1 Samuel 26

Kannada Bible (GL_KANNADA) vs ARA

Sair da comparação
ARA Almeida Revista e Atualizada 1993
1 ಜೀಫ್ಯರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು--ದಾವೀದನು ಯೆಷಿಮೋನಿಗೆ ಎದುರಾದ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ ಅಂದರು.
1 Vieram os zifeus a Saul, a Gibeá, e disseram: Não se acha Davi escondido no outeiro de Haquila, defronte de Jesimom?
2 ಆಗ ಸೌಲನು ಎದ್ದು ಜೀಫ್‌ ಅರಣ್ಯ ದಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿ ನಲ್ಲಿ ಆಯಲ್ಪಟ್ಟ ಮೂರು ಸಾವಿರ ಜನರ ಸಂಗಡ ಜೀಫ್‌ ಅರಣ್ಯಕ್ಕೆ ಹೋಗಿ ಯೆಷಿಮೋನಿಗೆ ಎದುರಾಗಿ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿದನು.
2 Então, Saul se levantou e desceu ao deserto de Zife, e com ele, três mil homens escolhidos de Israel, a buscar a Davi.
3 ಆದರೆ ಸೌಲನು ತನ್ನನ್ನು ಹಿಂದಟ್ಟಿ ಅರಣ್ಯಕ್ಕೆ ಬಂದ ದ್ದನ್ನು ನೋಡಿ ದಾವೀದನು ಅರಣ್ಯದಲ್ಲಿ ನಿಂತನು.
3 Acampou-se Saul no outeiro de Haquila, defronte de Jesimom, junto ao caminho; porém Davi ficou no deserto, e, sabendo que Saul vinha para ali à sua procura,
4 ದಾವೀದನು ಗೂಢಾಚಾರರನ್ನು ಕಳುಹಿಸಿ ಸೌಲನು ಬಂದದ್ದು ನಿಶ್ಚಯವೆಂದು ತಿಳುಕೊಂಡನು.
4 enviou espias, e soube que Saul tinha vindo.
5 ದಾವೀ ದನು ಎದ್ದು ಸೌಲನು ಇಳುಕೊಂಡಿದ್ದ ಸ್ಥಳಕ್ಕೆ ಬಂದನು; ಸೌಲನೂ ಅವನ ದಂಡಿನ ನಾಯಕನಾಗಿ ರುವ ನೇರನ ಮಗನಾದ ಅಬ್ನೇರನೂ ಮಲಗಿರುವ ಸ್ಥಳವನ್ನು ದಾವೀದನು ನೋಡಿದನು. ಆದರೆ ಸೌಲನು ಮಧ್ಯದಲ್ಲಿ ಮಲಗಿದ್ದನು; ಜನರು ಅವನ ಸುತ್ತಲೂ ದಂಡಾಗಿ ಇಳಿದುಕೊಂಡಿದ್ದರು.
5 Davi se levantou, e veio ao lugar onde Saul acampara, e viu o lugar onde se deitaram Saul e Abner, filho de Ner, comandante do seu exército. Saul estava deitado no acampamento, e o povo, ao redor dele.
6 ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನೂ ಚೆರೂಯಳ ಮಗ ನಾಗಿರುವ ಯೋವಾಬನ ಸಹೋದರನಾದ ಅಬೀಷೈ ಯನ್ನೂ ನೋಡಿ--ನನ್ನ ಸಂಗಡ ದಂಡಿನಲ್ಲಿ ಪ್ರವೇಶಿ ಸಲು ಬರುವವನು ಯಾರೆಂದು ಕೇಳಿದನು; ಅದಕ್ಕೆ ಅಬೀಷೈಯು--ನಾನು ನಿನ್ನ ಸಂಗಡ ಬರುವೆನು ಅಂದನು.
6 Disse Davi a Aimeleque, o heteu, e a Abisai, filho de Zeruia, irmão de Joabe: Quem descerá comigo a Saul, ao arraial? Respondeu Abisai: Eu descerei contigo.
