1 Samuel 6

Kannada Bible (GL_KANNADA) vs NAA

Sair da comparação
NAA Nova Almeida Atualizada 2017
1 ಆದರೆ ಕರ್ತನ ಮಂಜೂಷವು ಫಿಲಿಷ್ಟಿ ಯರ ಸೀಮೆಯಲ್ಲಿ ಏಳು ತಿಂಗಳು ಇತ್ತು.
1 A arca do Senhor esteve sete meses na terra dos filisteus.
2 ಫಿಲಿಷ್ಟಿಯರು ಪೂಜಾರಿಗಳನ್ನೂ ಕಣಿ ಹೇಳುವ ವರನ್ನೂ ಕರಿಸಿ ಕರ್ತನ ಮಂಜೂಷವನ್ನು ನಾವೇನು ಮಾಡಬೇಕು? ನಾವು ಅದನ್ನು ಹೇಗೆ ಅದರ ಸ್ಥಳಕ್ಕೆ ಕಳುಹಿಸುವದು ನಮಗೆ ತಿಳಿಸಿರಿ ಅಂದರು.
2 Estes chamaram os sacerdotes e os adivinhos e perguntaram: — Que faremos com a arca do
3 ಅದಕ್ಕವ ರು--ಇಸ್ರಾಯೇಲ್‌ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ ಅದರ ಸಂಗಡ ನಿಶ್ಚಯವಾಗಿ ಅಪರಾಧ ಕಾಣಿಕೆಯನ್ನು ಕಳುಹಿಸಿರಿ; ಆಗ ನೀವು ಸ್ವಸ್ಥ ಮಾಡಲ್ಪಡುವಿರಿ. ಆತನ ಕೈ ನಿಮ್ಮನ್ನು ಬಿಟ್ಟು ಹೋಗದೆ ಇರುವ ಕಾರಣ ನಿಮಗೆ ತಿಳಿಯಲ್ಪಡುವದು ಅಂದರು.
3 Eles responderam: — Se devolverem a arca do Deus de Israel, não a mandem vazia, mas enviem também a ele uma oferta pela culpa. Então vocês serão curados e saberão por que a mão dele continua pesando sobre vocês.
4 ಆಗ ಅವರು--ಅಪ ರಾಧ ಕಾಣಿಕೆಯಾಗಿ ನಾವು ಅದರ ಸಂಗಡ ಕಳುಹಿಸ ತಕ್ಕದ್ದೇನು ಅಂದರು. ಅದಕ್ಕವರು--ಫಿಲಿಷ್ಟಿಯರ ಅಧಿ ಪತಿಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬರಿಗೆ ಗಡ್ಡೆವ್ಯಾಧಿಯ ವಿಧವಾದ ಐದು ಬಂಗಾರದ ಗಡ್ಡೆಗಳನ್ನೂ ಬಂಗಾರದ ಐದು ಇಲಿಗಳನ್ನೂ ಕಳುಹಿಸಿರಿ; ಯಾಕಂದರೆ ನಿಮ್ಮೆ ಲ್ಲರಿಗೂ ನಿಮ್ಮ ಅಧಿಪತಿಗಳಿಗೂ ಒಂದೇ ತರವಾದ ವ್ಯಾಧಿಯು ಅದೆ.
4 Então os filisteus perguntaram: — Que oferta pela culpa devemos mandar? Os sacerdotes e adivinhos responderam: — Mandem cinco tumores de ouro e cinco ratos de ouro, segundo o número dos governantes dos filisteus, porque a praga é uma e a mesma sobre todos vocês e sobre todos os seus governantes.
