2 Crônicas 23

Kannada Bible (GL_KANNADA) vs ACF

Sair da comparação
ACF Almeida Corrigida Fiel
1 ಏಳನೇ ವರುಷದಲ್ಲಿ ಯೆಹೋಯಾದನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿ ಗಳಾಗಿರುವ ಯೆರೋಹಾಮನ ಮಗನಾದ ಅಜರ್ಯ ನನ್ನೂ ಯೆಹೋಹಾನಾನನ ಮಗನಾದ ಇಷ್ಮಾಯೇಲ ನನ್ನೂ ಓಬೇದನ ಮಗನಾದ ಅಜರ್ಯನನ್ನೂ ಅದಾ ಯನ ಮಗನಾದ ಮಾಸೆಯನನ್ನೂ ಜಿಕ್ರಿಯ ಮಗನಾದ ಎಲೀಷಾಫಾಟನನ್ನೂ ಕರಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿದನು.
1 Porém no sétimo ano Joiada se animou, e tomou consigo em aliança os chefes de cem, a Azarias, filho de Jeroão, a Ismael, filho de Joanã, a Azarias, filho de Obede, a Maaséias, filho de Adaías, e a Elisafate, filho de Zicri.
2 ಇವರು ಯೆಹೂದವನ್ನು ಸಂಚರಿಸಿ ಯೆಹೂದದ ಸಮಸ್ತ ಪಟ್ಟಣಗಳಿಂದ ಲೇವಿ ಯರನ್ನೂ ಇಸ್ರಾಯೇಲಿನ ಮುಖ್ಯಸ್ಥರಾದ ಪಿತೃಗಳನ್ನೂ ಕೂಡಿಸಿಕೊಂಡು ಯೆರೂಸಲೇಮಿಗೆ ಬಂದರು.
2 Estes percorreram a Judá e ajuntaram os levitas de todas as cidades de Judá e os chefes dos pais de Israel, e vieram para Jerusalém.
3 ಆಗ ಸಭೆಯವರೆಲ್ಲರು ದೇವರ ಆಲಯದಲ್ಲಿ ಅರ ಸನ ಸಂಗಡ ಒಡಂಬಡಿಕೆ ಮಾಡಿದರು. ಅವರಿಗೆಇಗೋ, ದಾವೀದನ ಕುಮಾರರನ್ನು ಕುರಿತು ಕರ್ತನು ಹೇಳಿದ ಹಾಗೆ ಅರಸನ ಕುಮಾರನು ಆಳುವನು.
3 E toda aquela congregação fez aliança com o rei na casa de Deus; e Joiada lhes disse: Eis que o filho do rei reinará, como o Senhor falou a respeito dos filhos de Davi.
4 ನೀವು ಮಾಡಬೇಕಾದ ಕಾರ್ಯವೇನಂದರೆ, ಸಬ್ಬತ್ತಿ ನಲ್ಲಿ ಪ್ರವೇಶಿಸುವ ಯಾಜಕರೂ ಲೇವಿಯರೂ ಆದ ನಿಮ್ಮಲ್ಲಿರುವ ಮೂರನೇ ಪಾಲು ದ್ವಾರಪಾಲಕರಾಗಿರ ಬೇಕು.
4 Isto é o que haveis de fazer; uma terça parte de vós, ou seja, dos sacerdotes e dos levitas que entram no sábado, serão guardas das portas;
5 ಮೂರನೇ ಪಾಲು ಅರಸನ ಬಳಿಯಲ್ಲಿಯೂ ಇನ್ನೊಂದು ಮೂರನೇ ಪಾಲು ಅಸ್ತಿವಾರದ ಬಾಗಲ ಬಳಿಯಲ್ಲಿಯೂ ಸಮಸ್ತ ಜನರು ಕರ್ತನ ಆಲಯದ ಅಂಗಳಗಳಲ್ಲಿಯೂ ಇರಬೇಕು.