7 ಹಾಗೆಯೇ ದಾವೀದನೂ ಅಬೀಷೈಯೂ ರಾತ್ರಿಯಲ್ಲಿ ಆ ಜನರ ಬಳಿಗೆ ಬಂದರು. ಇಗೋ, ಸೌಲನು ಕಂದಕದೊಳಗೆ ಮಲಗಿ ನಿದ್ರೆಮಾಡು ತ್ತಿದ್ದನು; ಅವನ ಈಟಿಯು ಅವನ ತಲೆದಿಂಬಿನ ಬಳಿ ಯಲ್ಲಿ ನೆಟ್ಟಿತ್ತು. ಆದರೆ ಅವನ ಸುತ್ತಲೂ ಅಬ್ನೇರನೂ ಜನರೂ ಮಲಗಿದ್ದರು.
7 Vieram, pois, Davi e Abisai, de noite, ao povo, e eis que Saul estava deitado, dormindo no acampamento, e a sua lança, fincada na terra à sua cabeceira; Abner e o povo estavam deitados ao redor dele.
8 ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು.
8 Então, disse Abisai a Davi: Deus te entregou, hoje, nas mãos o teu inimigo; deixa-me, pois, agora, encravá-lo com a lança, ao chão, de um só golpe; não será preciso segundo.
9 ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.
9 Davi, porém, respondeu a Abisai: Não o mates, pois quem haverá que estenda a mão contra o ungido do Senhor e fique inocente?
10 ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
10 Acrescentou Davi: Tão certo como vive o Senhor , este o ferirá, ou o seu dia chegará em que morra, ou em que, descendo à batalha, seja morto.
11 ನಾನು ನನ್ನ ಕೈಯನ್ನು ಕರ್ತನ ಅಭಿಷಿಕ್ತನ ಮೇಲೆ ಹಾಕದಹಾಗೆ ಕರ್ತನು ನನಗೆ ಆಟಂಕಮಾಡಲಿ. ಆದರೆ ನೀನು ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೋ;
11 O Senhor me guarde de que eu estenda a mão contra o seu ungido; agora, porém, toma a lança que está à sua cabeceira e a bilha da água, e vamo-nos.
12 ನಾವು ಹೋಗೋಣ ಅಂದನು. ದಾವೀದನು ಸೌಲನ ತಲೆ ದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ ನೀರಿನ ತಂಬಿಗೆ ಯನ್ನೂ ತೆಗೆದುಕೊಂಡ ಮೇಲೆ ಅವರು ಹೊರಟು ಹೋದರು. ಒಬ್ಬರಾದರೂ ನೋಡಿದ್ದಿಲ್ಲ; ಅರಿತಿದ್ದಿಲ್ಲ; ಯಾರೂ ಎಚ್ಚತ್ತಿರಲಿಲ್ಲ. ಯಾಕಂದರೆ ಕರ್ತನಿಂದ ಅಗಾಧ ನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರೂ ನಿದ್ರೆ ಮಾಡುತ್ತಿದ್ದರು.
12 Tomou, pois, Davi a lança e a bilha da água da cabeceira de Saul, e foram-se; ninguém o viu, nem o soube, nem se despertou, pois todos dormiam, porquanto, da parte do Senhor , lhes havia caído profundo sono.
13 ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಇರುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು ಜನರಿಗೂ ನೇರನ ಮಗನಾದ ಅಬ್ನೇರನಿಗೂ ಎದು ರಾಗಿ ಕೂಗಿ ಹೇಳಿದ್ದೇನಂದರೆ--
13 Tendo Davi passado ao outro lado, pôs-se no cimo do monte ao longe, de maneira que entre eles havia grande distância.
14 ಅಬ್ನೇರನೇ, ನೀನು ಪ್ರತ್ಯುತ್ತರ ಕೊಡುವದಿಲ್ಲವೋ ಅಂದನು. ಅದಕ್ಕೆ ಅಬ್ನೇರನು ಪ್ರತ್ಯುತ್ತರವಾಗಿ--ಅರಸನಿಗೆ ಎದುರಾಗಿ ಕೂಗುವ ನೀನು ಯಾರು ಅಂದನು.
