1 Samuel 8

Kannada Bible (GL_KANNADA) vs NTLH

Sair da comparação
NTLH Nova Tradução na Linguagem de Hoje 2000
1 ಸಮುವೇಲನು ವೃದ್ಧನಾದಾಗ ಆಗಿದ್ದೇನಂದರೆ ತನ್ನ ಕುಮಾರರನ್ನು ಇಸ್ರಾ ಯೇಲಿಗೆ ನ್ಯಾಯಾಧಿಪತಿಗಳಾಗಿರುವದಕ್ಕೆ ಇಟ್ಟನು.
1 Quando Samuel ficou velho, pôs os seus filhos como juízes de Israel.
2 ಅವನ ಚೊಚ್ಚಲ ಮಗನ ಹೆಸರು ಯೋವೇಲ್‌, ಎರಡನೇ ಮಗನ ಹೆಸರು ಅಬೀಯ; ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು.
2 O seu filho mais velho se chamava Joel, e o mais novo, Abias. Eles eram juízes na cidade de Berseba.
3 ಆದರೆ ಅವನ ಮಕ್ಕಳು ಅವನ ಮಾರ್ಗದಲ್ಲಿ ನಡೆಯದೆ ಲೋಭಕ್ಕಾಗಿ ಮಾರ್ಗತಪ್ಪಿ ಲಂಚವನ್ನು ತಕ್ಕೊಂಡು ನ್ಯಾಯವನ್ನು ತಪ್ಪಿಸಿದರು.
3 Porém não seguiram o exemplo do pai. Estavam interessados somente em ganhar dinheiro, aceitavam dinheiro por fora e não decidiam os casos com justiça.
4 ಆಗ ಇಸ್ರಾಯೇಲ್‌ ಹಿರಿಯರೆಲ್ಲರೂ ಕೂಡಿಕೊಂಡು ರಾಮದಲ್ಲಿರುವ ಸಮುವೇಲನ ಬಳಿಗೆ ಬಂದು
4 Então todos os líderes de Israel se reuniram e foram falar com Samuel, em Ramá.
5 ಅವನಿಗೆ-- ಇಗೋ, ನೀನು ವೃದ್ಧನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ. ಈಗ ನ್ಯಾಯತೀರಿಸು ವದಕ್ಕೆ ಸಮಸ್ತ ಜನಾಂಗಗಳ ಹಾಗೆ ನಮಗೆ ಒಬ್ಬ ಅರಸನನ್ನು ನೇಮಿಸು ಅಂದರು.
5 Eles disseram: — Olhe! Você já está ficando velho, e os seus filhos não seguem o seu exemplo. Por isso, queremos que nos arranje um rei para nos governar, como acontece em outros países.
6 ಆದರೆ--ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು ಎಂದು ಅವರು ಹೇಳಿದ ವಾರ್ತೆಯು ಸಮುವೇಲನಿಗೆ ಮನ ನೋಯಿಸುವಂತದ್ದಾಗಿತ್ತು. ಅವನು ಕರ್ತನಿಗೆ ಪ್ರಾರ್ಥನೆ ಮಾಡಿದನು.
6 Samuel não gostou do pedido deles. Então orou a Deus, o Senhor ,
7 ಆಗ ಕರ್ತನು ಸಮು ವೇಲನಿಗೆ--ಜನರು ನಿನಗೆ ಹೇಳಿದ್ದೆಲ್ಲಾದರಲ್ಲಿ ಅವರ ಮಾತು ಕೇಳು. ಯಾಕಂದರೆ ಅವರು ನಿನ್ನನ್ನು ತೊರೆ ದಿಲ್ಲ; ನಾನು ಅವರನ್ನು ಆಳದ ಹಾಗೆ ನನ್ನನ್ನು ತೊರೆದಿದ್ದಾರೆ.
7 e ele respondeu assim: — Atenda o pedido do povo. Não é só você que eles rejeitaram; eles rejeitaram a mim como Rei.
8 ನಾನು ಅವರನ್ನು ಐಗುಪ್ತದಿಂದ ಬರ ಮಾಡಿದ ದಿನ ಮೊದಲುಗೊಂಡು ಈ ದಿನದ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿ ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡು ತ್ತಾರೆ.
8 Desde que eu os trouxe do Egito, eles sempre me têm abandonado e têm adorado outros deuses. Agora estão fazendo com você o que sempre fizeram comigo.
9 ಈಗ ಅವರ ಮಾತನ್ನು ಕೇಳು; ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬದನ್ನು ತಿಳಿಸು ಅಂದನು.
9 Portanto, atenda o pedido deles. Mas avise essa gente, explicando com toda a clareza como o rei vai tratá-los.
10 ಆಗ ಸಮುವೇಲನು ಅರಸನನ್ನು ಕೇಳಿದ ಜನ ರಿಗೆ ಕರ್ತನ ವಾಕ್ಯಗಳನ್ನೆಲ್ಲಾ ಹೇಳಿದನು.
10 Então Samuel explicou ao povo tudo o que o Senhor lhe tinha dito.
11 ನಿಮ್ಮನ್ನು ಆಳುವ ಅರಸನ ಅಧಿಕಾರ ಏನಂದರೆ--ಅವನು ನಿಮ್ಮ ಕುಮಾರರನ್ನು ತನಗೋಸ್ಕರ ತನ್ನ ರಥ ಸವಾರರಾ ಗಿಯೂ ರಾಹುತರಾಗಿಯೂ ತಕ್ಕೊಳ್ಳುವನು.