5 E uma terça parte estará na casa do rei; e a outra terça parte à porta do fundamento; e todo o povo estará nos pátios da casa do Senhor.
6 ಆದರೆ ಯಾಜಕರೂ ಲೇವಿಯರಲ್ಲಿ ಸೇವೆ ಮಾಡುವವರೂ ಅಲ್ಲದೆ ಮತ್ತ್ಯಾರೂ ಕರ್ತನ ಆಲಯದಲ್ಲಿ ಪ್ರವೇಶಿಸಕೂಡದು. ಅವರು ಪರಿಶುದ್ಧರಾದದರಿಂದ ಒಳಗೆ ಪ್ರವೇಶಿಸಲಿ. ಆದರೆ ಸಮಸ್ತ ಜನರು ಕರ್ತನ ಕಾವಲನ್ನು ಕಾಯಲಿ.
6 Porém ninguém entre na casa do Senhor, senão os sacerdotes e os levitas que ministram; estes entrarão, porque são santos; mas todo o povo fará a guarda diante do Senhor.
7 ಇದಲ್ಲದೆ ಲೇವಿಯರಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡುಕೊಂಡು ಅರಸನ ಸುತ್ತಲೂ ಇರಬೇಕು. ಇವರ ಹೊರತು ಯಾವನಾ ದರೂ ಆಲಯದಲ್ಲಿ ಬಂದರೆ ಅವನು ಕೊಲ್ಲಲ್ಪಡಲಿ. ಅರಸನು ಒಳಗೆ ಬರುವಾಗಲೂ ಹೊರಗೆ ಹೋಗು ವಾಗಲೂ ನೀವು ಅವನ ಸಂಗಡ ಇರ್ರಿ ಅಂದನು.
7 E os levitas cercarão o rei de todos os lados, cada um com as suas armas na mão; e qualquer que entrar na casa será morto; porém vós estareis com o rei, quando entrar e quando sair.
8 ಹೀಗೆಯೇ ಲೇವಿಯರೂ ಸಮಸ್ತ ಯೆಹೂದದವರೂ ಯಾಜಕನಾದ ಯೆಹೋಯಾದನು ಆಜ್ಞಾಪಿಸಿದ ಎಲ್ಲಾ ದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್ತಿನಲ್ಲಿ ಒಳಗೆ ಬರಬೇಕಾದ ತನ್ನ ಮನುಷ್ಯರನ್ನೂ ಸಬ್ಬತ್ತಿ ನಲ್ಲಿ ಹೊರಟು ಹೋಗಬೇಕಾದವರನ್ನೂ ತೆಗೆದು ಕೊಂಡನು. ಯಾಜಕನಾದ ಯೆಹೋಯಾದನು ಅವ ರನ್ನು ಕಳುಹಿಸಿ ಬಿಡಲಿಲ್ಲ.
8 E fizeram os levitas e todo o Judá conforme a tudo o que ordenara o sacerdote Joiada; e tomou cada um os seus homens, tanto os que entravam no sábado como os que saíam no sábado; porque o sacerdote Joiada não tinha despedido as turmas.
9 ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸ ನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ಡಾಲುಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು
9 Também o sacerdote Joiada deu aos capitàes de cem as lanças, os escudos e as rodelas que foram do rei Davi, os quais estavam na casa de Deus.
10 ಅರಸನ ಸುತ್ತಲೂ ಇರುವದಕ್ಕೆ ಬಲಿಪೀಠಕ್ಕೂ ಆಲಯಕ್ಕೂ ಎದುರಾಗಿ ಆಲಯದ ಬಲಪಾರ್ಶ್ವ ಮೊದಲುಗೊಂಡು ಆಲಯದ ಎಡಪಾರ್ಶ್ವದ ವರೆಗೂ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ತನ್ನ ಆಯುಧ ಹಿಡಿದವರಾಗಿ ಸಮಸ್ತ ಜನರನ್ನೂ ಇರಿಸಿದನು.