14 Bradou ao povo e a Abner, filho de Ner, dizendo: Não respondes, Abner? Então, Abner acudiu e disse: Quem és tu, que bradas ao rei?
15 ಆಗ ದಾವೀ ದನು ಅಬ್ನೇರನಿಗೆ ಹೇಳಿದ್ದೇನಂದರೆ -- ನೀನು ಪರಾಕ್ರಮಶಾಲಿ ಅಲ್ಲವೇ? ಇಸ್ರಾಯೇಲಿನಲ್ಲಿ ನಿನಗೆ ಸಮಾನನಾದವನು ಯಾರು? ಆದರೆ ನೀನು ನಿನ್ನ ಒಡೆಯನಾದ ಅರಸನನ್ನು ಕಾಯದೆ ಹೋದದ್ದೇನು? ಯಾಕಂದರೆ ಜನರಲ್ಲಿ ಒಬ್ಬನು ನಿನ್ನ ಒಡೆಯನಾದ ಅರಸನನ್ನು ಸಂಹರಿಸುವದಕ್ಕೆ ಬಂದಿದ್ದನು.
15 Então, disse Davi a Abner: Porventura, não és homem? E quem há em Israel como tu? Por que, pois, não guardaste o rei, teu senhor? Porque veio um do povo para destruir o rei, teu senhor.
16 ನೀನು ಮಾಡಿದ ಈ ಕಾರ್ಯ ಒಳ್ಳೇದಲ್ಲ. ಕರ್ತನ ಜೀವ ದಾಣೆ--ಕರ್ತನ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದರಿಂದ ಮರಣಕ್ಕೆ ನೀವು ಪಾತ್ರರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು ಅಂದನು.
16 Não é bom isso que fizeste; tão certo como vive o Senhor , deveis morrer, vós que não guardastes a vosso senhor, o ungido do Senhor ; vede, agora, onde está a lança do rei e a bilha da água, que tinha à sua cabeceira.
17 ಆಗ ಸೌಲನು ದಾವೀದನ ಶಬ್ದವನ್ನು ತಿಳುಕೊಂಡು--ನನ್ನ ಕುಮಾರನಾದ ದಾವೀ ದನೇ, ಇದು ನಿನ್ನ ಸ್ವರವಲ್ಲವೋ ಅಂದನು. ದಾವೀ ದನು--ಅರಸನಾದ ನನ್ನ ಒಡೆಯನೇ, ನನ್ನ ಸ್ವರವೇ ಹೌದು ಅಂದನು.
17 Então, reconheceu Saul a voz de Davi e disse: Não é a tua voz, meu filho Davi? Respondeu Davi: Sim, a minha, ó rei, meu senhor.
18 ನನ್ನ ಒಡೆಯನು ತನ್ನ ಸೇವಕ ನನ್ನು ಹೀಗೆ ಹಿಂದಟ್ಟುವದೇನು? ನಾನೇನು ಮಾಡಿ ದೆನು? ನನ್ನ ಕೈಯಲ್ಲಿ ಏನು ಕೆಟ್ಟತನ ಅದೆ?
18 Disse mais: Por que persegue o meu senhor assim seu servo? Pois que fiz eu? E que maldade se acha nas minhas mãos?
19 ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಕರ್ತನು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ ಕಾಣಿಕೆಯನ್ನು ಅಂಗೀಕರಿಸಲಿ; ಆದರೆ ಮನುಷ್ಯರ ಮಕ್ಕಳು ಇದನ್ನು ಮಾಡಿದರೆ ಅವರು ಕರ್ತನ ಮುಂದೆ ಶಪಿಸಲ್ಪಡಲಿ. ಯಾಕಂದರೆ ನೀನು ಹೋಗಿ ಅನ್ಯದೇವರುಗಳನ್ನು ಸೇವಿಸು ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಕರ್ತನ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
19 Ouve, pois, agora, te rogo, ó rei, meu senhor, as palavras de teu servo: se é o Senhor que te incita contra mim, aceite ele a oferta de manjares; porém, se são os filhos dos homens, malditos sejam perante o Senhor ; pois eles me expulsaram hoje, para que eu não tenha parte na herança do Senhor , como que dizendo: Vai, serve a outros deuses.
