1 Timóteo 6

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ದೇವರ ನಾಮಕ್ಕೂ ಆತನ ಬೋಧನೆಗೂ ದೂಷಣೆ ಉಂಟಾಗದಂತೆ ನೊಗದ ಅಧೀನದಲ್ಲಿರುವ ಸೇವಕರೆಲ್ಲರೂ ತಮ್ಮ ಸ್ವಂತ ಯಜಮಾನರನ್ನೂ ಎಲ್ಲಾ ಮಾನಕ್ಕೂ ಯೋಗ್ಯರೆಂದೆ ಣಿಸಲಿ.
1 Todos os servos que estão debaixo de jugo considerem dignos de toda honra o próprio senhor, para que o nome de Deus e a doutrina não sejam blasfemados.
2 ವಿಶ್ವಾಸಿಗಳಾದ ಯಜಮಾನರಿರುವವರು, ಆ ಯಜಮಾನರನ್ನು ಸಹೋದರರೆಂದು ತಾತ್ಸಾರ ಮಾಡದೆ ಆದಾಯದಲ್ಲಿ ಪಾಲು ಹೊಂದುವವರೂ ನಂಬುವವರೂ ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಹೆಚ್ಚಾದ ಸೇವೆ ಮಾಡಬೇಕು. ಇವುಗಳನ್ನು ಬೋಧಿಸಿ ಎಚ್ಚರಿಸು.
2 Também os que têm senhor fiel não o tratem com desrespeito, porque é irmão; pelo contrário, trabalhem ainda mais, pois ele, que partilha do seu bom serviço, é crente e amado. Ensina e recomenda estas coisas.
3 ಯಾವನಾದರೂ ಬೇರೆ ವಿಧವಾದ ಉಪದೇಶ ವನ್ನು ಮಾಡಿ ಅಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ ಭಕ್ತ್ಯನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ
3 Se alguém ensina outra doutrina e não concorda com as sãs palavras de nosso Senhor Jesus Cristo e com o ensino segundo a piedade,
4 ಅಂಥವನು ಒಂದನ್ನೂ ತಿಳಿಯದೆ ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿದ್ದು ಅಹಂಕಾರಿಯಾಗಿದ್ದಾನೆ. ಇವುಗಳಿಂದ ಹೊಟ್ಟೇಕಿಚ್ಚು ಜಗಳ ದೂಷಣೆ ದುಸ್ಸಂಶಯ ಇವುಗಳು ಉಂಟಾಗುತ್ತವೆ.
4 é enfatuado, nada entende, mas tem mania por questões e contendas de palavras, de que nascem inveja, provocação, difamações, suspeitas malignas,
5 ಇದ್ದಲ್ಲದೆ ಬುದ್ದಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ವ್ಯರ್ಥ ವಾದ ವಿವಾದಗಳು ಉಂಟಾಗುತ್ತವೆ. ಇಂಥವರಿಂದ ದೂರವಾಗಿರ್ರಿ.
5 altercações sem fim, por homens cuja mente é pervertida e privados da verdade, supondo que a piedade é fonte de lucro.
6 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.
6 De fato, grande fonte de lucro é a piedade com o contentamento.
7 ನಾವು ಲೋಕದೊಳಗೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ನಿಶ್ಚಯವಾಗಿ ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು.
7 Porque nada temos trazido para o mundo, nem coisa alguma podemos levar dele.
8 ಆದದರಿಂದ ಅನ್ನವಸ್ತ್ರಗಳುಳ್ಳವರಾಗಿ ಅವುಗಳಿಂದ ತೃಪ್ತರಾಗಿರೋಣ.
8 Tendo sustento e com que nos vestir, estejamos contentes.
9 ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ.
9 Ora, os que querem ficar ricos caem em tentação, e cilada, e em muitas concupiscências insensatas e perniciosas, as quais afogam os homens na ruína e perdição.
10 ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ.
10 Porque o amor do dinheiro é raiz de todos os males; e alguns, nessa cobiça, se desviaram da fé e a si mesmos se atormentaram com muitas dores.
11 ಓ ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ದೂರ ಓಡಿಹೋಗು; ನೀತಿ ಭಕ್ತಿ ನಂಬಿಕೆ ಪ್ರೀತಿ ತಾಳ್ಮೆ ಸಾತ್ವಿಕತ್ವ ಇವುಗಳನ್ನು ಅನುಸರಿಸು.