5 ಆದದರಿಂದ ನಿಮ್ಮ ಗಡ್ಡೆವ್ಯಾಧಿಯ ರೂಪಗಳನ್ನೂ ಭೂಮಿಯನ್ನು ಕೆಡಿಸಿಬಿಟ್ಟ ನಿಮ್ಮ ಇಲಿ ಗಳ ರೂಪಗಳನ್ನೂ ನೀವು ಮಾಡಿ ಇಸ್ರಾಯೇಲ್‌ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಆತನು ನಿಮ್ಮ ಮೇಲೆಯೂ ನಿಮ್ಮ ದೇವರುಗಳ ಮೇಲೆಯೂ ನಿಮ್ಮ ಭೂಮಿಯ ಮೇಲೆಯೂ ಇರುವ ತನ್ನ ಕೈಯನ್ನು ತೆಗೆದು ಹಗುರಮಾಡುವನು.
5 Façam imitações dos tumores e dos ratos que andam destruindo a terra, e deem glória ao Deus de Israel. Assim ele talvez alivie a sua mão de cima de vocês e do deus e da terra de vocês.
6 ಐಗುಪ್ತ್ಯರೂ ಫರೋಹನೂ ತಮ್ಮ ಹೃದಯವನ್ನು ಕಠಿಣ ಮಾಡಿದ ಹಾಗೆ ನೀವು ನಿಮ್ಮ ಹೃದಯವನ್ನು ಕಠಿಣಪಡಿಸುವದೇನು? ಯಾಕಂದರೆ ಆತನು ಅವರ ಮಧ್ಯದಲ್ಲಿ ಆಶ್ಚರ್ಯವಾದ ಕ್ರಿಯೆಗಳನ್ನು ನಡಿಸಿದಾಗ ಅವರು ಇಸ್ರಾಯೇಲ್ಯರನ್ನು ಹೋಗುವ ಹಾಗೆ ಕಳುಹಿಸಲಿಲ್ಲವೋ?
6 Por que vocês endureceriam o coração, como os egípcios e Faraó fizeram? Não é verdade que, depois que Deus os maltratou, eles deixaram os israelitas sair, e eles foram embora?
7 ಆದರೆ ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿ ನೊಗವನ್ನು ಹೊರದೆ ಇರುವ ಹಾಲು ಕರೆಯುವ ಎರಡು ಹಸುಗಳನ್ನು ತಕ್ಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಅವುಗಳ ಹಿಂದೆ ಹೋಗದ ಹಾಗೆ ಮನೆಗೆ ತೆಗೆದುಕೊಂಡು ಬಂದು
7 — Agora, pois, façam um carro novo, arranjem duas vacas com crias, sobre as quais nunca foi colocado jugo, e amarrem as duas ao carro; quanto aos bezerros, levem-nos para casa.
8 ಕರ್ತನ ಮಂಜೂಷವನ್ನು ತೆಗೆದು, ಬಂಡಿಯ ಮೇಲೆ ಇಟ್ಟು ನೀವು ಕಳುಹಿಸಿ ಕೊಡುವ ನಿಮ್ಮ ಅಪರಾಧ ಕಾಣಿಕೆಯಾದ ಬಂಗಾರದ ಆಭರಣಗಳನ್ನು ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹಾಕಿ ಕಳುಹಿಸಿರಿ; ಆಗ ನೋಡಿರಿ.
8 Então peguem a arca do Senhor e a ponham sobre o carro. E num cofre, ao lado dele, ponham as figuras de ouro que vocês vão lhe enviar como oferta pela culpa; depois, deixem o carro ir.
9 ಅದು ತನ್ನ ಮೇರೆಯಾದ ಬೇತ್ಷೆಮೆಷಿನ ಮಾರ್ಗವನ್ನು ಹಿಡಿದು ಹೋದರೆ ಆತನು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾನೆ; ಇಲ್ಲದೆ ಹೋದರೆ ಆತನ ಹಸ್ತವು ನಮ್ಮನ್ನು ಮುಟ್ಟಲಿಲ್ಲ; ಅದು ನಮಗೆ ಪ್ರಾಪ್ತಿಯಾಯಿತೆಂದು ತಿಳುಕೊಳ್ಳಿರಿ ಅಂದರು.
9 Fiquem observando: se ele subir pelo caminho de Bete-Semes, que leva a seu território, então foi o Deus de Israel que nos fez este grande mal. Mas, se não, saberemos que não foi a sua mão que nos atingiu, e que isso nos aconteceu por acaso.