20 ಆದದರಿಂದ ಕರ್ತನ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಯಾಕಂದರೆ ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ ಇಸ್ರಾಯೇಲಿನ ಅರಸನು ಒಂದು ಕೀಟವನ್ನು ಹುಡು ಕಲು ಹೊರಟನು ಎಂಬದೇ.
20 Agora, pois, não se derrame o meu sangue longe desta terra do Senhor ; pois saiu o rei de Israel em busca de uma pulga, como quem persegue uma perdiz nos montes.
21 ಆಗ ಸೌಲನುನಾನು ಪಾಪಮಾಡಿದೆನು; ನನ್ನ ಮಗನಾದ ದಾವೀ ದನೇ, ತಿರಿಗಿ ಬಾ; ಯಾಕಂದರೆ ನನ್ನ ಜೀವವು ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡುಮಾಡೆನು; ಇಗೋ, ನಾನು ಹುಚ್ಚು ಕೆಲಸಮಾಡಿದ್ದೇನೆ. ಮಹಾ ಹೆಚ್ಚಾದ ತಪ್ಪು ಮಾಡಿದೆನು ಅಂದನು.
21 Então, disse Saul: Pequei; volta, meu filho Davi, pois não tornarei a fazer-te mal; porque foi, hoje, preciosa a minha vida aos teus olhos. Eis que tenho procedido como louco e errado excessivamente.
22 ದಾವೀದನು ಪ್ರತ್ಯುತ್ತರ ವಾಗಿ--ಇಗೋ, ಅರಸನ ಈಟಿಯು ಇಲ್ಲಿ ಅದೆ. ಪ್ರಾಯದವರಲ್ಲಿ ಒಬ್ಬನು ಈ ಕಡೆಗೆ ಬಂದು ಅದನ್ನು ತಕ್ಕೊಂಡು ಹೋಗಲಿ.
22 Davi, então, respondeu e disse: Eis aqui a lança, ó rei; venha aqui um dos moços e leve-a.
23 ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು.
23 Pague, porém, o Senhor a cada um a sua justiça e a sua lealdade; pois o Senhor te havia entregado, hoje, nas minhas mãos, porém eu não quis estendê-las contra o ungido do Senhor .
24 ಇಗೋ, ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ ಹಾಗೆಯೇ ನನ್ನ ಪ್ರಾಣವು ಕರ್ತನ ದೃಷ್ಟಿಗೆ ದೊಡ್ಡದಾಗಿರಲಿ. ಆತನು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ ಅಂದನು.
24 Assim como foi a tua vida, hoje, de muita estima aos meus olhos, assim também seja a minha aos olhos do Senhor , e ele me livre de toda tribulação.
25 ಆಗ ಸೌಲನು ದಾವೀದನಿಗೆ--ನನ್ನ ಮಗನಾದ ದಾವೀದನೇ, ನೀನು ಆಶೀರ್ವದಿಸಲ್ಪ ಡುವಿ; ನೀನು ಮಹತ್ಕಾರ್ಯಗಳನ್ನು ಮಾಡುವಿ, ಗೆದ್ದೇ ಗೆಲ್ಲುವಿ ಅಂದನು. ಹಾಗೆಯೇ ದಾವೀದನು ತನ್ನ ದಾರಿಹಿಡಿದು ಹೋದನು; ಸೌಲನು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
25 Então, Saul disse a Davi: Bendito sejas tu, meu filho Davi; pois grandes coisas farás e, de fato, prevalecerás. Então, Davi continuou o seu caminho, e Saul voltou para o seu lugar.

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar 1 Samuel 26, comparar traduções ou montar um estudo — tudo direto pelo WhatsApp.