2 Coríntios 1

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ದೇವರ ಚಿತ್ತಾನುಸಾರ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಮತ್ತು ನಮ್ಮ ಸಹೋದರನಾದ ತಿಮೊಥೆಯನು ಕೊರಿಂಥದಲ್ಲಿರುವ ದೇವರ ಸಭೆಗೂ ಅಕಾಯದಲ್ಲಿರುವ ಪರಿಶುದ್ಧರೆ ಲ್ಲರಿಗೂ ಬರೆಯುವದೇನಂದರೆ
1 Paulo, apóstolo de Cristo Jesus pela vontade de Deus, e o irmão Timóteo, à igreja de Deus que está em Corinto e a todos os santos em toda a Acaia.
2 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
2 Que a graça e a paz de Deus, nosso Pai, e do Senhor Jesus Cristo estejam com vocês.
3 ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾ ಗಿರುವ ದೇವರೂ ಕನಿಕರವುಳ್ಳ ತಂದೆಯೂ ಸಕಲ ವಿಧವಾಗಿ ಸಂತೈಸುವಾತನೂ ಆಗಿರುವ ದೇವರಿಗೆ ಸ್ತೋತ್ರ.
3 Bendito seja o Deus e Pai de nosso Senhor Jesus Cristo, o Pai de misericórdias e Deus de toda consolação!
4 ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿ ಆತನು ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಇರುವವರನ್ನು ಸಂತೈಸು ವದಕ್ಕೆ ಶಕ್ತರಾಗುತ್ತೇವೆ.
4 É ele que nos consola em toda a nossa tribulação, para que, pela consolação que nós mesmos recebemos de Deus, possamos consolar os que estiverem em qualquer espécie de tribulação.
5 ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಆದರಣೆಯೂ ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ.
5 Porque, assim como transbordam sobre nós os sofrimentos de Cristo, assim também por meio de Cristo transborda o nosso consolo.
6 ನಾವು ಸಂಕಟ ಪಟ್ಟರೆ ಅದು ನಿಮ್ಮ ಆದರಣೆಗಾಗಿಯೂ ರಕ್ಷಣೆಗಾಗಿಯೂ ಆಗಿದ್ದು ನಾವು ಅನುಭವಿಸುವ ಶ್ರಮೆಗಳಲ್ಲಿ ತಾಳ್ಮೆಯುಳ್ಳವರಾಗುವಂತೆ ಅವು ಪರಿಣಮಿಸುತ್ತವೆ; ಇಲ್ಲವೆ ನಾವು ಆದರಿಸಲ್ಪಟ್ಟರೆ ಅದು ನಿಮ್ಮ ಆದರಣೆಗಾಗಿ ಮತ್ತು ರಕ್ಷಣೆಗಾಗಿ ಇರುತ್ತದೆ.
6 Se somos atribulados, é para o consolo e a salvação de vocês; se somos consolados, é também para o consolo de vocês. Esse consolo se torna eficaz na medida em que vocês suportam com paciência os mesmos sofrimentos que nós também suportamos.
7 ನೀವು ಬಾಧೆಗಳಲ್ಲಿ ಪಾಲುಗಾರರಾಗಿರುವ ಪ್ರಕಾರ ಆದರಣೆ ಯಲ್ಲಿಯೂ ಪಾಲುಗಾರರಾಗಿದ್ದೀರೆಂದು ನಮಗೆ ತಿಳಿದಿರುವದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.
7 A nossa esperança em relação a vocês é sólida, sabendo que, assim como vocês são participantes dos sofrimentos, assim também serão participantes da consolação.
8 ಸಹೋದರರೇ, ಆಸ್ಯದಲ್ಲಿ ನಮ್ಮಗುಂಟಾದ ಉಪದ್ರವವನ್ನು ನೀವು ತಿಳಿಯ ಬೇಕೆಂದು ನಾನು ಅಪೇಕ್ಷಿಸುತ್ತೇನೆ; ಹೇಗಂದರೆ ನಾವು ಜೀವದ ನಿರೀಕ್ಷೆಯಿಲ್ಲದವರಾಗುವಷ್ಟೂ ಅಳತೆಗೆಟ್ಟು ಬಲ ವಿಾರಿ ಕುಗ್ಗಿ ಹೋದೆವು.
8 Porque não queremos, irmãos, que vocês fiquem sem saber que tipo de tribulação nos sobreveio na província da Ásia. Foi algo acima das nossas forças, a ponto de perdermos a esperança até da própria vida.
9 ಆದರೆ ಮರಣವಾಗು ತ್ತದೆಂಬ ನಿರ್ಣಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವ ರಾಗಬೇಕೆಂದು ಹೀಗಾಯಿತು.