11 Tu, porém, ó homem de Deus, foge destas coisas; antes, segue a justiça, a piedade, a fé, o amor, a constância, a mansidão.
12 ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೇ ಅರಿಕೆಯನ್ನು ಮಾಡಿದ್ದೀಯಲ್ಲಾ.
12 Combate o bom combate da fé. Toma posse da vida eterna, para a qual também foste chamado e de que fizeste a boa confissão perante muitas testemunhas.
13 ಎಲ್ಲರನ್ನು ಬದುಕಿಸುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಶ್ರೇಷ್ಠ ಅರಿಕೆಯನ್ನು ಸಾಕ್ಷೀಕರಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--
13 Exorto-te, perante Deus, que preserva a vida de todas as coisas, e perante Cristo Jesus, que, diante de Pôncio Pilatos, fez a boa confissão,
14 ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.
14 que guardes o mandato imaculado, irrepreensível, até à manifestação de nosso Senhor Jesus Cristo;
15 ಸ್ತುತಿ ಹೊಂದತಕ್ಕ ಒಬ್ಬನೇ ಸರ್ವ ಶಕ್ತನು. ತನ್ನ ಸಮಯಗಳಲ್ಲೇ ಆತನನ್ನು ಪ್ರತ್ಯಕ್ಷ ಪಡಿಸುವನು; ಆ ಸರ್ವಶಕ್ತನು ರಾಜಾಧಿರಾಜನೂ ಕರ್ತರ ಕರ್ತನೂ ಆಗಿದ್ದಾನೆ;
15 a qual, em suas épocas determinadas, há de ser revelada pelo bendito e único Soberano, o Rei dos reis e Senhor dos senhores;
16 ಆತನೊಬ್ಬನೇ ಅಮರತ್ವವುಳ್ಳವನೂ ಯಾರೂ ಸವಿಾಪಿಸಲಾರದಂತ ಬೆಳಕಿನಲ್ಲಿ ವಾಸಿಸುವಾತನೂ ಆಗಿದ್ದಾನೆ; ಯಾವ ಮನುಷ್ಯನೂ ಆತನನ್ನು ಕಾಣಲಿಲ್ಲ; ಯಾರೂ ಕಾಣ ಲಾರರು; ಆತನಿಗೆ ಮಾನವೂ ನಿತ್ಯಾಧಿಕಾರವೂ ಇರಲಿ. ಆಮೆನ್‌.
16 o único que possui imortalidade, que habita em luz inacessível, a quem homem algum jamais viu, nem é capaz de ver. A ele honra e poder eterno. Amém!
17 ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ
17 Exorta aos ricos do presente século que não sejam orgulhosos, nem depositem a sua esperança na instabilidade da riqueza, mas em Deus, que tudo nos proporciona ricamente para nosso aprazimento;
18 ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.
18 que pratiquem o bem, sejam ricos de boas obras, generosos em dar e prontos a repartir;
19 ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥ ವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು.
19 que acumulem para si mesmos tesouros, sólido fundamento para o futuro, a fim de se apoderarem da verdadeira vida.
20 ಓ ತಿಮೊಥೆಯನೇ, ಅಪಭ್ರಷ್ಟವಾದ ವ್ಯರ್ಥ ಮಾತುಗಳಿಗೂ ಸುಳ್ಳು ಹೆಸರುಳ್ಳ ಜ್ಞಾನದ ತರ್ಕ ಗಳಿಗೂ ತಪ್ಪಿಸಿಕೊಂಡು ನಿನ್ನ ವಶಕ್ಕೆ ಕೊಟ್ಟಿರುವದನು ಕಾಪಾಡು.
20 E tu, ó Timóteo, guarda o que te foi confiado, evitando os falatórios inúteis e profanos e as contradições do saber, como falsamente lhe chamam,
21 ಕೆಲವರು ಆ ಸುಳ್ಳಾದ ಜ್ಞಾನವನ್ನು ಹೇಳಿಕೊಂಡು ನಂಬಿಕೆಯಿಂದ ತಪ್ಪಿಹೋದರು. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.
21 pois alguns, professando-o, se desviaram da fé. A graça seja convosco.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Timóteo 6, comparar traduções ou montar um estudo — tudo direto pelo WhatsApp.