10 E dispôs todo o povo, a cada um com as suas armas na mão, desde o lado direito da casa até o lado esquerdo da casa, do lado do altar e da casa, em redor do rei.
11 ಆಗ ಅವರು ಅರಸನ ಮಗನನ್ನು ಹೊರಕ್ಕೆ ಕರತಂದು ಅವನ ತಲೆಯ ಮೇಲೆ ಕಿರೀಟ ವನ್ನಿಟ್ಟು ಸಾಕ್ಷಿಯನ್ನು ಕೊಟ್ಟು ಅವನನ್ನು ಅರಸನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಮಕ್ಕಳೂ ಅವನನ್ನು ಅಭಿಷೇಕಿಸಿ--ದೇವರು ಅರಸನನ್ನು ರಕ್ಷಿಸಲಿ ಅಂದರು.
11 Então tiraram para fora ao filho do rei, e lhe puseram a coroa; deram-lhe o testemunho, e o fizeram rei; e Joiada e seus filhos o ungiram, e disseram: Viva o rei!
12 ಆದರೆ ಓಡುತ್ತಾ ಅರಸನನ್ನು ಹರಸುತ್ತಿದ್ದ ಜನರ ಶಬ್ದವನ್ನು ಅತಲ್ಯಳು ಕೇಳಿದಾಗ ಅವಳು ಕರ್ತನ ಆಲಯದಲ್ಲಿ ಜನರ ಬಳಿಗೆ ಬಂದು ನೋಡಿದಳು.
12 Ouvindo, pois, Atalia a voz do povo que concorria e louvava o rei, veio ao povo, à casa do Senhor.
13 ಇಗೋ, ಪ್ರವೇಶದ್ವಾರದ ತನ್ನ ಸ್ತಂಭದ ಬಳಿ ಯಲ್ಲಿ ಅರಸನು ನಿಂತಿದ್ದನು. ಪ್ರಧಾನರೂ ತುತೂರಿ ಹಿಡಿಯುವವರೂ ಅರಸನ ಬಳಿಯಲ್ಲಿ ಇದ್ದರು. ಇದಲ್ಲದೆ ದೇಶದ ಜನರೆಲ್ಲರು ಸಂತೋಷಪಟ್ಟು ತುತೂರಿಗಳನ್ನು ಊದಿದರು. ಹಾಗೆಯೇ ಹಾಡು ಗಾರರೂ ಗೀತವಾದ್ಯಗಳನ್ನು ಹಿಡಿದು ಸ್ತುತಿಸುವದಕ್ಕೆ ಬೋಧಿಸುವವರೂ ಇದ್ದರು. ಆಗ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದು ಕೊಂಡು--ದ್ರೋಹ, ದ್ರೋಹ ಎಂದು ಕೂಗಿದಳು.
13 E olhou, e eis que o rei estava junto à coluna, à entrada, e os pri ncipes e as trombetas junto ao rei; e todo o povo da terra estava alegre e tocava as trombetas; e também os cantores tocavam instrumentos musicais, e dirigiam o cantar de louvores; então Atalia rasgou os seus vestidos, e clamou: Traição, traição!
14 ಆಗ ಯಾಜಕನಾದ ಯೆಹೋ ಯಾದನು ಸೈನ್ಯದ ಮೇಲೆ ಇರುವ ಶತಾಧಿಪತಿಗ ಳನ್ನು ಹೊರಗೆ ಕರತಂದು ಅವರಿಗೆ--ಅವಳನ್ನು ಸಾಲುಗಳ ಹೊರಗೆ ಹೊರಡಿಸಿರಿ, ಅವಳನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಂದುಹಾಕಿರಿ ಅಂದನು. ಯಾಕಂದರೆ ಕರ್ತನ ಆಲಯದಲ್ಲಿ ಅವ ಳನ್ನು ಕೊಲ್ಲಬೇಡಿರಿ ಎಂದು ಯಾಜಕನು ಹೇಳಿದನು.
