2 Crônicas 15

Kannada Bible (GL_KANNADA) vs NVI

Sair da comparação
NVI Nova Versão Internacional
1 ಆಗ ದೇವರ ಆತ್ಮನು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು ಅವನಿಗೆ--
1 O Espírito de Deus veio sobre Azarias, filho de Odede.
2 ಆಸನೇ, ಯೆಹೂದ ಬೆನ್ಯಾವಿಾನನ ಸಮಸ್ತರೇ, ನನ್ನ ಮಾತನ್ನು ಕೇಳಿರಿ. ನೀವು ಕರ್ತನ ಸಂಗಡ ಇರುವ ವರೆಗೂ ಆತನು ನಿಮ್ಮ ಸಂಗಡ ಇರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು;
2 Ele saiu para encontrar-se com Asa e lhe disse: "Escutem-me, Asa e todo o povo de Judá e de Benjamim. O Senhor está com vocês quando vocês estão com ele. Se o buscarem, ele deixará que o encontrem, mas, se o abandonarem, ele os abandonará.
3 ಆತನನ್ನು ಬಿಟ್ಟುಬಿಟ್ಟರೆ ಆತನು ನಿಮ್ಮನ್ನು ಬಿಟ್ಟುಬಿಡುವನು ಅಂದನು. ಬಹುಕಾಲ ಇಸ್ರಾಯೇಲ್ಯರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ ನ್ಯಾಯಪ್ರಮಾಣವಿಲ್ಲದೆ ಇದ್ದರು.
3 Durante muito tempo Israel esteve sem o verdadeiro Deus, sem sacerdote para ensiná-lo e sem a Lei.
4 ಆದರೆ ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರಿಗಿ ಆತನನ್ನು ಹುಡುಕಿ ದಾಗ ಆತನು ಅವರಿಗೆ ಸಿಕ್ಕಿದನು.
4 Mas em sua angústia eles se voltaram para o Senhor, o Deus de Israel; buscaram-no, e ele deixou que o encontrassem.
5 ಆ ಕಾಲಗಳಲ್ಲಿ ಹೊರಗೆ ಹೋಗುವವನಿಗೂ ಒಳಗೆ ಬರುವವನಿಗೂ ಸಮಾಧಾನವಿಲ್ಲದೆ ಇತ್ತು; ದೇಶದ ನಿವಾಸಿಗಳು ಬಹಳ ವಾಗಿ ಹೆದರಿದ್ದರು.
5 Naqueles dias não era seguro viajar, pois muitos distúrbios afligiam a todos os habitantes do território.
6 ಜನಾಂಗವು ಜನಾಂಗದಿಂದಲೂ ಪಟ್ಟಣವು ಪಟ್ಟಣದಿಂದಲೂ ನಾಶವಾಯಿತು. ಯಾಕಂದರೆ ದೇವರು ಸಕಲ ಇಕ್ಕಟ್ಟುಗಳಿಂದ ಅವ ರನ್ನು ತೊಂದರೆಪಡಿಸಿದನು.
6 Nações e cidades se destruíam umas às outras, pois Deus as estava afligindo com toda espécie de desgraças.
7 ಆದದರಿಂದ ನೀವು ಬಲವಾಗಿರ್ರಿ; ನಿಮ್ಮ ಕೈಗಳು ಬಲಹೀನವಾಗದೆ ಇರಲಿ;ನಿಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕುವದು ಅಂದನು.
7 Mas, vocês devem ser fortes e não se desanimar, pois o trabalho de vocês será recompensado".
8 ಆಸನು ಈ ಮಾತುಗಳನ್ನೂ ಪ್ರವಾದಿಯಾದ ಓದೇದನ ಪ್ರವಾದನೆಯನ್ನೂ ಕೇಳಿದಾಗ ಅವನು ಬಲಗೊಂಡು ಯೆಹೂದ ಬೆನ್ಯಾವಿಾನನ ಸಮಸ್ತ ದೇಶದೊಳಗಿಂದಲೂ ಎಫ್ರಾಯಾಮಿನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ ಕರ್ತನ ದ್ವಾರಾಂಗಳದ ಮುಂದೆ ಇದ್ದ ಕರ್ತನ ಬಲಿಪೀಠವನ್ನು ನೂತನ ಪಡಿಸಿದನು.
8 Assim que ouviu as palavras e a profecia do profeta Azarias, filho de Odede, o rei Asa encheu-se de coragem. Retirou os ídolos repugnantes de toda a terra de Judá e de Benjamim, e das cidades que havia conquistado nos montes de Efraim, e restaurou o altar do Senhor que estava em frente do pórtico do templo do Senhor.
9 ಇದಲ್ಲದೆ ಅವನು ಯೆಹೂದದ ಬೆನ್ಯಾ ವಿಾನನ ಸಮಸ್ತರನ್ನೂ ಎಫ್ರಾಯಾಮಿನಿಂದಲೂ ಮನಸ್ಸೆಯಿಂದಲೂ ಸಿಮೆಯೋನಿನಿಂದಲೂ ಅವರ ಕಡೆಗೆ ಬಂದ ಅನ್ಯರನ್ನೂ ಕೂಡಿಸಿದನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆಂದು ಇವರು ಕಂಡು ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಹೋದರು.
9 Depois reuniu todo o povo de Judá e de Benjamim; convocou também os que pertenciam a Efraim, a Manassés e a Simeão que viviam entre eles, pois muitos de Israel tinham passado para o lado do rei Asa, ao verem que o Senhor, o seu Deus, estava com ele.