9 De fato, tivemos em nós mesmos a sentença de morte, para que não confiássemos em nós mesmos, e sim no Deus que ressuscita os mortos,
10 ಆತನು ನಮ್ಮನ್ನು ಎಂಥಾ ಭಯಂಕರವಾದ ಮರಣದಿಂದ ತಪ್ಪಿಸಿದ್ದಾನೆ, ಮತ್ತು ತಪ್ಪಿಸುತ್ತಾನೆ, ಇನ್ನು ಮುಂದೆಯೂ ಆತನು ನಮ್ಮನ್ನು ತಪ್ಪಿಸುವನೆಂದು ನಾವು ಆತನಲ್ಲಿ ಭರವಸೆಯುಳ್ಳವರಾಗಿದ್ದೇವೆ.
10 o qual nos livrou e ainda livrará de tão grande morte. Nele temos esperado que ainda continuará a nos livrar,
11 ಅನೇಕರ ಮೂಲಕ ನಮಗೆ ಅನುಗ್ರಹಿಸಲ್ಪಟ್ಟಂಥ ದಾನದ ನಿಮಿತ್ತವಾಗಿ ಬಹಳ ಜನರಿಂದ ನಮ್ಮ ಪರವಾಗಿ ಉಪಕಾರ ಸ್ತುತಿಯಾಗುವಂತೆ ನೀವು ಸಹ ಒಟ್ಟಾಗಿ ನಮಗೋಸ್ಕರ ಪ್ರಾರ್ಥನೆಯ ಸಹಾಯಮಾಡುತ್ತಿದ್ದೀರಿ.
11 enquanto vocês nos ajudam com orações a nosso favor, para que, por muitos, sejam dadas graças a Deus a nosso respeito, pelo benefício que nos foi concedido por meio da súplica de muitos.
12 ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.
12 Porque a nossa glória é esta: o testemunho da nossa consciência de que com simplicidade e sinceridade de Deus, não com sabedoria humana, mas na graça divina, temos vivido no mundo, especialmente em relação a vocês.
13 ನೀವು ಓದಿ ಒಪ್ಪಿಕೊಂಡ ಸಂಗತಿಗಳನ್ನೇ ಅಲ್ಲದೆ ಬೇರೆ ಯಾವದನ್ನೂ ನಾವು ನಿಮಗೆ ಬರೆಯಲಿಲ್ಲ; ಹಾಗೆಯೇ ನೀವು ಕಡೇತನಕ ಒಪ್ಪಿಕೊಳ್ಳುವಿರೆಂದು ನಾನು ಭರವಸವುಳ್ಳವನಾಗಿದ್ದೇನೆ.
13 Porque nenhuma outra coisa escrevemos para vocês, a não ser aquilo que vocês leem e entendem. E espero que vocês entendam completamente,
14 ನೀವು ಸಹ ಸ್ವಲ್ಪಮಟ್ಟಿಗೆ ನಮ್ಮನ್ನು ಒಪ್ಪಿಕೊಂಡು ನಮ್ಮ ಕರ್ತನಾದ ಯೇಸುವಿನ ದಿನದಲ್ಲಿ ನೀವು ನಮಗೆ ಉಲ್ಲಾಸಕ್ಕೆ ಕಾರಣರಾಗಿರುವಂತೆಯೇ ನಾವು ನಿಮಗೆ ಉಲ್ಲಾಸಕ್ಕೆ ಕಾರಣರಾಗಿದ್ದೇವೆ.
14 como também já nos entenderam em parte, que seremos a glória de vocês, assim como vocês também serão a nossa glória no Dia de Jesus, nosso Senhor.
15 ಈ ಭರವಸದಿಂದ ನಿಮಗೆ ಎರಡನೆಯ ಪ್ರಯೋಜನವುಂಟಾಗುವಂತೆ ನಾನು ಮೊದಲು ನಿಮ್ಮ ಬಳಿಗೆ ಬರಬೇಕೆಂತಲೂ
15 Com esta confiança, eu queria primeiro ir encontrar-me com vocês, para que tivessem um segundo benefício.
16 ತರುವಾಯ ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ತಿರಿಗಿ ಮಕೆದೋನ್ಯದಿಂದ ನಿಮ್ಮ ಬಳಿಗೆ ಬಂದು ನಿಮ್ಮಿಂದ ಯೂದಾಯಕ್ಕೆ ಸಾಗಕಳುಹಿಸಲ್ಪಡುವಂತೆಯೂ ಯೋಚಿಸಿದ್ದೆನು.
16 Queria, ao passar por aí, dirigir-me à Macedônia, e da Macedônia voltar a encontrar-me com vocês, sendo então encaminhado por vocês para a Judeia.
