Judá e Jerusalém por causa desta sua culpa.
19 ಆದಾಗ್ಯೂ ಕರ್ತನು ತನ್ನ ಕಡೆಗೆ ಅವರನ್ನು ತಿರುಗಿಸುವದಕ್ಕೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು; ಇವರು ಅವರಿಗೆ ಸಾಕ್ಷಿಯಾಗಿ ಹೇಳಿದರು; ಆದರೆ ಅವರು ಕಿವಿಗೊಡದೆ ಹೋದರು.
19 Contudo Deus enviou profetas entre eles para os fazer tornar ao Senhor, os quais protestaram contra eles; mas eles não lhes deram ouvidos.
20 ಆಗ ದೇವರ ಆತ್ಮನು ಯಾಜಕನಾಗಿ ರುವ ಯೆಹೋಯಾದನ ಮಗನಾದ ಜೆಕರ್ಯನ ಮೇಲೆ ಬಂದನು. ಅವನು ಜನರೊಳಗೆ ಎತ್ತರವಾದ ಸ್ಥಳದಲ್ಲಿ ನಿಂತು ಅವರಿಗೆ--ನೀವು ವೃದ್ಧಿಹೊಂದ ಕೂಡದ ಹಾಗೆ ಕರ್ತನ ಆಜ್ಞೆಗಳನ್ನು ವಿಾರುವದೇನು? ನೀವು ಕರ್ತನನ್ನು ಬಿಟ್ಟದ್ದರಿಂದ ಆತನು ನಿಮ್ಮನ್ನು ಬಿಟ್ಟಿದ್ದಾನೆಂದು ಕರ್ತನು ಹೇಳುತ್ತಾನೆ ಅಂದನು.
20 E o Espírito de Deus apoderou-se de Zacarias, filho do sacerdote Jeoiada, o qual se pôs em pé acima do povo, e lhes disse: Assim diz Deus: Por que transgredis os mandamentos do Senhor, de modo que não possais prosperar? Porquanto abandonastes o Senhor, também ele vos abandonou.
21 ಆದದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಕರ್ತನ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು.
21 Mas conspiraram contra ele e por ordem do rei, o apedrejaram no átrio da casa do Senhor.
22 ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು.
22 Assim o rei Joás não se lembrou da bondade que lhe fizera Jeoiada pai de Zacarias, antes matou-lhe o filho, o qual morrendo disse: Veja-o o Senhor, e o retribua.
23 ವರುಷಾಂತ್ಯದಲ್ಲಿ ಏನಾಯಿತಂದರೆ, ಅರಾಮಿನ ಸೈನ್ಯದವರು ಅವನಿಗೆ ವಿರೋಧವಾಗಿ ಹೊರಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದು ಜನರ ಪ್ರಧಾನರನ್ನು ಅವರೊಳಗಿಂದ ನಾಶಮಾಡಿ ಅವರಿಂದ ತೆಗೆದುಕೊಂಡ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.
23 Decorrido um ano, o exército da Síria subiu contra Joás; e vieram a Judá e a Jerusalém, e destruíram dentre o povo todos os seus príncipes, e enviaram todo o seu despojo ao rei de Damasco.
24 ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟದ್ದರಿಂದ ಅರಾಮ್ಯರು ಅಲ್ಪಜನವಾದ ಸೈನ್ಯದ ಸಂಗಡ ಬಂದಾಗ ಕರ್ತನು ಬಹು ಅಧಿಕ ವಾದ ಸೈನ್ಯವನ್ನು ಅವರ ಕೈಯಲ್ಲಿ ಒಪ್ಪಿಸಿದನು. ಹೀಗೆ ಅವರು ಯೆಹೋವಾಷನಿಗೆ ವಿರೋಧವಾಗಿ ನ್ಯಾಯ ತೀರ್ವಿಕೆ ಮಾಡಿದರು. ಅವನು ಕಠಿಣ ರೋಗದಲ್ಲಿ ಬಿದ್ದಿರುವಾಗ ಅವನನ್ನು ಬಿಟ್ಟುಹೋದರು.
24 O exército dos sírios viera com poucos homens, contudo o Senhor entregou nas suas mãos um exército mui grande, porquanto abandonaram o Senhor, Deus de seus pais. Assim executaram juízo contra Joás.
25 ಅವರು ಅವನನ್ನು ಬಿಟ್ಟತರುವಾಯ ಯಾಜಕನಾದ ಯೆಹೋ ಯಾದನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಅವನ ಸ್ವಂತ ಸೇವಕರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನು ಸಾಯುವ ಹಾಗೆ ಅವನ ಮಂಚದ ಮೇಲೆ ಅವನನ್ನು ಕೊಂದುಹಾಕಿದರು. ಅವರು ಅವ ನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿಗಳ ಬಳಿಯಲ್ಲಿ ಅವನನ್ನು ಹೂಣಿ ಡಲಿಲ್ಲ.
25 Quando os sírios se retiraram dele, deixaram-no gravemente ferido; então seus servos conspiraram contra ele por causa do sangue dos filhos do sacerdote Jeoiada, e o mataram na sua cama, e assim morreu; e o sepultaram na cidade de Davi, porém não nos sepulcros dos reis.
26 ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ದವರಾರಂದರೆ, ಅಮ್ಮೋನ್ಯಳಾಗಿರುವ ಶಿಮ್ಗಾಳ ಮಗ ನಾದ ಜಾಬಾದನು, ಮೋವಾಬ್ಯಳಾಗಿರುವ ಶಿವ್ರೆಾ ತಳ ಮಗನಾದ ಯೆಹೋಜಾಬಾದನು.
26 Estes foram os que conspiraram contra ele Zabade, filho de Simeate a amonita, e Jeozabade, filho de Sinrite a moabita.
27 ಆದರೆ ಅವನ ಕುಮಾರರನ್ನು ಕುರಿತೂ ಅವನ ಮೇಲೆ ಹಾಕಿದ ಭಾರಗಳನ್ನು ಕುರಿತೂ ದೇವರ ಆಲಯ ದುರಸ್ತು ಮಾಡುವದನ್ನು ಕುರಿತೂ ಇಗೋ, ಅವು ಅರಸುಗಳ ಚರಿತ್ರೆಯ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನ ಮಗ ನಾದ ಅಮಚ್ಯನು ಅವನಿಗೆ ಬದಲಾಗಿ ಆಳಿದನು.
27 Ora, quanto a seus filhos, e ao grande número de oráculos pronunciados contra ele, e à restauração da casa de Deus, eis que estão escritos no comentário do livro dos reis. E Amazias, seu filho, reinou em seu lugar.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Crônicas 24, comparar traduções ou montar um estudo — tudo direto pelo WhatsApp.