10 ಆ ಮನುಷ್ಯರು ಆ ಪ್ರಕಾರವೇ ಎರಡು ಕರೆ ಯುವ ಹಸುಗಳನ್ನು ತಕ್ಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು
10 Os homens fizeram isso: pegaram duas vacas com crias e as amarraram ao carro; e encerraram os seus bezerros em casa.
11 ಕರ್ತನ ಮಂಜೂಷವನ್ನೂ ಬಂಗಾರದ ಇಲಿಗಳನ್ನೂ ತಮ್ಮ ಗಡ್ಡೆವ್ಯಾಧಿಯ ರೂಪಗಳನ್ನೂ ಹಿಡಿಯುವ ಚಿಕ್ಕ ಪೆಟ್ಟಿಗೆ ಯನ್ನೂ ಆ ಬಂಡಿಯ ಮೇಲಿಟ್ಟರು.
11 Puseram a arca do Senhor sobre o carro, junto com o cofre que continha os ratos de ouro e as imitações dos tumores.
12 ಆಗ ಹಸುಗಳು ಕೂಗುತ್ತಾ ಬೇತ್ಷೆಮೆಷಿಗೆ ಹೋಗುವ ಮಾರ್ಗವನ್ನು ಹಿಡಿದು ಬಲಕ್ಕೆ ಎಡಕ್ಕೆ ತಿರುಗದೆ ಹೆದ್ದಾರಿಯಲ್ಲಿ ಹೋದವು; ಫಿಲಿಷ್ಟಿಯರ ಅಧಿಪತಿಗಳು ಬೇತ್ಷೆಮೆಷಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.
12 As vacas se encaminharam diretamente para Bete-Semes e, andando e berrando, seguiam sempre por esse mesmo caminho, sem se desviarem nem para a direita nem para a esquerda. Os governantes dos filisteus foram atrás delas, até a fronteira com Bete-Semes.
13 ಬೇತ್ಷೆಮೆಷಿನ ಮನುಷ್ಯರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು ಅದನ್ನು ನೋಡಿದ್ದಕ್ಕೆ ಸಂತೋಷಪಟ್ಟರು.
13 O povo de Bete-Semes andava fazendo a colheita do trigo no vale. Quando levantaram os olhos, viram a arca e ficaram muito contentes.
14 ಆ ಬಂಡಿಯು ಬೇತ್ಷೆಮೆಷಿನ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು.
14 O carro veio até o campo de Josué, o bete-semita, e parou ali, onde havia uma grande pedra. Eles cortaram a madeira do carro em pedaços e ofereceram as vacas ao Senhor , em holocausto.
15 ಅಲ್ಲಿ ಒಂದು ದೊಡ್ಡ ಕಲ್ಲು ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ ಹಸು ಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಿದರು. ಲೇವಿಯರು ಕರ್ತನ ಮಂಜೂಷವನ್ನೂ ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟುಕೊಂಡಿದ್ದರು. ಆದರೆ ಬೇತ್ಷೆಮೆಷಿನ ಮನುಷ್ಯರು ಆ ದಿವಸದಲ್ಲಿ ಕರ್ತನಿಗೆ ದಹನಬಲಿಗಳನ್ನೂ ಬಲಿಗಳನ್ನೂ ಅರ್ಪಿಸಿ ದರು.
15 Os levitas desceram a arca do Senhor e também o cofre que estava junto a ela, em que estavam os objetos de ouro, e os puseram sobre a grande pedra. No mesmo dia, os homens de Bete-Semes ofereceram holocaustos e sacrifícios ao Senhor .
16 ಆದರೆ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ಇವುಗಳನ್ನು ನೋಡಿ ಅದೇ ದಿನದಲ್ಲಿ ತಿರಿಗಿ ಎಕ್ರೋನಿಗೆ ಹೋದರು.