10 ಹೀಗೆಯೇ ಆಸನ ಆಳಿಕೆಯ ಹದಿನೈದನೇ ವರುಷದ ಮೂರನೇ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿ ಕೊಂಡರು.
10 Eles se reuniram em Jerusalém no terceiro mês do décimo quinto ano do reinado de Asa.
11 ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳುನೂರು ಎತ್ತುಗಳನ್ನೂ ಏಳು ಸಾವಿರ ಕುರಿಗಳನ್ನೂ ಕರ್ತನಿಗೆ ಬಲಿಅರ್ಪಿಸಿದರು.
11 Naquela ocasião sacrificaram ao Senhor setecentos bois e sete mil ovelhas e cabras, do saque que haviam feito.
12 ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
12 Fizeram um acordo de todo o coração e de toda a alma de buscar o Senhor, o Deus dos seus antepassados.
13 ಯಾವನಾದರೂ ಇಸ್ರಾ ಯೇಲಿನ ದೇವರಾದ ಕರ್ತನನ್ನು ಹುಡುಕದೆ ಹೋದರೆ ಹಿರಿಯನಾದರೂ ಕಿರಿಯನಾದರೂ ಪುರುಷನಾದರೂ ಸ್ತ್ರೀಯಾದರೂ ಸಾಯಬೇಕೆಂದೂ ಒಡಂಬಡಿಕೆಯನ್ನು ಮಾಡಿಕೊಂಡರು.
13 Todo aquele que não buscasse o Senhor, o Deus de Israel, deveria ser morto, gente simples ou importante, homem ou mulher.
14 ಮಹಾಶಬ್ದದಿಂದಲೂ ಆರ್ಭಟ ದಿಂದಲೂ ತುತೂರಿಗಳ ಶಬ್ದದಿಂದಲೂ ಕೊಂಬು ಗಳ ಶಬ್ದದಿಂದಲೂ ಕರ್ತನ ಮುಂದೆ ಆಣೆಯಿಟ್ಟರು.
14 Fizeram esse juramento ao Senhor em voz alta, bradando ao som de cornetas e trombetas.
15 ಇದಲ್ಲದೆ ಯೆಹೂದದವರೆಲ್ಲರೂ ಪ್ರಮಾಣಕ್ಕೆ ಸಂತೋಷಪಟ್ಟರು. ಅವರು ತಮ್ಮ ಪೂರ್ಣಹೃದಯ ದಿಂದ ಆಣೆ ಇಟ್ಟು ತಮ್ಮ ಪೂರ್ಣ ಇಷ್ಟದಿಂದ ಆತನನ್ನು ಹುಡುಕಲು ಆತನು ಅವರಿಗೆ ಸಿಕ್ಕಿದನು. ಕರ್ತನು ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು.
15 Todo o povo de Judá alegrou-se com o juramento, pois o havia feito de todo o coração. Eles buscaram a Deus com toda disposição; então ele deixou que o encontrassem e lhes concedeu paz em suas fronteiras.
16 ಇದಲ್ಲದೆ ಅರಸನಾಗಿರುವ ಆಸನ ತಾಯಿಯಾದ ಮಾಕಳನ್ನು ಕುರಿತು ಏನಂದರೆ, ಅವಳು ಒಂದು ವಿಗ್ರಹವನ್ನು ಮಾಡಿಸಿ ತೋಪಿನಲ್ಲಿ ಇರಿಸಿದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿದನು. ಇದಲ್ಲದೆ ಆಸನು ಅವಳ ವಿಗ್ರಹವನ್ನು ಕಡಿದುಹಾಕಿ ಅದನ್ನು ತುಳಿದು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.
16 O rei Asa chegou até a depor sua avó Maaca da posição de rainha-mãe, pois ela havia feito um poste sagrado repugnante. Asa derrubou o poste, despedaçou-o e queimou-o no vale do Cedrom.
17 ಇಸ್ರಾಯೇಲಿನೊಳಗಿಂದ ಉನ್ನತ ಸ್ಥಳಗಳು ತೆಗೆದುಹಾಕಲ್ಪಡಲಿಲ್ಲ. ಆದರೂ ಆಸನ ಹೃದಯವು ತನ್ನ ಸಮಸ್ತ ದಿವಸಗಳಲ್ಲಿ ದೋಷ ವಿಲ್ಲದ್ದಾಗಿತ್ತು.
17 Embora os altares idólatras não tenham sido eliminados de Israel, o coração de Asa foi totalmente dedicado ao Senhor durante toda a sua vida.
18 ಅವನು ದೇವರ ಆಲಯದಲ್ಲಿ ತನ್ನ ತಂದೆಯೂ ತಾನೂ ಪರಿಶುದ್ಧ ಮಾಡಿದ ಬೆಳ್ಳಿಯನ್ನೂ ಬಂಗಾರವನ್ನೂ ಪಾತ್ರೆಗಳನ್ನೂ ಸೇರಿಸಿದನು.
18 Ele trouxe para o templo de Deus a prata, o ouro e os utensílios que ele e seu pai haviam consagrado.
19 ಆಸನ ಆಳ್ವಿಕೆಯಲ್ಲಿ ಮೂವತ್ತೈದನೇ ವರುಷದ ಪರಿಯಂತರ ಯುದ್ಧವಿಲ್ಲದೆ ಇತ್ತು.
19 E não houve mais nenhuma guerra até o trigésimo quinto ano do seu reinado.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Crônicas 15, comparar traduções ou montar um estudo — tudo direto pelo WhatsApp.