11 Ele disse: — O rei os tratará assim: tomará os filhos de vocês para serem soldados; porá alguns para servirem nos seus carros de guerra, outros na cavalaria e outros para correrem adiante dos carros.
12 ಕೆಲ ವರು ಅವನ ರಥಗಳ ಮುಂದೆ ಓಡುವರು. ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿ ಗಳಾಗಿಯೂ ತನ್ನ ಭೂಮಿಯನ್ನು ಉಳುವವರಾ ಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ತನ್ನ ರಥದ ಸಾಮಾನು ಗಳನ್ನು ಮಾಡುವವರಾಗಿಯೂ ನೇಮಿಸುವನು.
12 Colocará alguns deles como oficiais encarregados de mil soldados, e outros encarregados de cinquenta. Os seus filhos terão de cultivar as terras dele, fazer as suas colheitas e fabricar as suas armas e equipamentos para os seus carros de guerra.
13 ಇದಲ್ಲದೆ ಅವನು ನಿಮ್ಮ ಕುಮಾರ್ತೆಯರನ್ನು ತೈಲ ಗಾರ್ತಿಗಳಾಗಿಯೂ ಅಡಿಗೆ ಮಾಡುವವರಾಗಿಯೂ ರೊಟ್ಟಿಸುಡುವವರಾಗಿಯೂ ಇಟ್ಟುಕೊಳ್ಳುವನು.
13 As filhas de vocês terão de preparar os perfumes do rei e trabalhar como suas cozinheiras e padeiras.
14 ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೇ ತೋಪುಗಳನ್ನೂ ತೆಗೆದು ಕೊಂಡು ತನ್ನ ಸೇವಕರಿಗೆ ಕೊಡುವನು.
14 Ele tomará de vocês os melhores campos, plantações de uvas, bosques de oliveiras e dará tudo aos seus funcionários.
15 ನಿಮ್ಮ ಧಾನ್ಯಗಳಲ್ಲಿಯೂ ದ್ರಾಕ್ಷೇ ಫಲಗಳಲ್ಲಿಯೂ ಹತ್ತರಲ್ಲಿ ಒಂದನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಸೇವಕರಿಗೂ ಕೊಡುವನು.
15 Ficará com a décima parte dos cereais e das uvas, para dar aos funcionários da corte e aos outros funcionários.
16 ನಿಮ್ಮ ದಾಸದಾಸಿಯ ರನ್ನೂ ಉತ್ತಮ ಯೌವನಸ್ಥರನ್ನೂ ನಿಮ್ಮ ಕತ್ತೆಗಳನ್ನೂ ತಕ್ಕೊಂಡು ತನ್ನ ಕೆಲಸಕ್ಕೆ ಇಡುವನು.
16 Tomará também os empregados de vocês, o melhor gado e os melhores jumentos, para trabalharem para ele.
17 ಇದಲ್ಲದೆ ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದನ್ನು ಆದು ಕೊಳ್ಳುವನು; ನೀವು ಅವನಿಗೆ ದಾಸರಾಗುವಿರಿ.
17 E ficará com a décima parte dos rebanhos de vocês. E vocês serão seus escravos.
18 ನೀವು ನಿಮಗೆ ಆದುಕೊಂಡ ನಿಮ್ಮ ಅರಸನ ನಿಮಿತ್ತ ಆ ದಿವಸದಲ್ಲಿ ಕೂಗುವಿರಿ; ಆದರೆ ಆ ದಿವಸದಲ್ಲಿ ಕರ್ತನು ನಿಮಗೆ ಕಿವಿಗೊಡುವದಿಲ್ಲ.
18 Quando isso acontecer, vocês chorarão amargamente por causa do rei que escolheram, porém o Senhor Deus não ouvirá as suas queixas.
19 ಆದರೂ ಜನರು ಸಮುವೇಲನ ಮಾತನ್ನು ಕೇಳಲ್ಲೊಲ್ಲದೆ ಅವರು--ಹಾಗಲ್ಲ; ನಮ್ಮ ಮೇಲೆ ಅರಸನು ಇರಬೇಕು; ನಾವು ಸಕಲ ಜನಾಂಗಗಳ ಹಾಗೆ ಇರಬೇಕು;
19 Mas o povo não se importou com o aviso de Samuel. Pelo contrário, eles disseram: — Não adianta. Nós queremos um rei.
20 ನಮ್ಮ ಅರಸನು ನಮಗೆ ನ್ಯಾಯತೀರಿಸುವನು; ಅವನು ನಮ್ಮ ಮುಂದೆ ಹೊರಟು ನಮ್ಮ ಯುದ್ಧಗಳನ್ನು ನಡಿಸುವನು ಅಂದರು.
20 Queremos ser como as outras nações: queremos ter um rei para nos governar, para nos dirigir na guerra e lutar em nossas batalhas.
21 ಸಮುವೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಕರ್ತನಿಗೆ ಹೇಳಿದನು.
21 Samuel ouviu o que eles disseram e então foi e contou tudo a Deus, o Senhor .
22 ಆದರೆ ಕರ್ತನು ಸಮುವೇಲನಿಗೆ--ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು ಅಂದನು. ಆಗ ಸಮುವೇಲನು ಇಸ್ರಾಯೇಲ್‌ ಜನರಿಗೆ--ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ ಅಂದನು.
22 Ele respondeu: — Faça o que eles querem. Dê a eles um rei. Aí Samuel pediu a todos os homens de Israel que voltassem para casa.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Samuel 8, comparar traduções ou montar um estudo — tudo direto pelo WhatsApp.