16 Os cinco governantes dos filisteus viram aquilo e voltaram para Ecrom no mesmo dia.
17 ಫಿಲಿಷ್ಟಿಯರು ಅಪರಾಧ ಬಲಿಗಾಗಿ ಅಷ್ಡೋದಿ ನಿಂದ ಒಂದು ಗಾಜಕ್ಕೋಸ್ಕರ ಒಂದು ಅಷ್ಕೆಲೋನಿ ಗೋಸ್ಕರ ಒಂದು ಗತ್‌ನಿಂದ ಒಂದು ಎಕ್ರೋನಿನಿಂದ ಒಂದು ಗಡ್ಡೆವ್ಯಾಧಿಯ ನಿಮಿತ್ತದಿಂದ ಒಂದೊಂದು ಬಂಗಾರದ ರೂಪಗಳನ್ನು ಕರ್ತನಿಗೆ ಅರ್ಪಿಸಿದರು.
17 Estes são os tumores de ouro que os filisteus enviaram ao Senhor como oferta pela culpa: um por Asdode; outro por Gaza; outro por Asquelom; outro por Gate; e outro por Ecrom.
18 ಆದರೆ ಅವರು ಕಳುಹಿಸಿದ ಬಂಗಾರದ ಇಲಿಗಳು ಬೇತ್ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಈ ದಿನದ ವರೆಗೂ ಇರುವ ಕರ್ತನ ಮಂಜೂಷವನ್ನು ಇಳಿಸಿದ ಅಬೇಲೆಂಬ ದೊಡ್ಡ ಕಲ್ಲಿನ ವರೆಗೆ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಬಲವುಳ್ಳ ಪಟ್ಟಣಗಳ, ಗ್ರಾಮಗಳ, ಲೆಕ್ಕಕ್ಕೆ ಸರಿಯಾಗಿದ್ದವು.
18 Enviaram também os ratos de ouro, segundo o número de todas as cidades dos filisteus, pertencentes aos cinco governantes, desde as cidades fortificadas até as aldeias campestres. A grande pedra, sobre a qual puseram a arca do Senhor , está até o dia de hoje no campo de Josué, o bete-semita.
19 ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು.
19 O Senhor feriu os homens de Bete-Semes, porque olharam para dentro da arca do Senhor , matando setenta deles. Então o povo chorou, porque o Senhor tinha feito tão grande matança entre eles.
20 ತಮ್ಮಲ್ಲಿ ದೊಡ್ಡ ಸಂಹಾರವಾಗಿ ಜನರನ್ನು ಕರ್ತನು ಸಾಯಿಸಿದ್ದರಿಂದ ಅವರು ದುಃಖಪಟ್ಟು--ಈ ಪರಿಶುದ್ಧ ದೇವರಾದ ಕರ್ತನ ಮುಂದೆ ನಿಲ್ಲತಕ್ಕವನಾರು? ನಮ್ಮ ಬಳಿಯಿಂದ ಆತನು ಹೋಗತಕ್ಕ ಸ್ಥಳ ಯಾವದು ಎಂದು ಹೇಳಿದರು.
20 Os homens de Bete-Semes disseram: — Quem poderia estar diante do
21 ಅವರು ಕಿರ್ಯತ್ಯಾರೀಮಿನ ನಿವಾಸಿಗಳಿಗೆ ದೂತ ರನ್ನು ಕಳುಹಿಸಿ--ಫಿಲಿಷ್ಟಿಯರು ಕರ್ತನ ಮಂಜೂಷ ವನ್ನು ತಿರಿಗಿ ಕಳುಹಿಸಿದ್ದಾರೆ; ನೀವು ಇಳಿದು ಬಂದು ಅದನ್ನು ನಿಮ್ಮ ಬಳಿಗೆ ತಕ್ಕೊಂಡು ಹೋಗಿರಿ ಎಂದು ಹೇಳಿದರು
21 Então enviaram mensageiros aos moradores de Quiriate-Jearim, dizendo: — Os filisteus devolveram a arca do

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Samuel 6, comparar traduções ou montar um estudo — tudo direto pelo WhatsApp.