14 Porém o sacerdote Joiada trouxe para fora os centuriões que estavam postos sobre o exército e disse-lhes: Tirai-a para fora das fileiras, e o que a seguir, morrerá à espada; porque dissera o sacerdote: Não a mateis na casa do Senhor.
15 ಹಾಗೆಯೇ ಅವರು ಅವಳ ಮೇಲೆ ಕೈ ಹಾಕಿದರು. ಅವಳು ಅರಸನ ಮನೆಯ ಬಳಿಯಲ್ಲಿ ಕುದುರೆ ಬಾಗಲಿನ ಪ್ರವೇಶದಲ್ಲಿ ಬಂದಾಗ ಅಲ್ಲಿ ಅವಳನ್ನು ಕೊಂದು ಹಾಕಿದರು.
15 E lançaram mão dela; e ela foi pelo caminho da entrada da porta dos cavalos, à casa do rei, e ali a mataram.
16 ಆಗ ಅವರು ಕರ್ತನ ಜನರಾಗಿರುವ ಹಾಗೆ ಯೆಹೋಯಾದನು ತನಗೂ ಸಮಸ್ತ ಜನರಿಗೂ ಅರಸ ನಿಗೂ ಒಡಂಬಡಿಕೆ ಮಾಡಿದನು.
16 E Joiada fez aliança entre si e o povo e o rei, para que fossem o povo do Senhor.
17 ಸಮಸ್ತ ಜನರು ಬಾಳನ ಮನೆಗೆ ಹೋಗಿ ಅದನ್ನು ಕೆಡವಿಹಾಕಿ ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿ ಪೀಠಗಳ ಮುಂದೆ ಕೊಂದುಹಾಕಿದರು.
17 Depois todo o povo entrou na casa de Baal, e a derrubaram, e quebraram os seus altares, e as suas imagens, e a Matã, sacerdote de Baal, mataram diante dos altares.
18 ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.
18 E Joiada ordenou os ofícios na casa do Senhor, sob a direção dos sacerdotes levitas a quem Davi designara na casa do Senhor, para oferecerem os holocaustos do Senhor, como está escrito na lei de Moisés, com alegria e com canto, conforme a instituição de Davi.
19 ಕರ್ತನ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿ ದನು.
19 E pôs porteiros às portas da casa do Senhor, para que nela não entrasse ninguém imundo em coisa alguma.
20 ಅವನು ಶತಾಧಿಪತಿಗಳನ್ನೂ ಗೌರವಸ್ಥರನ್ನೂ ಜನರ ಅಧಿಪತಿಗಳನ್ನೂ ದೇಶದ ಜನರೆಲ್ಲರನ್ನೂ ಕರ ಕೊಂಡು ಅರಸನನ್ನು ಕರ್ತನ ಆಲಯದಿಂದ ಕರ ತಂದನು. ಅವರು ಎತ್ತರವಾದ ಬಾಗಲಿನಿಂದ ಅರಸನ ಮನೆಗೆ ಬಂದು ಅರಸನನ್ನು ರಾಜ್ಯದ ಸಿಂಹಾಸನದ ಮೇಲೆ ಕೂಡ್ರಿಸಿದರು.
20 E tomou os centuriões, os poderosos, os que tinham domínio entre o povo e todo o povo da terra, e conduziram o rei da casa do Senhor, e entraram na casa do rei passando pela porta maior, e assentaram-no no trono real.
21 ಅವರು ಅತಲ್ಯಳನ್ನು ಕತ್ತಿ ಯಿಂದ ಕೊಂದ ತರುವಾಯ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.
21 E todo o povo da terra se alegrou, e a cidade ficou em paz, depois que mataram a Atalia à espada.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Crônicas 23, comparar traduções ou montar um estudo — tudo direto pelo WhatsApp.