17 ಆದದರಿಂದ ನಾನು ಹೀಗೆ ಮನಸ್ಸು ಮಾಡಿದಾಗ ಹಗುರು ಭಾವನೆಯನ್ನು ತೋರಿಸಿದೆನೋ? ಇಲ್ಲವೆ ನಾನು ಉದ್ದೇಶಿಸದವು ಗಳು ಹೌದು, ಹೌದು ಅಂದ ಮೇಲೆ ಅಲ್ಲ, ಅಲ್ಲ ಅನ್ನುವಂತೆ ಮಾನುಷ್ಯ ರೀತಿಯಲ್ಲಿ ಉದ್ದೇಶಿಸು ತ್ತೇನೋ?
17 Ora, ao querer isso, será que agi com leviandade? Ou, ao tomar decisões, será que decido segundo a carne, de modo que haja em mim, simultaneamente, o “sim, sim” e o “não, não”?
18 ಆದರೆ ದೇವರು ಸತ್ಯವಂತನಾಗಿರುವ ಹಾಗೆಯೇ ನಮ್ಮ ಮಾತು ಹೌದೆಂದೂ ಅಲ್ಲವೆಂದೂ ಇರಲಿಲ್ಲ.
18 Mas, como Deus é fiel, a nossa palavra, dirigida a vocês, não é “sim e não”.
19 ನಾವು ಅಂದರೆ ನಾನೂ ಸಿಲ್ವಾನನೂ ತಿಮೊಥೆಯನೂ ನಿಮ್ಮಲ್ಲಿ ಸಾರಿದ ದೇವರ ಮಗನಾದ ಯೇಸು ಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಇರುವದಿಲ್ಲ. ಆದರೆ ಆತನಲ್ಲಿ ಹೌದೆಂಬದೇ ನೆಲೆ ಗೊಂಡಿದೆ.
19 Porque o Filho de Deus, Jesus Cristo, que foi anunciado entre vocês por nós, isto é, por mim, Silvano e Timóteo, não foi “sim e não”; pelo contrário, nele sempre houve o “sim”.
20 ಆದದರಿಂದ ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ದೇವರ ಎಲ್ಲಾ ವಾಗ್ದಾನ ಗಳು ಆತನಲ್ಲಿ ಹೌದಾಗಿವೆ, ಆತನಲ್ಲಿಯೇ ಆಮೆನ್‌ ಆಗಿವೆ.
20 Porque todas as promessas de Deus têm nele o “sim”. Por isso, também por meio dele se diz o “amém” para glória de Deus, por meio de nós.
21 ಕ್ರಿಸ್ತನಲ್ಲಿ ನಿಮ್ಮೊಂದಿಗೆ ನಮ್ಮನ್ನು ಸ್ಥಿರಪಡಿಸಿ ನಮ್ಮನ್ನು ಅಭಿಷೇಕಿಸಿದಾತನು ದೇವರೇ;
21 Mas aquele que nos confirma juntamente com vocês em Cristo e que nos ungiu é Deus,
22 ಆತನು ನಮ್ಮ ಮೇಲೆ ಮುದ್ರೆಹಾಕಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.
22 que também pôs o seu selo em nós e nos deu o penhor do Espírito em nosso coração.
23 ಇದಲ್ಲದೆ ನಿಮ್ಮ ಮೇಲೆ ಕನಿಕರವಿರುವದರಿಂದ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲವೆಂಬದಕ್ಕೆ ನನ್ನ ಪ್ರಾಣದೊಂದಿಗೆ ದೇವರೇ ನನಗೆ ಸಾಕ್ಷಿ.
23 Eu, porém, por minha vida, tomo Deus por testemunha de que foi para poupar vocês que ainda não voltei a Corinto.
24 ನಿಮ್ಮ ನಂಬಿಕೆಯ ಮೇಲೆ ನಾವು ದೊರೆತನ ಮಾಡುವದಕ್ಕಾಗಿ ಅಲ್ಲ; ಆದರೆ ನಿಮ್ಮ ಸಂತೋಷಕ್ಕೆ ಸಹಾಯಮಾಡುವವರಾಗಿದ್ದೇವೆ. ಯಾಕಂದರೆ ನೀವು ನಂಬಿಕೆಯಲ್ಲಿ ನಿಂತಿದ್ದೀರಿ.
24 Não que tenhamos domínio sobre a fé que vocês têm, mas porque somos cooperadores da alegria de vocês. Porque, pela fé, vocês estão firmes.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 2 Coríntios 1, comparar traduções ou montar um estudo — tudo direto pelo WhatsApp.